About Us Advertise with us Be a Reporter E-Paper

ಅಂಕಣಗಳು

ಹೊರಗಿದ್ದುಕೊಂಡೇ ತಾಯ್ನಾಡನ್ನು ತಿದ್ದಿ, ಪೀತಿಸಿದ ನೈಪಾಲ್

ಡಾ. ಸಿ.ಎನ್. ರಾಮಚಂದ್ರನ್

1932 ರಲ್ಲಿ ಟ್ರಿನಿಡಾಡ್‌ನ ಚಾಗ್ವಾನಾಸ್ ಎಂಬ ಪಟ್ಟಣದಲ್ಲಿ ಜನಿಸಿದ ವಿದ್ಯಾಧರ ಸೂರಜ್ ಪ್ರಸಾದ್ ನೈಪಾಲ್ ತಮ್ಮ ಆತ್ಮಕಥನಾತ್ಮಕ ‘ಅ ಹೌಸ್ -ರ್ ಮಿ. ಬಿಶ್ವಾಸ್’ ಎಂಬ ಕಾದಂಬರಿಯಲ್ಲಿ  ತಾವು ಟ್ರಿನಿಡಾಡ್‌ನಲ್ಲಿ ಹುಟ್ಟಿದರೂ ಹೇಗೆ ತಮ್ಮ ಬಾಲ್ಯ ಹಿಂದು ಧಾರ್ಮಿಕ ಚೌಕಟ್ಟಿನಲ್ಲಿಯೇ ಕಳೆಯಿತು ಎಂಬುದನ್ನು ದೀರ್ಘವಾಗಿ ಚಿತ್ರಿಸುತ್ತಾರೆ.   ಕಾದಂಬರಿಯಲ್ಲಿ ಹನುಮಾನ್ ಹೌಸ್ ಎಂದು ಕರೆಯಲ್ಪಟ್ಟಿರುವ ತಮ್ಮ ಮನೆ ಧಾರ್ಮಿಕ-ಸಾಂಸ್ಕೃತಿಕ ನೆಲೆಯಲ್ಲಿ ಮಿನಿ ಭಾರತವೇ ಆಗಿತ್ತು ಎಂಬ ಅಂಶವನ್ನು ತುಂಬಾ ಪರಿಣಾಮಕಾರಿಯಾಗಿ ದಾಖಲಿಸುತ್ತಾರೆ.

ಇವರ ಹಿಂದು ಪೂರ್ವಜರು ಭಾರತದ ಉತ್ತರ ಪ್ರದೇಶದಿಂದ ಗಯಾನಾ ಹಾಗೂ ಟ್ರಿನಿಡಾಡ್‌ಗಳ ಕಬ್ಬಿನ ಪ್ಲಾಂಟೇಶನ್‌ಗಳಲ್ಲಿ ಕೆಲಸ ಮಾಡಲು ಅಲ್ಲಿಗೆ ವಲಸೆ ಹೋಗಿದ್ದರು.  ಪ್ರಾಥಮಿಕ-ಪ್ರೌಢ ಶಿಕ್ಷಣವನ್ನು ಟ್ರಿನಿಡಾಡ್‌ನಲ್ಲಿಯೇ ಮುಗಿಸಿದ ನೈಪಾಲ್ ಒಂದು -ಲೋಷಿಪ್ ಪಡೆದು, ಉಚ್ಚಶಿಕ್ಷಣಕ್ಕಾಗಿ ಆಕ್ಸ್-ರ್ಡ್‌ಗೆ ಬಂದು, ಅನಂತರ ಬ್ರಿಟಿಷ್ ಪೌರತ್ವವನ್ನು ಗಳಿಸಿ, ಅಲ್ಲಿಯೇ ನೆಲೆಸುತ್ತಾರೆ.

ಪ್ರಾರಂಭದಿಂದಲೂ ಲೇಖಕನಾಗುವ ಕನಸು ಕಾಣುತ್ತಿದ್ದ ಮತ್ತು ಉಚ್ಚ ಶಿಕ್ಷಣದ ನಂತರ ಲೇಖಕ ವೃತ್ತಿಯನ್ನು ಹೊರತುಪಡಿಸಿ ಬೇರಾವ ವೃತ್ತಿಯನ್ನೂ ಕೈಗೊಳ್ಳದ ನೈಪಾಲ್ ಅವರ ಮೊದಲ ಕಾದಂಬರಿ ‘ದ ಮಿಸ್ಟಿಕ್ ಮ್ಯಾಸೂರ್ (ಅನುಭಾವೀ ಸಂವಾಹಕ)’  ೧೯೫೭ರಲ್ಲಿ ಪ್ರಕಟಣೆಯಾಗಿ ವಿಮರ್ಶಕರ ಗಮನವನ್ನು ಸಾಕಷ್ಟು ಸೆಳೆಯಿತು. ಆದರೆ ಇವರಿಗೆ ಅಪಾರ ಕೀರ್ತಿಯನ್ನು ಮತ್ತು ಜನಪ್ರಿಯತೆಯನ್ನು ತಂದುಕೊಟ್ಟ ಕೃತಿಯೆಂದರೆ ೧೯೬೧ರಲ್ಲಿ ಪ್ರಕಟವಾದ ಇವರ ನಾಲ್ಕನೆಯ ಕಾದಂಬರಿ ‘ಅ ಹೌಸ್ -ರ್ ಮಿ. ಬಿಶ್ವಾಸ್ (ಬಿಶ್ವಾಸ್‌ಗೆ ಒಂದು ಮನೆ)’.  ಇಲ್ಲಿಯವರೆಗೆ ನೈಪಾಲ್ ಒಟ್ಟು  ೧೧ ಕಾದಂಬರಿಗಳನ್ನು, ಮತ್ತು ಪ್ರವಾಸ ಕಥನ, ವೈಚಾರಿಕ ಪ್ರಬಂಧ, ಇತ್ಯಾದಿ ಎಂಟು ಸೃಜನೇತರ ಕೃತಿಗಳನ್ನೂ, ಹಾಗೂ ‘-ಂಡಿಂಗ್ ದ ಸೆಂಟರ್ (ಕೇಂದ್ರಕ್ಕಾಗಿ ಹುಡುಕಾಟ, ೧೯೮೪)’ ಎಂಬ ಆತ್ಮಕಥನಾತ್ಮಕ ಕೃತಿಯನ್ನೂ ರಚಿಸಿದ್ದಾರೆ; ಇವರ ಒಟ್ಟು ಕೃತಿಗಳ ಸಂಖ್ಯೆ ಮೂವತ್ತನ್ನೂ ಮೀರುತ್ತದೆ.

