About Us Advertise with us Be a Reporter E-Paper

ಅಂಕಣಗಳು

ವಿಶ್ವಕಪ್‌ನಲ್ಲಿ ಭಾಗವಹಿಸದಿದ್ದರೇನಂತೆ ಬೆಪ್ಪನಂತಿರಬೇಕಿರಲಿಲ್ಲ!

ನಾನು ಹುಚ್ಚು ಫುಟ್ಬಾಲ್ ಪ್ರೇಮಿಯಲ್ಲ. ಇಂದಿಗೂ ರಿಲಿಜನ್ ಕಾಲಮ್ಮಿನಲ್ಲಿ ಹಿಂದೂ ಜತೆಗೆ ಮತ್ತೊಂದು ಪದ ಬರೆಯಬೇಕು ಅಂತಾದರೆ ಕ್ರಿಕೆಟ್ ಎಂದು ಬರೆಯುತ್ತೇನೆ. ಯಾವುದೇ ಆಟವಿರಬಹುದು, ಅದನ್ನು ಆಡದೇ, ಸುತ್ತಮುತ್ತ ಆಡುವುದನ್ನು ನೋಡದೇ, ಮಾತಾಡದೇ, ಆಟವನ್ನು ಉಸಿರಾಡದೇ ಅದರ ಬಗ್ಗೆ ಗೀಳನ್ನು ಹಚ್ಚಿಕೊಳ್ಳಲಾಗುವುದಿಲ್ಲ. ಭಾರತೀಯರ ಕ್ರಿಕೆಟ್ ರಿಲಿಜನ್ ಆಗಿದ್ದರೆ ಅದಕ್ಕೆ ಕಾರಣ ಇದೇ. ಆದರೆ ನಾವೆಂದೂ ಫುಟ್ಬಾಲ್ ಆಡಿದವರಲ್ಲ. ನಮ್ಮ ಮನೆ, ವಠಾರ, ಶಾಲೆ, ಊರ ಮೈದಾನ.. ಹೀಗೆ ಎಲ್ಲೂ ಆಟವನ್ನು ನೋಡಿದವರೂ ಅಲ್ಲ. ಹೀಗಾಗಿ ಫುಟ್ಬಾಲ್ ಬಗ್ಗೆ ಊಟತಿಂಡಿ, ಹರಟೆಯಲ್ಲಿ ಮಾತಾಡಿದ್ದು ಕಡಿಮೆಯೇ. ಅದು ನಮ್ಮ ಜನಜೀವನ, ಸಂಸ್ಕೃತಿ, ದೈನಂದಿನ ಬದುಕಿನ ಭಾಗವಾಗಿಲ್ಲ.

ಅದೇ ಕ್ರಿಕೆಟ್‌ನ್ನು ನಾವು ಹೇಗೆ ಮೈಮೇಲೆ ಹೊದ್ದುಕೊಂಡವರೆಂದರೆ, ಐದು ದಿನ ನಡೆಯುವ ಕ್ರಿಕೆಟ್ ಟೆಸ್‌ಟ್ ಪಂದ್ಯವನ್ನು ಸ್ಟೇಡಿಯಮ್‌ಗೆ ನೋಡಿ ಬಂದಿದ್ದಲ್ಲದೇ, ಸಾಯಂಕಾಲ ಮನೆಗೆ ಬಂದು ಟಿವಿಯಲ್ಲಿ ಮರುಪ್ರಸಾರ ನೋಡದಿದ್ದರೆ ಸಮಾಧಾನವಿಲ್ಲ. ಕ್ರಿಕೆಟ್ ಆಟಗಾರರನ್ನು ನಾವು ತಲೆಮೇಲೆ ಹೊತ್ತು ಮೆರೆಸಿದವರು. ಸಚಿನ್ ತೆಂಡುಲ್ಕರ್‌ನನ್ನು ಸಾಕ್ಷಾತ್ ಕ್ರಿಕೆಟ್ ದೇವರುಎಂದು ಪೂಜಿಸಿದವರು. ಆತ 99ರನ್ ಹೊಡೆದು, ಮುಂದಿನ ರನ್‌ಗಾಗಿ ಬಾಲನ್ನು ಎದುರಿಸುತ್ತಿದ್ದರೆ, ದೇಶಕ್ಕೆ ದೇಶವೇ ಕಣ್ಮುಚ್ಚಿ ಸೆಂಚುರಿಯಾಗಲಿಎಂದು ದೇವರಿಗೆ ಪ್ರಾರ್ಥಿಸುತ್ತಿದ್ದವರು ನಾವು.

