About Us Advertise with us Be a Reporter E-Paper

ವಿವಾಹ್

ಸಂಘರ್ಷದ ಜೀವನದಲ್ಲಿ ಬೇಡಿದೆಲ್ಲ ಸಿಗುವುದಿಲ್ಲ.

- ಮಾಲಾ ಅಕ್ಕಿಶೆಟ್ಟಿ

ಜಗತ್ತಿನ ಕ್ಲಾಸಿಕಲ್ ಲವ್ ಸ್ಟೋರಿಸ್ ಎಲ್ಲರಿಗೂ ಗೊತ್ತು. ಹಾಗೆಯೇ ನಿನಗಂತೂ ಚೆನ್ನಾಗಿ ಗೊತ್ತು. ಅವೆಲ್ಲ ಸುಖಾಂತ್ಯವನ್ನು ಕಂಡಿಲ್ಲ. ಪ್ರೀತಿಗಾಗಿ ಪ್ರೀತಿ ಎಂಬ ಧೋರಣೆಯನ್ನು ಕಟ್ಟಾ ಪಾಲಿಸಿ, ಜಗತ್ವಿಖ್ಯಾತಿಯನ್ನು ಪಡೆದವು. ಜಾತಿ, ಅಂತಸ್ತಿನ ಭೇದ ಬಂದಾಗಲೂ ಪ್ರೀತಿ ಹಾಗೂ ಅಮರ ಎನ್ನುವುದನ್ನು ಸಾಧಿಸಿ, ಬದುಕಿದರೆ ಪ್ರೀತಿಸಿದವರ ಜತೆಗೇನೆ ಇಲ್ಲಾದರೆ ಸಾವಾದರೂ ಜೊತೆಗಿರಲಿ ಎಂದು ಅನುಸರಿಸಿದವರು. ಹೌದು ಅವರದು ಅಪ್ರತಿಮ ಪ್ರೇಮ. ಹೋಲಿಕೆಯೇ ಇಲ್ಲ ಬಿಡು.

ಜೀವನ ಅಂದ ಮೇಲೆ ವಿವಿಧ ಸಂಬಂಧಗಳು ಎದುರಾಗುತ್ತವೆ. ಅವೆಲ್ಲವುಗಳಿಗೆ ಅದರದ್ದೇ ಆದ ಸ್ಥಾನಮಾನಗಳಿವೆ. ಒಂದು ಹೆಚ್ಚು ಒಂದು ಕಡಿಮೆ ಅನ್ನೋದು ಇಲ್ಲ. ವೈಶಿಷ್ಟ್ಯತೆಯಿಂದ ಕೂಡಿವೆ. ಜೀವನದಲ್ಲಿ ಬರುವ ಸಂಗಾತಿ, ಅಪ್ಪ, ಅಮ್ಮ, ಅಕ್ಕ, ತಂಗಿ, ಅಣ್ಣ, ತಮ್ಮನ್ನಷ್ಟೇ ಮುಖ್ಯ. ಸಂಗತಿ ಎದುರು ಅಮುಖ್ಯವಲ್ಲ ಹಾಗೆಯೇ ಇವೆಲ್ಲ ಪ್ರಮುಖವಾಗಿ ಸಂಗಾತಿ ಕೆಳದರ್ಜೆಯಲ್ಲ. ಹೀಗಾಗಿ ಪ್ರೀತಿ ಇವರೆಲ್ಲರಲ್ಲೂ ಸ್ಥಾನ ಪಡೆದಿರುತ್ತದೆ.

