About Us Advertise with us Be a Reporter E-Paper

ವಿವಾಹ್

i ಫೋನ್ ಬೇಡ, ನಿನ್ನ eye-ಫೋನ್ ಬೇಕು

• ವಿಕ್ರಮ ಜೋಶಿ

ಅವಳು ತನ್ನ ಗಂಡನಿಗಾಗಿ ಕಾಯುತ್ತಿದ್ದಾಳೆ. ಆರು ತಿಂಗಳಾ ಯಿತು ಅಮೇರಿಕಾಕ್ಕೆ ಹೋಗಿ. ಇದು ಮೊದಲ ಬಾರಿ ಅಲ್ಲ. ಎಷ್ಟನೇ ಸಲ, ಲೆಕ್ಕಕ್ಕೇ ಇಲ್ಲ. ಗಂಡನ ಒಂದು ಕಾಲು ಮನೆ ಯಲ್ಲಿದ್ದರೆ  ಕಾಲು ಏರ್ ಪೋರ್ಟ್‌ನಲ್ಲಿಯೇ ಇರುತ್ತದೆ. ದಾಂಪತ್ಯ ಜೀವನಕ್ಕೆ ಹೆಜ್ಜೆಯಿಟ್ಟು ಹತ್ತು ವರ್ಷಗಳಾದವು. ಮದುವೆ ಯಾಗಿ ಆರು ತಿಂಗಳಿನಿಂದ ಶುರುವಾಗಿದ್ದು ಈ ಆರಾರು ತಿಂಗಳ ಪ್ರವಾಸದ ಕಾಲ ಚಕ್ರ. ಎರಡು ವರ್ಷಕ್ಕೊಮ್ಮೆ ಕೆಲಸದಲ್ಲಿ ಪ್ರಮೋಷನ್, ಕೆಲವೊಮ್ಮೆ ಒಂದೇ ವರ್ಷಕ್ಕೂ ಸಿಕ್ಕಿದ್ದಿದೆ. ಮದುವೆಯಾದ ಹೊಸತರಲ್ಲಿ ಗಂಡನಿಗೆ ಬರುತ್ತಿದ್ದ ಸಂಬಳವಾದರೂ ಎಷ್ಟು? ವರ್ಷಕ್ಕೆ ಏಳು ಲಕ್ಷ. ಇವತ್ತು ತಿಂಗಳಿಗೆ ಹತ್ತು ಲಕ್ಷದವರೆಗೆ ಮುಟ್ಟಿದೆ. ಹಳ್ಳಿಯಲ್ಲಿ ಹುಟ್ಟಿ ಬೆಳೆದ ಅವನು ಇವತ್ತು ಯಾವ ದೇಶವನ್ನು  ಹೇಳಿ? ರಜೆ ಹಾಕಿ ಹೆಂಡತಿಯ ಜೊತೆ ಪ್ರವಾಸ ಎಂದು ಪ್ರಯಾಣ ಮಾಡುವ ಪರಿಸ್ಥಿತಿಯೇ ಬಂದಿಲ್ಲ. ಆಫೀಸ್ ಕೆಲಸದ ಜೊತೆಯಲ್ಲಿಯೇ ಹೆಂಡತಿ ಯನ್ನು ಕರೆದುಕೊಂಡು ಹೋಗುತ್ತಾನೆ. ಪಾತ್ರೆ, ಚಮಚದಿಂದ ಹಿಡಿದು ಹೋಮ್ ಥೀಯೇಟರ್ ತನಕ ಮನೆಯ ತುಂಬಾ ವಿದೇಶ ದಲ್ಲಿ ಖರೀದಿಸಿದ ಸಾಮಾನುಗಳೇ. ಇನ್ನೂ ಮಕ್ಕಳಾಗಿಲ್ಲ ಎನ್ನುವ ಕೊರಗು ಬಿಟ್ಟರೆ ಸಂಸಾರದಲ್ಲಿ ಏನೂ ಕಷ್ಟವೇ ಇಲ್ಲ. ಮನೆಯಲ್ಲಿ ಕೈಗೊಬ್ಬರು, ಕಾಲಿಗೊಬ್ಬರು ಆಳು. ಅವಳಿಗೆ ಏನು ಕೊಡಿಸಿಲ್ಲ ಹೇಳಿ? ಸಾಮಾನ್ಯರಿಗೆ ಐ-ಫೋನ್,  ವಾಚ್ ಇವೆಲ್ಲ ಒಂದು ಕನಸು. ಅಂತದ್ದರಲ್ಲಿ ಐಫೋನ್ 3ಜಿನಿಂದ ಹಿಡಿದು ಐಫೋನ್ 7ಎಸ್ ತನಕ ಪ್ರತಿ ಬಾರಿಯೂ ಅಮೇರಿಕಾದಿಂದ ಬರುವಾಗ ಆತ ಹೆಂಡತಿಗೆ ಒಂದಲ್ಲಾ ಒಂದು ಗಿಫ್‌ಟ್ ತಂದೇ ತರುತ್ತಾನೆ. ಮನೆಯಲ್ಲಿ ಎಲ್ಲವೂ ಆ್ಯಪಲ್ ಕಂಪನಿಯ ಗ್ಯಾಜೆಟ್‌ಗಳೇ! ತಾನು ಹೆಂಡತಿಯನ್ನು ರಾಣಿಯ ಹಾಗೆ ಇಟ್ಟು ಕೊಂಡಿದ್ದೇನೆ ಎಂದು ಭಾವಿಸಿದ್ದಾನೆ ಆಕೆಯ ಗಂಡ.

