About Us Advertise with us Be a Reporter E-Paper

ವಿವಾಹ್

ರಾಜಿಯಾಗಿದ್ಯಾರು..?

ಸಂಭ್ರಮ, ಹುನಗುಂದ

ಮೊನ್ನೆ ಸಣ್ಣ ಮಾತಿಗೆ ದೊಡ್ಡದಾಗಿ ಕೂಗಾಡಿ ಸುಮ್‌ನಾಗಿದ್ರು ಯಜಮಾನ್ರು. ನಂಗೂ ತುಂಬಾ ಬೇಜಾರಾಗಿತ್ತು. ಮಾತು ಬಿಟ್ಟು ಮೂರು ದಿನವಾಗಿತ್ತು. ನಂಗೂ ಕೋಪ ಬಂದಿತ್ತು. ನಾವೂ ಎಷ್ಟೆಲ್ಲ ಗಂಡಂದಿರ ತಪ್ಪನ್ನು ಮನ್ನಿಸಿರುತ್ತೇವೆ, ತನ್ನ ನಾನೇ ಸಾರಿ ಕೇಳಿದ್ದೂ ಇದೆ. ಆದರೂ ಒಂದು ಸಣ್ಣ ಮಾತಿಗೆ ಅಷ್ಟು ಕೂಗಾಡಿದ್ದು, ಮಾತು ಬಿಟ್ಟಿದ್ದು, ಬೇಸರವೂ ನೋವೂ ಆಗಿತ್ತು. ಹಂಚಿಕೊಳಲು ಒಂದು ಜೀವ ಬೇಕಿತ್ತು. ಸೋ ಗೆಳತಿಗೆ ಕಾಲ್ ಮಾಡಿದ್ದೆ. ಅದಕ್ಕೆ ಅವಳು ಪ್ರತಿಕ್ರಿಯಿಸಿದ ರೀತಿ ಇದು.

ಏನೇ ಹಾಗಂತೀ? ಗಂಡ ಮಾತು ಬಿಟ್ರೆ ಲಕ್ಕೀನಾ?’ ಎಂದೆ. ‘ಹ್ಞೂ, ಮತ್ತೆ ತನ್ನ ಜತೆಗೇ ಇದ್ದು ಟೈಂಗೆ ಸರಿಯಾಗಿ ಬೇಕು ಅಂದಿದ್ದನ್ನೆಲ್ಲಾ ಮಾಡಿ ಹಾಕಿ, ಸ್ನಾನಕೆ ಹೋದಾಗ ಇನ್ನರ್ ಕೊಡ್ಬೇಕು, ಬೆನ್ನುಜ್ಜಬೇಕು, ತಲೆಯೊರಸಿ, ಪ್ರೀತಿ ಹೆಚ್ಚಾಗಿ ತಿಂಡಿಯನ್ನೂ ನಾವೇ ತಿನ್ನಿಸಿದಾಗ್ಲೂನೀನೂ ತಿನ್ನೆತಿಂದ್ಯಾ? ಅಂತಾರಾ ಹೇಳು?’, ಹೌದಲ್ವಾ? ಎನಿಸಿತು. ‘ಆದ್ರೂ ಸವಿತ…’ ಎಂದೆ. ‘ಅದೆಲ್ಲ ಬಿಡು ಎಂಟು ದಿನ ಹಾಯಾಗಿರು ಮಾರಾಯ್ತಿ, ಮೊನ್ನೆ ಅದ್ಯಾರೋ ಓಲ್‌ಡ್ ಫ್ರೆಂಡ್ ಮನೆಗೆ ಹೋಗಕಾಗಿಲ್ಲ ಅಂದಿದ್ಯಲ್ಲ ಹೋಗಿ ಅರಾಮಾಗಿ ಮಾತಾಡಿ ಬಾ, ಸಧ್ಯದಲ್ಲಿ ಯಾವ್ದೂ ಫಿಲ್‌ಮ್ ನೋಡಿಲ್ಲ ಅಂದ್ಯಲ್ಲ ಫ್ರೆಂಡ್ ಜತೆ ಹೋಗಿ ಬಾ, ಅದ್ಯಾವ್ದೋ ಜ್ಯುವೆಲರಿ, ಸಾರಿ ಇಷ್ಟ ಆಗಿತ್ತು ಹೋಗಿ ತಗೋಂಡು ಬಾ, ಮಾತು ಬಿಟ್ಟವರು ಏನೂ ಕೇಳಲ್ಲ. ಎಷ್ಟಕ್ಕೂ ನಾವೇನು ಕೆಟ್ಟ ಕೆಲಸ ಮಾಡಲ್ವಲ್ಲ? ನಮ್ಮ ಕೆಲಸಕ್ಕೆ, ನಮ್ಮಷ್ಟಕ್ಕೆ ನಾವಿರೋದಿಕ್ಕೆ, ನಾವಂದುಕೊಡಿಲ್ಲದ ನಮ್ಮವರ ಇನ್ನೊಂದು ಮುಖ ನೋಡಲು ಮೌನ ಶಕ್ತಿ ಸಂಗ್ರಹವಂತೆ. ಅವರಷ್ಟಕ್ಕವರನ್ನು ಬಿಟ್ಟು ನಮ್ಮ ಬೆಲೆಯ ಅರಿವಾಗಲು ದೇವರೇ ಒದಗಿಸಿದ ಅವಕಾಶ ಕಣೇ, ಯೋಚ್ನೆ ಮಾಡುಅಂತ ತನ್ನ ಮಾತು ಮುಂದುವರಿಸುತ್ತಿದ್ದಳು ಗೆಳತಿ. ನನ್ನ ಮೈಂಡ್ ರೆಕಾರ್ರ್ಡಿಂಗ್ ಮಾಡುತ್ತಿತ್ತು.

