About Us Advertise with us Be a Reporter E-Paper

ಯಾತ್ರಾಯಾತ್ರಾ panel 1

ಮುನ್ನಾರಿನಲ್ಲಿ ಅರಳಿದ ನೀಲಕುರುಂಜಿ

ವಿವೇಕ ಆದಿತ್ಯ ಕಾಸರಗೋಡು

ಕೇರಳದಲ್ಲಿ ಪ್ರವಾಸೋದ್ಯಮ ಪುನಃ ಪುಟಿ ದೇಳುತ್ತಿದೆ, ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ನೀಲಕುರುಂಜಿ ಪುಷ್ಪಗಳು ಮುನ್ನಾರ್ ಬೆಟ್ಟ ಪ್ರದೇಶದಲ್ಲಿ ಅರಳುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಆಕರ್ಷಿಸಿದೆ. ತೀವ್ರ ಮಳೆಯಿಂದ ಆಗಸ್‌ಟ್ ತಿಂಗಳ ಆರಂಭದಲ್ಲಿ ಸಂಭವಿಸಿದ ಗುಡ್ಡ ಜರಿತ, ಪ್ರವಾಹದಿಂದ ಜರ್ಜರಿತಗೊಂಡಿದ್ದ ಇಡುಕ್ಕಿ ಜಿಲ್ಲೆಯು ಚೇತರಿಸಿಕೊಳ್ಳುತ್ತಿದ್ದು, ಪ್ರವಾಸಿಗರನ್ನು ನೀಲಕುರುಂಜಿ ಮೂಲಕ ಸ್ವಾಗತಿಸಲು ಸಜ್ಜಾಗಿದೆ. ಹಲವು ಮಂದಿ ಪ್ರವಾಸಿಗರು ವಿಶೇಷ ನೀಲಕುರುಂಜಿ ಪುಷ್ಪ ಅರಳಿದ ಬೆಟ್ಟ ಪ್ರದೇಶದ ಸೊಬಗನ್ನು ವೀಕ್ಷಿಸಲು ಮುಂಗಡ ಬುಕ್ಕಿಂಗ್ ನಡೆಸಿದ್ದಾರೆ. ಮುನ್ನಾರ್ ಪ್ರದೇಶಕ್ಕೆ ತಲುಪುವ ಪೆರಿಯಾವುರೈ ಸೇತುವೆ ಪ್ರವಾಹದಲ್ಲಿ ಹಾನಿಗೊಳಪಟ್ಟ ಕಾರಣ ರಾಜಮಲಕ್ಕೆ ಕೊಚ್ಚಿ ಮುನ್ನಾರ್ ಮಾರ್ಗವಾಗಿ ಸಂಚಾರ ಕಲ್ಪಿಸಲಾಗಿದೆ. ರಾಜಮಲ ಪ್ರದೇಶದಿಂದ ಬಾಡಿಗೆ ಆಟೋರಿಕ್ಷಾ, ಜೀಪುಗಳ ಮೂಲಕ ನೀಲಕುರುಂಜಿ ಅರಳಿರುವ ಗಿರಿ ಪ್ರದೇಶಕ್ಕೆ ತಲುಪಬಹುದಾಗಿದೆ.

ವಟ್ಟವಾಡ ಪ್ರದೇಶದಲ್ಲಿ ಪ್ರಥಮ ಹಂತದ ನೀಲಕುರುಂಜಿ ಪುಷ್ಪಗಳು ಅರಳಿವೆ, ಕಲುಷಿತಗೊಂಡಿದ್ದ ಗುಡ್ಡ ಪ್ರದೇಶವನ್ನು ಪ್ರವಾಸೋದ್ಯಮ ಕ್ಷಿಪ್ರ ಪಡೆ ಹಾಗೂ ಸ್ಥಳೀಯ ಸರ್ಕಾರೇತರ ಸಂಸ್ಥೆಯ 1000 ಮಂದಿ ಸ್ವಯಂಸೇವಕರು ಸ್ವಚ್ಛಗೊಳಿಸಿ, ಪ್ರವಾಸಿಗರಿಗೆ ಅಗತ್ಯ ಅನುಕೂಲತೆಗಳನ್ನು ಏರ್ಪಡಿಸಿ ದ್ದಾರೆ. ಮೋಡವಿಲ್ಲದ ಕಾರಣ ಭೂ ಪ್ರದೇಶಕ್ಕೆ ಬೀಳುವ ಸೂರ್ಯನ ಬೆಳಕು ನೀಲಕುರುಂಜಿ ಅರಳಲು ಸೂಕ್ತ ಸಂದರ್ಭ ವನ್ನು ಒದಗಿಸಿದೆ. ನವೆಂಬರ್ ತನಕ ನೀಲಕುರುಂಜಿ ವೀಕ್ಷಣೆಯನ್ನು ಪ್ರವಾಸಿಗರು ಆಸ್ವಾದಿಸಬಹುದಾಗಿದ್ದು, ಅಕ್ಟೋಬರ್ ತಿಂಗಳು ಉತ್ತಮ ಎನ್ನುತ್ತಾರೆ ಪ್ರವಾಸಿ ತಜ್ಞರು. ಕಳೆದ ವರ್ಷ ಮುನ್ನಾರು ಗಿರಿಧಾಮಕ್ಕೆ ಆಗಮಿಸಿದ ಸಂಖ್ಯೆ 5.25 ಲಕ್ಷದಷ್ಟಿತ್ತು. ಇದರಲ್ಲಿ 48,000 ಮಂದಿ ವಿದೇಶಿ ಪ್ರವಾಸಿಗರಾಗಿದ್ದರು. ಈ ಬಾರಿ 12 ವರ್ಷಗಳಿಗೊಮ್ಮೆ ಅರಳುವ ನೀಲಕುರುಂಜಿ ಗಿರಿಪುಷ್ಪ ವೀಕ್ಷಣೆಗೆ ರಾಜ್ಯಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ ಎಂದು ಕೇರಳ ಪ್ರವಾಸೋದ್ಯಮ ಇಲಾಖೆ ಅಭಿಪ್ರಾಯಪಟ್ಟಿದೆ.