ಅದೇ ಫುಟ್ಬಾಲ್ ಬಗ್ಗೆ ನಮಗೆ ಅಂಥ ಕ್ರೇಜ್ ಇಲ್ಲ. ಆದರೆ ಕಳೆದ ಒಂದು ತಿಂಗಳ ಕಾಲ ನಡೆದ ಫಿಫಾ ವಿಶ್ವಕಪ್ ಪಂದ್ಯಾವಳಿಯನ್ನು ತಲೆಗೇರಿಸಿಕೊಂಡು ನೋಡಿದ ಬಳಿಕ ಆಟದ ಮಹಾತ್ಮೆ ಅದೆಷ್ಟು ಅಗಾಧವಾದುದು ಎಂಬ ಹೊಸ ಬ್ರಹ್ಮಾಂಡವೇ ತೆರೆದುಕೊಂಡಂತಾಯಿತು. ನಮ್ಮ ಕ್ರಿಕೆಟ್ ಹುಚ್ಚು ಕಿರುಕಟ್ಟೆಯಾದರೆ, ಅವರ ಫುಟ್ಬಾಲ್ ಹುಚ್ಚು ಕನ್ನಂಬಾಡಿ ಕಟ್ಟೆ! ಫುಟ್ಬಾಲ್ ಮುಂದೆ ಕ್ರಿಕೆಟ್‌ನ ಅಗಾಧತೆ ತೀರಾ ಪೀಚು. ಕ್ರಿಕೆಟ್‌ನ ಜನ್ಮಸ್ಥಳವಾದ ಲಂಡನ್‌ನಿಂದ ಪ್ಯಾರಿಸ್ ಕೇವಲ ಒಂದು ಗಂಟೆ ವಿಮಾನ ಪಯಣದಷ್ಟು ದೂರ ಅಥವಾ ಹತ್ತಿರದಲ್ಲಿದ್ದರೂ ಫ್ರೆಂಚ್ ಮಂದಿಗೆ ಕ್ರಿಕೆಟ್ ಗೊತ್ತಿಲ್ಲ. ಅವರು ಎಂದೂ ಆಟ ಆಡಿದವರೇ ಅಲ್ಲ. ಯುರೋಪಿನ ಯಾವ ದೇಶವೂ ಕ್ರಿಕೆಟ್ ಆಡುವುದಿಲ್ಲ. ಆದರೆ ಫುಟ್ಬಾಲ್ ಆಡದ ಯುರೋಪಿನ ದೇಶಗಳೇ ಇಲ್ಲ.

ಇಂದು ಜಗತ್ತಿನಲ್ಲಿ ಕ್ರಿಕೆಟ್ ಆಡುವ ದೇಶಗಳು ಹನ್ನೆರಡೋ, ಹದಿನಾಲ್ಕೋ. ಆದರೆ ಫುಟ್ಬಾಲ್ ಆಡುವ ದೇಶಗಳು ನೂರಕ್ಕೂ ಅಧಿಕ. ಸಲದ ವಿಶ್ವಕಪ್ ಫುಟ್ಬಾಲ್‌ನಲ್ಲಿ ಮೂವತ್ತೆರಡು ದೇಶಗಳು ಭಾಗವಹಿಸಲು ಅರ್ಹತೆ ಪಡೆದಿದ್ದವು. ಎಲ್ಲ ದೇಶಗಳೂ ಒಂದು ತಿಂಗಳು ಫುಟ್ಬಾಲ್ ಪ್ರಪಂಚದಲ್ಲಿ ಮುಳುಗಿ ಹೋಗಿದ್ದವು. ಫೈನಲ್ ಪಂದ್ಯವನ್ನು ನೋಡದಿದ್ದರೆ ನಾನು ಏನೋ ಮಹತ್ವದ ಜಾಗತಿಕ ಘಟನೆಯಿಂದ ವಂಚಿತನಾಗುತ್ತಿದ್ದೆ. ಪಂದ್ಯವನ್ನು ಜಗತ್ತಿನಾದ್ಯಂತ ಸುಮಾರು ಮುನ್ನೂರ ಎಂಬತ್ತು ಕೋಟಿ ಮಂದಿ ವೀಕ್ಷಿಸಿದರಂತೆ.

