ಕ್ರಿಕೆಟಿಗರಿಗೆ ಡೋಪಿಂಗ್ ಟೆಸ್ಟ್: ನಾಡಾ ಸೂಚನೆಗೆ ಬಿಸಿಸಿಐ ನಕಾರ

Posted In : ಕ್ರೀಡೆ

ಮುಂಬೈ: ವಿಶ್ವ ಉದ್ದೀಪನಾ ತಡೆ ಘಟಕ(ನಾಡಾ)ದ ನಿಮಮಾವಳಿಗಳನ್ನು ಪಾಲಿಸುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸ್ಪಷ್ಟಪಡಿಸಿದೆ.

ಕ್ರಿಕೆಟ್ ಮಂಡಳಿ ರಾಷ್ಟ್ರೀಯ ಕ್ರೀಡಾ ಒಕ್ಕೂಟವಲ್ಲ ಎಂದು ಹೇಳಿರುವ ಬಿಸಿಸಿಐ, ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ಆಡುವ ಅಂತಾ ರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಸಂಬಂಧಿಸಿರುವ ಸ್ವಾಯತ್ತ ಕ್ರೀಡಾ ಸಂಘಟನೆಯಾಗಿದೆ ಎಂದಿದೆ.  ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕದ ನಿಮಮಾವಳಿಗಳಿಗೆ ಮಂಡಳಿ ಒಳಪಟ್ಟಿಲ್ಲ. ಬದಲಾಗಿ ಐಸಿಸಿ ಸ್ಥಾಪಿಸಿದ ನಿಯಮ ಹಾಗೂ ನಿಬಂಧ ನೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ನಾಡಾ ಆದೇಶದ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟಿಗರಿಗೂ ಡೋಪಿಂಗ್ ಪರೀಕ್ಷೆ ನಡೆಸುವಂತೆ ನಾಡಾಗೆ ಕ್ರೀಡಾ ಸಚಿವಾಲಯ ಸೂಚನೆ ನೀಡಿರುವ ಬೆನ್ನಲ್ಲೇ ಬಿಸಿಸಿಐನಿಂದ ನಿರ್ಣಾಯಕ ನಿರ್ಧಾರ ಹೊರಬಿದ್ದಿದೆ. ಜಾಗತಿಕ ಉದ್ದೀಪನ ಮದ್ದು ತಡೆ ಘಟಕ (ನಾಡಾ)ದ 2016ನೇ ಸಾಲಿನ ವರದಿಯಲ್ಲಿ ಒಟ್ಟು 153 ಆಟಗಾರರನ್ನು ಪರೀಕ್ಷೆಗೆ ಒಳಪಡಿಸಿದ್ದು, ಒಬ್ಬರು ನಿಷೇಧಿತ ಉದ್ದೀಪನ ಮದ್ದು ಸೇವಿಸಿರುವುದು ಸಾಬೀತಾಗಿದೆ ಎಂದು ವರದಿಯಾಗಿತ್ತು.

Leave a Reply

Your email address will not be published. Required fields are marked *

15 + nineteen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 21.02.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಪಾಲ್ಗುಣ ಮಾಸ, ಶುಕ್ಲಪಕ್ಷ, ಷಷ್ಠಿ, ಬುಧವಾರ, ನಿತ್ಯ ನಕ್ಷತ್ರ-ಅಶ್ವಿನಿ, ಯೋಗ-ಶುಕ್ಲ, ಕರಣ-ಕೌಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 21.02.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಪಾಲ್ಗುಣ ಮಾಸ, ಶುಕ್ಲಪಕ್ಷ, ಷಷ್ಠಿ, ಬುಧವಾರ, ನಿತ್ಯ ನಕ್ಷತ್ರ-ಅಶ್ವಿನಿ, ಯೋಗ-ಶುಕ್ಲ, ಕರಣ-ಕೌಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top