About Us Advertise with us Be a Reporter E-Paper

ಗೆಜೆಟಿಯರ್

ನಿರೀಕ್ಷೆ ಹೆಚ್ಚಿಸಿರುವ ಹೊಸ ಆವಿಷ್ಕಾರಗಳು

ಸಮಯ ಯಾವ ವೇಗದಲ್ಲಿ ಸಾಗುತ್ತಿದೆಯೋ ಅದಕ್ಕಿಂತ ವೇಗವಾಗಿ ಸಾಗುತ್ತಿರುವುದು ತಂತ್ರಜ್ಞಾನದ ಬೆಳವಣಿಗೆ. ತಂತ್ರಜ್ಞಾನದ ವಿಷಯ ಬಂದರೆ ಒಬ್ಬರಿಗೊಬ್ಬರು ಸ್ಪರ್ಧೆ ನೀಡುತ್ತಾ ಹೊಸ ಹೊಸ ಆವಿಷ್ಕಾರಗಳನ್ನು ನಮ್ಮ ಮುಂದೆ ಇಡುತ್ತಿದ್ದಾರೆ. ಅದೇ ರೀತಿಯಲ್ಲಿ ಈ ವರ್ಷ ಹಲವಾರು ಹೊಸ ಆವಿಷ್ಕಾರಗಳು ನಮ್ಮ ದಿನನಿತ್ಯದ ಬಳಕೆಗೆ ಬರಲಿವೆ.

ಫೋಲ್ಡೇಬಲ್ ಮೊಬೈಲ್:
ಈ ಸುದ್ದಿ ಹೊಸತೇನಲ್ಲ. ಕಳೆದ ವರ್ಷವೇ ಫೋಲ್ಡೇಬಲ್ ಮೊಬೈಲ್ ಮಾರುಕಟ್ಟೆಗೆ ಬರಬಹುದು ಎಂಬ ಆದರೆ ಟೆಸ್ಟಿಂಗ್ ಕಾರ್ಯದಲ್ಲಿರುವ ಫೋಲ್ಡೇಬಲ್‌ಫೋನ್ ಇನ್ನೂ ಜನರ ಕೈ ಸೇರಿಲ್ಲ. ಈ ವರ್ಷ ಇದು ಭಾರತದಲ್ಲಿ ಅಲ್ಲದಿದ್ದರೂ ಬೇರೆ ದೇಶಗಳಲ್ಲಂತೂ ಮಾರುಕಟ್ಟೆಗೆ ಬರುವುದು ಖಚಿತ. ಈಗಾಗಲೇ ಯುಎಸ್ ಮೂಲದ ಕಂಪನಿಯೊಂದು ಫೋಲ್ಡೇಬಲ್ ಫೋನನ್ನು ತನ್ನ ದೇಶದಲ್ಲಿ ಪರಿಚಯಿಸಿದೆ. ಫೋಲ್‌ಡ್ ಮಾಡದೇ ಇರುವಾಗ ಫ್ಲೆಕ್‌ಸ್ಪೈ ಪೂರ್ತಿ ಸ್ಕ್ರೀನ್‌ನ್ನು ಒಂದೇ ಸ್ಕ್ರೀನ್ ಆಗಿ ಇರಿಸುತ್ತದೆ. ಈ ಫ್ಲೆಕ್‌ಸ್ಪೈ ಫೋಲ್‌ಡ್ ಮತ್ತು ಅನ್‌ಫೋಲ್‌ಡ್ಗೆ ತನ್ನಿಂತಾನೇ ಅಡ್ಜಸ್‌ಟ್ ಆಗಿ ಕಾರ್ಯ ನಿರ್ವಹಿಸುತ್ತದೆ. ಪ್ರಸಿದ್ಧ ಆ್ಯಪಲ್ ಸಹ ಫೋಲ್ಡೇಬಲ್ ಮೊಬೈಲ್ ಮಾಡಲು ಪೇಟೆಂಡ್ ಪಡೆದುಕೊಂಡಿರುವುದು ಕಾತುರಕ್ಕೆ ಎಣೆ ಮಾಡಿದೆ.