ಹಾಗೆ ನೋಡಿದರೆ, ಜಗತ್ತಿನಲ್ಲಿ ವರ್ಲ್‌ಡ್ಕಪ್ ಫುಟ್ಬಾಲ್ ಫೈನಲ್ ಪಂದ್ಯಕ್ಕಿಂತ ಬೃಹತ್ ಆದ ಘಟನೆ ಇಲ್ಲವೇ ಇಲ್ಲ. ಅದು ನಿಜವಾದ ಅರ್ಥದಲ್ಲಿ ಇಡೀ ಜಗತ್ತನ್ನು ಆವರಿಸಿಕೊಳ್ಳುವ ಒಂದು ಅದ್ಭುತ. ಕಾರಣದಿಂದಲೇ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲು ಜಗತ್ತಿನ ಎಲ್ಲ ದೇಶಗಳು ತಾಮುಂದು, ನಾಮುಂದು ಎಂದು ಮುಗಿಬೀಳುತ್ತವೆ. ಲಕ್ಷಾಂತರ ಕೋಟಿ ಲಂಚತೆತ್ತು ಆಯೋಜನ ಹಕ್ಕು ಪಡೆದುಕೊಳ್ಳಲು ತವಕಿಸುತ್ತವೆ. ಮುಂದಿನ ಪಂದ್ಯಾವಳಿ ರಷ್ಯಾದಲ್ಲಿ ಎಂದು 2014ರಲ್ಲಿ ಘೋಷಣೆಯಾದಾಗ, ಫಿಫಾ ಮಂಡಳಿಗೆ ರಷ್ಯಾ ಭಾರಿ ಪ್ರಮಾಣದಲ್ಲಿ ಲಂಚ ನೀಡಿತ್ತು ಎಂಬ ಆರೋಪ ಕೇಳಿಬಂದಿತ್ತು. 2022ರಲ್ಲಿ ನಡೆಯಲಿರುವ ವಿಶ್ವಕಪ್‌ನ್ನು ತಾನೇ ಆಯೋಜಿಸಲು ಕತಾರ್ ಸಹ ಸಹ ಭಾರಿ ಪ್ರಮಾಣದ ಲಂಚ ನೀಡಿದೆಯೆಂಬ ಆರೋಪವಿದೆ.

ಇಲ್ಲಿ ಪ್ರಮುಖ ಸಂಗತಿಯೆಂದರೆ, ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸಲು ತೋರುವ ಪೈಪೋಟಿ ಹಾಗೂ ಅದಕ್ಕಿರುವ ಮಹತ್ವ. ಕತಾರ್ ಎಂಬ ಮರುಳುಗಾಡಿನ ದೇಶ ನೆಪ ಇಟ್ಟುಕೊಂಡು ಹೊಸರಾಷ್ಟ್ರ ಕಟ್ಟಲು ಮುಂದಾಗಿದೆ. ಫುಟ್ಬಾಲ್ ನೆಪದಲ್ಲಿ ತನ್ನನ್ನು ಇಡೀ ಪ್ರಪಂಚದ ಮುಂದೆ ಪ್ರದರ್ಶನಕ್ಕಿಟ್ಟುಕೊಳ್ಳಲು ನಿರ್ಧರಿಸಿದೆ. ಬೇರೆ ಯಾವ ಉಛ್ಞಿಠಿಆಯೋಜಿಸಿದರೂ, ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಸಂಘಟಿಸಿದಷ್ಟು ಪ್ರಚಾರ, ಹಣ, ಅಲೆ, ಗುಂಗು, ಲಾಭ, ಪ್ರಾಯೋಜಕತ್ವ ಸಿಗುವುದಿಲ್ಲ. ಮಿಕ್ಕೆಲ್ಲವೂ ಹಳ್ಳವಾದರೆ, ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಸಪ್ತಮಹಾಸಾಗರ ಸಂಗಮ! ಅದಕ್ಕಿಂತ ಅಗಾಧ, ವಿಶಾಲ, ಭವ್ಯವಾದುದು ಯಾವುದಿದೆ?

ಎಲ್ಲ ಸಂಗತಿಗಳು ಭಾರತಕ್ಕೆ ಗೊತ್ತೇ ಆಗಲಿಲ್ಲವಾ? ಫುಟ್ಬಾಲ್ ಮಹತ್ವ, ಅದಕ್ಕಿರುವ ಜಾಗತಿಕ ಅದಕ್ಕಿರುವ ತಾಕತ್ತು, ನಮಗೆ ಇನ್ನೂ ತಿಳಿದಿಲ್ಲವಾ? ಮೊನ್ನೆ ಫುಟ್ಬಾಲ್ ಫೈನಲ್ ಪಂದ್ಯ ವೀಕ್ಷಿಸುವಾಗ ಪ್ರಶ್ನೆಗಳು ಗಂಭೀರವಾಗಿ ಕಾಡಿದ್ದಂತೂ ನಿಜ. ಕಾರಣ ಸಲದ ಪಂದ್ಯಾವಳಿಯುದ್ದಕ್ಕೂ ಭಾರತದ ಹೆಸರು, ಪ್ರಸ್ತಾಪ ಅಪ್ಪಿತಪ್ಪಿಯೂ ಬರಲಿಲ್ಲ. ಭಾರತ ವಿಶ್ವಕಪ್ ಫುಟ್ಬಾಲ್ ಬೋರ್ಡಿಗೇ ಇರಲಿಲ್ಲ. ಭಾರತ ತಂಡ ವಿಶ್ವಕಪ್‌ನಲ್ಲಿ ಆಡಲು ಅಥವಾ ಅರ್ಹತೆ ಪಡೆಯುವ ಪ್ರಶ್ನೆ ದೂರವೇ ಉಳಿಯಿತು. ಆದರೆ ಇಂಥ ಮಹಾ ಉಛ್ಞಿಠಿನಲ್ಲಿ ಭಾರತ ಯಾವ ರೀತಿಯಲ್ಲೂ ಭಾಗವಹಿಸಲಿಲ್ಲ. ತನ್ನ ಇರುವಿಕೆಯನ್ನು ಆದರೆ ಭಾರತದ ಪಾಲಿಗೆ ಇಂಥ ಮಹತ್ತರ ಘಟನೆ ಘೆಟ್ಞಉಛ್ಞಿಠಿ ಆಯಿತು.

