About Us Advertise with us Be a Reporter E-Paper

ಅಂಕಣಗಳು

ದಲಿತರ ಅಭಿವೃದ್ಧಿಗೆ ಇನ್ಯಾರೋ ಬರಬೇಕಿಲ್ಲ!

ಸಿದ್ಧಾರ್ಥ ವಾಡೆನ್ನವರ್

ಲಿತ ಸಮುದಾಯದವರ ಕನಸುಗಳು ನನಸಾಗುತ್ತಿಲ್ಲ. ಅವರಿಗೆ ಗುಣ ಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಹೆಚ್ಚಿನವರು ಈಗಲೂ ಬಡತನ ರೇಖೆಗಿಂತ ಕೆಳಗಿದ್ದಾರೆ. ದಲಿತರ ಅಭಿವೃದ್ಧಿಗೆ ಸರಕಾರಗಳು ಹಲವು ಯೋಜನೆಗಳನ್ನು ರೂಪಿಸಿದ್ದರೂ ಅವುಗಳ ಅನುಷ್ಠಾನ ಸರಿಯಾಗಿಲ್ಲ. ಇದಕ್ಕೆಲ್ಲ ದಲಿತ ರಾಜಕೀಯ ನಾಯಕರ ಇಚ್ಛಾಶಕ್ತಿ ಕೊರತೆಯೇ ಕಾರಣ. ಪ್ರತಿ ಕುಟುಂಬಕ್ಕೆ ಶಾಶ್ವತ ಆದಾಯದ ಮೂಲ ಸೃಷ್ಠಿಯಾಗಬೇಕು. ಶಾಶ್ವತ ಆದಾಯದ ಮೂಲಗಳಾದ ಸರಕಾರಿ ಅಥವಾ ಖಾಸಗಿ ನೌಕರಿ, ಇಲ್ಲವೇ ಉಳಿಮೆ ಮಾಡಲು ಭೂಮಿಗಳಾದರೂ ಸಿಗಬೇಕು.

ನೂರಾರು ವರ್ಷಗಳಿಂದ ದೇಶದಲ್ಲಿ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಾಗಿ ಹೋರಾಟಗಳು ನಡೆಯುತ್ತಲೇ ಇವೆ. ದಲಿತ ನಾಯಕರು ರಾಜಕೀಯ ಸಮಾ ನತೆ ಪಡೆದುಕೊಂಡಿದ್ದಾರೆ. ಆದರವರು ಆರ್ಥಿಕ ಮತ್ತು ಸಾಮಾ ಜಿಕ ಸಮಾನತೆ ಪಡೆಯಲು ಸಂಪೂರ್ಣವಾಗಿ ಶ್ರಮಿಸುತ್ತಿಲ್ಲ. ಸಾಮಾಜಿಕ ಸಮಾನತೆ ನೆಲದಲ್ಲಿ ಸಾಧ್ಯವೇ ಎಂಬ ಪ್ರಶ್ನೆಗೆ ಖಂಡಿತ ಸಾಧ್ಯವಿಲ್ಲ ಎನ್ನುವ ಉತ್ತರವೇ ಸದಾ ಬರುತ್ತದೆ. ಇದ ಕ್ಕೆಲ್ಲ ಕಾರಣ ಇಲ್ಲಿನ ಜಾತಿ ವ್ಯವಸ್ಥೆ! ಸಾಮಾಜಿಕ ಸಮಾನತೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹಲವಾರು ಮಾರ್ಗ ಸೂಚಿಗಳಿವೆ. ಎಲ್ಲ ಕ್ರಮಗಳ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಸಮಾನತೆ ಸಿಗದಂತದ್ದಲ್ಲ.