5ಜಿ ಬರುತ್ತೆ:
5ಜಿ ಬಗ್ಗೆ ಮಾತುಕತೆ ನಡೆಯುತ್ತಾ ವರ್ಷವೇ ಉರುಳಿದೆ. ಅಂತೂ 5ಜಿ ಆಗಮನಕ್ಕೆ 2019 ಪ್ರಶಸ್ತ ಎಂದು ಗೊತ್ತು ಮಾಡಲಾಗಿದೆ. ವೇಗದ ಕನೆಕ್ಟಿವಿಟಿ ನೀಡಲಿರುವ 5ಜಿ ನೆಟ್‌ವರ್ಕ್‌ಗೆ ಈಗಾಗಲೇ ಅನೇಕ ಕಂಪನಿಗಳು ಕೆಲಸ ಆರಂಭಿಸಿದ್ದು ಇನ್ನೇನು ಕೆಲ ದಿಗಳಲ್ಲೇ 5ಜಿ ಮೊಬೈಲ್‌ಗಳು ಮಾರುಕಟ್ಟೆಗೆ ಬರಲಿವೆ. ಜಿಯೋ, ಏರ್‌ಟೆಲ್ ಹೀಗೆ ನಾನಾ ನೆಟ್‌ವರ್ಕ್‌ಗಳ ಜತೆ ಯಪಲ್, ಕಂಪನಿಗಳೂ ಸಹ ಕೈ ಜೋಡಿಸಿರುವುದರಿಂದ 5ಜಿ ಬಹು ಬೇಗ ಬರಬಹುದೆಂಬುದು ಗ್ರಾಹಕರ ನಿರೀಕ್ಷೆ.

ವೈರ್‌ಲೆಸ್ ಚಾರ್ಜಿಂಗ್:
ಈಗಾಗಲೇ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿರುವಂತಹ ಅನೇಕ ಲ್ಯಾಪ್‌ಟಾಪ್‌ಗಳು ಮತ್ತು ಇಯರ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದರೂ ಇವುಗಳೆಲ್ಲವನ್ನು ಚಾರ್ಜಿಂಗ್ ಮ್ಯಾಟ್ ಅಥವಾ ಸ್ಟಾಂಡ್ ಮೇಲಿಟ್ಟರೆ ಮಾತ್ರ ಚಾರ್ಜ್ ಆಗುವಂತಹ ಎಲ್ಲೆಯನ್ನಿಡಲಾಗಿದೆ. ಇದರ ಬದಲಾಗಿ ಚಿಪ್ ಬಳಸಿ 15 ಅಡಿ ಒಳಗೆ ಎಲೆಕ್ಟ್ರಾನಿಕ್ ವಸ್ತು ನಿಮ್ಮ ಕೈನಲ್ಲಿರುವಾಗಲೇ ಚಾರ್ಜ್ ಆಗುವಂತಹ ತಂತ್ರಜ್ಞಾನ ವೈಫೈ ಮೂಲಕ ಚಾರ್ಜ್ ಮಾಡುವಂತಹ ಸೌಲಭ್ಯವೂ ಈಗಾಗಲೇ ಬಂದಿದೆ ಎನ್ನುವುದು ನಿಮ್ಮ ಗಮನದಲ್ಲಿರಲಿ.

ಹೆಲ್‌ತ್ಕೇರ್‌ಗೆ ಹೊಸ ರೂಪ:
ಹೆಲ್‌ತ್ಕೇರ್ ಬ್ಯಾಂಡ್‌ಗಳನ್ನ ಈಗಾಗಲೇ ಬಹುತೇಕ ಜನರು ಬಳಸಿದ್ದಾರೆ ಮತ್ತು ಬಳಸುತ್ತಿದ್ದಾರೆ. ಆದರೆ ಈ ಹೆಲ್‌ತ್ಕೇರ್ ಬ್ಯಾಂಡ್‌ಗಳು ಕೇವಲ ಫಿಟ್‌ನೆಸ್ ಟ್ರ್ಯಾಕಿಂಗ್‌ಗೆ ಮಾತ್ರ ಬಳಕೆಯಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಬರಲಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್‌ಸ್ ಹೊಂದಿರುವಂತಹ ವೇರೇಬಲ್ ಹೆಲ್‌ತ್ಕೇರ್ ಡಿವೈಸ್‌ಗಳು ನಿಮ್ಮ ಆರೋಗ್ಯವನ್ನು ಸಂಪೂರ್ಣವಾಗಿ ಗಮನಿಸುವುದಷ್ಟೇ ಅಲ್ಲದೆ ನಿಮ್ಮ ಆರೋಗ್ಯದಲ್ಲಿ ತೊಂದರೆ ಉಂಟಾದಾಗ ಬಳಿ ಕಮ್ಯುನಿಕೇಟ್ ಮಾಡುವಂತಿರಲಿದೆ.

Tags

Related Articles

Leave a Reply

Your email address will not be published. Required fields are marked *

Language
Close