ಹೌದು ಸದಾ ಹತ್ತಿರವೇ ಇದ್ದು ಅವಶ್ಯಕತೆಗಳನ್ನು ಮುಂದಿಡುವ ಮೊದಲೇ ಪೂರೈಸುವಾಗ ಯಾವುದರ ಬೆಲೆಯೂ ಗೊತ್ತಾಗುವುದಿಲ್ಲ. ಏನಾದ್ರು ಮಾಡಿಕೊಳಲಿ, ಸಾರಿ ತಾನೆ ಮಾತಾಡಿಸುವವರೆಗೂ ಮಾತಾಡುವುದಿಲ್ಲ, ಎಷ್ಟು ಸಾರಿ ಅಂತ ತಾನೇ ಸೋಲಬೇಕು?’ ನನ್ನಷ್ಟಕೆ ನಾನೆ ಅಂದುಕೊಳುತಿದ್ದೆ. ಆಕಡೆಯಿಂದ ಯಾಕೇ ಸುಮ್‌ನಾದೆ? ನಾನು ಹೇಳಿದ್ದು ತಪ್ಪಾ?’, ‘ಇಲ್ಲಎಂದೆ ಸಣ್ಣಗೆ. ‘ನೀನೊಬ್ಳುನಾನೇನು ಪೂರಾ ಮಾತು ಬಿಟ್ಟು ಇದ್ದು ಬಿಡು ಅಂದ್ನಾ? ಸುಮ್ನೆ 7 – 8 ದಿನ ಎಂಜಾಯ್ ಮಾಡು ಅಂತಿದೀನಿ ಕಣೇ, ಎಷ್ಟು ಬೇಕಾದ್ರು ಏಳಬಹುದು, ಟಿಫಿನ್ ಏನ್ ಬೇಕಾದರು ಮಾಡ್ಬಹುದು, ತಿನಲಿಲ್‌ವಾ, ಹೊರಗೆ ಹೋದ್ರಾ, ಬಿಟ್ಬಿಡು. ನಿಂಗೆ ಬೇಕಾದ್ದು ಮಾಡ್ಕೊಂಡು ತಿಂದು ಬಿಡು. ಮನೆ ಅಡುಗೆ ಮಹತ್ವ ಗೊತ್ತಾಗುತ್ತೆ. ನಾಲ್ಕೈದು ದಿನ ಬಿಡು ಅವರೂ ಸಾಫ್‌ಟ್ ಆಗುತ್ತಾರೆ. ಸ್ವಲ್ಪ ಮಾತಾಡಿದ್ರೂ ಚೆನಾಗ್ ರೆಸ್ಪಾನ್‌ಸ್ ಮಾಡ್ತಾರೆ. ಆಮೇಲೆ ಇದ್ದೇ ಇದೆಯಲ್ಲ ಮತ್ತೆ ಸೇವೆ, ಕಾಳಜಿ, ಆನಂತರದ ಆನಂದವೇ ಬೇರೆ. ಅಗಲಿ ಸೇರುವ ಸುಖವೇ ಬೇರೆ. ಆದ್ರೆ ಆಮೇಲೆ ಮಾತು ಬಿಟ್ಟ ಬಗ್ಗೆ ಮಾತು ಎಂದೆಲ್ಲಾ ಹಿರಿಯಳಂತೆ ಹೇಳುತಿದ್ದರೆ ಮನಸು ಹೂಂ..’ ಗುಡುತಿತ್ತು. ‘ಹೌದು ಸಿಗದಾಗಲೇ ಸಿಗುತಿದ್ದ ಸವಲತ್ತಿನ ಅರಿವಾಗೋದು, ಶುಗರ್ ಮಾತ್ರೆ ತಾವೇ ತಗೋಳ್ಳಲಿ, ಇನ್‌ಸುಲಿನ್ ಎಲೆ ತಾನೇ ಕಿತ್ತು ತಿನ್ನಲಿ. ಏನ್ ಮಡಿದ್ರೂ ಕೂಗಾಡ್ತಾರೆ. ಈಗ ಯಾರ್ ಮೇಲೆ ಕೂಗಾಡ್ತಾರೆ ನಾನು ನೋಡ್ತೀನಿ. ಮಾತ್ರೆ ಕೊಟ್ಟು, ಕಾಲು ಒತ್ತಿ, ಕತೆ ಹೇಳಿ ಪುಟ್ಟ ಮಗುವಿನಂತೆ ಮಲಗಿಸುತಿದ್ದೆ. ಮಕ್ಳು ಓದೋಕೆ ಬೇರೆ ಬೇರೆ ಊರು ಸೇರಿದ್ಮೇಲೆ ತಾನೇ ಮಗುವಿನಂತಾಗಿದಾರೆ. ಸ್ವಲ್ಪ ದಿನ ಏನಾದ್ರು ನಿರ್ಧರಿಸಿ ಬಿಟ್ಟೆ, ಇಷ್ಟೆಲ್ಲ ಮಾತು ಕೇಳಿದ ಮೇಲೆ ಥ್ಯಾಂಕ್ಯೂ ಕಣೆ, ನೀ ಹೇಳಿದಂಗೆ ಮಾಡ್ತೀನಿ. ಬಾಯ್ಎಂದು ಗೆಳತಿಯೊಂದಿಗಿನ ಮಾತು ಮುಗಿಸಿ, ಏನೂ ಓದದೇ ಎಷ್ಟೋ ದಿನಗಳಾದವು ಎಂಬ ಆಲೋಚನೆ ಮೂಡಿತು. ಒಂದು ಪುಟ ಓದುವಂತಿಲ್ಲ ರಾತ್ರಿ, ‘ಎಲ್ಲಿದಿಯೇ? ಕಿಟಕಿ ಮುಚ್ಚು, ಬಾ ರಗ್ ಹೊದಿಸು, ಅಂತೆಲ್ಲ ಕೂಗುವಾಗ ಏನು ಓದಲು ಸಾಧ್ಯ? ಎಂದುಕೊಂಡು ರಾಬಿನ್ ಶರ್ಮ ಅವರ್ದೊಂದು ಬುಕ್ ಹಿಡಿದು ಕೂತೆ ಅಷ್ಟೆ.

