About Us Advertise with us Be a Reporter E-Paper

ಸಿನಿಮಾಸ್

ಗಣ್ಯರು ಗುನುಗಿದ ಪ್ಯಾತೆ ಹಾಡು

ಕುಡಿತದಿಂದ ಸಮಸ್ಯೆಗಳನ್ನು ಆ ಕ್ಷಣಕ್ಕೆ ಮರೆಯಬಹುದೇ ಹೊರತು, ಅದರಿಂದ ಅದನ್ನು ಬಗೆಹರಿಸಲು ಸಾಧ್ಯವಾಗುವುದಿಲ್ಲ. ಈ ವಿಷಯವನ್ನು ಅರ್ಥ ಮಾಡಿಕೊಳ್ಳದೇ ಕುಡಿತದ ದಾಸನಾದರೆ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ವಸ್ತುವನ್ನಿಟ್ಟುಕೊಂಡು ಮಾಡಿರುವ ಸಿನಿಮಾ ‘ಫುಲ್‌ಟೈಟ್ ಪ್ಯಾತೆ’. ಪ್ಯಾತೆ ಎಂದರೆ ಪ್ಯಾದೆ ಎನ್ನುವ ಅರ್ಥದ ಇನ್ನು ಟೈಟಲ್ ಎಷ್ಟು ಟೈಟ್ ಆಗಿದೆಯೋ, ಇಡೀ ಸಿನಿಮಾದಲ್ಲಿ ಕೂಡಾ ಅಷ್ಟೇ ಟೈಟಾದ ಕತೆ ಇದೆ. ಅಸಲಿಗೆ ಇದೊಂದು ನೈಜ ಘಟನೆಯನ್ನು ಆಧರಿಸಿ ಮಾಡಿದ ಸಿನಿಮಾ. ಸಮಸ್ಯೆಗಳನ್ನು ಮರೆಯಲು ಕುಡಿತದ ದಾಸನಾದವನೊಬ್ಬನ ಕತೆ ಇದು. ಇಂಥ ಒಂದು ಕತೆಯನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ ನಿರ್ದೇಶಕ ಎಸ್‌ಎಲ್‌ಜಿ ಪುಟ್ಟಣ್ಣ. ನಿರ್ದೇಶನವಷ್ಟೇ ಅಲ್ಲ ನಟನೆ ಸೇರಿದಂತೆ ಸಿನಿಮಾದ ಹಲವಾರು ವಿಭಾಗಗಲ್ಲಿ ಸಹ ಇವರು ಕೆಲಸ ಮಾಡಿದ್ದಾರೆ. ಇದರ ಜತೆಗೆ ಇವರು ಮತ್ತು ಇವರ ನಿರ್ಮಾಣವನ್ನು ಮಾಡಿದ್ದಾರೆ. ಈ ಕಾರಣಕ್ಕೆ ಸಿನಿಮಾದ ನಿರ್ಮಾಪಕ ಹೆಸರು ‘ನಾವೇ’ ಎನ್ನುತ್ತಿದ್ದಾರೆ.