ಆ ದಿನ ಫ್ಲೈಟ್ ಬೆಂಗಳೂರಿಗೆ ಲ್ಯಾಂಡ್ ಆಗಲು ಮೂರು ತಾಸು ತಡ. ಮನೆಗೆ ಬರುವಾಗ ಬೆಳಿಗ್ಗಿನ  ಮೂರು ಗಂಟೆ. ಹೆಂಡತಿ ಕಾಯುತ್ತಾ ಸೋಫಾದಲ್ಲೇ ಮಲಗಿದ್ದಾಳೆ. ಇದು ರೂಡಿ. ಬೆಳಿಗ್ಗೆ ಅವನ ಕಣ್ಣು ತೆರೆದಾಗ ಒಂಬತ್ತು ಗಂಟೆ. ಹೆಂಡತಿ ಇನ್ನೂ ಮಲಗಿದ್ದಾಳೆ. ಮುಟ್ಟಿ ನೋಡಿದರೆ ಕೆಂಡದಷ್ಟು ಬಿಸಿ. ಡಾಕ್ಟರ್ ಹತ್ತಿರ ಹೋಗೋಣ ಎಂದರೆ ಹೆಂಡತಿ ‘ಮೆಡಿಸಿನ್ ತಗೊಂಡಿದ್ದೇನೆ.. ಕಡಿಮೆ ಆಗುತ್ತದೆ’ ಎಂದಳು. ಗಂಡ ಮತ್ತೆ ಆಫೀಸ್ ಕೆಲಸಕ್ಕೆ ಕೂತ! ಸಾಯಂಕಾಲ ಐದು ಗಂಟೆಯಾಗಿದೆ ಹೆಂಡತಿ ಚಹಾ ತಂದು ಎದುರು ಕೂತಾಗ ಎಷ್ಟೋ ದಿನದ ಮೇಲೆ ಇಬ್ಬರೂ ಒಬ್ಬರ  ಇನ್ನೊಬ್ಬರನ್ನು ಕಂಡಿದ್ದು. ಅವನು ಖುಷಿಯಲ್ಲಿ ಹೇಳಿದ, ‘ನೋಡು ನಿನಗಾಗಿ ಏನು ತಂದಿದ್ದೇನೆ? ‘ಹೊಸ ಜಿಟ್ಞಛಿ’ ಎನ್ನುತ್ತಾ ಬಾಕ್‌ಸ್ನ್ನು ಅನ್ ಪ್ಯಾಕ್ ಮಾಡ ತೊಡಗಿದ. ಹೆಂಡತಿ ಅವನ ಕಣ್ಣುಗಳನ್ನೇ ನೋಡುತ್ತಿದ್ದಳು. ಗಂಡ ಬಾಕ್‌ಸ್ನಿಂದ ಮೊಬೈಲ್ ತೆಗೆದು ಅವಳ ಮುಂದೆ ಇಟ್ಟಾಗ ‘ನನಗೆ ಜಿ-ಫೋನ್ ಬೇಡಾರಿ, ನಿಮ್ಮ ಛಿಛಿ- ಫೋನ್ ಬೇಕು. ಕೊಡ್ತೀರಾ? ದಿನ ಇಡೀ ನಿಮ್ಮ ಛಿಛಿ-ಫೋನ್ ನೋಡ್ತಾ ಇರಬೇಕು. ಅದರ ಜೊತೆ ಚಾಟ್ ಮಾಡಬೇಕು, ನಿಮ್ಮ ಛಿಛಿ-ಫೋನಿಗೆ ನನ್ನ  ಮೆಸೇಜ್ ಕಳಿಸಬೇಕು. ಅದಕ್ಕೆ ನೀವು ನಿಮ್ಮ ಕಣ್ಣಿಂದ ಉತ್ತರಿಸಬೇಕು. ಇಡೀ ಜಗತ್ತನ್ನೇ ನಿಮ್ಮ ಛಿಛಿ-ಫೋನ್‌ನಲ್ಲಿ ನೋಡಬೇಕು. ಕೊಡುತ್ತೀರಾ?’ ಎಂದು ಕುಸಿದು ಬಿದ್ದಳು. ಅವಳ ಕೊನೆಯ ಮಾತುಗಳು ಆಸ್ಪತ್ರೆಯಲ್ಲಿ ಕೂತಿದ್ದ ಅವನ ಕಿವಿಯಲ್ಲಿ ಪದೇ ಪದೇ ಪ್ರತಿಧ್ವನಿಸುತ್ತಿತ್ತು. ಡಾಕ್ಟರ್ ಎದುರು ಬಂದು ನಿಂತಾಗಲೇ ಇವನಿಗೆ ಮೈಮೇಲೆ ಎಚ್ಚರ ಬಂದಿದ್ದು. ‘ನೋಡಿ ಸರ್, ಅದೃಷ್ಟವಶಾತ್ ಹೆಂಡತಿಯನ್ನು ಸರಿಯಾದ ಸಮಯ ಕ್ಕೆ ಕರೆದು ತಂದಿರಿ. ಇನ್ನು ಎರಡು ದಿನ ತಡವಾಗಿದ್ದರೂ ಪರಿಸ್ಥಿತಿ ಕೈ  ಹೋಗುತ್ತಿತ್ತು. ಈಗ ಜೀವಕ್ಕೆ ಏನು ತೊಂದರೆ ಇಲ್ಲ. ಆದರೆ ನೀವು ಬದಲಾಗಬೇಕು’ ಎಂದು ಕಣ್ಣಲೇ ಮೆಸೇಜ್ ಕೊಟ್ಟು ಡಾಕ್ಟರ್ ಮತ್ತೊಂದು ವಾರ್ಡಿಗೆ ಹೋದರು. ಈತನಿಗೆ ಮತ್ತೊಂದು ಜನ್ಮ ಸಿಕ್ಕಿತ್ತು. ತಾನು ತೇಲಾಡುತ್ತಿದ್ದ ಭ್ರಮಾಲೋಕದಿಂದ ದಪ್ಪನೆ ಬಿದ್ದಂತನಿ ಸಿತು. ಕಾಲವೇ ಕೆಲವೊಮ್ಮೆ ಮನುಷ್ಯನಿಗೆ ಬೇಗ ಬುದ್ಧಿ ಕಲಿಸುತ್ತದೆ.

