About Us Advertise with us Be a Reporter E-Paper

ಅಂಕಣಗಳು

ಈ ಅನಿಷ್ಟ ಪದ್ಧತಿಯನ್ನೇಕೆ ಯಾರೂ ಪ್ರತಿಭಟಿಸುವುದಿಲ್ಲ?

ಕುಲಕರ್ಣಿ

ಯದಹರೇವ ವಿರಜೇತ್ ತದಹರೇವ ಪ್ರವ್ರಜೇತ್ (ಯಾವ ದಿನ, ಯಾವ ಹೊತ್ತು ವೈರಾಗ್ಯ ಸಂಪನ್ನನಾಗುವನೋ ಅದೇ ದಿನ, ಅದೇ ಕ್ಷಣ ಸನ್ಯಾಸ ಸ್ವೀಕರಿಸಬೇಕು) ಇದನ್ನು ಶ್ರೀ ಪಲಿಮಾರು ಮಠಾಧೀಶರು ಹೇಳಿದ್ದಾರೆಂದು  ರೋಹಿತ್ ಚಕ್ರತೀರ್ಥರು ‘ಬಾಲ ಸನ್ಯಾಸಕ್ಕಿದು ಕಾಲವಲ್ಲ’ ಎಂಬ ತಮ್ಮ ಅಂಕಣ ಬರಹದಲ್ಲಿ ಉಲ್ಲೇಖಿಸಿದ್ದಾರೆ. ಈ ಹೇಳಿಕೆಗೆ ನನ್ನ ಅನುಮೋದನೆ ಇದೆ. ಆದರೆ ಬಾಲಕರಿಗೆ ವೈರಾಗ್ಯವುಂಟಾಗುವದು ಹೇಗೆ? ವೈರಾಗ್ಯ ಮೂಡದೇ ಸನ್ಯಾಸಿಯಾದರೆ ಈಗ ಶೀರೂರು ಮಠದಲ್ಲಿ ನಡೆದ  ನಡೆಯುತ್ತಲೇ ಹೋಗುತ್ತವೆ, ಇರಲಿ.

ನಮ್ಮ ದೇಶದಲ್ಲಿ ಸತೀ ಪದ್ಧತಿ ಅತ್ಯಂತ ಹೇಯವೆಂದು, ಬಾಲ್ಯವಿವಾಹ ಹೇಯವೆಂದು, ಅವು ಧಾರ್ಮಿಕ ಅಂಶಳಾಗಿದ್ದರೂ ಅವನ್ನು ಹೋಗಲಾಡಿಸಲು ಹೋರಾಡಿ ಕಾನೂನು ಮಾಡಿಸಿದರು. ಅದರಿಂದ ಭಾರತದ ಮಹಿಳೆಯರ ಅದೆಷ್ಟೋ ಸಂಕಷ್ಟಗಳು ದೂರವಾಗಿವೆ. ಆದರೆ ಈ ಮಹನೀಯರಿಗೆ ಸನ್ಯಾಸದ ಹೆಸರಲ್ಲಿ ಬಾಲಕರನ್ನು ಶೋಷಿಸುವ ಈ ಬಾಲ ಸನ್ಯಾಸದ ಕ್ರೂರತೆ ಏಕೆ ಕಾಣಿಸಲಿಲ್ಲವೋ? ಅದೂ ಸಹ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಯಂತೆ ಹೇಯವೆಂದೇಕೆ ಅನಿಸಲಿಲ್ಲ?