ಮಾರುಕಟ್ಟೆ ಪ್ರಧಾನ ವ್ಯವಸ್ಥೆಯಲ್ಲಿ ಆರ್ಥಿಕ ಸಮಾನತೆೆ ಜಾರಿ ತುಂಬಾ ಕಷ್ಟದ ಕೆಲಸ. ಸರಕಾರ ಮತ್ತು ನಾಯಕರ ಇಚ್ಛಾಶಕ್ತಿಯಿಂದ ಕೆಲ ಪ್ರಯತ್ನಗಳು ಸತತವಾಗಿ ನಡೆಯುತ್ತಿವೆ. ತುಳಿತಕ್ಕೊಳಗಾದವರ ಕುಟುಂಬಗಳ ಆದಾಯ ವೃದ್ಧಿಗೆ ಸರಕಾರಗಳು ಹಲವಾರು ಸಹಾಯಸವಲತ್ತು ಪ್ರಕಟಿಸುತ್ತಿವೆ. ದಲಿತ ಕುಟುಂಬಗಳ ಅಭಿವೃದ್ಧಿಗೆ ಸರಕಾರ ಸಾಕಷ್ಟು ಹಣವನ್ನು ಕರ್ನಾಟಕ ಅನುಸೂಚಿತ ಜಾತಿಗಳ ಉಪ ಮತ್ತು ಬುಡಕಟ್ಟು ಉಪ ಯೋಜನೆ ಅಧಿನಿಯಮ, 2013’ ಅಡಿಯಲ್ಲಿ ಮೀಸಲಿಡುತ್ತಿದೆ. ಆದರೆ ದಲಿತ ನಾಯಕರ ಇಚ್ಛಾಶಕ್ತಿ ಕೊರತೆಯಿಂದಾಗಿ ಬಜೆಟ್‌ನಲ್ಲಿ ಮೀಸಲಿರಿಸಿದ ಹಣ ಸಂಪೂರ್ಣವಾಗಿ ಬಳಕೆಯಾಗುತ್ತಿಲ್ಲ.

ಸಂಸತ್, ವಿಧಾನಸಭೆ, ಪಂಚಾಯತಿ ವ್ಯವಸ್ಥೆಯಲ್ಲಿ .ಜಾತಿ ಮತ್ತು .ಪಂಗಡ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಲಾಗಿದೆ. ರಾಜ್ಯ ಯೋಜನಾ ವೆಚ್ಚದ ಒಂದು ಭಾಗವನ್ನು ಜನಸಂಖ್ಯೆಗೆ ಅನುಗುಣವಾಗಿ ಮೀಸಲಿಡಲು 2013 ರಿಂದ ಸಂಪನ್ಮೂಲ ಹಂಚಿಕೆ ಮತ್ತು ಬಳಕೆ ಕಾಯಿದೆ ಜಾರಿಗೆ ತರಲಾಗಿದೆ.

ರಾಜಕೀಯ ಕ್ಷೇತ್ರದಲ್ಲಿ ಮತ್ತು ಯೋಜನಾ ವೆಚ್ಚದಲ್ಲಿ ದಲಿತ ಜನಾಂಗಕ್ಕೆ ಸಮಾನತೆ ಸಿಕ್ಕಿದೆ. ಆದರೆ ಉನ್ನತ ಹುದ್ದೆಗಳಲ್ಲಿ, ಮಂತ್ರಿ ಪದವಿಯಲ್ಲಿ, ಮುಖ್ಯಮಂತ್ರಿ ಪಟ್ಟ ಪಡೆಯುವಲ್ಲಿ ದಲಿತ ನಾಯಕರಿನ್ನೂ ಯಶಸ್ವಿಯಾಗಿಲ್ಲ. ರಾಜಕೀಯ ಮೀಸಲಾತಿ ಪಡೆದ ದಲಿತ ನಾಯಕರೇ ದಲಿತರಿಗಾಗಿ ಸಂಪೂರ್ಣವಾಗಿ ಆಸರೆಯಾಗುತ್ತಿಲ್ಲ. ದಲಿತ ನಾಯಕರು ಉನ್ನತ ಹುದ್ದೆಗೆ ಹೋದಾಕ್ಷಣ ತಮ್ಮ ಸಮುದಾಯದ ಅಭಿವೃದ್ಧಿಯನ್ನೇ ಮರೆಯುತ್ತಿದ್ದಾರೆ. ಇದೆಲ್ಲವೂ ಸರಕಾರವೇ ಪ್ರಕಟಿಸಿದ ಅಂಕಿಅಂಶಗಳಿಂದಲೇ ತಿಳಿಯುತ್ತದೆ.

