About Us Advertise with us Be a Reporter E-Paper

ಗುರು

ನವ ನರಸಿಂಹ ಕ್ಷೇತ್ರ ಶ್ರೀ ಅಹೋಬಿಲ

ಮಹಾದೇವ ಎನ್.

ಆಂದ್ರ ಪ್ರದೇಶದ ಜಿಲ್ಲೆಯಲ್ಲಿರುವ ಅಹೋಬಿಲ ಸ್ಥಳದಲ್ಲಿ ಭಗವಾನ್ ವಿಷ್ಣುವು ನರಸಿಂಹಾವತಾರ ಮಾಡಿದ್ದಾರೆಂದು ಪ್ರತೀತ ಇದೆ. ಇಲ್ಲಿ ಇರುವ ಎಲ್ಲಾ ಒಂಬತ್ತು ನರಸಿಂಹ ವಿಗ್ರಹಗಳನ್ನು ಸ್ವಯಂಭು ಪ ್ರತಿಷ್ಠಾಪಿಸಿದ್ದಾರೆಂದು ಹೇಳಲ್ಪಟ್ಟಿದೆ. ಕೆಲವೊಂದು ದೇವಸ್ಥಾನಗಳು ಬೆಟ್ಟಗಳ ಮೇಲಿದ್ದು ಮತ್ತೆ ಕೆಲವು ಕಾಡಿನ ಮಧ್ಯೆ ಇದೆ. ಹೀಗಾಗಿ ನವನರಸಿಂಹನನ್ನು ನೋಡಲು ಶ್ರಮ ಪಡಬೇಕೆಂಬುದು ಜನರ ಅಭಿಪ್ರಾಯ.

ಮೊದಲಿಗೆ ಸಿಗುವುದೇ ಹೊಂಗೆ ಮರದ ಕೆಳಗೆ ಇರುವ ಶ್ರೀ ಕಾರಂಜ ನರಸಿಂಹ ಸ್ವಾಮಿ ಸನ್ನಿಧಿ. ಎರಡನೇ ದೇವಾಲಯ ಶ್ರೀ ನರಸಿಂಹಸ್ವಾಮಿಯದ್ದು. ಇಲ್ಲಿ ಸ್ವಾಮಿಯು ವೀರಾಸನ ಭಂಗಿಯಲ್ಲಿ ಇರುವುದರಿಂದ ಉಗ್ರ ನರಸಿಂಹನೆಂದೂ ಕರೆಯುತ್ತಾರೆ. ಹಿರಣ್ಯಕಶ್ಯಪನನ್ನು ತೊಡೆಯ ಮೇಲೆ ಮಲಗಿಸಿ ಎರಡು ಕೈಗಳಿಂದ ಹಿಡಿದುಕೊಂಡ ಭಂಗಿ ಇದೆ. ಸಾಲಿಗ್ರಾಮ ರೂಪದಲ್ಲಿರುವ ಶಿವಲಿಂಗ, ಶೀ ಸುದರ್ಶನ ಚಕ್ರ ಮತ್ತು ಚೆಂಚುಲಕ್ಷ್ಮಿದೇವತೆಯನ್ನು ಕಾಣಬಹುದು. ಮುಖ್ಯದ್ವಾರ ಉತ್ತರ ದಿಕ್ಕಿನಲ್ಲಿರುವುದರಿಂದ, ವೈಕುಂಠ ದರ್ಶನದ ಪಾಪ್ತಿ ಸಿಗುವುದು ಎಂಬುದು ಭಕ್ತರ ನಂಬಿಕೆ. ಇಲ್ಲಿಗೆ ಬರಲು 75 ಮೆಟ್ಟಿಲುಗಳನ್ನು ಹತ್ತಿ, ಸ್ವಲ್ಪ ದೂರ ನಡೆಯಬೇಕು. ಮುಂದಕ್ಕೆ ಸಾಗಲು ಕಡಿದಾದ ಬೆಟ್ಟ ದಾರಿ ಇರುವುದರಿಂದ, ಇಲ್ಲಿ ಬಾಡಿಗೆಗೆ ದೊರೆಯುವ ಬೆತ್ತದ ಊರುಗೋಲನ್ನು ಪಡೆದು ಮುಂದುವರೆಯುವುದು ಕ್ಷೇಮಕರ.

