About Us Advertise with us Be a Reporter E-Paper

ಗುರು

ನೇಸರಗಿ-ಮಲ್ಲಾಪೂರದ ಪೂಜ್ಯ ಗಾಳೇಶ್ವರರು

* ಮಹಾಂತೇಶ ರಾಜಗೋಳಿ

ನಮ್ಮ ನಾಡಿನಲ್ಲಿ ಪುಣ್ಯ ಪುರುಷರು ಹಾಗೂ ಸಾಧು ಸಂತರು ಮಹಾತ್ಮರು ಪವಾಡ ಪುರುಷರು ನೆಲೆಸಿ, ತಮ್ಮ ದಿವ್ಯಶಕ್ತಿಯಿಂದ ನಾಡಿಗೆ ನೀಡಿದ್ದಾರೆ. ಅಂತಹ ಸಾಧಕರಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಸರಗಿ-ಮಲ್ಲಾಪೂರ ಗ್ರಾಮದ ಪೂಜ್ಯ ಅವಧೂತ ಗಾಳೇಶ್ವರರು ಒಬ್ಬರಾಗಿದ್ದು ಈ ಭೂಭಾಗವನ್ನು ತಮ್ಮ ತಪೋಶಕ್ತಿಯಿಂದ ಪಾವನಗೊಳಿಸಿದ್ದಾರೆ.

ನೇಸರಗಿಯ ಹತ್ತಿರದ ಮಲ್ಲಾಪುರವೆಂಬ ಚಿಕ್ಕ ಗ್ರಾಮದ ದಂಪತಿಗಳಾದ ಘಟಿಗೆಯ್ಯ ಹಾಗೂ ಗಂಗಮ್ಮರ ಉದರದಲ್ಲಿ ಜನಿಸಿದ ಗಾಳೇಶ್ವರರ ಮನೆತನ ಈ ಭಾಗದಲ್ಲಿ ಸಂಸ್ಕೃತಿ -ಸಂಸ್ಕಾರಕ್ಕೆ ಹೆಸರುವಾಸಿಯಾಗಿತ್ತು. ಚಿಕ್ಕ ವಯಸ್ಸಿನಲ್ಲಿಯೇ ಪೂಜೆ, ಪ್ರಾರ್ಥನೆ, ಧಾರ್ಮಿಕ ಗ್ರಂಥ ಪಠಣಗಳನ್ನು ಕೈಗೊಂಡ ಇವರು ಮುಂದೆ ಬೈಲಹೊಂಗಲದ ನಿರ್ವಾಣ ಶಿವಯೋಗಿಗಳ ಪಡೆದು ಅವರಿಂದ ಗಾಳೇಶ್ವರರು ಎಂಬ ಹೆಸರನ್ನು ಪಡೆದುಕೊಂಡರು.