ತುಂಬಾ ಅವಸರದಿಂದ ಪತಿ ದೇವರು, ‘ಬೇಗ ಊಟಕೆ ಬಡಿಸು ಅರ್ಜೆಂಟ್ ಹೊಸಪೇಟೆ ಹೋಗಬೇಕುಎನ್ನುತ್ತಲೇ ಬಾತ್ರೂಮ್‌ಗೆ ಹೋದ್ರು. ಆವಕ್ಕಾದೆ ನಾನು. ‘ಏನ್ ನಡೀತಿದೆ? ಏನಾಯ್ತು ನನ್ ಪ್ಲಾನು? ನನ್ ಡಿಸೈಡ್? ನನ್ ರೆಸ್‌ಟ್? ಅಯ್ಯೋಎಂದುಕೊಳುತಿರುವಾಗ್ಲೇ… ‘ಇನ್ನು ಬಡಿಸಿಲ್ವಾ?’ ಬಂದೇ ಬಿಟ್ರು ಹೊರಗೆ. ‘ಈಗ್ ಬಂದೆಯಾಂತ್ರಿಕವಾಗಿ ಅಡುಗೆ ಮನೆಯೊಳು ನಡೆದೆ. ‘ಹೀಗಾದಾಗ ಏನ್ ಮಾಡೋದು ಅವಳ್ ಹೇಳಲೇ ಇಲ್ಲಈಗ ಮಾತು ಕಂಟಿನ್ಯೂ ಮಾಡೋದಾ? ಒಂದಿಷ್ಟು ಬಿಗಿಯಾಗಿರೋದಾ?’ ಎಂದುಕೊಂಡೇ ಊಟ

ಸಂಜೆ ಬರ್ತೀನಿ. ಲೇಟ್ ಆಗೋದಾದ್ರೆ ಕಾಲ್ ಮಾಡ್ತೀನಿ. ಅವಸರವಾಗಿ ಊಟ ಮಾಡಿ ಹೋಗೇ ಬಿಟ್ಟರು. ‘ಇವ್ರು ಮಾತು ಬಿಟ್ಟಿದ್ದು ಮರೆತಿದಾರಾ? ರಾಜಿಯಾಗಿದಾರಾ? ಅವಶ್ಯ ಅಂತ ಮಾತಾಡಿದ್ರಾ? ಏನೇ ಆಗ್ಲಿ ಮಾತಾಡಿದ್ದಂತೂ ಸತ್ಯ. ಮಾತಾಡಿದ್ರೆ ಸಾಕು ಎನ್ನುತ್ತಿದ್ದವಳು ಈಗ ಇನ್ನೊಂದೆರಡು ದಿನವಾದ್ರೂ ಮಾತಾಡ್ಬಾರ್‌ದಿತ್ತು ಅಂದುಕೊಂಡೆ. ಏನ್ ಮಾಡೋದು ಇಷ್ಟ ಪಟ್ಟಿದ್ದು ಸಿಗದೇ ಹೋದಾಗ ಸಿಕ್ಕಿದ್ದನ್ನೇ ಇಷ್ಟಪಡಬೇಕು.

Tags

Related Articles

Leave a Reply

Your email address will not be published. Required fields are marked *

Language
Close