ಈ ಸ್ಥಳದಿಂದ ಮೂರನೆಯ ದೇವಾಲಯ ಶ್ರೀ ವರಾಹ ನರಸಿಂಹಸ್ವಾಮಿಯ ದೇವಸ್ಥಾನಕ್ಕೆ ಅರ್ಧ ಕಿ.ಮೀ. ಇದೆ. ದೇವಸ್ಥಾನದ ಪಕ್ಕದಲ್ಲೇ ಹರಿಯುವ ಭವನಾಶಿನಿ ನದಿ ತರಾವರಿ ಮರಗಿಡಗಳ ಮಧ್ಯೆ ಹರಿದು ಬಂದಿರುವುದರಿಂದ, ವೈದ್ಯಕೀಯ ಗುಣಗಳನ್ನು ಹೊಂದಿದೆ. ಭೂಮಿತಾಯಿಯನ್ನು ಕದ್ದು ಪಾತಾಳದಲ್ಲಿ ಅಡಗಿದ್ದ ರಾಕ್ಷಸನನ್ನು ನರಸಿಂಹ ಸ್ವಾಮಿಯು ವರಾಹರೂಪ ಧರಿಸಿ ಕೊಂದಿರುವುದರಿಂದ ವಿಗ್ರಹ ವರಾಹ ರೂಪದಲ್ಲಿದೆ.

ನಾಲ್ಕನೆಯದ್ದು ಶ್ರೀ ನರಸಿಂಹಸ್ವಾಮಿ ದೇವಸ್ಥಾನ. ಇಲ್ಲಿ ಸ್ವಾಮಿಯು ಎಂಟು ಕೈಗಳನ್ನು ಹೊಂದಿ, ಎರಡು ಕೈಗಳಲ್ಲಿ ಹಿರಣ್ಯಕಶ್ಯಪನ ಹೊಟ್ಟೆಯನ್ನು ಸೀಳಿ, ಇನ್ನೆರಡು ಕೈಗಳಿಂದ ತಲೆ ಮತ್ತು ಕಾಲುಗಳನ್ನು ಹಿಡಿದು, ಮತ್ತೆರಡು ಕೈಗಳಿಂದ ಹಿರಣ್ಯಕಶಿಪುನ ಕರುಳನ್ನು ಹಿಡಿದು, ಉಳಿದ ಎರಡು ಕೈಗಳಲ್ಲಿ ಶಂಖ ಮತ್ತು ಚಕ್ರ ಹೊಂದಿರುತ್ತಾರೆ. ಸ್ವಾಮಿಯ ಎಡಭಾಗದಲ್ಲಿ ಹಿರಣ್ಯಕಶ್ಯಪನ ತಲೆಯಿದೆ. ಹಿರಣ್ಯಕಶ್ಯಪನನ್ನು ಕೊಂದ ನಂತರ ಪಕ್ಕದಲ್ಲೇ ಇರುವ ಸಣ್ಣ ನೀರಿನ ತೊಟ್ಟಿಯಲ್ಲಿ ಕೈ ತೊಳೆಯುತ್ತಾರೆ. ನೀರು ಇಲ್ಲಿ ಸ್ವಲ್ಪ ಕೆಂಪಾಗಿ ಕಂಡರೂ ಹಿಡಿದಾಗ ಶುಭ ತಿಳಿ ಇರುತ್ತದೆ. ಜ್ವಾಲಾ ನರಸಿಂಹ ಸ್ವಾಮಿ ಮಂದಿರಕ್ಕೆ ಹೋಗುವ ಮೊದಲು ಸಣ್ಣ ನೀರಿನ ಜಲಪಾತವನ್ನು ಹಾದೇ ಹೋಗಬೇಕು.