ಅಸಾಧಾರಣ ಪ್ರತಿಭೆ, ನಿಖರ ಹಾಗೂ ನಿರ್ಭೀತ ವೈಚಾರಿಕತೆ, ಗಾಢವಾದ ಚಾರಿತ್ರಿಕ ಜ್ಞಾನ ಮತ್ತು ಮಾನವೀಯ ಕಳಕಳಿ ಈ ಗುಣಗಳಿಂದಾಗಿ ಪ್ರಾರಂಭದಿಂದಲೂ ನೈಪಾಲ್ ಅವರ ಸೃಜನಶೀಲ ಮತ್ತು ಸೃಜನೇತರ ಕೃತಿಗಳು ಓದುಗರ / ವಿಮರ್ಶಕರ ಮನ್ನಣೆ ಗಳಿಸಿವೆ; ಹಾಗೆಯೇ, ‘ಅಮಂಗ್ ದ ಬಿಲೀವರ್ಸ್ (ಶ್ರದ್ಧಾಳುಗಳ ನಡುವೆ)’, ‘ಅನ್ ಏರಿಯಾ ಆ- ಡಾರ್ಕ್‌ನೆಸ್ (ಕತ್ತಲೆಯ ಸ್ಥಳ)’, ಇತ್ಯಾದಿ ಅನೇಕ ಕೃತಿಗಳು ಅಪಾರ ಟೀಕೆ-ಟಿಪ್ಪಣಿಗಳಿಗೂ ಒಳಗಾಗಿವೆ.  ಇವರನ್ನು ಅರಸಿಕೊಂಡು ಬಂದ ಪ್ರಶಸ್ತಿ-ಪುರಸ್ಕಾರಗಳು ಅನೇಕ: ಸಾಮರ್ಸೆಟ್ ಮಾಮ್ ಪ್ರಶಸ್ತಿ (೧೯೬೩), ಡಬ್ಲ್ಯು. ಎಚ್. ಸ್ಮಿತ್ ಪ್ರಶಸ್ತಿ  (೧೯೬೮), ಬುಕರ್ ಪ್ರಶಸ್ತಿ (೧೯೭೧), ಮತ್ತು ಇಂಗ್ಲೆಂಡ್‌ನ ರಾಣಿಯಿಂದ ನೈಟ್‌ಹುಡ್ ಪ್ರದಾನ (೧೯೯೦), ಇತ್ಯಾದಿ. ಇವೆಲ್ಲಕ್ಕೂ ಕಳಸವಿಟ್ಟಂತೆ ೨೦೦೧ರಲ್ಲಿ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಇವರದಾಯಿತು.

ವಸಾಹತೋತ್ತರ ವ್ಮಾಯದ ಒಂದು ಪ್ರಮುಖ ಕಾಳಜಿಯೆಂದರೆ ಪರಂಪರೆಯೊಡನೆ ವರ್ತಮಾನಕ್ಕಿರುವ ಸಂಬಂಧದ ಸ್ವರೂಪ.  ವಸಾಹತುಶಾಹಿ, ತನ್ನ ಭಾಷೆ, ಸಾಹಿತ್ಯ, ವೈಚಾರಿಕತೆಗಳ ಮೂಲಕ ವಿಶ್ವದ ಹೆಚ್ಚಿನ ರಾಷ್ಟ್ರಗಳಲ್ಲಿ ಆಮೂಲಾಗ್ರ ಬದಲಾವಣೆಗೆ ಕಾರಣವಾಯಿತು; ಅದರೊಡನೆಯೇ ಆ ರಾಷ್ಟ್ರಗಳು ಹಿಂದೆಂದೂ ಅನುಭವಿಸದಿದ್ದಂತಹ ತಲ್ಲಣ-ಆತಂಕಗಳನ್ನು ಸೃಷ್ಟಿಸಿತು. ವಸಾಹತೋತ್ತರ ಅನುಭವವೇ ತಮ್ಮ ಕೃತಿಗಳ ಮೂಲದ್ರವ್ಯವಾಗಿರುವ ನೈಪಾಲ್‌ರನ್ನು ಪ್ರರಂಪರೆಯ ಪ್ರಶ್ನೆ ಎಡೆಬಿಡದೆ ಕಾಡಿದೆ.  ಇದಕ್ಕೆ ಕಾರಣ ಅವರು ಎರಡು ಬಾರಿ ಅನುಭವಿಸಿದ ಸಂಸ್ಕೃತಿ-ನಷ್ಟ: ಮೊದಲಿಗೆ ಭಾರತೀಯ ಹಿಂದು ಸಂಸ್ಕೃತಿ ಮತ್ತು, ಅನಂತರ, ಟ್ರಿನಿಡಾಡ್ ಸಂಸ್ಕೃತಿ. ಈ ಕಾರಣದಿಂದ, ಅವರನ್ನು ಯಾವಾ ಗಲೂ ನಿರ್ವಸಿತ ಪ್ರe ಕಾಡುತ್ತದೆ; ಬ್ರಿಟಿಷ್ ಪ್ರಜೆಯಾಗಿ,  ಪಾಶ್ಚಿಮಾತ್ಯ ಬೌದ್ಧಿಕ ಪರಂಪರೆ, ತರ್ಕಪಾರಮ್ಯ ವಾದ, ಏಕಮುಖಿಯಾದ ಚಾರಿತ್ರಿಕ ಗತಿ, ಧರ್ಮಾತೀತ ಆಧುನಿಕತೆ, ಇತ್ಯಾದಿಗಳನ್ನು ಪ್ರಜ್ಞಾಪೂರ್ವಕವಾಗಿ ಇವರು ಒಪ್ಪಿಕೊಂಡಿದ್ದರೂ ಇವರ ಸುಪ್ತಚಿತ್ತದಲ್ಲಿ ಹಿಂದು ಧರ್ಮವನ್ನು ಕುರಿತ ಪ್ರೀತ್ಯಭಿಮಾನಗಳು ಕಿಕ್ಕಿರಿದಿವೆ.  ಹಿಂದು ಧರ್ಮವನ್ನು ಕುರಿತ ಈ ಬಗೆಯ ಆಕರ್ಷಣೆ-ವಿಕರ್ಷಣೆಗಳೇ ಇವರ ಎಲ್ಲಾ ಕೃತಿಗಳ ವೈಚಾರಿಕ ಚೌಕಟ್ಟನ್ನು ನಿಯಂತ್ರಿಸುತ್ತವೆ.  ಈ ಚೌಕಟ್ಟಿನ ಹಿನ್ನೆಲೆಯಲ್ಲಿ ನೈಪಾಲರ ಕೆಲವು ಪ್ರಮುಖ ಕೃತಿಗಳನ್ನು ವಿಮರ್ಶಾತ್ಮಕವಾಗಿ ನೋಡುವ ಪ್ರಯತ್ನ ಈ ಭಾಗದಲ್ಲಿದೆ.

