About Us Advertise with us Be a Reporter E-Paper

Breaking NewsUncategorizedಪ್ರಚಲಿತಸಿನಿಮಾಸ್

ಕುಮಾರಸ್ವಾಮಿ ಮನೆ ಸೊಸೆ ಯಾರು..???

ಅಭಿಮಾನಿಗಳಿಂದ ಮಣ್ಣಿನ ಮಗ ಎಂದು ಕರೆಸಿಕೊಳ್ಳುತ್ತಿರುವ ಮಾನ್ಯ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ಸೊಸೆಗಾಗಿ ಹುಡುಕಾಟದಲ್ಲಿದ್ದಾರೆ. ಮಗ, ನಾಯಕ ನಿಖಿಲ್‌ಗೆ ನಿನ್ನೆ ವಧುಪರೀಕ್ಷೆಯೊಂದು ನಡೆದಿದೆ ಎನ್ನುವ ಸುದ್ದಿ ಎಲ್ಲೆಡೆ ಹರಡಿತ್ತು. ಆಂಧ್ರ ಮೂಲದ ಹುಡುಗಿಯೊಬ್ಬಳನ್ನು ಕುಮಾರಣ್ಣ ಮನೆ ತುಂಬಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ ಈಗ ಈ ಕಥೆಗೆ ಹೊಸದೊಂದು ಟ್ವಿಸ್‌ಟ್ ಸಿಕ್ಕಿದೆ.

ಆಂಧ್ರದ ಖ್ಯಾತ ಉದ್ಯಮಿ ಬೋಡೆಪುಡಿ ಶಿವ ಕೋಟೇಶ್ವರ ರಾವ್ ಅವರ ಮನೆಗೆ ಕುಮಾರಸ್ವಾಮಿ ದಂಪತಿಗಳು ನಿನ್ನೆ ನೋಡಲು ಹೋಗಿದ್ದಾರೆ ಎಂದು ಎಲ್ಲೆಡೆ ಸುದ್ದಿಯಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಶಿವ ಕೋಟೇಶ್ವರ್ ರಾವ್ ‘ನಾನು ಕುಮಾರಸ್ವಾಮಿ ಒಳ್ಳೆಯ ಸ್ನೇಹಿತರು. ಸಹಜವಾಗಿ ನಮ್ಮನೆಯಲ್ಲಿ ಭೇಟಿಯಾಗಿದ್ದೇವೆ ಅಷ್ಟೇ. ನಿಖಿಲ್ ಮದುವೆ ವಿಚಾರವಾಗಿ ನಾವು ಮಾತನಾಡಿಲ್ಲ’ ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ.

ಇದರ ಜತೆಗೆ ಇನ್ನೊಂದು ಟ್ವಿಸ್ಟ್ ಎಂದರೆ ಅನಿತಾ ಕುಮಾರಸ್ವಾಮಿಯವರ ಮಾತು. ಅವರು ತಮ್ಮ ಮಗನಿಗೆ ‘ಕರ್ನಾಟಕ ಬಿಟ್ಟು ಬೇರೆ ಕಡೆಯಿಂದ ಹೆಣ್ಣು ತರಲ್ಲ, ತಲೆಕೆಡಿಸಿಕೊಳ್ಳಬೇಡಿ’ ಎಂದು ನುಡಿದಿದ್ದಾರಂತೆ. ಅದರೊಡನೆ ಹೆಣ್ಣಿನ ಮನೆಯವರಿಗೆ ‘ನಮಗೆ ಈ ಸಂಬಂಧ ಇಷ್ಟ ಇಲ್ಲ’ ಎಂದು ಹೇಳಿ ಬಂದಿದ್ದಾರಂತೆ.

ಅದೇನೇ ಇದ್ದರೂ ಕುಮಾರಸ್ವಾಮಿ ಕುಟುಂಬದವರು ಅಧಿಕೃತವಾಗಿ ಮಾಹಿತಿ ನೀಡುವ ತನಕ ನಿಖಿಲ್‌ಗೆ ಆಂಧ್ರ ಹುಡುಗಿಯೋ ಇಲ್ಲ ಕನ್ನಡದ ಹುಡುಗಿಯೋ ಎಂದು ನಿರ್ಧರಿಸಲಾಗದು.

Tags

Related Articles

Leave a Reply

Your email address will not be published. Required fields are marked *

Language
Close