ಅವತ್ತು ನಮ್ಮ ಸುಧಾರಕರಿಗೆ ಅದಕ್ಕಿಂತಲೂ  ಪಟ್ಟು ಕ್ರೂರವಾದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಬೇಕಿದ್ದುದರಿಂದ ಅವರು ಬಾಲ ಸನ್ಯಾಸದ ಕ್ರೂರತೆ ಬಗ್ಗೆ ಅಷ್ಟೊಂದು ಗಮನ ಹರಿಸಿರಲಿಕ್ಕಿಲ್ಲ. ಆದರೆ , ಮಾತೆತ್ತಿದರೆ ಹಿಂದೂ ಧರ್ಮದ ಹುಳುಕುಗಳನ್ನು ಹೇಳುತ್ತಾ, (ಹಿಂದೂ ಅಂತ ಒಂದು ಧರ್ಮವೇ ಇಲ್ಲವೆಂದು ಹೇಳುವವರೂ ಇವರೇ!!) ಅವುಗಳ ಅನಿಷ್ಟ ಪದ್ಧತಿಯನ್ನು ಭೂತಗನ್ನಡಿಯಲ್ಲಿ ತೋರುತ್ತಾ, ಟೆಲಿವಿಷನ್ ಚರ್ಚೆಗಳಲ್ಲಿ ಗಂಟಲು ಹರಿದುಕೊಳ್ಳುವ ಭಾರತದ ಬುದ್ಧಿಜೀವಿಗಳಿಗೂ ಈ ಬಾಲ ಸನ್ಯಾಸದ ಅನಿಷ್ಟ ಕುರಿತು ಹೋರಾಟ ಮಾಡಿ ಕಾನೂನು ಮಾಡಿಸುವ ಬುದ್ಧಿ  ಬರಲೇ ಇಲ್ಲವೇಕೋ ಕಾಣೆ.

ಏನೂ ತಿಳಿಯದ ಮುದ್ದು ಕಂದಮ್ಮನನ್ನು ತಮ್ಮ ಸ್ವಾರ್ಥ ಸಾಧನೆಗಾಗಿ ಸನ್ಯಾಸದಂಥ ಕಠಿಣ ಶಿಕ್ಷೆಗೆ ಒಳಪಡಿಸುವ ತಂದೆ ತಾಯಿಗಳು ನಿಜಕ್ಕೂ ಮನಷ್ಯರಾ ಎಂದು ಯೋಚಿಸಬೇಕಿದೆ. ಅವನನ್ನುಶಿಕ್ಷಣದ ಹಕ್ಕು, ಮನರಂಜನೆಯ ಹಕ್ಕು, ಆಟವಾಡುವ ಹಕ್ಕು ಎಲ್ಲವುಗಳಿಂದ ವಂಚಿಸುವ ಈ ತಂದೆ ತಾಯಿ, ಮತ್ತು ಮಠದ ಮುಖ್ಯಸ್ಥರಿಗೆ ಯಾಕೆ ಯಾರೂ ಶಿಕ್ಷೆ ಕೊಡುವುದಿಲ್ಲ. ಭಾರತದ ಸಂವಿಧಾನದ ಪ್ರಕಾರ ಶಿಕ್ಷಣ ಪಡೆಯುವದು, ಮೂಲಭೂತ ಹಕ್ಕಿನಡಿಯಲ್ಲಿ ಬರುತ್ತದೆ. ಅದನ್ನೇ ಉಲ್ಲಂಘಿಸಿದವರಿಗೆ ಯಾವ  ಇಲ್ಲವಾ?!

ಮಠದಲ್ಲಿ ಶಿಕ್ಷಣ ಕೊಡಲಾಗುತ್ತದೆ ಎಂದು ಸಬೂಬು ಹೇಳಬಹುದು. ಆದರೆ ಆ ಶಿಕ್ಷಣ ಇವತ್ತಿನ ಬದುಕಿಗೆ ಪೂರಕವೆ? ವಿದ್ಯಾಭೂಷಣರು ಒಂದು ಬ್ಲಾಗ್‌ನಲ್ಲಿ ತಮ್ಮ ಆತ್ಮಚರಿತ್ರೆ ಬರೆದರು. ಅದರಲ್ಲಿ ಅವರು ‘ನಾನು ಸನ್ಯಾಸ ಬಿಟ್ಟು ಗೃಹಸ್ತನಾಗಬೇಕೆಂ ದೇನೋ ಸಂಕಲ್ಪ ಮಾಡಿದೆ. ಆದರೆ ಬದುಕಿಗೆ ಒಂದು ನೌಕರಿಯಾ ದರೂ ಬೇಕಲ್ಲಾ? ನನಗಿರುವ ವಿದ್ಯೆ ಎಂದರೆ ಸಂಸ್ಕೃತ ಜ್ಞಾನ, ಮಧ್ವ ಸಿದ್ಧಾಂತದ ಕೆಲ ಗ್ರಂಥಗಳ ಜ್ಞಾನ, ಸುಧಾ ಪಾಠ. ಇವುಗಳಿಂದ ನನಗೆ ಯಾರು  ಕೊಡಲು ಸಾಧ್ಯ?’  ಎಂದು ಕೇಳುತ್ತಾರೆ.