ಐದನೇಯ ದೇವಸ್ಥಾನವೇ ಶೀ ಮಾಲೋಲ ನರಸಿಂಹಸ್ವಾಮಿ. ಮ ಅಂದರೆ ಲಕ್ಷ್ಮಿ, ಲೋಲ ಅಂದರೆ ಪೀತಿಯ ಉಕ್ಕುವಿಕೆ. ಲಕ್ಷ್ಮಿ, ನರಸಿಂಹಸ್ವಾಮಿ ತೊಡೆ ಮೇಲೆ ಕುಳಿತು ನೆಮ್ಮದಿ ಮತ್ತು ಶಾಂತಿ ಮುದ್ರೆ ಹೊಂದಿರುತ್ತಾರೆ. ಆರನೇ ದೇವಸ್ಥಾನ ಶೀ ಪಾವನ ನರಸಿಂಹಸ್ವಾಮಿ. ಅಹೋಬಿಲ ನರಸಿಂಹಸ್ವಾಮಿ ದೇವಸ್ಥಾನದ ಹಿಂದುಗಡೆ ಇರುವ 700 ಮೆಟ್ಟಿಲುಗಳನ್ನು 6 ಕಿ.ಮೀ ಕಾಡಿನ ಮಧ್ಯೆ ನಡೆದರೆ ಈ ದೇವಸ್ಥಾನ ತಲುಪಬಹುದು. ಜೀಪಿನಲ್ಲಿ ಕುಳಿತು ಅರಣ್ಯ ಇಲಾಖೆಯ ಕಡಿದಾದ ದಾರಿಯಲ್ಲಿ ಸಾಗುವುದು ರೋಮಾಂಚನಕಾರಿ ಅನುಭವ. ಸ್ವಾಮಿ ವಿಗ್ರಹದ ತಲೆಯ ಮೇಲೆ 7 ತಲೆಯ ಆದಿಶೇಷನನ್ನು ಕೆತ್ತಿದ್ದಾರೆ. ಇಲ್ಲಿ ದೇವರು, ಭಾರದ್ವಾಜ ಮುನಿಯ ತಪಸ್ಸಿಗೆ ಮೆಚ್ಚಿ ಮಹಾಲಕ್ಷ್ಮಿಯೊಂದಿಗೆ ಪ್ರತ್ಯಕ್ಷವಾಗಿದ್ದರಂತೆ. ಇದು ಉಗ್ರನರಸಿಂಹಸ್ವಾಮಿ, ಲಕ್ಷ್ಮಿಯ ಅಂಶ ಹೊಂದಿರುವ ಚಂಚುಲಕ್ಷ್ಮಿಯನ್ನು ಮದುವೆ ಮಾಡಿಕೊಂಡ ಸ್ಥಳ.

ಶ್ರೀ ಭಾರ್ಗವ ನರಸಿಂಹಸ್ವಾಮಿ ದೇವಸ್ಥಾನವು, ಕೆಳಗಿನ ಅಹೋಬಿಲಂನಿಂದ 4 ದೂರದಲ್ಲಿದೆ. ಇಲ್ಲಿ ಸ್ವಾಮಿಯು ಪರಶುರಾಮರಿಗೆ ದರ್ಶನ ಕೊಟ್ಟಿರುತ್ತಾರೆ. ಸ್ವಾಮಿಯ ಪ್ರಭಾವಳಿಯಲ್ಲಿ ದಶಾವತಾರವಿದೆ. ಬಲಭಾಗದಲ್ಲಿ ಹಿರಣ್ಯಕಶ್ಯಪನ ತಲೆಯಿದೆ. ದೇವರ ದರ್ಶನಕ್ಕೆ ಕೆಳಗಿನ ಅಹೋಬಿಲಂನಿಂದ ಜೀಪ್‌ಗಳು ದೊರೆಯುತ್ತವೆ. ಶೀ ಚಾತ್ರ ವಟ ನರಸಿಂಹಸ್ವಾಮಿ ದೇವಸ್ಥಾನವು ಕೆಳಗಿನ ಅಹೋಬಿಲಂ ನಿಂದ 2 ಕಿ.ಮೀ. ದೂರದಲ್ಲಿದೆ. ಛತಿಯಾಕಾರದ ಆಲದ ಮರದ ಕೆಳಗಿರುವ ಸ್ವಾಮಿಯ ಎಡ ಕೈಯು ತಾಳಮುದ್ರೆ ರೂಪದಲ್ಲಿದೆ. ದೇವಸ್ಥಾನದ ಮಧ್ಯದಲ್ಲಿ ಚಪ್ಪಾಳೆ ಸದ್ದು ಮಾಡಿದರೆ, ಶೃತಿ ರೂಪದಲ್ಲಿ ಪತಿಧ್ವನಿ ಹೊರಬರುತ್ತದೆ. ಸ್ವಾಮಿಯು ಸಂಗೀತಪ್ರಿಯನಾಗಿರುವುದರಿಂದ, ಇಲ್ಲಿ ಕುಳಿತು ದೇವರ ಹಾಡು ಹೇಳುತ್ತಾರೆ.