ನೈಪಾಲ್‌ರ ಪ್ರಮುಖ ಕೃತಿ ‘ಅ ಹೌಸ್ -ರ್ ಮಿ. ಬಿಶ್ವಾಸ್’ ಕಾದಂಬರಿಯಲ್ಲಿ ಪರಂಪರೆಯ ವಿಕರ್ಷಣೆಗೆ ಮತ್ತು ಅದರಿಂದ ಪಡೆಯಬೇಕಾದ ವಿಮೋಚನೆಗೇ ಒತ್ತು ಬೀಳುತ್ತದೆ.  ಈ ಕಾದಂಬರಿಯ ಕೇಂದ್ರ ಪಾತ್ರ ಬಿಶ್ವಾಸ್, ನೈಪಾಲ್‌ರ ತಂದೆಯ ನಿಜ ಜೀವನವನ್ನು ಆಧರಿಸಿದೆ; ಮತ್ತು ಅವರ ಮಗ ಆನಂದನ ಪಾತ್ರದಲ್ಲಿ ನೈಪಾಲ್ ಕಾಣಿಸಿಕೊಳ್ಳುತ್ತಾರೆ. ಕಿಶೋರಾವಸ್ಥೆಯ ಆನಂದನ ಪ್ರeಯ ಮೂಲಕ ಕಾದಂಬರಿ ನಿರೂಪಿಸಲ್ಪಟ್ಟಿದೆ.

ಕಾದಂಬರಿಯ ಶೀರ್ಷಿಕೆಯಲ್ಲಿರುವ ಮನೆ, ಅನನ್ಯತೆಯ, ಸ್ವಂತಿಕೆಯ ಪ್ರತೀಕ.  ಇಡೀ ಕಾದಂಬರಿ, ಪರಂಪರಾಗತ  ಯಾಂತ್ರಿಕ ಆಚರಣೆಗಳ, ನಂಬಿಕೆಗಳ, ಮೌಲ್ಯಗಳ ಕತ್ತಲೆ ತುಂಬಿದ ಹನುಮಾನ್ ಹೌಸ್‌ನಿಂದ ಬಿಶ್ವಾಸ್ ಬಿಡುಗಡೆ ಪಡೆದು, ತನ್ನದೇ ಆದ ಮನೆಗಾಗಿ ಮಾಡುವ ಬಗೆಬಗೆಯ ವಿ-ಲ ಪ್ರಯತ್ನಗಳನ್ನು ನಿಖರ ವಿವರಗಳೊಡನೆ ದಾಖಲಿಸುತ್ತದೆ. (ಹನುಮಾನ್ ಹೌಸ್ ಎಂಬ ಹೆಸರು ಕನ್ನಡದಲ್ಲಿ/ ಭಾರತೀಯ ಭಾಷೆಗಳಲ್ಲಿ ಹೆಚ್ಚಿನ ಧ್ವನಿ ಸಾಧ್ಯತೆಗಳನ್ನು ಪಡೆಯುತ್ತದೆ.  ಪರಂಪರಾಗತ ಹಿಂದು ಅವಿಭಕ್ತ ಕುಟುಂಬದ ಕಪಿಮುಷ್ಠಿಯ ಹಿಡಿತವನ್ನು ಈ ಹೆಸರು ಸೂಚಿಸುತ್ತದೆ; ಅದರಿಂದ ಬಿಡಿಸಿಕೊಳ್ಳುವುದು ಕಷ್ಟಕರ.)  ತಮ್ಮ ಒಂದು ಲೇಖನದಲ್ಲಿ ನೈಪಾಲ್ ತಮ್ಮ ಅಜ್ಜನಂತಹ ಭಾರತೀಯ ವಲಸೆಗಾರರ ಬಗ್ಗೆ ಹೀಗೆ ಹೇಳುತ್ತಾರೆ: ‘ಅವರು ಎಲ್ಲವನ್ನೂ -ಹಾಸಿಗೆಗಳು, ಹಿತ್ತಾಳೆಯ ಪಾತ್ರೆಗಳು, ಸಂಗೀತ ವಾದ್ಯಗಳು, ದೇವರ ವಿಗ್ರಹಗಳು, ಧಾರ್ಮಿಕ ಗ್ರಂಥಗಳು, ಅಗರ್‌ಬತ್ತಿಗಳು, ಪಂಚಾಂಗಗಳು ಇವೆಲ್ಲವನ್ನೂ ತಮ್ಮೊಡನೆ ಒಯ್ದರು.  ಆದ್ದರಿಂದ ಅಂತಹ ವಲಸೆ ಮೇಲುನೋಟಕ್ಕೆ ಕಾಣುವಷ್ಟು ಪಲ್ಲಟಕ್ಕೆ ಕಾರಣವಾಗುತ್ತಿರಲಿಲ್ಲ. ಏಕೆಂದರೆ ಅವರು ತಮ್ಮೊಡನೆ ಇಡೀ ಭಾರತವನ್ನೇ ಒಯ್ಯುತ್ತಿದ್ದರು’ (೧೯೮೧).  ಈ ಕಾರಣದಿಂದ ಟ್ರಿನಿಡಾಡ್‌ನಲ್ಲಿದ್ದರೂ ಹನುಮಾನ್ ಹೌಸ್ ಭಾರತದ ಒಂದು ಭಾಗವೇ ಆಗಿದ್ದಿತು.  ಟ್ರಿನಿಡಾಡ್‌ನ ಸಮಾಜದಲ್ಲಿ ಬೆರೆಯಲೆಂದೂ ಇಚ್ಛಿಸದ, ಒಂದು ಭದ್ರ ಕೋಟೆಯಂತಿದ್ದ, ಆ ಮನೆಯಿಂದ ಮುಕ್ತಿ ಬಿಶ್ವಾಸ್‌ಗೆ ಕೊನೆಯವರೆಗೂ ಸಿಗುವುದಿಲ್ಲ.  ಆದರೆ ಅವನ ಮಗ ಆನಂದನಿಗೆ ಅಂತಹ ವಿಮೋಚನೆ ಸಾಧ್ಯವಾಗುತ್ತದೆ; ಸ್ಕಾಲರ್‌ಷಿಪ್ ಪಡೆದು ಇಂಗ್ಲಂಡ್‌ಗೆ ಹೋಗುವ ಅವಕಾಶ ದೊರೆತಾಗ. ನೈಪಾಲ್‌ರ ಮೊದಲ ನಾಲ್ಕು ಕಾದಂಬರಿಗಳು ಪರಂಪರೆ-ಸ್ವಂತಿಕೆ ಹಾಗೂ ಬಂಧನ-ವಿಮೋಚನೆ ಈ ಬಗೆಯ ವೈಚಾರಿಕ ವಿನ್ಯಾಸಗಳಿಂದ ರೂಪುಗೊಂಡಿವೆ.