ಬಾಂಗ್ಲಾದೇಶದಂಥ ಬಡರಾಷ್ಟ್ರ ಸಹ ರಷ್ಯಾಕ್ಕೆ ಎಲ್ಲಾ ದೇಶಗಳ ರಾಷ್ಟ್ರಧ್ವಜ, ಯುನಿಫಾರ್ಮ್, ಕ್ಯಾಪ್, ಟೀಶರ್ಟ್‌ಗಳನ್ನು ಕಳುಹಿಸಿ ಸಾವಿರಾರು ಕೋಟಿ ರುಪಾಯಿ ಗಳಿಸಿತು. ಮಲೇಷಿಯಾ ಹಾಗೂ ಥೈಲ್ಯಾಂಡ್‌ನಂಥ ದೇಶ ಐದು ಸಾವಿರಕ್ಕೂ ಹೆಚ್ಚು ಫಿಸಿಯೋಥೆರಪಿಸ್‌ಟ್, ಮಸಾಜು ಮಾಡುವವರನ್ನು ಕಳುಹಿಸಿ ಭಾರೀ ಹಣ ಮಾಡಿತು. ಶ್ರೀಲಂಕಾ, ಜಪಾನ್, ಫಿಲಿಪೈನ್‌ಸ್, ವಿಯೆಟ್ನಾಂನಂಥ ದೇಶಗಳು ಜಾತ್ರೆಪೇಟೆಯಲ್ಲಿ ಅಂಗಡಿ ತೆರೆದು ಹಣ ಮಾಡಿಕೊಳ್ಳುವಂತೆ, ವಿಶ್ವಕಪ್‌ನ್ನು ಬ್ರೆಜಿಲ್, ಅರ್ಜಂಟೀನಾ, ಕ್ಯೂಬಾ, ಗ್ವಾಟೆಮಾಲ, ಪೆರು ಮುಂತಾದ ದೇಶಗಳ ಕಂಪನಿಗಳು ಆರು ತಿಂಗಳಿನಿಂದ ರಷ್ಯಾದಲ್ಲಿ ಬೀಡುಬಿಟ್ಟಿದ್ದವು. ದಕ್ಷಿಣ ಕೋರಿಯ ಹಾಗೂ ತೈವಾನ್‌ನ ಪ್ರಮುಖ ಎಲೆಕ್ಟ್ರಾನಿಕ್ ಕಂಪನಿಗಳು ಇದೇ ಅವಕಾಶ ಎಂದು ತಮ್ಮ ಪ್ರಾಡಕ್‌ಟ್ಗಳನ್ನು ಜಾಹೀರಾತು ಮಾಡಿದವು. ರಷ್ಯಾದಲ್ಲಿ ಜಾಹೀರಾತು ಬೋರ್ಡ್‌ಗಳನ್ನು ಪ್ರದರ್ಶಿಸಲು ಖಾಲಿ ಜಾಗಗಳೇ ಇರಲಿಲ್ಲವಂತೆ. ಆಕಾಶದಲ್ಲೂ ಜಾಹೀರಾತು ಬಲೂನ್‌ಗಳು, ಬಿಲ್‌ಬೋರ್ಡ್‌ಗಳು ರಾರಾಜಿಸಿದವು.