2008-09 ರಿಂದ 2016-17 ವರೆಗಿನ ಅಂಕಿಅಂಶ ಗಮನಿಸಿದಾಗ 9 ವರ್ಷಗಳಲ್ಲಿ ಒಟ್ಟು ರಾಜ್ಯದ ವೆಚ್ಚ 429385.00 ಕೋಟಿ ರು.ಗಳು. ಇದರಲ್ಲಿ ಮತ್ತು ಖಿ ಅಡಿಯಲ್ಲಿ ಮೀಸಲಿರಿಸಿದ್ದು 87531.75 ಕೋಟಿ ರು. ಒಟ್ಟು ಮೀಸಲಿರಿಸಿದ ಹಣದಲ್ಲಿ ಉಪಯೋಗಿಸಿದ್ದು 77157.97 ಕೋಟಿ ರು. ಮಾತ್ರ. ಸಿದ್ದರಾಮಯ್ಯನವರು 2017-18ರಲ್ಲಿ ಮಂಡಿಸಿದ ಆಯವ್ಯಯದಲ್ಲಿ 69447.00 ಕೋಟಿ ರು.ಉಪಯೋಗಿಸಲಾಗಿದೆ ಎಂದು ತಿಳಿಸಿದ್ದಾರೆ.

9 ವರ್ಷಗಳಲ್ಲಿ ಸರಕಾರ ನೀಡಿದ ಹಂಚಿಕೆಯನ್ನು ದಲಿತ ನಾಯಕರು ತಮ್ಮ ಸಮುದಾಯಕ್ಕಾಗಿ ಉಪಯೋಗಿಸಲು ವಿಫಲರಾಗಿದ್ದಾರೆ. 2017-18ರಲ್ಲಿ ಮತ್ತು ಖಿಗೆ ರಾಜ್ಯದ ಯೋಜನಾ ವೆಚ್ಚದ ಶೇ.26.26ರಷ್ಟು ನಿಗದಿಪಡಿಸಿದರು. 2013-14 ರಿಂದ 2016-17 ವರೆಗೆ ಯೋಜನಾ ವೆಚ್ಚದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪಾಲು ನಿಗದಿ ಮಾಡಿದ್ದರೆ ಒಟ್ಟು 9 ವರ್ಷಗಳಲ್ಲಿ ಒದಗಿಸಬೇಕಾದ ಹಂಚಿಕೆ 91163.00 ಕೋಟಿ ರು.ಗಳಷ್ಟಾಗುತ್ತಿತ್ತು. ಆದರೆ ಹಂಚಿಕೆಯಾದ ಹಣದಲ್ಲಿ ಉಪಯೋಗಿಸಿದ ಮೊತ್ತ 77157.97 ಕೋಟಿ ರುಗಳಷ್ಟೇ. ಅಂಕಿ ಅಂಶಗಳ ವ್ಯತ್ಯಾಸ ನೋಡಿದಾಗ ಸುಮಾರು 14 ಸಾವಿರ ಕೋಟಿ ರು ಹಣದ ಕೊರತೆ ಕಾಣುತ್ತದೆ. ಅನುದಾನವನ್ನು ಹೆಚ್ಚುವರಿಯಾಗಿ ಪಡೆದು ದಲಿತ ಜನಾಂಗದ ಅಭಿವೃದ್ಧಿಗಾಗಿ ವಿನಿಯೋಗ

ಸಾಲ ಕೊಡಿಸುವುದು, ಮನೆ ಕೊಡಿಸುವುದು, ಅಕ್ಕಿ ಕೊಡಿಸುವುದು ಇಂತಹ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ಶಾಶ್ವತ ಆದಾಯದ ಮೂಲಗಳು ಸೃಷ್ಠಿಯಾಗುವುದಿಲ್ಲ. ಖಾಸಗಿ ಅಥವಾ ಸರಕಾರಿ ನೌಕರಿ ಅಥವಾ ಉಳುಮೆ ಮಾಡಲು ಭೂಮಿ ಒದಗಿಸಬೇಕು. ಇವುಗಳಲ್ಲಿ ಒಂದನ್ನು ಒದಗಿಸಿದರೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲರಾಗಲು ಸಾಧ್ಯ.