ವಿಮೋಚನೆಯ ನೆಲೆಯಲ್ಲಿ, ಈ ಕಾದಂಬರಿಗೆ ಮತ್ತೂ ಒಂದು ಆಯಾಮವಿದೆ, ಕಲಾವಿದ ಕಾದಂಬರಿಯ (ಕುನ್‌ಸ್ಟ್ಲರ್ ರೋಮಾನ್) ಆಯಾಮ.  ಎಂದರೆ, ಜೇಮ್ಸ್ ಜಾಯ್ಸ್‌ನ ವಿಖ್ಯಾತ ‘ಅ ಪೋರ್ಟ್ರಿಟ್ ಆ- ಅನ್ ಆರ್ಟಿಸ್ಟ್’ ಕಾದಂಬರಿಯಂತೆ ಈ ಕಾದಂಬರಿಯೂ ಲೇಖಕನೊಬ್ಬನ ಬಾಲ್ಯದಿಂದ ಪ್ರಾರಂಭವಾಗಿ, ಅವನು ಲೇಖಕನಾಗಿ ತನ್ನನ್ನು ಗುರುತಿಸಿಕೊಳ್ಳುವಲ್ಲಿಗೆ ಮುಗಿಯುತ್ತದೆ. ಬಾಲ್ಯದಿಂದಲೂ ತನ್ನ ತಂದೆ-ಅಕ್ಕ-ಅಜ್ಜಿಯರಿಂದ ಕೇಳಿದ್ದ ರಾಮಾಯಣ-ಮಹಾಭಾರತಗಳು, ಅದ್ಭುತ ಕಿನ್ನರ ಕಥೆಗಳು, ಇತ್ಯಾದಿಗಳಿಂದ ಪ್ರಭಾವಿತನಾಗಿದ್ದ ಆನಂದ್ ತಾನೊಬ್ಬ ಲೇಖಕನಾಗುವ ಕನಸುಕಾಣುತ್ತಲೇ ಬೆಳೆಯುತ್ತಾನೆ; ಮತ್ತು ಕಾದಂಬರಿಯ ಕೊನೆಯಲ್ಲಿ ತನ್ನ ಪ್ರಕಟಿತ ಕಥೆಯನ್ನು ಕೈಯಲ್ಲಿ ಹಿಡಿದು ಮಹತ್ತರ ಸಾಧನೆಯ ಸಂಭ್ರಮದೊಂದಿಗೆ ತನ್ನ ತಂದೆಯ ಬಳಿ ಓಡುತ್ತಾನೆ.  ಈ ಸಂದರ್ಭದಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ, ಆನಂದನಿಗೆ (ನೈಪಾಲ್‌ಗೆ) ಲೇಖನವೃತ್ತಿ ವಾಸ್ತವವಾಗಿ ಇಂಗ್ಲಂಡ್‌ಗೆ ಹೋಗುವ ದಾರಿಯಾಗಿ (ಎಂದರೆ ತನ್ನ ಪರಂಪರೆಯಿಂದ ಹೊರಹೋಗುವ ದಾರಿಯಾಗಿ), ಮತ್ತು ಮಾನಸಿಕ ನೆಲೆಯಲ್ಲಿ ವಿಮೋಚನೆಯ ಮಾರ್ಗವಾಗುತ್ತದೆ ಎಂಬ ಅಂಶ.  ನೈಪಾಲ್‌ರ ‘ದ ಮಿಮಿಕ್ ಮೆನ್ (ನಕಲಿ ಮನುಷ್ಯರು, ೧೯೬೭)’ ಕಾದಂಬರಿಯ ಲೇಖಕ-ಪಾತ್ರ ರಾಲ್ ಸಿಂಗ್ ಹೇಳುವಂತೆ, ‘ಪ್ರಾರಂಭದಲ್ಲಿ ಎಷ್ಟೇ ವಿರೂಪಗೊಳಿ ಸಿದರೂ, ಅಂತಿಮವಾಗಿ ಬರವಣಿಗೆ ಎಲ್ಲವನ್ನೂ ಸ್ಪಷ್ಟಗೊಳಿಸುತ್ತದೆ; ಅದು ಬದುಕುವ ಬಗೆಯೂ ಆಗುತ್ತದೆ.’  (ಯಾವ ಸಂಸ್ಕೃತಿಗೂ ತಮ್ಮನ್ನು ಕಟ್ಟಿಹಾಕಿಕೊಳ್ಳದೇ ಇರಲು ನೈಪಾಲ್, ತಮ್ಮ ಪ್ರತಿರೂಪವಾದ ಪಾತ್ರಕ್ಕೆ ಉದ್ದೇಶ ಪೂರ್ವಕವಾಗಿ ರಾಲ್ ಸಿಂಗ್ ಎಂಬ ಬ್ರಿಟಿಷ್-ಭಾರತೀಯ ಹೆಸರನ್ನು ಕೊಡುತ್ತಾರೆ.)

ಸಾತತ್ಯ ಮತ್ತು ವಿಚ್ಛಿನ್ನತೆಗಳ ಬಗೆಬಗೆಯ ವಿನ್ಯಾಸಗಳನ್ನು ಹಾಗೂ ಅವುಗಳ ಪರಿಣಾಮವನ್ನು ಭಿನ್ನ ಸಮಾಜಗಳಲ್ಲಿ  ನಿಷ್ಠುರ ಸಮಾಜ ವಿಜ್ಞಾನಿಯಂತೆ, ನಿರ್ಭಾವುಕ ಶಸ ಚಿಕಿತ್ಸಕನಂತೆ ತಮ್ಮ ವಿವಿಧ ವ್ಮಾಯ ಪ್ರಕಾರಗಳಲ್ಲಿ ನೈಪಾಲ್ ವಿಶ್ಲೇಷಿಸಿದ್ದಾರೆ, ವ್ಯಾಖ್ಯಾನಿಸಿದ್ದಾರೆ.  ಇಂತಹ ವ್ಯಾಖ್ಯಾನಗಳಲ್ಲಿ ಮುಖ್ಯವಾದವುಗಳೆಂದರೆ ಮುಸ್ಲಿಂ ರಾಷ ಗಳನ್ನು ಕುರಿತಾದ ಅಞಟ್ಞಜ ಠಿeಛಿ ಆಛ್ಝಿಜಿಛಿqಛ್ಟಿo (ಶ್ರದ್ಧಾಳುಗಳ ನಡುವೆ, ೧೯೮೨, ಪು.೪೩೦), ಮತ್ತು ಭಾರತವನ್ನು ಕುರಿತ ಮೂರು ಕೃತಿಗಳು: ಅ ಅಛಿZ u ಈZhಛಿoo, Seಛಿ Uಟ್ಠ್ಞbಛಿb ಇಜಿqಜ್ಝಿಜ್ಢಿZಠಿಜಿಟ್ಞ, ಐbಜಿZ: ಅ Iಜ್ಝ್ಝಿಜಿಟ್ಞ Iಠಿಜ್ಞಿಜಿಛಿo (ಕತ್ತಲೆಯ ಸ್ಥಳ, ೧೯೬೪;  ಗಾಯಗೊಂಡ ನಾಗರಿಕತೆ,೧೯೭೭; ಮತ್ತು ಇಂಡಿಯ: ಅಸಂಖ್ಯಾತ ದಂಗೆಗಳು, ೧೯೯೦). ಒಂದು ನೆಲೆಯಲ್ಲಿ ಇವೆಲ್ಲವನ್ನೂ ಪ್ರವಾಸ ಕಥನಗಳೆಂದು ಕರೆಯಬಹುದು; ಆದರೆ, ಲೇಖಕರು ಆಯಾಯಾ ದೇಶಗಳಲ್ಲಿ ಭೇಟಿ ಮಾಡಿದ (ಆಯ್ಕೆ ಮಾಡಿದ?) ವ್ಯಕ್ತಿಗಳು ಮತ್ತು ಅವರೊಡನೆ ಲೇಖಕರು ನಡೆಸುವ ಮಾತುಕತೆಗಳು ಇವುಗಳೇ ಈ ಕೃತಿಗಳ ಬಹು ಭಾಗವನ್ನು ತುಂಬುತ್ತವೆ.  ಈ ಕಾರಣದಿಂದ ಈ ಪ್ರವಾಸಕಥನಗಳಿಗೆ ಒಂದು ಬಗೆಯ ರೋಚಕತೆ ಹಾಗೂ ನಾಟಕೀಯತೆ ಸಹಜವಾಗಿ ಒದಗುತ್ತವೆ.

