Breaking Newsಕ್ರೀಡೆಪ್ರಚಲಿತ
ಧೋನಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾಗ ಕ್ರೀಸ್ ಬಿಡುವ ಧೈರ್ಯ ಮಾಡಬೇಡಿ: ಐಸಿಸಿ

ವೆಲ್ಲಿಂಗ್ಟನ್: ಭಾರತದ ಮಾಸ್ಟರ್ ಮೈಂಡ್ ವಿಕೆಟ್ ಕೀಪರ್, ಮಾಜಿ ನಾಯಕ ಎಂ.ಎಸ್.ಧೋನಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾಗ ಕ್ರೀಸ್ ಬಿಡುವ ಧೈರ್ಯ ಮಾಡಬೇಡಿ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಬ್ಯಾಟ್ಸಮನ್ಗಳಿಗೆ ಸಲಹೆ ನೀಡಿದೆ.
ಉತ್ತಮ ಗೇಮ್ ಫಿನಿಶರ್ ಎಂದು ಕರೆಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ವಿಕೆಟ್ ಹಿಂದೆಯೂ ಚಾಣಾಕ್ಷ ಆಟಗಾರ. ಇತ್ತೀಚೆಗೆ ಕೊನೆಗೊಂಡ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಧೋನಿ ತಮ್ಮ ಕೈಚಳಕದಿಂದ ಹಲವು ಬ್ಯಾಟ್ಸಮನ್ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ದರು. ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ 4-1 ಅಂತರದಿಂದ ಗೆದ್ದುಕೊಂಡಿತ್ತು. ಈ ಗೆಲುವಿನಲ್ಲಿ ಧೋನಿ ಪಾತ್ರ ಕೂಡ ಮಹತ್ವದ್ದು.
ಧೋನಿ ಅವರ ಸ್ಟಂಪ್ ವೇಗಕ್ಕೆ ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿತ್ತು. ಅದರಲ್ಲೂ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ), ಧೋನಿ ಅವರು ವಿಕೆಟ್ ಹಿಂದೆ ಇರುವಾಗ ಯಾರು ಕ್ರೀಸ್ ಬಿಟ್ಟು ಮುಂದೆ ಹೋಗಿ ಹೊಡೆಯುವ ಧೈರ್ಯ ಮಾಡಬೇಡಿ ಎಂದು ಎಲ್ಲ ಬ್ಯಾಟ್ಸ್ ಮನ್ಗಳಿಗೆ ಎಚ್ಚರಿಕೆ ನೀಡುವ ಮೂಲಕ ಧೋನಿ ವಿಕೆಟ್ ಕೀಪಿಂಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.
Never leave your crease with MS Dhoni behind the stumps! https://t.co/RoUp4iMpX6
— ICC (@ICC) February 3, 2019