About Us Advertise with us Be a Reporter E-Paper

Breaking Newsಪಾಲಿಟಿಕ್ಸ್ಪ್ರಚಲಿತ
Trending

ರಾಜ್ಯಸಭಾ ಉಪಚೇರ್ಮನ್‌ ಆಯ್ಕೆ: ಚಂದ್ರಶೇಖರ್‌ ರಾವ್‌ ಜತೆ ಚರ್ಚಿಸಿದ ನಿತೀಶ್‌ ಕುಮಾರ್‌

ರಾಜ್ಯಸಭಾ ಉಪಚೇರ್ಮನ್‌ ಹುದ್ದೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಹರಿವಂಶ್‌ ನಾರಾಯಣ್‌ರನ್ನು ಬೆಂಬಲಿಸಲು ಕೋರಿ ಬಿಹಾರ ಮುಖ್ಯಮಂತ್ರಿ ಹಾಗು ಜೆಡಿಯು ವರಿಷ್ಠ ನಿತೀಶ್‌ ಕುಮಾರ್‌, ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್‌ರನ್ನು ಭೇಟಿಯಾಗಿದ್ದಾರೆ.

ರಾವ್‌ ಕಚೇರಿಗೆ ಕರೆ ಮಾಡಿದ ನಿತೀಶ್‌ ಕುಮಾರ್‌ ಈ ಕುರಿತು ಸಮಾಲೋಚನೆ ನಡೆಸಿದ್ದಾರೆ. ಈ ವಿಚಾರವಾಗಿ  ತಮ್ಮ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರುವುದಾಗಿ ರಾವ್‌ ಇದೇ ವೇಲೆ ನಿತೀಶ್‌ಗೆ ತಿಳಿಸಿದ್ದಾರೆ.

ಆಗಸ್ಟ್‌ 9ರಂದು ಉಪಚೇರ್ಮನ್‌ ಹುದ್ದೆಗೆ ಚುನಾವಣೆ ನಡೆಯಲಿದ್ದು, ವಿಪಕ್ಷಗಳೂ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ತಿಳಿಸಿವೆ. ಬಿಜೆಪಿ ನೇತೃತ್ವದ ಆಡಳಿತಾರೂಢ ಸರಕಾರಕ್ಕೆ ಬಹುಮತದ ಕೊರತೆ ಇದೆ.

Tags

Related Articles

Leave a Reply

Your email address will not be published. Required fields are marked *

Language
Close