Sri Ganesh Tel

ಗಮ್ಮತ್ತು ಕಾಣಲಿಲ್ಲ! ಕತ್ತಿ ಕಾಣುತ್ತಿತ್ತು!

Posted In : ಕ್ಷಣಹೊತ್ತು ಅಣಿ ಮುತ್ತು

ಗಮ್ಮತ್ತಿಗೂ, ಕತ್ತಿಗೂ ಇರುವ ವಿಶೇಷ ಸಂಬಂಧವನ್ನು ಇಲ್ಲಿರುವ ಕುತೂಹಲ ಕಾರಿ ಕತೆಯು ತೋರಿಸುತ್ತದೆ. ಅದರಲ್ಲಿ ಬದುಕಿ ನಲ್ಲಿ ಯಶಸ್ಸನ್ನು ಪಡೆಯಲು ಬೇಕಾಗುವ ಮುಖ್ಯ ಸೂತ್ರವೊಂದರ ಸೂಚನೆಯೂ ಇದೆ. ಒಂದು ಗುರುಕುಲ ವಿತ್ತು. ಅಲ್ಲಿಯ ಗುರುಗಳ ಬಳಿ ಒಬ್ಬ ಯುವಕ ಹತ್ತಾರು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿದರು. ಕೊನೆಗೊಂದು ದಿನ ಅವರು ಗುರುಗಳೇ! ನಾನು ನಿಮ್ಮಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ಕಲಿಯಬೇಕಾದುದನ್ನೆಲ್ಲ ಕಲಿತಿದ್ದೇನೆ. ಆದರೆ ಏಕೋ ಏನೋ, ಬದುಕಿನಲ್ಲಿ ಯಶಸ್ಸನ್ನು ಸಾಧಿಸುವ ಸೂತ್ರವೊಂದ ನ್ನು ಕಲಿತಿಲ್ಲವೆಂದು ಅನಿಸುತ್ತಿದೆ ಎಂದರು. ಗುರುಗಳು ನಸುನಕ್ಕು ನನಗೆ ಗೊತ್ತಿರುವ ವಿದ್ಯೆಗಳನ್ನೆಲ್ಲ ನಿನಗೆ ಕಲಿಸಿದ್ದೇನೆ. ನಾನು ನಿನ್ನನ್ನೊಬ್ಬ ಮಹಾ ರಾಜರ ಬಳಿ ಕಳುಹಿಸಿಕೊಡುತ್ತೇನೆ.

ಅವರು ಬದುಕಿನಲ್ಲಿ ಯಶಸ್ಸನ್ನು ಸಾಧಿಸುವ ಸೂತ್ರವನ್ನು ಕಲಿಸಿಕೊಡಬಹುದು ಎಂದರು. ಯುವಕ ನೇರವಾಗಿ ಮಹಾರಾಜ ರನ್ನು ಭೇಟಿಯಾದರು. ಅದು ಸಂಜೆಯ ಸಮಯ. ರಾಜರ ಆಸ್ಥಾನದಲ್ಲಿ ಮೋಜುವಾನಿ ನಡೆದಿತ್ತು. ಗಾಯನ-ನೃತ್ಯಗಳು-ಭೋಜನಗಳು ನಡೆಯುತ್ತಿದ್ದವು. ಯುವಕ ಎಲ್ಲವನ್ನೂ ಗಮನಿಸಿದರು. ಆನಂತರ ಮಹಾರಾಜರನ್ನು ಭೇಟಿಯಾಗಿ ಗುರುಗಳ ಆದೇಶವನ್ನು ತಿಳಿಸಿದರು. ಈ ಸುಖಭೋಗಗಳ ವಾತಾವರಣದಲ್ಲಿ ಮುಳುಗಿರುವ ತಾವು ತನಗೆ ಬದುಕಿನಲ್ಲಿ ಯಶಸ್ಸನ್ನು ಸಾಧಿ ಸುವ ಸೂತ್ರವೊಂದನ್ನು ಹೇಳಿಕೊಡುತ್ತೀರಿ ಎಂದರೆ ನನಗೆ ಆಶ್ಚರ್ಯವಾಗುತ್ತದೆ! ಎಂದುಬಿಟ್ಟರು. ಮಹಾರಾಜರು ಗಟ್ಟಿಯಾಗಿ ನಕ್ಕು ಅದನ್ನು ನಾಳೆ ಬೆಳಿಗ್ಗೆ ನೋಡೋಣ. ಈಗ ನೀವು ಆರಾಮವಾಗಿ ಮಲಗಿ ವಿಶ್ರಾಂತಿ ಪಡೆಯಿರಿ ಎಂದು ಹೇಳಿ ಅತಿಥಿಗೃಹಕ್ಕೆ ಕಳುಹಿಸಿಕೊಟ್ಟರು.