ಸಮಾಜಕ್ಕೆ ನನ್ನಿಂದ ಏನಾದರೂ ಸದುಪಯೋಗವಾಗಬೇಕೆಂಬ ತಮ್ಮ ಇಚ್ಚೆಯಂತೆ ಮಲ್ಲಾಪೂರದ ಹತ್ತಿರದ ಕ್ಷೇತ್ರ ರಾಮಲಿಂಗೇಶ್ವರ ಕೊಳ್ಳದಲ್ಲಿ ಹಲವು ವರ್ಷಗಳ ಕಾಲ ತಪಸ್ಸುಗೈದು ಲೋಕ ಕಲ್ಯಾಣಕ್ಕೆ ಅಗಿಯಾಗುತ್ತಿರುಲಾಗಲೇ ಆ ಸ್ಥಳದಲ್ಲಿ ಅಶರೀರವಾಣಿಯೊಂದು ‘ಮಗು ನಿನ್ನಿಂದ ಲೋಕ ಉದ್ದಾರವಾಗಬೇಕಾಗಿದೆ. ಇದಕ್ಕಾಗಿ ಇನ್ನು ಮೇಲೆ ನೀನು ಸದಾ ಲೋಕ ಸಂಚಾರ ಮಾಡು’ ಎಂದು ಸೂಚಿಸಿತು. ಪೂಜ್ಯ ಗಾಳೇಶ್ವರರು ತಮ್ಮ ಕಾಲಾವಧಿಯಲ್ಲಿ ಧರ್ಮ ಪ್ರಚಾರದೊಂದಿಗೆ ಭಕ್ತರ ಇಷ್ಟಾರ್ಥಗಳನ್ನು ಹಲವಾರು ಪವಾಡಗಳನ್ನು ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಹಡಗಿನಾಳ ಗ್ರಾಮದಲ್ಲಿ ವಿಶೇಷ ಪವಾಡಗೈದ ಶ್ರೀಗಳನ್ನು ಇಂದಿಗೂ ಅಲ್ಲಿನ ಭಕ್ತರು ಅವರನ್ನು ಸದಾಕಾಲ ಸ್ಮರಿಸುತ್ತಿರುವುದು ವಿಶೇಷವಾಗಿದೆ. ಹಲವಾರು ನಗರ, ಗ್ರಾಮಗಳಲ್ಲಿ ಸಂಚರಿಸಿ ಅಲ್ಲಿನ ಮಠ ಮಂದಿರಗಳಲ್ಲಿ ಭಾವೈಕ್ಯತೆಯನ್ನು ಸೃಷ್ಟಿಸಿ ಜನಾನುರಾಗಿಯಾಗಿದ್ದಾರೆ. ಈ ಪ್ರಯುಕ್ತ ಆಯಾ ಸ್ಥಳಗಳಲ್ಲಿ ಪ್ರತಿ ವರ್ಷ ಜಾತ್ರೆ ಉತ್ಸವ ಸಂಸ್ಮರಣೆ, ಜಾಗರಣೆ ಮುಂತಾದ ವಿಧಾಯಕ ಕಾರ್ಯಗಳು ಇಂದಿಗೂ ನಡೆದುಕೊಂಡು ಬರುತ್ತಿದ್ದು ಸಮಾಜದ ಹಿಂತಚಿಂತನೆಗೆ ಅವರ ಶ್ರಮ, ಹಿಡಿದ ಕೈಗನ್ನಡಿಯಾಗಿದೆ.

ಕೊನೆಯಲ್ಲಿ ಮಲ್ಲಾಪೂರ ಗ್ರಾಮಕ್ಕೆ ಆಗಮಿಸಿದ ಗಾಳೇಶ್ವರರು ಈ ಭೂಮಿ ಸದಾಕಾಲ ಸಿರಿ ಸಮೃದ್ಧಿಯಿಂದ ಕೂಡಿರಲಿ, ಜೊತೆಗೆ ಜನರು ಭಾವೈಕತೆಯಿಂದ ಬಾಳಲ್ಲಿ ಎಂದು ಹರಿಸಿ 1905 ರಲ್ಲಿ ತಮ್ಮ ಭೌತಿಕ ಶರೀರ ಬಿಟ್ಟು ಶಿವನಲ್ಲಿ ಲಿಂಗೈಕ್ಕರಾದರು. ತರುವಾಯ ಈ ಪೀಠಕ್ಕೆ ಪೂಜ್ಯ ಬಸವಂತಯ್ಯನವರು, ನಂತರ ರೇವಯ್ಯ ಸ್ವಾಮೀಜಿ ಹಾಗೂ ಸಿದ್ದರಾಮರು ಭಕ್ತರನ್ನು ಉದ್ಧರಿಸಿ ಶಿವನಲ್ಲಿ ಲಿಂಗೈಕ್ಕರಾದರು. ಪ್ರಸ್ತುತ ಘಟದಿಂದ ಮಠ ಬೆಳಗಬೇಕೇ ವಿನಃ ಮಠದಿಂದ ಘಟ ಬೆಳಗಬಾರದು ಅರಿತು ಸುಮಾರು 1988 ರಿಂದ ಈ ಮಠಕ್ಕೆ ಆಗಮಿಸಿದ, 52 ವರ್ಷದ ಚಿದಾನಂದ ಸ್ವಾಮೀಜಿಯವರು ಸುಮಾರು 30 ವರ್ಷಗಳಿಂದ ಎಡೆಬಿಡದೆ ಪೀಠಕ್ಕಂಟಿಕ್ಕೊಳ್ಳದೇ ಮಠದ ಮೂಲಕ ಧರ್ಮ ಪ್ರಚಾರದ ಕಂಕರ್ಯ ತೊಟ್ಟು ಸಮಾಜ ಸೇವೆಗಾಗಿ ತಮ್ಮನ್ನೇ ತಾವು ಅರ್ಪಿಸಿಕೊಂಡು ಸವದತ್ತಿ ತಾಲೂಕಿನ ಸುಕ್ಷೇತ್ರ ಇಂಚಲದ ಪರಮಪೂಜ್ಯ ಡಾ.ಶಿವಾನಂದ ಭಾರತಿ ಯವರ ಮಾರ್ಗದರ್ಶನದಲ್ಲಿ ಪೀಠದ ಕಾರ್ಯಗಳನ್ನು ಮಾಡುತ್ತಾ ಸಮಾಜಮುಖಿಯಾಗಿ ಕಾರ್ಯಗಳನ್ನು ಇಮ್ಮಡಿಗೊಳಿಸಿದ್ದಾರೆ.