‘ಶ್ರದ್ಧಾಳುಗಳ ನಡುವೆ’ ಕೃತಿಯಲ್ಲಿ, ನೈಪಾಲ್ ಪ್ರವಾಸಮಾಡುವ ಇರಾನ್, ಪಾಕಿಸ್ತಾನ, ಮಲೇಶಿಯಾ ಮತ್ತು ಇಂಡೋನೇಶಿಯ ಈ ನಾಲ್ಕು ರಾಷ್ಟ್ರಗಳ ಸಮಾಜ-ಸಂಸ್ಕೃತಿಗಳ ಚಿತ್ರಣವಿದೆ.  ಸೌದಿ ಅರೇಬಿಯಾವನ್ನು ನೋಡಲು ಲೇಖಕರಿಗೆ ತುಂಬಾ ಆಸಕ್ತಿಯಿದ್ದರೂ ಅಲ್ಲಿಯ ವಿಸಾ ಸಿಗದ ಕಾರಣ ಅಲ್ಲಿಗೆ ಹೋಗಲಾಗುವುದಿಲ್ಲ.  ಈ ನಾಲ್ಕು ರಾಷ್ಟ್ರಗಳಲ್ಲಿ ನೈಪಾಲ್ ಸ್ವಲ್ಪ ಮಟ್ಟಿಗೆ ಮೆಚ್ಚುವುದು ಇಂಡೋನೇಶಿಯಾವನ್ನು ಮಾತ್ರ; ಏಕೆಂದರೆ, ಇದು ಮುಸ್ಲಿಮ್ ರಾಷ್ಟ್ರವಾದರೂ ತನ್ನ ಗತಕಾಲದ ಹಿಂದು ಸಂಸ್ಕೃತಿಯನ್ನು ನಾಶಮಾಡದೆ, ಅದನ್ನು ಆಧುನಿಕ ಕಾಲದಲ್ಲಿಯೂ ಗೌರವಿಸುತ್ತಿದೆ ಎಂಬ ಕಾರಣಕ್ಕಾಗಿ.  ಉಳಿದ ಮೂರೂ ರಾಷ್ಟ್ರಗಳು ಹೇಗೆ ಆಧುನಿಕ-ಪೂರ್ವ ಇಸ್ಲಾಂ ಧಾರ್ಮಿಕ ನಂಬಿಕೆಗಳ ಹಾಗೂ ಆಚರಣೆಗಳ  ಉರುಳಲ್ಲಿ ಸಿಕ್ಕಿಹಾಕಿಕೊಂಡು, ಆಧುನಿಕತೆಯನ್ನು ಒಪ್ಪಿಕೊಳ್ಳಲಾಗದೆ, ತಿರಸ್ಕರಿಸಲೂ ಆಗದೆ ಒದ್ದಾಡುತ್ತಿವೆ ಎಂಬುದನ್ನು ತಮ್ಮ ವ್ಯಂಗ್ಯ-ವಿಡಂಬನೆ-ಅಣಕ ಇತ್ಯಾದಿಗಳಿಂದ ಕೂಡಿದ ವಿಶಿಷ್ಟ ಶೈಲಿಯಲ್ಲಿ ಲೇಖಕರು ನಿರೂಪಿಸುತ್ತಾರೆ.

ಇರಾನ್ ಕ್ರಾಂತಿಯನಂತರ, ‘ಟೆಹೆರಾನ್ ಟೈಮ್ಸ್ ’ ಎಂಬ ಅಲ್ಲಿಯ ಪತ್ರಿಕೆಯ ಸಂಪಾದಕ ಪರ್ವೇಜ್ ಎಂಬುವವನನ್ನು ಭೇಟಿಯಾಗಿ, ಅವನು ಕಟ್ಟರ್ ಶಿಯಾ ಮುಸ್ಲಿಮ್ ಆದರೂ ಅವನ ಮಗ ಅಮೆರಿಕಾದಲ್ಲಿ ಕಂಪ್ಯೂಟರ್ ಸೈನ್ಸ್ ಓದುತ್ತಿರುವುದನ್ನು ಪ್ರಸ್ತಾಪಿಸಿ, ಪರ್ವೇಜ್‌ನನ್ನು  ಆಧುನಿಕ ಇಸ್ಲಾಮಿಕ್ ರಾಷ್ಟ್ರಗಳ ಪ್ರತಿನಿಽಯಂತೆ ನೈಪಾಲ್ ಕಾಣುತ್ತಾರೆ: ‘ಎಂದರೆ, ಅಂತರಾಳದಲ್ಲಿ ಅವನು ವಿಭಜಿತ ವ್ಯಕ್ತಿ. ಅವನ ಮನಸ್ಸಿನ ಒಂದು ಭಾಗ ಅವನ ಧರ್ಮವನ್ನು ಒಪ್ಪಿಕೊಂಡು, ಅದರ ಹೊರಗೆ ಇದ್ದುದನ್ನೆಲ್ಲವನ್ನೂ ವಿರೋಽಸುತ್ತಿತ್ತು; ಆದರೆ, ಅವನ ಮನಸ್ಸಿನ ಇನ್ನೊಂದು ಭಾಗ ಆ ಧರ್ಮದಿಂದ ಹೊರಗಿದ್ದ ವಿಶ್ವವನ್ನು ಅತಿ ಮುಖ್ಯ ಎಂದು ಪರಿಗಣಿಸುತ್ತಾ, ತನ್ನ ಮಕ್ಕಳ ಭವಿಷ್ಯ ಅಲ್ಲಿದೆ ಎಂದು ನಂಬಿತ್ತು’ (ಪು.೪೨೯).  ಇಸ್ಲಾಂ ಕುರಿತ ಇದೇ ಆಶಯವನ್ನು ಮತ್ತೊಂದು ಸಂದರ್ಭದಲ್ಲಿ ನೈಪಾಲ್ ಹೀಗೆ ಮಂಡಿಸುತ್ತಾರೆ: ‘ಧರ್ಮವು (ಈ ರಾಷ್ಟ್ರಗಳಲ್ಲಿ) ವ್ಯಕ್ತಿಗಳನ್ನು ಅತಿರೇಕಗಳಿಗೆ ದೂಡುತ್ತಿತ್ತು.  ಕೊರಾನ್ ಮತ್ತು ಪರಂಪರೆಗಳೇ ಮಾರ್ಗದರ್ಶಕ ಗಳಾಗಿದ್ದುದರಿಂದ, ಯಾರಿಗೂ ಕೂಡಾ ತಾನು ಸಂಪೂರ್ಣವಾಗಿ ಮುಸ್ಲಿಮ್ ಆಗಿದ್ದೇನೆ ಮತ್ತು ಅಲ್ಲಾನಿಗೆ ಸಂಪೂರ್ಣವಾಗಿ ಶರಣಾಗಿದ್ದೇನೆ ಎಂದು ನಂಬುವುದು ಅಸಾಧ್ಯವಾಗಿತ್ತು’ (ಪು.೪೦೦).