ವೈಭವೋಪೇತವಾದ ಅತಿಥಿಗೃಹ, ಮೆತ್ತನೆಯ ಹಾಸಿಗೆ, ಕಾಲೊತ್ತಲು ಸೇವಕಿಯರು, ಗಾಳಿ ಬೀಸಲು ಸೇವಕರು, ಇವೆಲ್ಲ ಗುರುಕುಲದಲ್ಲಿ ಬೆಳೆದಿದ್ದ ಯುವಕರಿಗೆ ಹೊಸತೆನಿಸುತ್ತಿತ್ತು. ವಿಚಿತ್ರವೆನಿಸುತ್ತಿತ್ತು. ಆದರೆ ದೀರ್ಘ ಪ್ರಯಾಣದಿಂದ ಬಳಲಿದ್ದ ಯುವಕ ನಿದ್ರೆ ಮಾಡಿದರೆ ಸಾಕು ಎಂದುಕೊಂಡರು. ಮಂಚದ ಮೇಲೆ ಮಲಗಿಕೊಂಡರು. ಕಣ್ಣು ಮುಚ್ಚಿ ನಿದ್ರಿಸ ಬೇಕೆನ್ನುವಷ್ಟರಲ್ಲಿ, ಅವರ ಕಣ್ಣು ಶಯ್ಯಾಗೃಹದ ಛಾವಣಿಯ ಕಡೆಗೆ ಹೋಯಿತು. ಅಲ್ಲಿ ಒಂದು ಚೂಪಾದ ಖಡ್ಗವನ್ನು ನೇತು ಹಾಕಲಾಗಿತ್ತು. ಕೂದಲೆಳೆಯ ಗಾತ್ರದ ದಾರದಿಂದ ಖಡ್ಗ ನೇತಾಡುತ್ತಿತ್ತು. ದಾರ ತುಂಡಾದರೆ ಖಡ್ಗ ನೇರವಾಗಿ ಮಂಚದ ಮೇಲೆ ಮಲಗಿರುವವರ ಮೇಲೆ ಬೀಳುತ್ತಿತ್ತು. ಅವರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಅದನ್ನು ಕಲ್ಪಿಸಿಕೊಂಡರೂ ಭಯ ವಾಗುತ್ತಿತ್ತು. ಪ್ರಾಣಭಯದಿಂದಾಗಿ ಅವರು ಒಂದು ಕ್ಷಣವೂ ಕಣ್ಣು ಮುಚ್ಚಲಿಲ್ಲ.

ಖಡ್ಗವನ್ನೇ ದಿಟ್ಟಿಸಿ ನೋಡುತ್ತ ರಾತ್ರಿಯನ್ನು ಕಳೆದರು. ಮುಂಜಾನೆ ಮಹಾರಾಜರು ಅತಿಥಿಗೃಹಕ್ಕೇ ಬಂದರು. ಸಾಧಕರನ್ನು ನೋಡಿ ನಿಮ್ಮ ಕಣ್ಣುಗಳೇಕೆ ಕೆಂಪಗಿವೆ? ರಾತ್ರಿ ನಿದ್ದೆ ಮಾಡಲಿಲ್ಲವೇ? ಅನುಕೂಲಗಳೂ ಇದ್ದವಲ್ಲ! ಎಂದು ಕೇಳಿದರು. ಸಾಧಕರು ದೊಡ್ಡ ನಿಟ್ಟುಸಿರು ಬಿಟ್ಟು ನನ್ನ ಕಣ್ಣೆಲ್ಲ ಆ ಖಡ್ಗದ ಮೇಲೆಯೇ ಇತ್ತು. ಅದೆಲ್ಲಿ ಕೆಳಗೆ ಬೀಳುತ್ತದೋ, ನಾನು ಸಾಯುತ್ತೇನೋ ಎಂಬ ಚಿಂತೆಯಲ್ಲಿ ನಿದ್ದೆ ಬರಲಿಲ್ಲ ಎಂದರು. ಆಗ ಮಹಾರಾಜರು ನಕ್ಕು ನಿಮ್ಮ ಸುತ್ತಮುತ್ತಲೆಲ್ಲ ಸುಖ-ಸೌಲತ್ತುಗಳ ಗಮ್ಮತ್ತಿದ್ದರೂ ಅವು ನಿಮಗೆ ಕಾಣಿಸಲಿಲ್ಲ. ಕತ್ತಿಯೇ ಕಾಣುತ್ತಿತ್ತು. ನಾನು ಎಲ್ಲ ಐಶಾರಾಮಗಳ, ಮೋಜಿನ ನಡುವೆ ಇದ್ದರೂ ನನಗೆ ನನ್ನ ಕರ್ತವ್ಯವೇ ಕಾಣುತ್ತಿರುತ್ತದೆ. ಬದುಕಿನಲ್ಲಿ ಯಶಸ್ಸನ್ನು ಸಾಧಿಸಬೇಕೆನ್ನುವವರಿಗೆ ತಮ್ಮ ಕರ್ತವ್ಯವೇ ಕಾಣುತ್ತಿರಬೇಕು. ಆಗ ಯಶಸ್ಸು ಸುಲಭಸಾಧ್ಯ! ಇದೇ ಬದುಕಿನ ಯಶಸ್ಸಿನ ಸೂತ್ರ! ಎಂದರು. ಆಗ ಯುವಕ ತನ್ನ ಗುರುಗಳ ಮಾತಿನ ಅರ್ಥ ಮಾಡಿಕೊಂಡರು. ಗಮ್ಮತ್ತಿನ ಮತ್ತು ಕತ್ತಿಯ ಸಂಬಂಧಗಳಲ್ಲಿ ಕರ್ತವ್ಯದ ಮಹತ್ವವನ್ನೂ ತಿಳಿಸುವ ಈ ಕತೆಯು ನಮಗೂ ಸಹಾಯಕವಾಗಬಹುದಲ್ಲವೇ?

One thought on “ಗಮ್ಮತ್ತು ಕಾಣಲಿಲ್ಲ! ಕತ್ತಿ ಕಾಣುತ್ತಿತ್ತು!

Leave a Reply

Your email address will not be published. Required fields are marked *

2 − one =

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

 

Friday, 15.12.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ , ತ್ರಯೋದಶಿ, ಶುಕ್ರವಾರ, ನಿತ್ಯ ನಕ್ಷತ್ರ-ವಿಶಾಖ, ಯೋಗ-ಸುಕರ್ಮ, ಕರಣ-ಗರಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
10.30-12.00 07.30-09.00 03.00-04.30

Read More

Back To Top