ಇದು ಕಾಲ್ಪನಿಕ ಕಥೆಯಲ್ಲ, ಇತ್ತೀಚೆಗೆ ದೊಡ್ಡ ಐಟಿ ಕಂಪನಿಯಿಂದ ಕೆಲಸ ಬಿಟ್ಟು ಸಣ್ಣದೊಂದು ಕಂಪನಿಯಲ್ಲಿ ನೈನ್-ಟು-ಸಿಕ್‌ಸ್ ಕೆಲಸಕ್ಕೆ ಸೇರಿಕೊಂಡ ನನ್ನ ಮಿತ್ರರೊಬ್ಬರ  ದಾಂಪತ್ಯ ಎನ್ನುವುದು ನಲ್ಲಿ ಜಿ ಫೋನ್‌ನಲ್ಲಿ ಚಾಟ್ ಮಾಡುವಲ್ಲಿ, ಫೋಟೊ ತೆಗೆಯುವುದರಲ್ಲಿ ಇಲ್ಲ. ಬದುಕು ಇರುವುದು ಛಿಛಿ -ಫೋನ್‌ನಲ್ಲಿ. ಅದರಲ್ಲಿ ಎಲ್ಲವೂ ಇದೆ. ದುಬಾರಿ ಕಾರುಗಳು, ಅತ್ಯಾಧುನಿಕ ಗೆಜೆಟ್‌ಗಳೇ ಜೀವನದ ಸಂತೋಷವಲ್ಲ. ದುಬಾರಿಯ ವರ್ಚುವಲ್ ಲೈಫ್‌ಗಿಂತ ಫ್ರೀಯಾಗಿ ಸಿಗುವ ರಿಯಲ್ ಲೈಫ್ ಈಸ್ ಬ್ಯೂಟಿಫುಲ್! ಒಬ್ಬರು ಇನ್ನೊಬ್ಬರ ಹತ್ತಿರ ಮಾತನಾಡಲು, ಕಣ್ಣಲ್ಲಿ ಕಣ್ಣಿಟ್ಟು ನೋಡಲು, ಒಬ್ಬರಿಗಾಗಿ ಇನ್ನೊಬ್ಬರು ಬದುಕಲು, ಮನತುಂಬಿ ನಗಲು,  ಪ್ರೀತಿಯ ಪೂಜೆ ಮಾಡಲು, ನೆಮ್ಮದಿಯಾಗಿ ಉಂಡು  ತುಂಬಾ ನಿದ್ದೆ ಮಾಡಲು, ಸರಳ ಸಂತೋಷದ ಬದುಕನ್ನು ನಡೆಸಲು ನಮಗೆ ಅದೆಷ್ಟು ಫಾರಿನ್ ಟ್ರಿಪ್‌ಗಳು ಬೇಕು? ಅದೆಷ್ಟು ಹಣ ಸಂಪಾದಿಸಬೇಕು?