ದಲಿತ ಜನಾಂಗಕ್ಕೆ ಸಾಕಷ್ಟು ಹಣಕಾಸಿನ ಪಾಲುದಾರಿಕೆ ಸಿಕ್ಕಿದ್ದರೂ ಅದರ ಸಂಪೂರ್ಣ ಉಪಯೋಗ ಆಗುತ್ತಿಲ್ಲ. ದಲಿತರ ಪ್ರತಿ ಕುಟುಂಬದ ಆದಾಯ ವೃದ್ಧಿಗೆ ನಾಯಕರು ಶ್ರಮಿಸುತ್ತಿಲ್ಲ. ಕ್ಷೇತ್ರದಲ್ಲಿ ಆಯ್ಕೆಯಾಗಲು ಎಲ್ಲ ಸಮುದಾಯದವರ ಪ್ರೀತಿ ಸಂಪಾದಿಸಬೇಕು. ಕೇವಲ ದಲಿತರ ಕಾಳಜಿ ವಹಿಸಿದರೆ ನಮಗೆ ಸೋಲಾಗಬಹುದು ಎಂಬ ಭ್ರಮೆಯಲ್ಲಿ ದಲಿತ ನಾಯಕರಿದ್ದಾರೆ.

ಶಿಕ್ಷಣದಲ್ಲಿ ಹಿಂದುಳಿದು, ನಿರುದ್ಯೋಗಿಗಳಾಗಿ, ಬಡತನ, ಭೂ ರಹಿತ ಹಿನ್ನೆಲೆ, ಮನೆ ಇಲ್ಲದಿರುವುದು, ಆರೋಗ್ಯದಲ್ಲಿ ಏರುಪೇರು, ಸರಕಾರದಲ್ಲಿ ಕಡಿಮೆ ಸಂಖ್ಯೆಯಲ್ಲಿ ಪ್ರತಿನಿಧಿಸುವಿಕೆ, ಕಡಿಮೆ ಸಂಖ್ಯೆಯಲ್ಲಿ ಉನ್ನತ ಹುದ್ದೆಗಳಲ್ಲಿ ಪ್ರತಿನಿಧಿಸುವಿಕೆ ಎಲ್ಲ ಸಮಸ್ಯೆಗಳು .ಜಾತಿ ಮತ್ತು .ಪಂಗಡದ ಜನಾಂಗವನ್ನು ಸುತ್ತುವರೆದಿವೆ. ದೇಶದ ಜನರ ಸರಾಸರಿ ಬೆಳವಣಿಗೆ ದರದ ಪ್ರಮಾಣದಷ್ಟು ಕ್ಷೇತ್ರ ಗಳಲ್ಲಿ ಬೆಳವಣಿಗೆಯ ವೇಗ ಪಡೆದುಕೊಳ್ಳುವಲ್ಲಿ ದಲಿತ ಸಮುದಾಯಕ್ಕೆ ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ದಲಿತ ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆ. ನಾಯಕರಾಗಿ ಆಯ್ಕೆಯಾಗುವದಕ್ಕಿಂತ ಮುಂಚೆ ನೀಡಿದ ಭರವಸೆಗಳತ್ತ ಗಮನ ಹರಿಸುತ್ತಿಲ್ಲ.

ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ರಾಜಕೀಯ ಮೀಸಲಾತಿ ಮತ್ತು ರಾಜ್ಯ ಯೋಜನಾ ವೆಚ್ಚದಲ್ಲಿ ಮೀಸಲಾತಿಯನ್ನು ಸರಕಾರಗಳು ಕಲ್ಪಿಸಿವೆ. ಹಾಗೆಯೇ ಸಿಬಿಎಸ್‌ಸಿ, ಉನ್ನತ ಶಿಕ್ಷಣ, ವೈದ್ಯ ಶಿಕ್ಷಣ, ಖಾಸಗಿ ಮತ್ತು ಸರಕಾರಿ ನೌಕರಿಯಲ್ಲಿಯೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸುವ ದಲಿತ ನಾಯಕರು ಶ್ರಮಿಸಬೇಕಾಗಿದೆ.

