ವಿಶ್ವವಾಣಿ

ಮೈತ್ರಿ ಸರಕಾರ ಸ್ಥಿರವಾಗಿದೆ: ಜಿ ಪರಮೇಶ್ವರ್‌‌

ಬೆಂಗಳೂರು: ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಸಮ್ಮಿಶ್ರ ಸರಕಾರದಲ್ಲಿ ಯಾವುದೇ ರೀತಿಯ ಬಿರುಕು ಬಂದಿಲ್ಲ. ನಮ್ಮ ಸರಕಾರ ಸ್ಥಿರವಾಗಿದೆ ಎಂದು ಉಪಮುಖ್ಯಮಂತ್ರಿ ಜಿ ಪರಮೇಶ್ವರ ಅವರು ಮೈತ್ರಿ ಸರಕಾರದ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ನಮ್ಮ ಸಮ್ಮಿಶ್ರ ಸರಕಾರವು ಯಾವುದೇ ತೊಂದರೆ ಇಲ್ಲದೇ ಸ್ಥಿರವಾಗಿದೆ. ಕಾಂಗ್ರೆಸ್‌ನಿಂದ ಯಾವುದೇ ಶಾಸಕರು ಪಕ್ಷವನ್ನು ತೊರೆದಿಲ್ಲ. ಈ ರೀತಿ ಸುಳ್ಳು ಮಾಹಿತಿ ಹರಿದಾಡಿತ್ತಿದೆ ಅದೇಲ್ಲ ಕೇವಲ ಊಹಾಪೋಹಗಳಷ್ಟೆ ಎಂದು ಮಾಧ್ಯಮಗಳಿಗೆ ಪರಮೇಶ್ವರ್‌‌‌ ತಿಳಿಸಿದ್ದಾರೆ.

ಕಾಂಗ್ರೆಸ್‌ನಿಂದ ಕೆಲವು ಶಾಸಕರು ಹೊರ ನಡೆಯಲ್ಲಿದ್ದಾರೆ ಎಂದು ಬಿಜೆಪಿ ತಿಳಿದಿದೆ. ಆದರೆ ಬಿಜೆಪಿಯ 7 ರಿಂದ 8 ಶಾಸಕರು ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್‌ಗೆ ಬರಲು ಸಿದ್ದರಾಗಿದ್ದಾರೆ ಎಂದು ಅವರಿಗೆ ತಿಳಿದಿಲ್ಲ. ಹಾಗಂತ ನಾವು ಅಂತಹ ಅಡ್ಡ ದಾರಿಗೆ ಕೈಹಾಕುವುದಿಲ್ಲ. ನಮ್ಮ ತಂಟೆಗೆ ಬಂದರೆ ನಾವು ಸುಮ್ಮನೆ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.