About Us Advertise with us Be a Reporter E-Paper

Breaking Newsದೇಶಪ್ರಚಲಿತ

ಮೋದಿ ಸರಕಾರ ಮಾಡಿಕೊಂಡ ರಫೇಲ್ ಒಪ್ಪಂದವೇ ಅತ್ಯುತ್ತಮವಾಗಿದೆ: ನಿರ್ಮಲಾ ಸೀತಾರಾಮನ್

ದೆಹಲಿ: ಫ್ರಾನ್ಸ್‌ನ ಡಸಾಲ್ಟ್ ಏವಿಯೇಶನ್ ಸಹಯೋಗದಲ್ಲಿ ಯುದ್ಧ ವಿಮಾನಗಳನ್ನು ನಿರ್ಮಿಸುವ ಸಾಮರ್ಥ್ಯ ಎಚ್‌ಎಎಲ್‌ಗೆ ಇರಲಿಲ್ಲ. ಯುಪಿಎ ಆಡಳಿತದ ಅವಧಿಯಲ್ಲಿ ಮಾಡಿಕೊಂಡಿದ್ದ 126 ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದ ಮುರಿದು ಬೀಳಲು ಇದು ಪ್ರಮುಖ ಕಾರಣ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

ದೆಹಲಿಯ ಸುದ್ದಿ ಸಂಸ್ಥೆಯೊಂದು ಹಮ್ಮಿಕೊಂಡಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಫೇಲ್ ಒಪ್ಪಂದ ಕುರಿತ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರ ನೀಡಿದರು. ಅಲ್ಲದೆ ಪ್ರಧಾನಿ ಮೋದಿ ನೇತೃತ್ವದ ಸರಕಾರ ಮಾಡಿಕೊಂಡ ಒಪ್ಪಂದವೇ ಅತ್ಯುತ್ತಮವಾಗಿದೆ ಎಂದೂ ಪ್ರತಿಪಾದಿಸಿದರು.

2013ರಲ್ಲಿ ರಫೇಲ್ ಯುದ್ಧ ವಿಮಾನ ಖರೀದಿಗಾಗಿ ದರ ನಿಗಧಿ ಕುರಿತ ಸಮಿತಿ ಅಂತಿಮ ಹಂತದ ರೂಪ ನೀಡುತ್ತಿದ್ದಾಗ ಅಂದು ರಕ್ಷಣಾ ಸಚಿವರಾಗಿದ್ದ ಎ.ಕೆ.ಆಂಟನಿ ಅವರು ಏಕಾಏಕಿ ಮಧ್ಯೆ ಪ್ರವೇಶಿಸುವ ಮೂಲಕ ಈ ಒಪ್ಪಂದದ ಶವ ಪೆಟ್ಟಿಗೆಗೆ ಅಂತ ಮೆಳೆ ಹೊಡೆಯಲು ಕಾರಣವಾಯಿತು ಎಂದರು.

