About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಅಧಿಕಾರದ ಆಸೆಗೆ ಅಡ್ಡದಾರಿ ಹಿಡಿದ ಬಿಜೆಪಿ: ಗುಂಡೂರಾವ್

ಬೆಂಗಳೂರು: ಬಿಜೆಪಿಯವರು ಸಮ್ಮಿಶ್ರ ಸರಕಾರ ಉರುಳಿಸಲು  ಹಲವು ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೇ  ಈಗಾಗಲೇ ಕಾಂಗ್ರೆಸ್​ನ 80 ಶಾಸಕರನ್ನು ಸಂಪರ್ಕ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಹೇಳಿದ್ದಾರೆ.

ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಗಾಗಿ ದೆಹಲಿಗೆ ತೆರಳುವವರೆಲ್ಲಾ ನಮ್ಮ ಪಕ್ಷದ ಕಟ್ಟಾಳುಗಳು. ಆದರೆ ಅವರು ಯಡಿಯೂರಪ್ಪ ಜೊತೆಗೆ ಹೋಗಿದ್ದಾರೆ ಎನ್ನುವುದು ಸುಳ್ಳು. ಬಿಜೆಪಿಯವರು ಅಧಿಕಾರ ದಾಹದಿಂದ  ಸಮ್ಮಿಶ್ರ ಸರಕಾರ ಬೀಳಿಸೋಕೆ ಹರ ಸಾಹಸ ಮಾಡುತ್ತಿದ್ದಾರೆ. ಕಾಂಗ್ರೆಸ್​ ಶಾಸಕರಿಗೆ ಆಮಿಷ ಒಡ್ಡಿ ತಮ್ಮತ್ತ ಸೆಳೆದುಕೊಳ್ಳುವ ಅನೈತಿಕ ಕೆಲಸಕ್ಕೆ ಬಿಜೆಪಿಯವರು ಕೈಹಾಕುತ್ತಿದ್ದಾರೆ. ಅವರು ಇದನ್ನು ಬಿಟ್ಟು ಜನರ ಸಮಸ್ಯೆಯನ್ನು ಬಗೆ ಹರಿಸುವತ್ತ ಗಮನಕೊಡಲಿ ಎಂದು ಗುಂಡೂರಾವ್ ತಾಕೀತು ಮಾಡಿದ್ದಾರೆ.

ಪೂಜೆ-ಪುನಸ್ಕಾರ, ದೇವರು, ಸ್ವಾಮೀಜಿ ಹೀಗೆ ಎಲ್ಲದರ ಮೊರೆ ಹೋದರು ಬಿಜೆಪಿಗೆ ಸ್ಪಷ್ಟ ಬಹುಮತ ಸಾಧಿಸಲಾಗಲಿಲ್ಲ. ಈಗ ಇದನ್ನೆಲ್ಲ ಬಿಟ್ಟು  ಅಡ್ಡದಾರಿ ಹಿಡಿದು ಸರಕಾರ ರಚನೆ ಮಾಡುವುದು ಸರಿಯಲ್ಲ. ಬಿಎಸ್ ಯಡಿಯೂರಪ್ಪ ಆಪರೇಷನ್ ಕಮಲದಿಂದ ಮೂರು ದಿನ ಮುಖ್ಯಮಂತ್ರಿಯಾಗಿ ಈಗಾಗಲೇ ಕೈ ಸುಟ್ಟಿಕೊಂಡಿದ್ದಾರೆ. ಇಷ್ಟಾದರೂ ಅವರಿಗೆ ಬುದ್ದಿ ಬಂದಂತ್ತಿಲ್ಲ. ಇನ್ನು ಮುಂದೆ ಸರಕಾರದ ತಂಡೆಗೆ ಬಾರದೆ ಸುಮ್ಮನಿರುವುದು ಅವರಿಗೆ ಉತ್ತಮ ಎಂದು ಎಚ್ಚರಿಕೆ ನೀಡದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close