ವ್ಯಕ್ತಿಗಳ ನೆಲೆಯಲ್ಲಿ ಇಸ್ಲಾಂ ಛಿನ್ನ ವ್ಯಕ್ತಿತ್ವಕ್ಕೆ  ಕಾರಣವಾಗಿರುವಂತೆ, ರಾಷ್ಟ್ರಗಳ ನೆಲೆಯಲ್ಲಿ ಇಸ್ಲಾಂ ಒಂದು ಬಗೆಯ ಕಪಟ ಹಾಗೂ ಆತ್ಮವಂಚನೆಗಳಿಗೆ ಕಾರಣವಾಗುತ್ತದೆ ಎಂಬುದು ನೈಪಾಲ್ ಈ ಗ್ರಂಥದಲ್ಲಿ ಮತ್ತೆ ಮತ್ತೆ ದಾಖಲಿಸುವ ಅಂಶ.  ಲೇಖಕರು ಪಾಕೀಸ್ತಾನಕ್ಕೆ ಹೋದಾಗ ಅಲ್ಲಿ ಮಾರ್ನಿಂಗ್ ನ್ಯೂಜ್ ಪತ್ರಿಕೆಯ ನುಸ್ರತ್ ಎಂಬ ಪತ್ರಕರ್ತನನ್ನು ಭೇಟಿಯಾಗುತ್ತಾರೆ.  ಒಮ್ಮೆ, ಅವನ ಭವಿಷ್ಯದ ಯೋಜನೆಗಳೇನು ಎಂದು ಕೇಳಿದಾಗ ನುಸ್ರತ್ ತಾನು ಅಮೆರಿಕಾಕ್ಕೆ ಹೋಗಿ, ಅಲ್ಲಿಯ ವಿಶ್ವವಿದ್ಯಾಲಯವೊಂದರಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದು, ಅನಂತರ ಅಲ್ಲಿಯೇ ಯಾವುದಾದರೂ ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಕೆಲಸ ಮಾಡಬೇಕೆಂದಿರುವುದನ್ನು ಹೇಳುತ್ತಾನೆ.  ಈ ಸಂದರ್ಭದಲ್ಲಿ ನೈಪಾಲ್ ಹೀಗೆ ಹೇಳುತ್ತಾರೆ: ‘ಪಾಕೀಸ್ತಾನ ಮತ್ತು ಅದರ ಧರ್ಮ ವಿಶಿಷ್ಟ; ಅದರ ಹೊರಗಿರುವ ಪ್ರಪಂಚ ತಾವು ಕೊಳ್ಳೆಹೊಡೆಯಲು ಮಾತ್ರ ಇರುವಂತಹುದು- ಈ ನಿಲುವೇ ನನಗೆ ರೇಜಿಗೆಯನ್ನುಂಟುಮಾಡಿತು’ (ಪು.೩೯೨). ಅರ್ಥಾತ್ ನೈಪಾಲ್ ಅವರ ದೃಷ್ಟಿಯಲ್ಲಿ, ಇಸ್ಲಾಮಿಕ್ ರಾಷ್ಟ್ರಗಳು ತಮ್ಮ ಧರ್ಮ ಹಾಗೂ ತಮ್ಮ ಸಾಮಾಜಿಕ ವ್ಯವಸ್ಥೆ ಅತ್ಯಂತ ಪವಿತ್ರ ಹಾಗೂ ಆದರ್ಶಪ್ರಾಯವಾದವುಗಳು ಎಂದು ಗಾಢವಾಗಿ ನಂಬುತ್ತವೆ; ಆದರೆ, ಇತರ ಅಧರ್ಮೀಯರ ರಾಷ್ಟ್ರಗಳಿಂದ ಭೌತಿಕ ಸುಖಸಾಧನಗಳನ್ನು ಮಾತ್ರ ನಿರಾಳವಾಗಿ ಪಡೆಯುತ್ತವೆ; ಇದು ಆತ್ಮವಂಚನೆ.    ತಮ್ಮ ಭೂತಕಾಲದ ‘ಭ್ರೂಣ ಗೂಢಗಳು (ಅಡಿಗ)’ ತುಂಬಿರುವ ಭಾರತದ ಬಗ್ಗೆ ನೈಪಾಲ್‌ರಿಗೆ ಪ್ರೀತಿ-ದ್ವೇಷಗಳ ಸಂಬಂಧವಿದೆ ಎಂದರೆ ಏನೂ ಹೇಳಿದಂತಾಗುವುದಿಲ್ಲ.  ಸರಳೀಕೃತ ಪ್ರೇಮ-ದ್ವೇಷಗಳಾಚೆ, ಭಾರತ ನೈಪಾಲ್‌ರಿಗೆ ಒಂದು ರಹಸ್ಯದಂತೆ, ಒಂದು ನಿರ್ಜೀವ ಸಮಾಜದಂತೆ, ಅಗಾಧ ಸಾಧ್ಯತೆಗಳ ಒಂದು ಆಗರದಂತೆ ಬೇರೆ ಬೇರೆ ಸಂದರ್ಭಗಳಲ್ಲಿ ಕಂಡುಬಂದಿದೆ. ಭಾರತದ ಬಗ್ಗೆ ಅವರಿಗಿರುವ ಸಂಬಂಧವನ್ನು ಅವರು ನೇರವಾಗಿ ಹೀಗೆ ವ್ಯಾಖ್ಯಾನಿಸುತ್ತಾರೆ: ‘ಅದು ನನ್ನ ದೇಶವಲ್ಲ; ನನ್ನ ದೇಶವಾಗಲು ಸಾಧ್ಯವೂ ಇಲ್ಲ.  ಆದರೆ, ಅದನ್ನು ನಾನು ತಿರಸ್ಕರಿಸಲೂ ಸಾಧ್ಯವಿಲ್ಲ’  (೧೯೭೭ರಲ್ಲಿ ಪ್ರಕಟವಾದ  ದ ವೂಂಡಿಡ್ ಸಿವಿಲೈಜೇಷನ್ ಕೃತಿಯ ಮುನ್ನುಡಿ).  ಇಂತಹ ಸಂಕೀರ್ಣ ಪ್ರತಿಕ್ರಿಯೆಯನ್ನು ಭಾರತದ ಬಗ್ಗೆ ಅವರು ಬರೆದಿರುವ ಮೂರೂ ಕೃತಿಗಳು ದಾಖಲಿಸುತ್ತವೆ.