ಇತ್ತೀಚೆಗೆ ಸಾಕಷ್ಟು ಜನ ಹೊಸಬರು, ಸಿನಿಮಾ ಮಾಡುವ ಕನಸನ್ನು ಹೊತ್ತು ಬರುತ್ತಿದ್ದಾರೆ. ಅವರಲ್ಲಿ ಒಳ್ಳೆ ಕತೆ, ಅದರೊಳಗೆ ಸತ್ವ ಎರಡೂ ಇರುತ್ತದೆ. ತಾಂತ್ರಿಕವಾಗಿಯೂ ಅವರು ಸಾಕಷ್ಟು ಗಟ್ಟಿಯಾಗಿರುತ್ತಾರೆ. ಈ ಎಲ್ಲಾ ಕಾರಣಗಳೂ ಸೇರಿ ಅದೊಂದು ‘ನೋಡಬಲ್’ ಸಿನಿಮಾವಾಗಿರುತ್ತದೆ. ಹೀಗಾಗಿ ಮೊದಲಿನಂತೆ ಯಾರದ್ದೂ ಹೊಸಬರ ಸಿನಿಮಾ ಎಂದು ಮೂಗುಮುರಿಯುವಂತಿಲ್ಲ, ಏಕೆಂದರೆ ಆನ್ಲೈಲ್ ಫ್ಲಾಟ್‌ಫಾರಂ, ಸೋಷಿಯಲ್ ಮೀಡಿಯಾಗಳ ಮೂಲಕ ಬಿಡುಗಡೆಯ ಮುನ್ನವೇ ಬಹಳ ನಿರೀಕ್ಷೆಯನ್ನು ಹುಟ್ಟಿಸುತ್ತಾರೆ. ಯಾಕಿಷ್ಟೆಲ್ಲಾ ಪೀಠಿಕೆ ನೀಡಿದ್ದೆಂದರೆ, ಫುಲ್‌ಟೈಟ್ ಪ್ಯಾತೆ ಸಿನಿಮಾ ಕೂಡಾ ಇಂಥದ್ದೇ ಹವಾ ಕ್ರಿಯೇಟ್ ಮಾಡಿದೆ. ಇತ್ತೀಚೆಗೆ ಸಿನಿಮಾದ ಹಾಡೊಂದು ‘ಓ ಹೋ ಸುಂದರ, ಏನೀ ಚಂದಿರಾ’ ಎಂದು ಆರಂಭವಾಗುವ ಲಿರಿಕಲ್ ವಿಡಿಯೋ ಸಾಂಗ್ ಒಂದನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದು, ಈ ಹಾಡು ಸಖತ್ ಸೌಂಡ್ ಮಾಡುತ್ತಿದೆ.

ಮಂಡ್ಯ, ಚಾಮರಾಜನಗರ ಸುತ್ತಲಿನ ಭಾಷೆಯನ್ನು ಸಂಭಾಷಣೆಯಲ್ಲಿ ಬಳಸಿದ ಹಲವಾರು ಸಿನಿಮಾಗಳು ಬಂದಿವೆ. ಇಲ್ಲಿ ಇಡೀ ಅದೇ ಶೈಲಿಯ ಸಾಹಿತ್ಯವನ್ನು ಬಳಸಿದ್ದು, ಇದರಿಂದ ಹಾಡು ಹೊಸ ರೀತಿಯ ಕಿಕ್ ಕೊಡುತ್ತಿದೆ. ಕೇಳಿದವರೆಲ್ಲಾ ಮತ್ತೆ ಮತ್ತೆ ಕೇಳುತ್ತಿದ್ದಾರೆ. ಸಾಮಾನ್ಯರಷ್ಟೇ ಅಷ್ಟೇ ಚಿತ್ರರಂಗದ ಗಣ್ಯರಾದ ರಾಘವೇಂದ್ರ ರಾಜ್‌ಕುಮಾರ್, ವಿನೋದ್ ಪ್ರಭಾಕರ್, ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಸೇರಿ ಹಲವರು ಹೊಸಬರ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ಈ ಹಾಡುಗಳು, ಸಿನಿಮಾದ ಟ್ರೇಲರ್ ವಿಶೇಷವಾಗಿದ್ದು ಸಿನಿಮಾ ಹೇಗೆ ಬಂದಿರಬಹುದು ಎಂದು ಕುತೂಹಲ ವ್ಯಕ್ತಪಡಿಸಿದ್ದಾರೆ. ಹೀಗೆ ಸಾಕಷ್ಟು ನಿರೀಕ್ಷೆಗಳನ್ನು ಸಿನಿಮಾ ಶೀಘ್ರದಲ್ಲಿಯೇ ತೆರೆಕಾಣಲಿದೆ.

Tags

Related Articles

Leave a Reply

Your email address will not be published. Required fields are marked *

Language
Close