About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಪುಲ್ವಾಮದಲ್ಲಿ ದಾಳಿ ನಡೆಸಿದ ಉಗ್ರನೊಂದಿಗೆ ರಾಹುಲ್…!

ಫೋಟೊ ತಿರುಚಿ ವಿಕೃತಿ ಮೆರೆದ ಕಿಡಿಗೇಡಿಗಳು

ದೆಹಲಿ: ನಿನ್ನೆ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ನಡೆದು 40 ಸೈನಿಕರು ಹುತಾತ್ಮರಾಗಿರುವ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿರುವ ನಡುವೆಯೇ ಕೆಲವು ಕಿಡಿಗೇಡಿಗಳು ಈ ಘಟನೆಯನ್ನು ರಾಜಕೀಯಕ್ಕಾಗಿ ಬಳಸುತ್ತಿದ್ದಾರೆ.

“ಪುಲ್ವಾಮಾ ಉಗ್ರ ದಾಳಿ ನಡೆಸಿದ ಆದಿಲ್ ಅಹ್ಮದ್ ದಾರ್ ಜೊತೆ ರಾಹುಲ್ ಗಾಂಧಿ’ ಎನ್ನುವ ಫೋಟೊವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈಗಾಗಲೇ ಈ ಫೋಟೊವನ್ನು ಹಲವರು ಶೇರ್ ಮಾಡಿದ್ದಾರೆ.

ಸೈನಿಕರಿದ್ದ ಬಸ್ ಮೇಲೆ ದಾಳಿ ನಡೆಸಿದ್ದ ದಾರ್ ವರ್ಷದ ಹಿಂದೆಯಷ್ಟೇ ಉಗ್ರ ಸಂಘಟನೆಗೆ ಸೇರಿದ್ದ. ಸುಮಾರು 350 ಕೆ.ಜಿ. ಸ್ಫೋಟಕಗಳಿದ್ದ ಕಾರನ್ನು ಬಸ್ ಢಿಕ್ಕಿ ಹೊಡೆಸಿ ದಾರ್ ಈ ದಾಳಿ ನಡೆಸಿದ್ದ. ಇದೀಗ ಇದೇ ಉಗ್ರನೊಂದಿಗೆ ರಾಹುಲ್ ಗಾಂಧಿಯ ಫೋಟೊ ಎನ್ನುವ ಹಸಿ ಸುಳ್ಳಿನೊಂದಿಗೆ ಫೋಟೊವನ್ನು ವೈರಲ್ ಮಾಡಲಾಗುತ್ತಿದೆ.

Tags

Related Articles

Leave a Reply

Your email address will not be published. Required fields are marked *

Language
Close