About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ನಿಜಾಮ್ ಮ್ಯೂಸಿಯಂನಲ್ಲಿ ಕಳುವಾಗಿದ್ದ ಬೆಲೆಬಾಳುವ ವಸ್ತುಗಳು ಪೊಲೀಸರ ವಶಕ್ಕೆ

ನಿಜಾಮ್ ಮ್ಯೂಸಿಯಂನಿಂದ ಕಳುವಾಗಿದ್ದ ಚಿನ್ನದ ಟಿಫನ್ ಬಾಕ್ಸ್, ತಟ್ಟೆ, ಲೋಟ, ಡೈಮಂಡ್ಸ್ ಗಳ ಸಹಿತ ಇಬ್ಬರು ಖದೀಮರ ಬಂಧನ.

ಹೈದರಾಬಾದ್: ಇಲ್ಲಿನ ಪುರಾನಿ ಹವೇಲಿಯಲ್ಲಿರುವ ನಿಜಾಮ್ ಮ್ಯೂಸಿಯಂನಿಂದ ಕಳುವಾಗಿದ್ದ ಚಿನ್ನದ ಟಿಫನ್ ಬಾಕ್ಸ್, ತಟ್ಟೆ, ಲೋಟ, ಡೈಮಂಡ್ಸ್ ಗಳ ಸಹಿತ ಇಬ್ಬರು ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.

ಸೆಪ್ಟೆಂಬರ್ 3ರಂದು ಇಲ್ಲಿನ ಪ್ರಖ್ಯಾತ ನಿಜಾಮ್ ಮ್ಯೂಸಿಯಂನಿಂದ ಬೆಲೆಬಾಳುವ ವಸ್ತುಗಳು ಕಳುವಾಗಿದ್ದವು. ಇವುಗಳನ್ನು ಕದ್ದ ಖದೀಮರು ಮುಂಬೈಗೆ ತೆರಳಿದ್ದರು. ಚಿನ್ನದ ಟಿಫನ್ ಬಾಕ್ಸ್, ತಟ್ಟೆ, ಲೋಟ, ಚಿನ್ನದ ಚಮಚಗಳು, ಡೈಮಂಡ್ಸ್ ಕಳುವಾಗಿದ್ದವು. ಚಿನ್ನದ ಟಿಫನ್ ಬಾಕ್ಸ್ ಬರೋಬ್ಬರಿ 2 ಕೆ.ಜಿ ತೂಕ ಹೊಂದಿದ್ದು, ಇವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸುಮಾರು 50 ಕೋಟಿ ರೂ. ಆದರೆ ಕಳ್ಳರು ನೇರವಾಗಿ ಮುಂಬೈಗೆ ತೆರಳಿ, ಅಲ್ಲಿ ಐಷಾರಾಮಿ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ ಈ ಚಿನ್ನದ ಟಿಫನ್ ಬಾಕ್ಸ್ ನ್ನು ಮಾರಾಟ ಮಾಡದೆ ಊಟ ಮಾಡಲು ಬಳಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೊಹದ್ ಗೌಸ್ ಪಾಶಾ ಅಲಿಯಾಸ್ ಖೂನಿ ಘೌಸ್ (25) ಹಾಗೂ ಮೊಹಮ್ಮದ್ ಮುಬೆನ್ (24) ಬಂಧಿತರು. ಆರೋಪಿಗಳಿಬ್ಬರೂ ಸಂಬಂಧಿಕರಾಗಿದ್ದು ರಾಜೇಂದ್ರನಗರ ಪ್ರದೇಶದವರು ಎನ್ನಲಾಗಿದೆ. ಕಳ್ಳಸಾಗಾಣಿಕೆ ತನಿಖೆ ನಡೆಸಲು 15 ವಿಶೇಷ ತಂಡಗಳನ್ನು ರಚಿಸಲಾಗಿತ್ತು ಎಂದು ಪೊಲೀಸ್ ಕಮೀಷನರ್ ತಿಳಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close