ವಿಶ್ವವಾಣಿ

ಪಾಕ್‌ ನೂತನ ರಾಷ್ಟ್ರಾಧ್ಯಕ್ಷರ ತಂದೆ ನೆಹರು ಅವರಿಗೆ ದಂತ ವೈದ್ಯರಾಗಿದ್ದರು

ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಅರಿಫ್ ಅಲ್ವಿಯವರು ಭಾರತದ ಜತೆಗಿನ ತಮ್ಮ ನಂಟನ್ನು ಹಂಚಿಕೊಂಡಿದ್ದಾರೆ.

ಈ ಕುರಿತೆತ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ವೆಬ್ ಸೈಟ್‌‌ನಲ್ಲಿ ಪ್ರಕಟಿಸಿರುವ ಅಲ್ವಿಯವರು ಆತ್ಮಕಥನದಲ್ಲಿ ತಿಳಿಸಲಾಗಿದೆ. ಭಾರತದ ಮಾಜಿ ಪ್ರಧಾನಿ ಜವಹರ್ ಲಾಲ್ ನೆಹರೂ ಅವರಿಗೆ ಅಲ್ವಿಯವರ ತಂದೆ ದಂತ ವೈದ್ಯರಾಗಿದ್ದರು. ನೆಹರೂ ಅವರು ಬರೆದಿರುವ ಪತ್ರವೊಂದು ತಮ್ಮ ಬಳಿಯಿದೆ ಎಂದು ಅಲ್ವಿಯವರ ಕುಟುಂಬಸ್ಥರು ಹೇಳಿದ್ದಾರೆ.

ಅಲ್ವಿ ಅವರ ತಂದೆ ಡಾ.ಹಬೀಬ್ ಉರ್ ರೆಹಮಾನ್ ಇಲಾಹಿ ಅಲ್ವಿ ದೇಶ ವಿಭಜನೆಗೂ ಮುನ್ನ ನೆಹರೂ ಅವರಿಗೆ ದಂತವೈದ್ಯರಾಗಿದ್ದರು. ಈಗಿನ ರಾಷ್ಟ್ರಾಧ್ಯಕ್ಷರ ಪೂರ್ಣ ಹೆಸರು ಡಾ.ಅರಿಫ್ ಉರ್ ರೆಹಮಾನ್ ಅಲ್ವಿ. ಇವರು 1947ರಲ್ಲಿ ಪಾಕಿಸ್ತಾನ ಕರಾಚಿಯಲ್ಲಿ ಜನಿಸಿದ್ದರು.

ದೇಶ ವಿಭಜನೆ ನಂತರ ಅವರ ತಂದೆ ಕರಾಚಿಯಲ್ಲಿದೇ ವಾಸ್ತವ್ಯ ಹೂಡಿದ್ದರು. ಕರಾಚಿಯಲ್ಲಿ ಸದ್ದರ್ ನಲ್ಲಿ ತಮ್ಮ ವೃತ್ತಿಯನ್ನು ಮುಂದುವರೆಸಿದ್ದರು. ತಂದೆಯಂತೆಯೇ ಅರಿಫ್ ಅಲ್ವಿ ಕೂಡ ದಂತವೈದ್ಯರಾದರು. ಅರಿಫ್ ಅವರ ತಂದೆಗೂ ಮೊಹಮ್ಮದ್ ಅಲಿ ಜಿನ್ನಾ ಕುಟುಂಬಕ್ಕೂ ನಂಟಿತ್ತು. ಜಿನ್ನಾ ಅವರ ಸಹೋದರಿ ಶಿರಿನ್ ಬಾಯಿ ಜಿನ್ನಾ ಆರಂಭಿಸಿದ ಟ್ರಸ್ಟ್ ನಲ್ಲಿ ಅಲಿ ಅವರ ತಂದೆ ಸದಸ್ಯರಾಗಿದ್ದರು. ಆ ಟ್ರಸ್ಟ್ ಸಲುವಾಗಿಯೇ ಆಕೆ ಕರಾಚಿಯಲ್ಲಿದ್ದ ಮೊಹತ್ತಾ ಪ್ಯಾಲೇಸ್ ಸೇರಿದಂತೆ ತಮ್ಮ ಎಲ್ಲಾ ಆಸ್ತಿಯನ್ನು ಕೊಡುಗೆಯಾಗಿ ನೀಡಿದ್ದರು.