ಒಂಬತ್ತನೆಯದೇ ಶ್ರೀ ಯೋಗಾನಂದ ನರಸಿಂಹಸ್ವಾಮಿ ದೇವಸ್ಥಾನ. ಇಲ್ಲಿ ಸ್ವಾಮಿಯು ಯೋಗ ಮುದ್ರೆಯಲ್ಲಿದ್ದಾರೆ. ಸಾಕ್ಷಾತ್ ತಿರುಪತಿಯ ವೆಂಕಟರಮಣ ಸ್ವಾಮಿಯು ಇದನ್ನು ಸ್ಥಾಪಿಸಿದ್ದಾರೆಂಬ ಪತೀತಿಯಿದೆ. ಈ ದೇವಸ್ಥಾನವು ಮೂರು ಪ್ರಾಕಾರಗಳನ್ನು ಹೊಂದಿದೆ. ಪ್ರತೀ ಕಂಬಗಳಲ್ಲೂ ವಿಜಯನಗರ ಕಾಲದ ಕಲೆ, ಶೃಂಗಾರ, ಸಾಹಿತ್ಯ ಸಂಗೀತ ಮತ್ತು ಆ ಕಾಲದ ವೈಭವವನ್ನು ಕೆತ್ತಲಾಗಿದೆ. ಈ ನವ ದೇವಾಲಯಗಳನ್ನು ಕಾಲುನಡಿಗೆ, ಊರುಗೋಲಿನ ಸಹಾಯದಿಂದ ದರ್ಶನ ಮಾಡಬಹುದು. ಎರಡು ದಿನಗಳಲ್ಲಿ ಒಂಬತ್ತು ದೇವಸ್ಥಾನಗಳಿಗೆ ಭೇಟಿ ನೀಡಬಹುದು.

ಹೋಗುವುದು ಹೇಗೆ?

ಬೆಂಗಳೂರಿನಿಂದ ನ್ಯಾಷನಲ್ ಹೈವೇ-4 ನಲ್ಲಿ ಪಯಾಣಿಸಿ, ಬೆನಗಾನಪಲ್ಲಿ ಮುಖಾಂತರ ಅಳ್ಳಗಡ್ಡ ತಲುಪಿ ಅಹೋಬಿಲಂ (420 ಕಿ.ಮೀ)ನ್ನು ಸೇರಬಹುದು. ಅಲ್ಲಗಡದಿಂದ ಕೆಳಗಿನ ಮತ್ತು ಮೇಲಿನ ಅಹೋಬಿಲಂಗೆ ಎ.ಪಿ.ಎಸ್.ಆರ್.ಟಿ.ಸಿ ಬಸ್ ವ್ಯವಸ್ಥೆ ಬೆಳಗ್ಗಿನಿಂದ ರಾತ್ರಿಯವರೆಗೂ ವ್ಯವಸ್ಥೆ ಇದೆ. ಮೇಲಿನ ಅಹೋಬಿಲಂನಲ್ಲಿ ಆರ್ಯ ವೈಶ್ಯ, ಕ್ಷತ್ರಿಯ,

ತೊಗಟವೀರ ಮೊದಲಾದ ಅನ್ನದಾನದ ಛತ್ರಗಳಿವೆ. ಕೆಳಗಿನ ಅಹೋಬಿಲಂನಲ್ಲಿ ದೇವಸ್ಥಾನದ ಮಾಲೋಲ ಗೆಸ್‌ಟ್ ಹೌಸ್, ಟಿಟಿಡಿ ಮತ್ತು ಎ.ಪಿ. ಛತ್ರಗಳಿವೆ.

Tags

Related Articles

Leave a Reply

Your email address will not be published. Required fields are marked *

Language
Close