ರಷ್ಯಾ ಅವೆಷ್ಟೋ ಲಕ್ಷ ಕೋಟಿ ರುಪಾಯಿ ಖರ್ಚು ಮಾಡಿತು. ಆದರೆ ಅದಕ್ಕಿಂತ ಹತ್ತುಪಟ್ಟು ಹಣವನ್ನು ಮೂಲ ಒಂದರಿಂದಲೇ ದೋಚಿತು. ಇದರಿಂದ ರಷ್ಯಾದ ಅರ್ಥವ್ಯವಸ್ಥೆ ಹೊಸ ಜಿಗಿತ ಕಾಣಲಿದೆ ಎಂದು ನಿರೀಕ್ಷಿಸಲಾಗಿದೆ. ಐದು ಲಕ್ಷ ವಿದೇಶಿ ಪ್ರವಾಸಿಗರು ಒಂದು ತಿಂಗಳ ಅವಧಿಯಲ್ಲಿ ಭೇಟಿ ನೀಡಿದರಂತೆ. ಇದರಿಂದ ದೇಶದ ಪ್ರವಾಸೋದ್ಯಮಕ್ಕೆ ಹೊಸ ಲವಲವಿಕೆ ಬಂದಂತಾಯಿತು. ರಿಟೇಲರ್‌ಗಳು, ಹೊಟೇಲ್, ರೆಸ್ಟೋರೆಂಟ್‌ಗಳು ಕೈತುಂಬಾ ಹಣ ಬಾಚಿದವು. ಐದು ಲಕ್ಷ ಪ್ರವಾಸಿಗರು ಕನಿಷ್ಠ ಎಂಟು ಸಾವಿರದಿಂದ ಹನ್ನೆರಡು ಸಾವಿರ ಡಾಲರ್ ಖರ್ಚು ಮಾಡಿರಬಹುದೆಂದು ಅಂದಾಜು ಹಾಕಿದರೆ, ರಷ್ಯಾ ವರ್ಲ್‌ಡ್ಕಪ್ ಖರ್ಚು ಮಾಡಿದ ಹಣವನ್ನು ಬಾಬತಿನ ಮೂಲಕವೇ ವಸೂಲು ಮಾಡಿತು. ಫುಟ್ಬಾಲ್ ಪಂದ್ಯಾವಳಿಯೊಂದರಿಂದಲೇ ರಷ್ಯಾ ಶೇ.0.25ರಿಂದ 0.50 ರಷ್ಟು ಜಿಡಿಪಿ ಬೆಳವಣಿಗೆ ಕಾಣಬಹುದೆಂದು ಅಂದಾಜು ಹಾಕ ಲಾಗಿದೆ. ಇದು ಹದಗೆಟ್ಟ ರಷ್ಯಾ ಆರ್ಥಿಕ ವ್ಯವಸ್ಥೆಗೆ ಹೊಸಚೇತನ ನೀಡಿದಂತಾಗಿದೆ. ಐದಾರು ತಿಂಗಳ ಅವಧಿಯಲ್ಲಿ ವಿದೇಶಿ ಹಣ ಹೇರಳ ಪ್ರಮಾಣದಲ್ಲಿ ದೇಶಿ ಮಾರುಕಟ್ಟೆಗೆ ಬಂದಿದ್ದರಿಂದ ವಿದೇಶಿ ವಿನಿಮಯ ಸ್ಥಿತಿಯೂ ಗಣನೀಯವಾಗಿ ಸುಧಾರಿಸಿಕೊಳ್ಳಲು ಸಹಾಯಕವಾಗಿದೆ. ರಷ್ಯಾ ಹದಿನಾಲ್ಕು ಶತಕೋಟಿ ಡಾಲರ್ ಖರ್ಚು ಅಧ್ಯಕ್ಷ ಪುಟಿನ್ ದೊಡ್ಡ ರಿಸ್‌ಕ್ ತೆಗೆದುಕೊಳ್ಳುತ್ತಿದ್ದಾರೆಂದು ಎಲ್ಲರೂ ಭಾವಿಸಿದ್ದರು. ಆದರೆ ರಷ್ಯಾ ಮಾಡಿಕೊಂಡ ಲಾಭಾಂಶ ಹಾಗೂ ಇನ್ನಿತರ ಸಂಗತಿಗಳನ್ನು ಗಮನಿಸಿದರೆ, ರಷ್ಯಾದ ರೊಟ್ಟಿ ತುಪ್ಪ ಹಾಗೂ ಜೇನುತುಪ್ಪದಲ್ಲೇ ಬಿದ್ದಿದೆಯೆಂದು ಭಾವಿಸಬಹುದು. ವಿಶ್ವಕಪ್ ಫುಟ್ಬಾಲ್ ನೆಪದಲ್ಲಿ ರಷ್ಯಾ ದೇಶಾದ್ಯಂತ ಮೂಲಭೂತ ಸೌಕರ್ಯಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿಕೊಂಡಿದ್ದು ಸಹ ಆರ್ಥಿಕ ಪ್ರಗತಿಗೆ ನಾಂದಿಯಾಗುವುದರಲ್ಲಿ ಸಂದೇಹವಿಲ್ಲ.