 ‘ನವಜೋಡಿಗಳನ್ನು ನೋಡಿದಾಗ ಆ ಸುಖದಿಂದ ನಾನು ಶಾಶ್ವತ ವಂಚಿತನು. ನನ್ನದೇ ಆದ ಸಂಸಾರ, ಪುಟ್ಟ ಮಗು ಇವೆಲ್ಲ ನನಗೆಂದೂ ನಿಲುಕದ ನಕ್ಷತ್ರವೆನಿಸಿ ಅನೇಕ ರಾತ್ರಿ ಕಣ್ಣೀರುರೆದಿದ್ದೇನೆ. ಮಠದ ಪಕ್ಕದ ಬಯಲಿನಲ್ಲಿ ನನ್ನ ಗೆಳೆಯರಾಡುವ ಆಟಗಳನ್ನು ನೋಡಿದಾಗಲೂ ನಾನು ಆಡುವಂತಿಲ್ಲವಲ್ಲ ಎನಿಸಿ ಅತ್ತಿದ್ದೇನೆ’ ಎಂದು ಅವರು ಬರೆದದ್ದು ಓದುವಾಗ ನನಗಂತೂ ಅವರ ತಂದೆ ತಾಯಿಗಳ ಮೇಲೆ ಅಪಾರ ಸಿಟ್ಟು ಬಂದಿತ್ತು. ಬಾಲಕರ ಬಾಲ್ಯ ಕಸಿಯುವ  ಪದ್ಧತಿ ಅವರ ಕೊಲೆ ಮಾಡುವಷ್ಟೇ ಕ್ರೂರವಾದದ್ದೆಂದು ನನಗನಿಸುತ್ತದೆ.

ಕೇವಲ ಉಡುಪಿ ಮಠ, ಬ್ರಾಹ್ಮಣರ ಮಠಗಳಲ್ಲಿ ಮಾತ್ರವೇ ಈ ಅನಿಷ್ಟ ಪದ್ಧತಿ ಆವರಿಸಿಕೊಂಡಿಲ್ಲ. ಸಮಸ್ತ ಹಿಂದೂ ಸಂಸ್ಕೃತಿಗಳಲ್ಲೂ ಈ ಅನಿಷ್ಟ ವಕ್ಕರಿಸಿದೆ. ಬೌದ್ಧ, ಲಿಂಗಾಯತ, ವೀರಶೈವ, ಜೈನ, ಇತ್ಯಾದಿಗಳಲ್ಲೂ ಈ ಕೆಟ್ಟ ಪದ್ಧತಿ ಇದೆ. ಇದಕ್ಕೆ ತಂದೆ ತಾಯಿಗಳ ಸ್ವಾರ್ಥ, ಕೆಲವು ಸಲ ಮಠದ ಮುಖ್ಯಸ್ಥರ ಸ್ವಾರ್ಥ ನಿಸ್ಸಂಶಯವಾಗಿ ಕಾರಣವಾಗಿವೆ. ಮಠಗಳು ಸಂಪತ್ತಿನ ಆಗರಳಾಗುತ್ತ ಹೋದಂತೆ ಈ ಬಾಲಕರ ಬವಣೆ  ಇದೆ.