ಐ-ಫೋನ್ ನಡುವೆ ಬದುಕಲು ಮನುಷ್ಯ ಶುರುಮಾಡಿ ಹತ್ತು ವರ್ಷಗಳು ಕಳೆದಿರಬೇಕು, ಆದರೆ ಸಾವಿರಾರು ವರ್ಷಗಳಿಂದ ಮನುಷ್ಯ ಬದುಕುತ್ತಿರುವುದು ಕಣ್ಣೆಂಬ ಫೋನ್‌ನಿಂದ. ಕಣ್ಣಲೇ ಪ್ರೀತಿ, ಫೋಟೊ, ಮೆಸೇಜ್ ಎಲ್ಲವೂ. ಅದ್ಯಾಕೆ ನಾವು ಕಣ್ಣಿನ ಸಹಜತೆಯಿಂದ ದೂರ ದೂರ ಕೃತ್ರಿಮ ಬದುಕಿನತ್ತ ಹೋಗುತ್ತಿದ್ದೇವೆ? ಇದಕ್ಕೆ ಗೂಗಲ್‌ನಲ್ಲಿ ಉತ್ತರವಿಲ್ಲ, ನಮ್ಮ ಹೃದಯಕ್ಕೆ  ಇಯರ್ ಫೋನ್ ತೆಗೆದು ಒಮ್ಮೆ ಹೃದಯಕ್ಕೆ ಕಿವಿ ಕೊಡುವ ಸೌಜನ್ಯ ಇದ್ದರೆ ಸಾಕು !

Tags

Related Articles

Leave a Reply

Your email address will not be published. Required fields are marked *

Language
Close