ವಿಶ್ವಕಪ್‌ನಲ್ಲಿ ಚೀನಾ ತಂಡ ಭಾಗವಹಿಸಿರಲಿಲ್ಲ. ಆದರೆ ಚೀನಾ ಬೇರೆ ರೀತಿಯಲ್ಲಿ ವರ್ಲ್‌ಡ್ಕಪ್‌ನ್ನು ಗೆದ್ದಿತು. ಯಾವುದೇ ಸ್ಟೇಡಿಯಮ್‌ಗೆ ಚೀನಾದ ಕಂಪನಿಗಳ ಜಾಹೀರಾತುಗಳೇ ರಾರಾಜಿಸುತ್ತಿದ್ದವು. ಅಕ್ಷರಶಃ ರಷ್ಯಾದ ಬೀದಿ ಬೀದಿಗಳು ಚೀನಾಮಯವಾಗಿದ್ದವು. ಸಲದ ವರ್ಲ್‌ಡ್ಕಪ್‌ನ್ನು ಪ್ರಾಯೋಜಿಸಲು ದೊಡ್ಡ ಬಹುರಾಷ್ಟ್ರೀಯ ಕಂಪನಿಗಳಾದ ಸೋನಿ, ಜಾನ್ಸನ್ ಆ್ಯಂಡ್ ಜಾನ್ಸನ್, ಕ್ಯಾಸ್ಟ್ರಲ್ ಮುಂತಾದ ಕಂಪನಿಗಳು ಹಿಂದೇಟು ಹಾಕಿದ್ದರಿಂದ ಚೀನಾಕ್ಕೆ ವರದಾನವಾಯಿತು. ಚೀನಾದ ಮೊಬೈಲ್, ಟಿವಿ, ಎಲೆಕ್ಟ್ರಿಕ್ ಸ್ಕೂಟರ್, ಆಟೋಮೊಬೈಲ್, ಗೃಹೋಪಯೋಗಿ ಉಪಕರಣ, ಫರ್ನಿಚರ್ ಕಂಪನಿಗಳು ರಷ್ಯಾ ಹಾಗೂ ಮೂಲಕ ಜಾಗತಿಕ ಗ್ರಾಹಕರನ್ನು ತಲುಪಲು, ಪ್ರಭಾವ ಬೀರಲು ಇದನ್ನೇ ಸದವಕಾಶವಾಗಿ ಮಾರ್ಪಡಿಸಿಕೊಂಡವು. ಡೇರಿ ಉತ್ಪ್ನಗಳ ಜಾಹೀರಾತುಗಳ ಭರಾಟೆಯೂ ಜೋರಾಗಿಯೇ ಇತ್ತು.

ಸೌದಿ ಅರೇಬಿಯಾ ಹಾಗೂ ರಷ್ಯಾ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಮೆಂಗ್ನಿ ಗ್ರುಪ್‌ನ ಮಂಗೋಲಿಯನ್ ಮಿಲ್‌ಕ್ ಹಾಗೂ ಡ್ರಿಂಕೆಬಲ್ ಯೋಗರ್ಟ್(ಮಜ್ಜಿಗೆ ಅಥವಾ ಲಸ್ಸಿ ) ಏಳು ನಿಮಿಷಗಳ ಜಾಹೀರಾತನ್ನು ಸ್ಟೇಡಿಯಮ್‌ನಲ್ಲಿ ಪ್ರದರ್ಶಿಸಲಾಯಿತು. ಇದನ್ನು 192 ದೇಶಗಳು ಟಿವಿಯಲ್ಲಿ ವೀಕ್ಷಿಸಿದವು. ಇಡೀ ವರ್ಲ್‌ಡ್ಕಪ್‌ನಲ್ಲಿ 64 ಪಂದ್ಯಗಳನ್ನು ಆಡಲಾಯಿತಷ್ಟೆ. ಎಲ್ಲ ಪಂದ್ಯಗಳ ಆರಂಭದಲ್ಲಿ, ಕೊನೆಯಲ್ಲಿ ಹಾಗೂ ಮಧ್ಯೆ ಮಧ್ಯೆ ವಿರಾಮದ ಸಮಯದಲ್ಲಿ ಚೀನಾ ಕಮರ್ಶಿಯಲ್‌ಗಳೇ ಎಲ್ಲರ ಗಮನ ಸೆಳೆದವು. ವಿವೋ, ಹೆಸೆನ್‌ಸ್ ಯಾಡಿಯಾ, ಡಾಲಿಯನ್ ವಾಂಡಾ, ಸುಯ್‌ಕ್ಸಿನ್‌ಗೋ ಮುಂತಾದ ಕಂಪನಿಗಳಂತೂ ಪ್ರೇಕ್ಷಕರ ಮನಸ್ಸಿನ ಮೇಲೆ ಲಗ್ಗೆ ಹಾಕಿದವು. ‘ಚೀನಾ ವಿಶ್ವಕಪ್‌ನಲ್ಲಿ ಆಡದಿರಬಹುದು, ಆದರೆ ಕಪ್ ಗೆದ್ದಿದ್ದು ಮಾತ್ರ ನಾವೇಎಂದು ಚೀನಾ ಡೇಲಿಪತ್ರಿಕೆ ಸಂಪಾದಕೀಯ ಬರೆಯಿತು. ‘ಇಡೀ ಜಗತ್ತನ್ನು ಅತಿ ಕಡಿಮೆ ಕಾಲದಲ್ಲಿ ತಲುಪಲು ವರ್ಲ್‌ಡ್ಕಪ್ ಫುಟ್ಬಾಲ್‌ಗಿಂತ ಪ್ರಬಲ ಹಾಗೂ ಬೃಹತ್ತಾದ ಬೇರೆ ಅವಕಾಶವೇ ಇರಲಿಲ್ಲ. ಇದನ್ನು ಚೀನಾದ ಕಂಪನಿಗಳು ಅತ್ಯಂತ ಬಳಸಿಕೊಂಡವು. ಫುಟ್ಬಾಲ್ ಪಂದ್ಯಾವಳಿಯಲ್ಲಿ ಪ್ರೇಕ್ಷಕರು ಆಟವನ್ನು ನೋಡಿದ್ದಕ್ಕಿಂತ ಚೀನಾ ಕಂಪನಿಗಳ ಜಾಹೀರಾತುಗಳನ್ನು ನೋಡಿದರು. ವರ್ಲ್‌ಡ್ಕಪ್‌ನ್ನು ರಷ್ಯಾ ಚೀನಾದ ಕಂಪನಿಗಳಿಗಾಗಿಯೇ ಆಯೋಜಿಸಿದಂತಿತ್ತು. ಅಷ್ಟರಮಟ್ಟಿಗೆ ಇದು ಚೀನಾದ ಗೆಲುವುಎಂದು ಪತ್ರಿಕೆ ಬರೆಯಿತು.