ಲೇಖನದ ಆರಂಭದಲ್ಲಿ ಉಲ್ಲೇಖಿಸಿದ ಶ್ಲೋಕವನ್ನು ನೋಡಿದಾಗ ಬಾಲ ಸನ್ಯಾಸಕ್ಕೆ ಶಾಸ್ತ್ರದಲ್ಲಿ ಯಾವುದೇ ಸಮ್ಮತಿ ಇಲ್ಲವೆನ್ನುವದು ಸ್ಪಷ್ಟ. ಅಲ್ಲದೇ ಆಶ್ರಮ ಧರ್ಮದಲ್ಲೂ ಕೂಡಾ ಸನ್ಯಾಸವು ಕೊನೆಯ ಹಂತವಾಗಿದೆ. ಇವೆಲ್ಲವುಗಳ ಅರಿವಿದ್ದರೂ ಕೂಡಾ ಸ್ವಾಮಿಗಳು ತಿಳಿದೂ ತಿಳಿದೂ ಕಣ್ಣು ಮುಚ್ಚಿ ಬಾಲಕ ರನ್ನು ಸನ್ಯಾಸಕ್ಕೆ ತಳ್ಳುವುದು ನೋಡಿದರೆ ಇವರೆಷ್ಟು ಕ್ರೂರಿಗಳೆಂದು ಅನಿಸುತ್ತದೆ. ತಾವು ಬಾಲ ಸನ್ಯಾಸಿ ಆಗಿ ಸಾಕಷ್ಟು ಬವಣೆ ಪಟ್ಟರೂ ಕೂಡಾ ಮತ್ತೆ ಬಾಲ ಕರನ್ನು ತಮ್ಮ ಮುಂದಿನ  ಮಾಡುವುದು ಇವರಿಗೆ ಹೇಗೆ ಸಾಧ್ಯವಾಗುತ್ತದೋ ಆ ದೇವರೇ ಬಲ್ಲ! ಅಥವಾ ತನ್ನನ್ನು ಬಾಲಸನ್ಯಾಸಿ ಮಾಡಿದ ಸಿಟ್ಟನ್ನು ಹೀಗೆ ತೀರಿಸಿಕೊಳ್ಳು ತ್ತಾರೋ? (ವಿದ್ಯಾ ಭೂಷಣರು ಅವರ ತಮ್ಮನನ್ನೂ ಸನ್ಯಾಸಿಯನ್ನಾಗಿ ಮಾಡಲು ಹೊರಟಾಗ ಬಲವಾಗಿ ವಿರೋಧಿಸಿದರಂತೆ. ಇಂಥವರ ಆದರ್ಶ ಎಲ್ಲರಿಗೂ ಮಾರ್ಗದರ್ಶನವಾಗಲಿ)

ಮಠಗಳಲ್ಲಿ ನಡೆಯುವ ಎಲ್ಲಾ ಅನಾಚಾರಗಳಿಗೂ ಅನೇಕ ಕಾರಣಗಳಿರುತ್ತವಾದರೂ ಅವುಗಳಲ್ಲಿ ಬಾಲ ಸನ್ಯಾಸದ ಪಾತ್ರ ಬಹಳ ಮುಖ್ಯವಾಗಿದೆ. ಲೈಂಗಿಕ ತಜ್ಞ ವಿನೋದ ಛಬ್ಬಿ ಹೇಳುತ್ತಾರೆ, ‘ಗಂಡಸರು ಕ್ರಿಯಾಜೀವಿಗಳು ಹೆಂಗಸರು ಭಾವಜೀವಿಗಳು.  ಸಂಯಮ ಕಡಿಮೆ’ ಎಂದು. ಇಲ್ಲಿ ಮಠಾಧೀಶರದ್ದು ಮಾತ್ರ ತಪ್ಪು ಎಂದೆಣಿಸಬೇಕೆ? ಅವರನ್ನು ಆ ಸ್ಥಿತಿಗೆ ದೂಡಿದ ಸಮಾಜದ್ದು, ತಂದೆ ತಾಯಿಗಳದ್ದು, ಮಠಗಳ ಹಿರಿಯ ಮುಖ್ಯಸ್ಥರದ್ದೂ ತಪ್ಪಿಲ್ಲವೆ? ಇದೆಲ್ಲವನ್ನೂ ನೋಡಿ ಸುಮ್ಮನೇ ಕುಳಿತಿರುವ ವಿಚಾರವಾದಿಗಳದ್ದೂ, ಸಮಾಜ ಸುಧಾರಕರದ್ದೂ ತಪ್ಪಿಲ್ಲವೆ?

