About Us Advertise with us Be a Reporter E-Paper

Breaking Newsರಾಜ್ಯ

ಗದ್ದೆಯಲ್ಲಿ ನವಜಾತ ಶಿಶು ಪತ್ತೆ, ಆಸ್ಪತ್ರೆಯಲ್ಲಿ ಮಗುವಿಗೆ ಆರೈಕೆ

ತುಮಕೂರು: ನವಜಾತ ಹೆಣ್ಣು ಶಿಶುವೊಂದು ತುಮಕೂರು ತಾಲೂಕಿನ ಹೊನ್ನೇನಹಳ್ಳಿ ಎಂಬ ಗ್ರಾಮದ ಗದ್ದೆಯಲ್ಲಿ ಪತ್ತೆಯಾಗಿದೆ.

ಗ್ರಾಮಸ್ಥರೊಬ್ಬರು ಬಹಿರ್ದೆಸೆಗೆಂದು ತೆರಳಿದ್ದಾಗ ಮಗು ಅಳುತ್ತಿರುವ ಶಬ್ದ ಕೇಳಿದೆ. ಸ್ಥಳಕ್ಕೆ ಹೋಗಿ ನೋಡಿದಾಗ ಆಗ ತಾನೆ ಹುಟ್ಟಿದ ನವಜಾತ ಶಿಶು ಪತ್ತೆಯಾಗಿದೆ. ಮಗುವನ್ನು ನೋಡಿ ಅವರು ಗ್ರಾಮಕ್ಕೆ ತಂದಿದ್ದಾರೆ. ನಂತರ ಮಹದೇವಮ್ಮ ಎಂಬ ಮಹಿಳೆ ಮಗುವನ್ನು ಆರೈಕೆ ಮಾಡಿ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಬೆಳಗ್ಗೆ 6 ಗಂಟೆ ಸುಮಾರಿಗೆ ಮಗು ಜನಿಸಿದ್ದು, ಮಗುವನ್ನ ಹಾಗೇ ಬಿಸಾಡಿ ಹೋಗಿರುವುದರಿಂದ ತೀವ್ರ ಶೀತಕ್ಕೆ ರಕ್ತ ಹೆಪ್ಪುಗಟ್ಟಿದೆ. ಅಲ್ಲದೇ ಮಗುವಿನ ಉಸಿರಾಟದಲ್ಲೂ ತೀವ್ರ ತೊಂದರೆ ಆಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close