ನಿರ್ಗತಿಕರಿಗೆ ಆಶ್ರಯ, ಬಡ ಮಕ್ಕಳಿಗೆ ವಸತಿ ಶಿಕ್ಷಣ, ಅಕ್ಷರ ಸಾಮೂಹಿಕ ವಿವಾಹ, ಅನ್ನದಾಸೋಹ, ಜೊತೆಗೆ ಪುರಾಣ, ಪ್ರವಚಣ, ಕೀರ್ತನ, ಉತ್ಸವ, ಜಾತ್ರೆ ಹಾಗೂ ನಾಡಿನ ಮೆರಗನ್ನು ಹೆಚ್ಚಿಸುವ ಸಾಂಸ್ಕೃತಿಕ, ಸಂಗೀತ ಇಂತಹ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ಪ್ರತಿ ವರ್ಷ ಜರುಗುತ್ತಿದ್ದು ಧಾರ್ಮಿಕ ಪರಿಸರದ ಪರಿಮಳ ಸೂಸಿ, ಆಧ್ಯಾತ್ಮದ ಕೊಂಡಿಯನ್ನು ಇಲ್ಲಿ ನಿರಂತರವಾಗಿ ಬೀರುತ್ತಿದೆ. 1 ರಿಂದ 10ನೇ ತರಗತಿಯವರಿಗೆ ವಸತಿ ಶಾಲೆ ನಿರ್ಮಿಸಿ ಆ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರವನ್ನು ಈ ಮಠದಲ್ಲಿ ನೀಡಲಾಗುತ್ತಿದೆ.

ದಿನಾಂಕ ಫೆ. ರಿಂದ 23 ರವರೆಗೆ ಅವಧೂತ ಗಾಳೇಶ್ವರ ಮಠದ 45 ನೇ ವೇದಾಂತ್ ಪರಿಷತ್. ಪ್ರತಿದಿನ ಕರ್ತು ಗದ್ದುಗೆಗೆ ಮಹಾಪೂಜೆ, ಪೂಜ್ಯರ ಕೀರಿಟ ಪೂಜೆ, ಪ್ರಾರ್ಥನೆ, ನಾಟಕ, ಭಜನೆ, ಗಿಗೀಪದ, ವಿವಿಧ ಸ್ಪರ್ಧೆಗಳು, ವಚನ ವೈಭವ, ಸಾಮೂಹಿಕ ವಿವಾಹ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ಹಾಗೂ ದನಗಳ ಪ್ರದರ್ಶನ ನೆರವೇರಲಿದೆ.

Tags

Related Articles

Leave a Reply

Your email address will not be published. Required fields are marked *

Language
Close