ನೀಲಕುರುಂಜಿ ವಿಶೇಷತೆಗಳು

ನೀಲಕುರುಂಜಿ ಎಂದರೆ ತಿಳಿ ನೀಲಿ ಬಣ್ಣವನ್ನು ಹೊಂದಿರುವ ಪುಷ್ಪ. ದಕ್ಷಿಣ ಕೇರಳ ಹಾಗೂ ತಮಿಳುನಾಡಿನ ನೀಲಗಿರಿ ಬೆಟ್ಟ ಶ್ರೇಣಿಯಲ್ಲಿ ನೀಲಕುರುಂಜಿ ಪುಷ್ಪ ಹನ್ನೆರಡು ವರ್ಷಗಳಿಗೊಮ್ಮೆ ಅರಳುತ್ತದೆ. 2006 ನೀಲಕುರುಂಜಿ ಪುಷ್ಪಗಳು ಈ ಗಿರಿ ಪ್ರದೇಶದಲ್ಲಿ ಅರಳಿದ್ದವು. ಕೊಡೈಕೆನಾಲ್ ಗಿರಿಧಾಮದ ಇಳಿಜಾರು ಪ್ರದೇಶದಲ್ಲಿ ಅರಳಿದ್ದ ಪುಷ್ಪಗಳು ಈ ಬಾರಿ ಪುನಃ ಅರಳಲು ಆರಂಭಿಸಿವೆ. ನಿಸರ್ಗ ವೈವಿಧ್ಯತೆಗೆ ಸಾಕ್ಷಿಯಾದ ನೀಲಕುರುಂಜಿ ಸೊಬಗನ್ನು ನೋಡಲು ಹಲವು ಮಂದಿ ಪ್ರವಾಸಿಗರು ಕಾತರರಾಗಿದ್ದಾರೆ. ಒಟ್ಟು 46 ವಿಧದ ಕುರುಂಜಿ ಪುಷ್ಪಗಳು ಭಾರತ ದೇಶದಲ್ಲಿ ಕಾಣಬಹು ದಾಗಿದ್ದು, ಪಶ್ಚಿಮ ಘಟ್ಟ ಶ್ರೇಣಿಯ ಶೋಲಾ ಕಾಡುಗಳು ಇದರ ಮೂಲವಾಗಿದೆ. ನೀಲಕುರುಂಜಿ ಗಿರಿಗಳು ಸಹಿತ ಹುಲ್ಲುಗಾವಲು ಗಳಲ್ಲಿ ಉದ್ಭವಿಸುವ ಬಹಳ ಹಿಂದೆ ನೀಲ ಕುರುಂಜಿಯು ಕೊಡೈಕನಾಲ್ ಬೆಟ್ಟ ಶ್ರೇಣಿಯ ಆದಿವಾಸಿ ಪುಲಿಯನ್ ಸಮೂಹದ ಜನರಿಗೆ ತಮ್ಮ ವಯಸ್ಸನ್ನು ನಿರ್ಣಯಿ ಸುವ ಮಾಪಕವಾಗಿತ್ತು. ನೀಲಗಿರಿ, ಪಳನಿ ಬೆಟ್ಟ ಸಹಿತ ಪೂರ್ವ ಘಟ್ಟ ಶ್ರೇಣಿ ಪ್ರದೇಶದಲ್ಲೂ ನೀಲಕುರುಂಜಿ ಅರಳುತ್ತದೆ. ಕರ್ನಾ ಟಕ ರಾಜ್ಯದ ಬಳ್ಳಾರಿಯ ಸಂಡೂರು ಬೆಟ್ಟ ಶ್ರೇಣಿಯಲ್ಲೂ ನೀಲ ಕುರುಂಜಿ ಪ್ರಭೇದದ ಸಸ್ಯರಾಶಿಯಿದ್ದು, 2017ರಲ್ಲಿ ಅರಳಿದ್ದವು. ಇಡುಕ್ಕಿ ಜಿಲ್ಲೆಯಲ್ಲಿ 1982,1994,2006ರಲ್ಲಿ ನೀಲಕುರುಂಜಿ ಅರಳಿದ್ದವು.

Tags

Related Articles

Leave a Reply

Your email address will not be published. Required fields are marked *

Language
Close