ಚೀನಾ ಕಂಪನಿಗಳು ವರ್ಲ್‌ಡ್ಕಪ್ ಫುಟ್ಬಾಲ್ ಪ್ರಾಯೋಜಕತ್ವಕ್ಕೆ ತೆಗೆದಿರಿಸಿದ ಹಣದ ಪ್ರಮಾಣ ಕಂಡು ಪಾಶ್ಚಿಮಾತ್ಯ ದೇಶಗಳ ಬಹುರಾಷ್ಟ್ರೀಯ ಕಂಪನಿಗಳು ಬೆದರಿ ಒಂದು ಹೆಜ್ಜೆ ಹಿಂದಿಟ್ಟಿದ್ದು ದಿಟ. ಇದರಿಂದ ಚೀನಾ ಕಂಪನಿಗಳಿಗೆ ಪಾರಮ್ಯ ಮೆರೆಯಲು ಸಾಧ್ಯವಾಯಿತು. ಚೀನಾದ ಅತಿ ಶ್ರೀಮಂತ ಉದ್ಯಮಿ ವಾಂಗ್, ಅವಕಾಶವನ್ನು ಚೀನಾ ಪರವಾದ ವಿದ್ಯಮಾನವಾಗಿ ಪರಿವರ್ತಿಸಿಕೊಳ್ಳಲು ಮೊದಲಿನಿಂದಲೇ ಯೋಚಿಸಿದರು. ಮುಂದಿನ ನಾಲ್ಕು ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಪ್ರಾಯೋಜಕತ್ವ ವಹಿಸಲು ಅವರು ಫಿಫಾ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದರು.

ಕ್ರೀಡಾಪ್ರೇಮಿಗಳ ಪಾಲಿಗೆ ಇದೊಂದು ಆಟವಿದ್ದಿರಬಹುದು, ಆದರೆ ನನ್ನ ಪಾಲಿಗೆ ಇದು ದೇವರೇ ರೂಪಿಸಿದ, ಸೃಷ್ಟಿಸಿದ ಒಂದು ಅದ್ಭುತ ಅವಕಾಶ, ಚೀನಾದ ಸಾರ್ವಭೌಮತ್ವ ಮೆರೆಯಲು ನಮಗೆ ಸಿಕ್ಕ ಸುಸಂದರ್ಭವಿದುಎಂಬ ವಾಂಗ್ ಮಾತಿನಲ್ಲಿ ಯಾವ ಚೀನಾ ಉಛ್ಞಿಠಿನ್ನು ತನ್ನ ವ್ಯಾಪಾರವ್ಯವಹಾರಕ್ಕೆ ಬಳಸಿಕೊಂಡಿತು ಎಂಬುದನ್ನು ಊಹಿಸಬಹುದು.