ಇವುಗಳಲ್ಲಿ ಮೊದಲನೆಯದಾದ ‘ಅನ್ ಏರಿಯಾ ಆ- ಡಾರ್ಕ್‌ನಿಸ್ (ಕತ್ತಲೆಯ ಪ್ರದೇಶ, ೧೯೬೪)’ ಕೃತಿಯಲ್ಲಿ ಸಂಪೂರ್ಣವಾಗಿ ಭಾರತವನ್ನು ನೈಪಾಲ್ ಪಾಶ್ಚಿಮಾತ್ಯ ದೃಷ್ಟಿಕೋನದಿಂದ ನೋಡುತ್ತಾರೆ; ಆ ಕಾರಣದಿಂದ ಈ ಕೃತಿ, ಹಿಂದೆ ಬಂದಂತಹ ಮಿಸ್ ಮೇಯೋ, ಬೆವರ್ಲಿ ನಿಕಲ್ಸ್, ಮುಂತಾದವರು ಬರೆದಿರುವ ವಿಡಂಬನೆಗಳಿಗಿಂತ ಭಿನ್ನವಾಗುವುದಿಲ್ಲ.  ಮುಂಬಯಿ ವಿಮಾನ ನಿಲ್ದಾಣದಲ್ಲಿ ಸುಂಕದ ಅಽಕಾರಿಗಳ ಅನಾಗರಿಕ ವರ್ತನೆಯ ವಿವರಣೆಯಿಂದ ಪ್ರಾರಂಭವಾಗುವ ಕೃತಿ, ಮುಂದುವರಿದಂತೆಲ್ಲಾ ಬೀದಿಗಳಲ್ಲಿ/ಮನೆಗಳಲ್ಲಿ ತುಂಬಿರುವ ಕೊಳಕು, ರೇಲ್ವೇ ಹಳಿಗಳ ಬಳಿ ಸಾಲಾಗಿ ಮಲವಿಸರ್ಜನೆಗೆ ಕುಳಿತಿರುವ ಜನರು, ಅಽಕಾರಿಗಳ ಲಂಚಕೋರತನ, ಜೋಪಡಿಪಟ್ಟಿಗಳಲ್ಲಿ ವಾಸಿಸುವವರ ಕಿತ್ತು ತಿನ್ನುವ ಬಡತನ, ಅಂಧ ವಿಶ್ವಾಸ, ಢೋಂಗೀ ಧರ್ಮಗುರುಗಳು  ಇವೆಲ್ಲವನ್ನೂ ನಿಷ್ಠುರವಾಗಿ ದಾಖಲಿಸುತ್ತದೆ.  ಭಾರತದಲ್ಲಿ- ನೆಹರು ಆಧುನಿಕತೆ, ಬಹುಮಹಡಿ ಕಟ್ಟಡಗಳು, ಭಾರತೀಯ ಸಾಹಿತ್ಯ ಮತ್ತು ಸಾಹಿತ್ಯ ವಿಮರ್ಶೆ, ಎಲ್ಲವೂ- ಪಶ್ಚಿಮದ ಶುಷ್ಕ ಅನುಕರಣಗಳಂತೆ (ಮಿಮಿಕ್ರಿ) ನೈಪಾಲ್‌ಗೆ ಕಾಣುತ್ತವೆ.

೧೯೭೭ರಲ್ಲಿ ಎಮರ್ಜೆನ್ಸಿಯ ಕಾಲಘಟ್ಟದಲ್ಲಿ ಬಂದ ಎರಡನೆಯ ಕೃತಿ ‘ದ ವೂಂಡಿಡ್ ಸಿವಿಲೈಜೈಶನ್ (ಗಾಯಗೊಂಡ ನಾಗರಿಕತೆ)’ ಭಾರತವನ್ನು ಸ್ವಲ್ಪ ಭಿನ್ನವಾಗಿ ನೋಡಲು ಪ್ರಯತ್ನಿಸುತ್ತದೆ.  ಕೃತಿಯ ಶೀರ್ಷಿಕೆಯ ಅರ್ಥ,  ಸಾವಿರ ವರ್ಷಗಳಿಂದ ನಡೆದಿರುವ ಪರಕೀಯರ ದಾಳಿಗಳಿಂದ ಭಾರತವು ಗಾಯಗೊಂಡಿದೆ.  ಇಲ್ಲಿಯೂ ನೈಪಾಲ್‌ರ ವಾದವೇನೆಂದರೆ, ಅನೇಕ ಶತಮಾನಗಳಿಂದ ಪರಕೀಯರ ದಾಳಿಗಳಿಗೆ ಸಿಕ್ಕಿ ಶಕ್ತಿಹೀನವಾಗಿರುವ ಭಾರತ ಆಧುನಿಕತೆಯ ಸವಾಲುಗಳನ್ನು ಎದುರಿಸುವಲ್ಲಿ ಸೋತಿದೆ: ‘ಭಾರತದ ಸಂದಿಗ್ಧ ಅಥವಾ ಬಿಕ್ಕಟ್ಟು ರಾಜಕೀಯ ಅಥವಾ ಆರ್ಥಿಕ ಸ್ವರೂಪದ್ದಲ್ಲ.  ಗಾಯಗೊಂಡ ಒಂದು ನಾಗರಿಕತೆ ಬಹು ಕಾಲದ ನಂತರ ತನ್ನ ದೌರ್ಬಲ್ಯಗಳನ್ನು ಅರ್ಥಮಾಡಿಕೊಳ್ಳುತ್ತದೆ; ಆದರೆ ಆ ದೌರ್ಬಲ್ಯಗಳನ್ನು ಮೀರಿ ಮುಂದುವರಿಯಲು ಅಗತ್ಯವಾದ ಬೌದ್ಧಿಕತೆ ಅದಕ್ಕೆ ಇಲ್ಲವಾಗಿದೆ.’  ಈ ಸಂದರ್ಭದಲ್ಲಿ ಸಾವಿರ ವರ್ಷಗಳಿಂದ ನಡೆದಿರುವ ಪರಕೀಯರ ದಾಳಿ ಎಂಬುದು ಬಾರತದಲ್ಲಿ ಅನೇಕ ಶತಮಾನಗಳ ಕಾಲ ಆಳಿದ ಮುಸ್ಲಿಂ ಪ್ರಭುತ್ವಕ್ಕೆ ಮಾತ್ರ ಅನ್ವಯಿಸುತ್ತದೆ.  ಈ ಧ್ವನಿಯನ್ನೇ ವಿಸ್ತರಿಸಿದರೆ, ಮುಸ್ಲಿಮರು ಪರಕೀಯರು, ಅವರು ಭಾರತದ ಮೇಲೆ ಧಾಳಿ ಮಾಡಿದರು; ಆ ಕಾರಣದಿಂದ ಭಾರತವು ತನ್ನ ಅಂತಃಶಕ್ತಿಯನ್ನು ಕಳೆದುಕೊಂಡಿತು ಎಂಬುದು ನೈಪಾಲ್ ಅವರ ನಿಲುವು ಎಂದು ಸ್ಪಷ್ಟವಾಗುತ್ತದೆ.