ಎಲ್ಲ ವಿಭಾಗಗಳಲ್ಲಿ ಮೀಸಲಾತಿ ಕಲ್ಪಿಸಲು ಅಗತ್ಯವಾಗಿ ಬೇಕಾದ ಕಾನೂನು ರೂಪಿಸಲು ಮತ್ತು ಈಗಿರುವ ಕಾನೂನುಗಳ ತಿದ್ದು ಪಡಿಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮೇಲೆ ಒತ್ತಡ ತರುವ ಪ್ರಯತ್ನ ಮಾಡಬೇಕಾಗಿದೆ. ಕಳೆದ ಚುನಾವಣೆಯಲ್ಲಿ ಆಯ್ಕೆಯಾದ 54 ವಿಧಾನಸಭಾ ಸದಸ್ಯರು ಒಟ್ಟಾಗಿ ತಮ್ಮ ಜನಾಂಗದ ಅಭಿವೃದ್ಧಿಗೆ ಹೋರಾಟ ಮಾಡಬೇಕಿದೆ. ರಾಜಕೀಯ ಮೀಸಲಾತಿ ಪಡೆದ ದಲಿತ ನಾಯಕರು ಉಳಿದ ವಲಯಗಳಲ್ಲೂ ಮೀಸಲಾತಿ ತಂದು ಸಮಾನತೆ ಮತ್ತು ಸಾಮರಸ್ಯಕ್ಕೆ ದಲಿತರೆಲ್ಲರೂ ಒಟ್ಟಾಗಿ ದಲಿತ ರಾಜಕೀಯ ನಾಯಕರ ವಿರುದ್ಧವೇ ಹೋರಾಟ ಮಾಡುವ ಪರಿಸ್ಥಿತಿ ಬಂದೊದಗಬಹುದು.

ರಾಜಕೀಯ ನಾಯಕರು ಚುನಾವಣೆ ಬಂದಾಗ ಮತ ಸೆಳೆಯಲು ಸಾರಾಯಿ ಹಾಗೂ ಪ್ರತಿ ಓಟಿಗೆ ನೂರರಿಂದ ಐನೂರು ರೂಪಾಯಿ ಹಂಚಿಕೆ ಮಾಡುತ್ತಾರೆ. ಜನರು ಕ್ಷಣಿಕ ಸುಖಕ್ಕೆ ಮರುಳಾಗಿ ಇವರೇ ನಮ್ಮ ಅನ್ನದಾತರೆಂದು ಭಾವಿಸಿ ಇವರನ್ನೇ ಶ್ರೇಷ್ಠ ರಾಜಕಾರಣಿ ಗಳೆಂದು ಕರೆಯುತ್ತಾರೆ. ಹೀಗಾಗಲು ಪ್ರಮುಖ ಕಾರಣ ಶಿಕ್ಷಣದ ಕೊರತೆ ಮತ್ತು ಪ್ರಜಾಪ್ರಭುತ್ವದ ತತ್ವಗಳ ಬಗ್ಗೆ ಮಾಹಿತಿ ಕೊರತೆ. ಚುನಾವಣೆ ಬಂದಾಗ ಮಾತ್ರ ಕಣ್ಣಿಗೆ ಕಾಣುವ ದಲಿತ ಸಮುದಾಯದವರು ನಾಯಕರಾಗಿ ಆಯ್ಕೆ ನಂತರ ತರುವಾಯ ಕಣ್ಣಿಗೆ ಕಾಣಿಸುವುದಿಲ್ಲ.

ಈಗಾಗಲೆ ಸರಕಾರಿ ನೌಕರಿ ಅಥವಾ ಖಾಸಗಿ ನೌಕರಿ ಅಥವಾ ಕೃಷಿ ಭೂಮಿ ಹೊಂದಿರುವ ಎಸ್‌ಸಿ/ಎಸ್‌ಟಿ ಕುಟುಂಬಗಳನ್ನು ಹೊರತು ಪಡಿಸಿ, ಕೂಲಿ ಮಾಡಿ, ಭಿಕ್ಷೆ ಬೇಡಿ, ಶಿಕ್ಷಣವಿಲ್ಲದೆ ಬದುಕುತ್ತಿರುವ ಕುಟುಂಬಗಳ ಸಂಖ್ಯೆ ಪಡೆದು ಅವರಿಗೆ ಖಾಸಗಿ ಅಥವಾ ಸರಕಾರಿ ನೌಕರಿ ಅಥವಾ ಉಳಿಮೆ ಮಾಡಲು ಭೂಮಿ ಯಾವುದಾದರೊಂದನ್ನು ಒದಗಿಸಲು ಎಲ್ಲಾ ಶಾಸಕರು ಹೋರಾಡಿದರೆ ಅದು ಸಾಧ್ಯವಿದೆ.

