ವಿಶ್ವವಾಣಿ

ಭಾರತೀಯ ರೋಡಿಗಿಳಿಯಲಿದೆ ನೆಕ್ಸಸ್ ES 300h

ದೆಹಲಿ: ಜಪಾನ್‌ ಮೂಲದ ಲಕ್ಸುರಿ ಕಾರು ತಯಾರಿಕಾ ಕಂಪನಿ ಲೆಕ್ಸಸ್‌ ತನ್ನ ಹೊಸ ಮಾದರಿಯ 7ನೇ ಜನರೇಶನ್‌ ES 300h ಎಲೆಕ್ಟ್ರಿಕ್‌ ಕಾರುಗಳನ್ನು ಭಾರತದಲ್ಲಿ ಪರಿಚಯಿಸಲಿದೆ ಎಂದು ಹೇಳಿದೆ. ಅಲ್ಲದೇ 59.13  ಲಕ್ಷ ರುಪಾಯಿ ದರ ನಿಗದಿ ಪಡಿಸಿದೆ.

2.5 ಲೀಟರ್‌ ಸಾಮರ್ಥ್ಯದ ನಾಲ್ಕು ಸಿಲಿಂಡರ್‌ ಪೆಟ್ರೋಲ್‌ ಇಂಜಿನ್‌ ಹೊಂದಿರುವ ಈ ಕಾರು ನಾಲ್ಕನೇ ಜನರೇಶನ್‌ ಲೆಕ್ಸೆಸ್‌ ಹೈಬ್ರಿಡ್‌ ಹೈಬ್ರಿಡ್ ಡ್ರೈವಿಂಗ್ ಸಿಸ್ಟಂ ಹೊಂದಿದೆ. ಒಂದು ಲೀಟರ್‌ಗೆ 22.37 ಕಿಮಿ ಓಡಬಲ್ಲ ಸಾಮರ್ಥ್ಯ ಹೊಂದಿದೆ.ಇದರಲ್ಲಿರುವ ಡ್ರೈವ್‌ ಮೋಡ್‌ ಸಿಸ್ಟಂ ಮೂಲಕ ರೋಡ್‌ ಕಂಡೀಷನ್‌ಗಣುಗುಣವಾಗಿ ಇಕಾನಮಿ, ಸಾಧಾರಣ ಹಾಗೂ  ಸ್ಪೋರ್ಟ್ಸ್ ಮೋಡ್‌ಗಳಲ್ಲಿ ಚಲಾಯಿಸಬಹುದು.

ಇದರ ಒಳ ವಿನ್ಯಾಸ ಉತ್ತಮವಾಗಿದ್ದು, ಚಾಲಸ ಸಹಿತ 5 ಮಂದಿಗೆ ಆರಾಮವಾಗಿ ಪ್ರಯಾಣಿಸಬಹುದು. ಹಿಂಬಾಗದ ಡಿಕ್ಕಿ ದೊಡ್ಡದಾಗಿದ್ದು, 454 ಲೀಟರ್‌ ಸಾಮರ್ಥ್ಯ ಹೊಂದಿದೆ. ಬೇಕಾದ ಹಾಗೆ ಅಡ್ಜಸ್ಟ್‌ ಮಾಡಬಹುದಾದ ಸೆಮಿ ಅನಿಲೈನ್‌ ಸೀಟ್‌ ಹಾಗೂ 17 ಸ್ಪೀಕರ್‌ ಇರುವ ಈ ಕಾರಿನಲ್ಲಿ ಅರಾಮವಾಗಿ ಕುಳಿತು ಸಂಗೀತ ಆನಂದಿಸಬಹುದು. ಕಾರ್‌ನ ವೇಗ ಹಾಗೂ ಇತರ ವಿಚಾರಗಳನ್ನು ತಿಳಿದುಕೊಳ್ಳು ಎಲ್‌ಇಡಿ ಪರದೆಗಳು ಇದ್ದು, 12.3 ಇಂಚಿನ ಇಎಂವಿ ಫುಲ್‌ಸೈಜ್‌ ಡಿಸ್ಪ್ಲೆ ಹಾಗೂ ವೈರ್‌ಲೆಸ್ ಚಾರ್ಜಿಂಗ್‌ ವ್ಯವಸ್ಥೆ ಇದೆ.ಪ್ರಖರ ಬೆಳಕಿನ ಹೆಡ್‌ಲೈಟ್‌ ಇದ್ದು ರಾತ್ರಿ ಪ್ರಯಾಣವನ್ನೂ ಕೂಡ ಆನಂದಿಸಬಹುದು.