ಅಮೃತಾ ಪ್ರಿತಂಳದು ಅದೆಂಥ ಪ್ರೇಮ ಕಣೋ! ನಿನಗೆ ಗೊತ್ತಿದೆಯಲ್ವಾ? ಅವಳು ಭಾರತದ ಪ್ರಸಿದ್ಧ ಲೇಖಕಿ. ಕಾದಂಬರಿ, ಪ್ರಬಂಧ ಮತ್ತು ಕಾವ್ಯದಲ್ಲಿ ಸೈ ಎನಿಸಿಕೊಂಡವಳು. ಪಂಜಾಬಿ ಮತ್ತು ಹಿಂದಿ ಭಾಷೆಯಲ್ಲಿ ಬರೆದಿದ್ದಾಳೆ. 20ನೇ ಶತಮಾನದ ಲಿಡಿಂಗ್ ಪಂಜಾಬಿ ಕವಯಿತ್ರಿ ಎಂಬ ಗೌರವ ಅವಳದು.ಎಷ್ಟು ಕೃತಿಗಳನ್ನು ಬರೆದಿದ್ದಾಳೆ. ಸಾಹಿತ್ಯ ಅಕಾಡೆಮಿ ಅವಾರ್ಡ್ ಪಡೆದ ಮೊದಲ ಮಹಿಳೆ ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಕೆಯ ಮುಡಿಗೆರಿದೆ. ಪದ್ಮಶ್ರೀ ಮತ್ತು ಪದ್ಮ ವಿಭೂಷಣ ಕೂಡ. ಈಕೆಯ ಜೀವನದಲ್ಲಿ ಬಂದ ಅವನು ರಿಜೆಕ್‌ಟ್ ಮಾಡಿದರೂ ಈಕೆ ಪ್ರೀತಿಸುವುದನ್ನು ಬಿಡಲಿಲ್ಲ. ಕೊನೆಯವರೆಗೂ ಅವನನ್ನು ಆರಾಧಿಸಿ ಅತಿ ಗೌರವದಿಂದ ಹಾಗೂ ಗರ್ವದಿಂದ ಅವನ ಬಗ್ಗೆ ಮಾತಾಡ್ತಾಳೆ. ಪ್ರೀತಿಸಿದವನನ್ನು ಪಡೆಯಬೇಕೆಂಬ ಉತ್ಕಟ ಆಸೆ ಇದ್ದರೂ, ಅದು ಹುಚ್ಚುತನದ ರೂಪ ಪಡೆಯಲಿಲ್ಲ. ಜೀವನ ಬಂದ ಹಾಗೆ ಸ್ವೀಕರಿಸಿ,ತನ್ನ ಪಾಲಿನ ಆರಾಧನೆಯನ್ನು ಕೊನೆಯವರೆಗೂ ಮುಂದುವರಿಸಿದಳು.ಇದು ತ್ಯಾಗದಲ್ಲಿ ಪ್ರೀತಿಯನ್ನು ಕಂಡುಕೊಳ್ಳುವ ಇದು ಎಲ್ಲರಿಗೂ ಸಾಧ್ಯನಾ? ಇಲ್ಲ. ಇದು ಬೇಡಿಕೆ ರಹಿತ ಪ್ರೀತಿ. ನಗದೀಕರಣವಾಗಿದ್ದರೂ, ಮರು ನಗದೀಕರಣವನ್ನು ತಿರಸ್ಕರಿಸುವ ಪ್ರೀತಿ. ನೀನು ಪ್ರೀತಿಸು, ಇಲ್ಲ ಬಿಡು ನಾನು ಮಾತ್ರ ಪ್ರೀತಿಸುವೆ ಎಂಬ ದೃಢ ನಿರ್ಣಯ ಅವಳದು. ಎಂಥ ಗಟ್ಟಿಗಿತ್ತಿ ಇದು ಎಲ್ಲರಿಂದಲೂ ಆಗಲ್ಲ ಬಿಡು.

ಅದಕ್ಕೆ ಕಣೋ ಸಂಘರ್ಷದ ಈ ಜೀವನದಲ್ಲಿ ನಾವು ಬೇಡಿಕೆ ಇಟ್ಟದ್ದೆಲ್ಲ ಸಿಗುವುದಿಲ್ಲ. ಪರಿಸ್ಥಿತಿಗಳು ವಿರುದ್ಧವಾಗಿರುತ್ತವೆ. ಹೆತ್ತ ಪಾಲಕರು, ಒಡಹುಟ್ಟಿದವರು ಸಹ ಪ್ರಮುಖರಾಗುತ್ತಾರೆ. ನಾನು ಯಾಕೆ ಕ್ಲಾಸಿಕಲ್ ಸ್ಟೋರಿಸ್ ಕಥೆಗಳ ಮತ್ತು ಅಮೃತಾ ಪ್ರೀತಂ ಬಗ್ಗೆ ಹೇಳಿದೆ ಅನ್ನೊದನ್ನ ನೀ ಚೆನ್ನಾಗಿ ಅರ್ಥಮಾಡಿಕೊಳ್ಳುವೆ ಎಂಬ ನಂಬಿಕೆ ಇದೆ. ನಮ್ಮ ಸ್ವಾರ್ಥಕ್ಕಾಗಿ ಅವರನ್ನೆಲ್ಲ ಬದಿಗೊತ್ತುವುದು ಸರಿಯಲ್ಲ. ಹಾಗಂತ ಎಲ್ಲವನ್ನೂ ಬಿಡಲು ಹೇಳುತ್ತಿಲ್ಲ. ನಮ್ಮ ಪ್ರಯತ್ನಗಳೊಂದಿಗೆ ಮನೆಯವರನ್ನು ಒಪ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡೋಣ. ಅದೃಷ್ಟ ಖುಲಾಯಿಸಿದರೆ ಎಲ್ಲಾ ನಾವು ಅಂದುಕೊಂಡಂತೆ ಆಗುತ್ತದೆ. ಇಲ್ಲಾದರೆ ನಾವು ಅಮೃತಾ ಪ್ರೀತಂ ಆಗಿಬಿಡೋಣ.ಪ್ರೇಮ ಅಮರ ಎನ್ನುವದನ್ನ ಸಾಧಿಸೋಣ. ಸುಮಧುರ ನೆನಪುಗಳನ್ನ ಬಾಡದ ಹಾಗೆ ನೋಡಿಕೊಳ್ಳೊಣ. ಪ್ರೀತಿಯನ್ನು ಬೆಂಬಲಿಸೋಣ. ಕೊನೆ ಉಸಿರಿರುವವರೆಗೂ ಮೆಚ್ಚುಗೆ ಇರಲಿ. ಪ್ರೀತಿ ಆರಾಧನೆಯ ಸ್ಥಾನ ಪಡೆಯಲಿ.

Tags

Related Articles

Leave a Reply

Your email address will not be published. Required fields are marked *

Language
Close