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್‌ರವರು ಹೇಳಿದ, ಬೋಧಿಸಿದ ಪಾಠಗಳನ್ನು ದಲಿತ ಜನಾಂಗಕ್ಕೆ ತಿಳಿಹೇಳುವ ಬದಲಾಗಿ ಅವರ ಕಾರ್ಯಕ್ರಮಗಳನ್ನು ಜಾರಿಗೆ ತಂದರೆ ಈಗಿರುವ ದಲಿತ ನಾಯಕರು ಅಂಬೇಡ್ಕರ್ ಅವರ ನಿಜ ಅನುಯಾಯಿಗಳು ಎನಿಸುತ್ತಾರೆ. ಪಕ್ಷ ರಾಜಕೀಯ, ದ್ವೇಷ ಬಿಟ್ಟು, ತಮ್ಮ ಜನಾಂಗದ ಉದ್ಧಾರಕ್ಕಾಗಿ ಒಂದಾಗಿ ಹೋರಾಡಿದರೆ ಅದೊಂದು ಕ್ರಾಂತಿಯಾಗಿ, ದೇಶದ ತುಂಬೆಲ್ಲ ಹರಡುತ್ತದೆ. ನಾಯಕರು ಒಂದಾಗಿ ಹೋರಾಡಿದರೆ ಸರಕಾರವೂ ಸಂಪೂರ್ಣ ಬೆಂಬಲ ನೀಡುತ್ತದೆ.

ದೇಶದ ಸಾಕ್ಷರತಾ ಶೇ.74.04ರಷ್ಟಿದೆ. ಆದರೆ ಪರಿಶಿಷ್ಟ ಜಾತಿಯ ಸಾಕ್ಷರತಾ ಪ್ರಮಾಣ ಶೇ.66.10ರಷ್ಟಿದೆ. ಕರ್ನಾಟಕದ ಸಾಕ್ಷರತಾ ಪ್ರಮಾಣ ಸರಾಸರಿ ಶೇ.75.36ರಷ್ಟಿದ್ದು, .ಜಾತಿಯವರ ಸಾಕ್ಷರತಾ ಪ್ರಮಾಣ ಶೇ.65.30ರಷ್ಟಿದ್ದು, .ಪಂಗಡದ ಸಾಕ್ಷರತಾ ಪ್ರಮಾಣ ಶೇ.62.10ರಷ್ಟಿದೆ.

ಅಂಕಿ ಅಂಶ ಪ್ರಕಾರ ಸರಾಸರಿ ರಾಜ್ಯದ ಸಾಕ್ಷರತಾ ಪ್ರಮಾಣದಷ್ಟು ತಲುಪಲು ದಲಿತ ರಾಜಕೀಯ ನಾಯಕರು ತಮ್ಮ ಸಮುದಾಯಕ್ಕಾಗಿ ಸರಕಾರದಿಂದ TATP ಮತ್ತು ಅಡಿಯಲ್ಲಿ ಮೀಸಲಿಟ್ಟ ಅನುದಾನವನ್ನು ಸಂಪೂರ್ಣವಾಗಿ ಉಪಯೋಸಿ ಕೊಳ್ಳಬೇಕು. ಹೀಗಾದಾಗಲೇ ಕೆಲ ವರ್ಷಗಳಲ್ಲಿ ರಾಜ್ಯದ ಎಸ್‌ಸಿ/ಎಸ್‌ಟಿ ಸಾಕ್ಷರತಾ ಪ್ರಮಾಣವೂ ಹೆಚ್ಚಾಗುತ್ತದೆ.

ಎಸ್‌ಸಿ/ಎಸ್‌ಟಿ ಸಮುದಾಯದವರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಅನುದಾನ ಒದಗಿಸಲು 2013ರಲ್ಲಿ .ಜಾತಿ ಮತ್ತು .ಪಂಗಡಗಳ ಸಮಗ್ರ ಅಭಿವೃದ್ಧಿ ಕಾಯಿದೆಯನ್ನು ಕರ್ನಾಟಕ ಜಾರಿಗೆ ತಂದಿದೆ. ಕಳೆದ ಐದು ವರ್ಷಗಳಲ್ಲಿ ಕಾಯಿದೆಯ ಬಲದಿಂದಾಗಿ .ಜಾತಿ ಮತ್ತು .ಪಂಗಡಗಳ ಅಭಿವೃದ್ಧಿಗೆ ಬಜೆಟ್‌ಗಳಲ್ಲಿ 88395.00 ಕೋಟಿ ರು ಅನುದಾನ ಒದಗಿಸಿದ್ದರೂ ಹಣ ಸಂಪೂರ್ಣ ಉಪಯೋಗವಾಗಿಲ್ಲ.