ರಫೇಲ್ ಯುದ್ಧ ವಿಮಾನಗಳ ಖರೀದಿ ಸಂಬಂಧ ಎಚ್‌ಎಎಲ್ ಮತ್ತು ಡಸಾಲ್ಟ್ ಏವಿಯೇಶನ್ ನಡುವೆ ಹಲವು ಸುತ್ತಿನ ಮಾತುಕತೆಗಳು ನಡದವು. ಒಂದು ವೇಳೆ ಭಾರತದಲ್ಲಿ ಈ ಯುದ್ಧ ವಿಮಾನಗಳನ್ನು ತಯಾರಿಸಿದ್ದರೆ ಬೆಲೆಗಳು ಹಲವು ಪಟ್ಟು ಹೆಚ್ಚಾಗಲಿದೆ ಎಂದು ತಿಳಿದು ಬಂದಿತು. ಜತೆಗೆ ಭಾರತದಲ್ಲೇ ತಯಾರಿಸಿದರೆ ಅದಕ್ಕೆ ಖಾತ್ರಿ ನೀಡಬೇಕಾಗುತ್ತಿತ್ತು. ಆದರೆ ಖಾತ್ರಿ ನೀಡುವ ಪರಿಸ್ಥಿತಿಯಲ್ಲಿ ಎಚ್‌ಎಎಲ್ ಆದರೆ ಈ ವಿಮಾನಗಳಿಗೆ ವಾಯುಪಡೆ ಖಾತ್ರಿ ಬೇಕೆಂದು ಬಯಸಿತ್ತು. ಎಚ್‌ಎಎಲ್‌ಗೆ ಸಂಪನ್ಮೂಲಗಳನ್ನು ಒದಗಿಸುವುದಾಗಿ ಅಂದಿನ ಸರಕಾರ ಭರವಸೆ ನಿಡಿತ್ತಾದರೂ ಹಾಗೆ ನಡೆದುಕೊಳ್ಳಲಿಲ್ಲ. ಆದ್ದರಿಂದ ಈ ಮಾತುಕತೆಯಲ್ಲಿ ಹೆಚ್ಚಿನ ಪ್ರಗತಿಯಾಗಲಿಲ್ಲ ಎಂದರು.

ಶೇ. 9ರಷ್ಟು ಅಗ್ಗ: ಯುಪಿಎ ಅವಧಿಯಲ್ಲಿನ ಒಪ್ಪಂದಕ್ಕೆ ಹೋಲಿಸಿದರೆ 2019ರ ಸೆಪ್ಟಂಬರ್‌ನಲ್ಲಿ ರಫೇಲ್ ಯುದ್ಧ ವಿಮಾನಗಳು ಭಾರತದ ಕೈ ಸೇರಲಿವೆ. ಈ ವಿಮಾನಗಳು ಶಸ್ತ್ರ ಬಳಕೆ, ವಿಮಾನಗಳಿಗೆ ಸಂಬಧಿಸಿದ ಎಲೆಕ್ಟ್ರಾನಿಕ್ ತಾಂತ್ರಿಕತೆ ಸೇರಿದಂತೆ ಹಲವು ವಿಚಾರಗಳಲ್ಲಿ ಉನ್ನತ ಮಟ್ಟದ ಹೊಂದಿರುತ್ತವೆ. ಈ ವಿಮಾನಗಳು ಈ ಹಿಂದೆ ನಿಗಧಿಯಾಗಿದ್ದ ದರಕ್ಕಿಂತಲೂ ಶೇ. 9ರಷ್ಟು ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿವೆ ಎಂದರು.

2012ರಲ್ಲಿ ಯುಪಿಎ ಸರಕಾರ 126 ಮಧ್ಯಮ ಶ್ರೇಣಿಯ ಬಹುಮುಖಿ ಸಾಧ್ಯತೆಗಳಿರುವ ಯುದ್ಧ ವಿಮಾನಗಳ ಖರೀದಿಗೆ ಮಾತುಕತೆ ಆರಂಭಿಸಿತ್ತು. ಡಸಾಲ್‌ಟ್ ಏವಿಯೇಷನ್ 18 ರಫೇಲ್ ಯುದ್ಧ ವಿಮಾನಗಳನ್ನು ಹಾರಾಟ ನಡೆಸಲು ಸನ್ನದ್ಧವಾಗಿರುವ ಸ್ಥಿತಿಯಲ್ಲಿ ಭಾರತಕ್ಕೆ ಸರಬರಾಜು ಮಾಡಬೇಕು. ಎಚ್‌ಎಎಲ್ ಸಹಯೋಗದಲ್ಲಿ ಉಳಿದ 108 ಯುದ್ಧ ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸಬೇಕು ಎನ್ನುವ ಷರತ್ತುಗಳನ್ನು ಆದರೆ ಈ ಒಪ್ಪಂದ ಅಂತಿಮ ರೂಪಕ್ಕೆ ಬರಲಿಲ್ಲ ಎಂದರು.

Tags

Related Articles

Leave a Reply

Your email address will not be published. Required fields are marked *

Language
Close