About Us Advertise with us Be a Reporter E-Paper

Breaking Newsದೇಶಪ್ರಚಲಿತ

ಎರ್‌ ಇಂಡಿಯಾ, ಜೆಟ್‌ ಅಷ್ಟೇ ಅಲ್ಲ… ಎಲ್ಲ ವಿಮಾನ ಸಂಸ್ಥೆಗಳು ನಷ್ಟದಲ್ಲಿವೆ…!

ನಾಗರಿಕ ವಿಮಾನಯಾನ ಸಚಿವ ಸುರೇಶ್‌ ಪ್ರಭು ಹೇಳಿಕೆ

ದೆಹಲಿ: ಎರ್‌ ಇಂಡಿಯಾ, ಜೆಟ್‌ ಎರ್‌ವೇಸ್‌ ಅಷ್ಟೇ ಅಲ್ಲ. ಬಹುತೇಕೆ ಎಲ್ಲ ಎರ್‌ಲೈನ್ಸ್‌ಗಳು ನಷ್ಟದ ಹಾದಿಯಲ್ಲಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್‌ ಪ್ರಭು ಹೇಳಿದ್ದಾರೆ.

ಎರ್‌ ಇಂಡಿಯಾ ತನ್ನ ಸಿಬ್ಬಂದಿಗೆ ವೇತನ ನೀಡದ ಮತ್ತು ಜೆಟ್‌ ಎರ್‌ವೇಸ್‌ ಆರ್ಥಿಕ ತೊಂದರೆಯನ್ನು ಅನುಭವಿಸುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಸುರೇಶ್‌ ಪ್ರಭು ಎರ್‌ ಇಂಡಿಯಾ, ಜೆಟ್‌ ಎರ್‌ವೇಸ್‌ ಅಷ್ಟೇ ಅಲ್ಲ. ಬಹುತೇಕೆ ಎಲ್ಲ ಎರ್‌ಲೈನ್ಸ್‌ಗಳು ನಷ್ಟದ ಹಾದಿಯಲ್ಲಿವೆ ಎಂದು ಹೇಳಿದ್ದಾರೆ.

ಕೇವಲ ಭಾರತೀಯ ಎರ್‌ ಲೈನ್ಸ್‌ ಮಾತ್ರವಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವುದು. ವಿಶ್ವದ ಬಹುತೇಕ ವಿಮಾನಯಾನ ಸಂಸ್ಥೆಗಳು ನಷ್ಟ ಹೊಂದುತ್ತಿವೆ. ಇದಕ್ಕೆ ಪ್ರಮುಖ ಕಾರಣ ಇಂಧನ ಬೆಲೆ ಹೆಚ್ಚಾಗುತ್ತಿರುವುದೇ ಪ್ರಮುಖ ಕಾರಣ ಎಂದು ಹೇಳಿದರು.

ದೇಶದಲ್ಲಿ ಇತ್ತೀಚಿನ ವರ್ಷದಲ್ಲಿ ವಿಮಾನಯಾನಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಇಂಧನದ ದರ ಹೆಚ್ಚಾಗುತ್ತಿರುವುದರಿಂದ ಜುಲೈ ತಿಂಗಳ ವೇತನ ನೀಡಲು ಸಾಧ್ಯವಾಗಿಲ್ಲ. ಆದರೆ ಸಿಬ್ಬಂದಿ ವೇತನವನ್ನು ಸೋಮವಾರ ಅಥವಾ ಮಂಗಳವಾರ ನೀಡಲಾಗುವುದು ಎಂದರು. 

Tags

Related Articles

Leave a Reply

Your email address will not be published. Required fields are marked *

Language
Close