ಪಂಪನ ‘ಆದಿಪುರಾಣ’ದಲ್ಲಿ ಒಂದು ಘಟನೆ ಬರುತ್ತದೆ. ಆದಿನಾಥನು ನೀಲಾಂಜನೆಯ ನೃತ್ಯ ನೋಡುತ್ತಿರುತ್ತಾನೆ. ನಾಟ್ಯಾಂಗಣದ ತುಂಬಾ ಮಿಂಚಿನಂತೆ ಓಡಾಡುವ, ಪ್ರೇಕ್ಷಕರ ಕಣ್ಣುಗಳನ್ನು ಕ್ಷಣ ಮಾತ್ರಕ್ಕೂ ಅತ್ತಿತ್ತ ಹೊರಳದಂತೆ ಮೋಡಿ ಮಾಡಿದ ಶರೀರ  ಸ್ತಬ್ಧವಾದಾಗ ಜೀವನದ ನಶ್ವರತೆ ಕುರಿತು ಜ್ಞಾನ ಉಂಟಾಗಿ ಆ ಬಗ್ಗೆ ವೈರಾಗ್ಯ ತಾಳಿ ಸನ್ಯಾಸಿ ಯಾಗುತ್ತಾನೆ. ಹಾಗೆಯೇ ಬಾಹುಬಲಿ ಗೆದ್ದರೂ ಕೂಡ, ಅಣ್ಣ ತಮ್ಮಂದಿರನ್ನು ಹೊಡೆದಾಡುವಂತೆ ಮಾಡಿದ ರಾಜ್ಯಾಧಿಕಾರ, ಸಂಪತ್ತಿನ ಬಗ್ಗೆ ವೈರಾಗ್ಯ ತಾಳುತ್ತಾನೆ. ಹೀಗೆ ವ್ಯಕ್ತಿಯನ್ನು ವೈರಾಗ್ಯ ಸೆಳೆದಾಗ ಅವನು ಸನ್ಯಾಸಿ ಆದರೆ ಅದರಿಂದ ನಮ್ಮ ಮಠಗಳ ಮರ್ಯಾದೆ ಉಳಿಯುತ್ತದೆ. ಇಲ್ಲವಾದರೆ ಹಾಳಾಗುತ್ತದೆ.

ಕೊನೆಯದಾಗಿ ನನ್ನ ಆಶಯ ಇಷ್ಟೇ: ಯಾವ ಮತದಲ್ಲೇ ಇರಲಿ, ಸನ್ಯಾಸಿ ಆಗಲು ವ್ಯಕ್ತಿಗೆ  ಇಪ್ಪತ್ತೈದು ವರ್ಷವಾದರೂ ಆಗಿರಬೇಕು. ಬಾಲಕರನ್ನು ಸನ್ಯಾಸಿ ಮಾಡಿದರೆ, ಮೊದಲು ಸಂಬಂಧಿಸಿದ ಮಠಾಧೀಶರು ಅಥವಾ ಮಠದ ಮುಖ್ಯಸ್ಥರು, ನಂತರ ತಂದೆ ತಾಯಿಗಳು ಕಾನೂನು ಪ್ರಕಾರ ಅಪರಾಧಿಗಳೆಂಬ ಕಾನೂನು ತರಿಸುವಲ್ಲಿ ನಾವೆಲ್ಲರೂ ಸಕ್ರಿಯವಾಗಿ ಎಡ ಬಲ ಯಾವುದನ್ನೂ ನೋಡದೇ ಹೋರಾಡಿದರೆ ಬಾಲ ಸನ್ಯಾಸಿಗಳ ಬದುಕು ಬೆಳಗಬಲ್ಲದು.

Tags

Related Articles

3 Comments

  1. Dear Sir,
    Udupi is not observing Bala Sanyasa anymore. Recent Sanyasi Shree Ishapriya Teertha was above 20 when he was initiated into Sanyasa. Present Sode Swami Shree Vishwavallabha has assured that the heir to Shree Shiroor Mutt will be above 18. So Udupi has overcome the problem already.

Leave a Reply

Your email address will not be published. Required fields are marked *

Language
Close