೧೯೯೦ರಲ್ಲಿ ಪ್ರಕಟವಾದ ‘ಇಂಡಿಯ: ಅ ಮಿಲಿಯನ್ ಮ್ಯೂಟಿನೀಸ್ (ಭಾರತ: ಅಸಂಖ್ಯಾತ ದಂಗೆಗಳು)’ ಎಂಬ ೫೨೦ ಪುಟಗಳ ದೀರ್ಘ ಕೃತಿ ಭಾರತವನ್ನು ಸಮಗ್ರವಾಗಿ ಒಳಗಿನವನ ನೆಲೆಯಿಂದ ಅರ್ಥೈಸಲು ಮತ್ತು ಆಧುನಿಕ ಭಾರತದ ಚಲನಶೀಲ ಗತಿಯನ್ನು ಗ್ರಹಿಸಲು ಪ್ರಯತ್ನಿಸುತ್ತದೆ. ಈ ಕೃತಿಯಲ್ಲಿ ಒಟ್ಟಾರೆಯಾಗಿ ನೈಪಾಲ್ ಮಂಡಿಸುವುದೇನೆಂದರೆ, ಇಂದಿನ ಭಾರತದಲ್ಲಿ ಪರಂಪರಾಗತ ವ್ಯವಸ್ಥೆಯ ವಿರುದ್ಧ ಎಲ್ಲಾ  ಕ್ಷೇತ್ರಗಳಲ್ಲಿಯೂ (ದ್ರಾವಿಡ/ ಶೂದ್ರ/ ದಲಿತ ಚಳವಳಿಗಳು; ರೈತ  ಸಂಘಟನೆಗಳು, ನಕ್ಸಲ್  ಚಳವಳಿಗಳು, ಅಯ್ಯಪ್ಪ ಇತ್ಯಾದಿ ನೂತನ ಧಾರ್ಮಿಕ ಪಂಥಗಳು)  ಪ್ರತಿರೋಧ ಕ್ರಿಯಾಶೀಲವಾಗಿ ಮೂಡಿ ಬರುತ್ತಿದೆ; ಮತ್ತು ಈ ಪ್ರತಿರೋಧವೇ ಭಾರತವನ್ನು ಒಂದು ನೂತನ, ಶಕ್ತಿಶಾಲಿ ರಾಷ್ಟ್ರವನ್ನಾಗಿ ಬದಲಾಯಿಸುತ್ತದೆ.   ಗಮನಿಸಬೇಕಾದ ಸಂಗತಿಯೆಂದರೆ ಇಂತಹ ಪ್ರತಿರೋಧದ ಅನಂತ ಮುಖಗಳಲ್ಲಿ ಒಂದೂ ಇಸ್ಲಾಂ-ಕ್ರಿಶ್ಚಿಯನ್ ಧರ್ಮಗಳಿಗೆ/ಧರ್ಮೀಯರಿಗೆ ಸಂಬಂಽಸಿದುದಲ್ಲ.  ಇನ್ನೂ ಮುಖ್ಯವಾಗಿ, ಕೃತಿಯಲ್ಲಿ ನೈಪಾಲ್ ಅತ್ಯಂತ ಅಭಿಮಾನ ಹಾಗೂ ಗೌರವದಿಂದ ಚಿತ್ರಿಸುವ ಪ್ರತಿರೋಧದ ಒಂದು ಕವಲೆಂದರೆ ೭೦ರ ದಶಕದಲ್ಲಿಯೇ ಸಂಪೂರ್ಣವಾಗಿ ಹಿಂದುತ್ವವನ್ನು ಒಪ್ಪಿಕೊಂಡ ಶಿವಸೇನೆಯ ಚಳವಳಿ.

ಕೃತಿಯ ಕೊನೆಯಲ್ಲಿ ನೈಪಾಲ್ ಆಧುನಿಕ ಭಾರತದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಹೀಗೆ ಗುರುತಿಸುತ್ತಾರೆ: ‘ಎಷ್ಟರ ಮಟ್ಟಿಗೆ ಈ ದೇಶವು ಬದಲಾಗಿದೆ ಮತ್ತು ಪುನರ್ನಿಮಾಣಗೊಳ್ಳುತ್ತಿದೆ ಎಂಬುದನ್ನು ಗ್ರಹಿಸಲು ನಾನು ೧೯೬೨ರಲ್ಲಿ (ಕತ್ತಲೆಯ ಪ್ರದೇಶ) ಅಸಮರ್ಥನಾಗಿದ್ದೆ.  ಸಿಪಾಯಿ ದಂಗೆಯ ನಂತರದ ನೂರ ಮೂವತ್ತು ವರ್ಷಗಳಲ್ಲಿ ಸ್ವಾತಂತ್ರ್ಯದ ಅರಿವು ಭಾರತದ ಮೂಲೆಮೂಲೆಗಳಿಗೂ ಪಸರಿಸಿದೆ. ಈಗ ತಾವು ಯಾರು ಮತ್ತು ತಮ್ಮ ಹಕ್ಕುಬಾಧ್ಯತೆಗಳೇನು ಎಂಬುದು ಎಲ್ಲರಿಗೂ ಮನದಟ್ಟಾಗಿದೆ. ಇನ್ನೂರು ವರ್ಷಗಳ ಹಿಂದೆ ಕಾಣದಿದ್ದ ಸಂಗತಿಯೊಂದು ಇಂದು ಭಾರತದಲ್ಲಿ            ಕಂಡುಬರುತ್ತಿದೆ. ಕೇಂದ್ರ ಪ್ರe, ಕೇಂದ್ರೀಕೃತ ಬೌದ್ಧಿಕತೆ, ಮತ್ತು ರಾಷ್ಟ್ರೀಯತೆಯ ಪರಿಕಲ್ಪನೆ. ಈಗ ಕಂಡುಬರುತ್ತಿರುವ ದಂಗೆಗಳು ಭಾರತೀಯ ಬೌದ್ಧಿಕತೆಯ ಸಾಮರ್ಥ್ಯವನ್ನೂ ಮತ್ತು ಇಂದು ಭಾರತೀಯರೆಲ್ಲರೂ ಒಪ್ಪಿಕೊಂಡಿರುವ ಮಾನವೀಯ ಮೌಲ್ಯಗಳನ್ನು ಸೂಚಿಸುತ್ತವೆ. ಈ ದಂಗೆಗಳು ಕೊನೆಗೊಳ್ಳಬೇಕೆಂದು ನಾವು ಆಶಿಸಬೇಕಿಲ್ಲ; ಏಕೆಂದರೆ, ಇವು ಭಾರತದ ಬೆಳವಣಿಗೆಯ ಒಂದು ಅನಿವಾರ್ಯ ಭಾಗ; ಲಕ್ಷಾಂತರ ಜನರ ನೂತನ ಜೀವನಕ್ರಮದ ಪ್ರಾರಂಭ.’

Tags

Related Articles

Leave a Reply

Your email address will not be published. Required fields are marked *

Language
Close