ರಾಜ್ಯದಲ್ಲಿ ಸುಮಾರು ಶೇ.24.40ದಷ್ಟು ಇರುವ .ಜಾತಿ ಮತ್ತು .ಪಂಗಡಗಳ ಒಟ್ಟು ಕುಟುಂಬಗಳ ಸಮಗ್ರ ಮಾಡಿಸಬೇಕು, ಪ್ರತಿ ಕುಟುಂಬದ ಆದಾಯದ ಮೂಲವೇನಿದೆ ಎನ್ನುವದನ್ನು ಪರಾಮರ್ಶೆ ಮಾಡಬೇಕು.

ಎಲ್ಲಾ ದಲಿತ ಕುಟುಂಬದವರಿಗೆ ಶಾಶ್ವತ ಆದಾಯದ ಮೂಲ ಇದೆಯೇ ಎಂಬುದನ್ನು ಅಧ್ಯಯನದಿಂದ ಖಾತರಿ ಪಡಿಸಿ ಕೊಳ್ಳಬೇಕು. ನೌಕರಿಯೂ ಇಲ್ಲ, ಭೂಮಿಯೂ ಇಲ್ಲ ಎನ್ನುವ ಕುಟುಂಬಗಳ ಯಾದಿಯನ್ನು ಕ್ಷೇತ್ರ ಮಟ್ಟದಲ್ಲಿ ತಯಾರಿಸಿ, ಅವರಿಗೆ ಖಾಸಗಿ ಅಥವಾ ಸರ್ಕಾರಿ ನೌಕರಿ ಅಥವಾ ಉಳಿಮೆ ಮಾಡಲು ಭೂಮಿ ಇವುಗಳಲ್ಲಿ ಒಂದನ್ನು ಒದಗಿಸಲು ಸರಕಾರ ಮೀಸಲಿಟ್ಟ ರಾಜ್ಯ ಯೋಜನಾ ವೆಚ್ಚದ ಒಂದು ಭಾಗದಲ್ಲಿ (TATP, UTP ಅಡಿಯಲ್ಲಿ) ಪರಿಹಾರ ಕಂಡುಕೊಳ್ಳಲು ಪ್ರಯತ್ನ ಪಡಬೇಕು.

ಸಂವಿಧಾನವು ಎಲ್ಲಾ ಪ್ರಜೆಗಳ ಮಧ್ಯ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಮಾನತೆ ಸೃಷ್ಠಿಸಲು ಅವಕಾಶ ಕಲ್ಪಿಸಿದೆ. ಸಮಾಜದಲ್ಲಿ ತುಳಿತಕ್ಕೊಳಗಾದವರ ಅಭಿವೃದ್ಧಿಗೆ ಸಾಕಷ್ಟು ಕಾನೂನುಗಳಿವೆ, ಜನರಿಗೆ ಆರೋಗ್ಯದಲ್ಲಿ, ಶಿಕ್ಷಣದಲ್ಲಿ, ಪ್ರತಿ ಕುಟುಂಬಕ್ಕೆ ಆದಾಯ ಸೃಷ್ಠಿಸಲು ಸಮಾನ ಅವಕಾಶಗಳಿವೆ. ಇದಕ್ಕಾಗಿ ಸರಕಾರ ಹಣ ಮೀಸಲಿಟ್ಟರೂ ಅದು ಸದುಪಯೋಗ ಆಗಿತ್ತಿಲ್ಲ ಎಂಬುದೇ ಸದ್ಯದ ಕೊರಗು. ಸರಕಾರದ ಕಾರ್ಯಕ್ರಮಗಳ ಸಂಪೂರ್ಣ ಅನುಷ್ಠಾನಕ್ಕೆ ದಲಿತ ನಾಯಕರೇ ಇಚ್ಛಾಶಕ್ತಿ

Tags

Related Articles

Leave a Reply

Your email address will not be published. Required fields are marked *

Language
Close