About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

700ಕೋಟಿ ಕೊಡುವುದಾಗಿ ಹೇಳೇ ಇಲ್ಲ: ಯುಎಇ!, ಬಯಲಾಯ್ತು ಮಹಾ ಸುಳ್ಳು.

ಪ್ರವಾಹ ಪೀಡಿತ ಕೇರಳ ರಾಜ್ಯಕ್ಕೆ ಆರ್ಥಿಕ ನೆರವನಿನ ರೂಪದಲ್ಲಿ 700 ಕೋಟಿ ನೀಡುವುದಾಗಿ ತಾನೆ ಹೇಳೇ ಇಲ್ಲ ಎಂದು ಸಂಯುಕ್ತ ಅರಬ್‌ ಗಣರಾಜ್ಯ ಅಧಿಕೃತವಾಗಿ ಹೇಳಿದೆ.

ಈ ಮೂಲಕ ಅತಿ ದೊಡ್ಡ ಸುಳ್ಳೊಂದನ್ನು ಭಾರೀ ಮಟ್ಟದಲ್ಲಿ ಹಬ್ಬಿಸಿ ದೇಶದ ಜನತೆಯಲ್ಲಿ ಒಡಕು ಮೂಡಿಸಲು ಯತ್ನಿಸಲಾಗಿದೆ ಎಂಬ ಬಲವಾದ ಆಪಾದನೆ ವಿಪಕ್ಷಗಳ ಮೇಲೆ ಬಂದಿದೆ. ಅಲ್ಲದೇ ದೊಡ್ಡ ಮಟ್ಟದಲ್ಲಿ ದೇಶದ ಹೆಸರಿಗೆ ಮಸಿ ಬಳಿಯಲು ನೋಡಲಾಗುತ್ತಿದೆ ಎಂದು ಬಲವಾದ ಶಂಕೆ ಮೂಡಿದೆ.

“700 ಕೋಟಿ ರು ಕೊಡುವುದಾಗಿ ಯುಎಇ ಸರಕಾರ ಮುಂದೆ ಬಂದಿದ್ದರೂ ಕೇಂದ್ರದ ನರೇಂದ್ರ ಮೋದಿ ಸರಕಾರ ನಿರಾಕರಿಸಿದೆ” ಎಂದು ಕಾಂಗ್ರೆಸ್‌, ಸಿಪಿಐ ಸೇರಿದಂತೆ ಅನೇಕ ವಿಪಕ್ಷಗಳು ಬೊಬ್ಬೆ ಹಾಕಿದ್ದವು.

ಇದೇ ವಿಚಾರವಾಗಿ ಸ್ಪಷ್ಟೀಕರಣ ನೀಡಿದ್ದ ಕೇಂದ್ರ ಸರಕಾರ, ಪ್ರಾಕೃತಿಕ ವಿಕೋಪದ ಪರಿಹಾರ ಅಥವಾ ನೆರವಿನ ರೂಪದಲ್ಲಿ ವಿದೇಶದಿಂದ ಆರ್ಥಿಕ ನೆರವು ಪಡೆಯುವುದನ್ನು 2004ರಿಂದಲೇ ನಿಲ್ಲಿಸಲಾಗಿದೆ ಎಂದು ಹೇಳಿತ್ತು.

Tags

Related Articles

Leave a Reply

Your email address will not be published. Required fields are marked *

Language
Close