ಇತ್ತೀಚೆಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಲಂಡನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಖ್ಯಾತ ಫುಟ್ಬಾಲ್ ಆಟಗಾರ ಸೆರ್ಗಿಯೋ ಅಗೇರೋ ಅವರ ಜತೆಗೆ ಸೆಲ್ಫಿಗೆ ಪೋಸು ನೀಡಿದರು. ಸ್ವತಃ ಫುಟ್ಬಾಲ್ ಪ್ರೇಮಿಯೂ ಆಗಿರುವ ಕ್ಸಿ ಅವರು ಆದಾದ ಬಳಿಕ ಸಾರ್ವಜನಿಕವಾಗಿಯೇ ಘೋಷಿಸಿದರು, -‘ನನಗೆ ವರ್ಲ್‌ಡ್ಕಪ್ ಬಗ್ಗೆ ಮೂರು ಕನಸುಗಳಿವೆ. ಅವೇ ನೆಂದರೆ ಚೀನಾ ವರ್ಲ್‌ಡ್ಕಪ್ ಫುಟ್ಬಾಲ್‌ನಲ್ಲಿ ಆಡಲು ಪಡೆಯಬೇಕು, ಚೀನಾವೇ ವರ್ಲ್‌ಡ್ಕಪ್ ಫುಟ್ಬಾಲ್ ಪಂದ್ಯಾವಳಿಯನ್ನು ಸಂಘಟಿಸಬೇಕು ಹಾಗೂ ಚೀನಾ ವರ್ಲ್‌ಡ್ ಕಪ್‌ನಲ್ಲಿ ಗೆಲ್ಲಬೇಕು. ಇನ್ನು ಎರಡು ವರ್ಲ್‌ಡ್ಕಪ್ ಮುಗಿಯುವುದರೊಳಗೆ (ಎಂಟು ವರ್ಷ) ಚೀನಾ ಫುಟ್ಬಾಲ್‌ನಲ್ಲಿ ಸೂಪರ್ ಪವರ್ ಆಗಬೇಕು.’

ಕ್ಸಿ ಸ್ವದೇಶಕ್ಕೆ ಮರಳಿದವರೇ ಅಂತಾರಾಷ್ಟ್ರೀಯ ಗುಣಮಟ್ಟದ ಹದಿನೈದು ಕ್ರೀಡಾಂಗಣಗಳನ್ನು ನಿರ್ಮಿಸಲು ಸೂಚಿಸಿದರು. ಕ್ರೀಡಾಂಗಣ ನಿರ್ಮಾಣವಾಗುತ್ತಿದ್ದಂತೆ ಯುರೋಪಿಯನ್ ಕ್ಲಬ್‌ಗಳ ಜತೆಗೆ ಪಂದ್ಯಗಳನ್ನು ಆಡುವಂತೆ, ಬೇರೆ ಬೇರೆ ಕ್ಲಬ್‌ಗಳ ಜತೆಗೆ ಒಪ್ಪಂದ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಯುರೋಪ್ ಕೇಂದ್ರಿತವಾಗಿರುವ ಮಹಾಕ್ರೀಡೆಯನ್ನು ತನ್ನ ಕಬ್ಜ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಚೀನಾ ಈಗಾಗಲೇ ಕಾರ್ಯಪ್ರವೃತ್ತವಾಗಿದೆ.

ಇಂದು ಐಸ್‌ಲ್ಯಾಂಡ್‌ನಂಥ ಮೂರುಕಾಲು ಲಕ್ಷ ಜನಸಂಖ್ಯೆ ಹೊಂದಿರುವ ಪುಟ್ಟ ದೇಶ ಸಹ ವಿಶ್ವಕಪ್‌ನಲ್ಲಿ ಆಡಲು ಅರ್ಹತೆ ಪಡೆಯುತ್ತದೆ. ದೇಶದ ಹವಾಮಾನ ನೋಡಿದರೆ, ಅದು ಫುಟ್ಬಾಲ್ ಆಡಲೇ ಕೂಡದು. ಪಾರ್ಟ್‌ಟೈಮ್ ದಂತವೈದ್ಯ ದೇಶದ ಕೋಚ್ ಆಗಿ, ತಂಡ ಕಟ್ಟಿದ. ಸರಿಯಾದ ಸ್ಟೇಡಿಯಮ್ ಸೌಲಭ್ಯ ಸಹ ಇಲ್ಲದಿದ್ದರೂ ಗ್ರೀನ್‌ಹೌಸ್ ಮಾದರಿಯ ತಾತ್ಕಾಲಿಕ ಡೇರೆಗಳಲ್ಲಿ ತರಬೇತಿ ವಿಶ್ವಕಪ್‌ನಲ್ಲಿ ಅರ್ಹತೆ ಪಡೆದು ಆಡುವ ಮಟ್ಟಕ್ಕೆ ತಂಡವನ್ನು ಮುನ್ನಡೆಸಿದ. ನಲವತ್ತು ಲಕ್ಷ ಜನಸಂಖ್ಯೆಯುಳ್ಳ ಕ್ರೋವೇಷಿಯಾದಂಥ ದೇಶ ಯುರೋಪಿನ ಬಲಾಢ್ಯ ದೇಶಗಳಾದ ಜರ್ಮನಿ, ಸ್ಪೇನ್, ಇಂಗ್ಲೆಂಡ್ ತಂಡಗಳಿಗಿಂತ ಅದ್ಭುತ ಪ್ರದರ್ಶನ ನೀಡಿ ಫೈನಲ್ ತಲುಪಿದ್ದು ಅಸಾಧಾರಣ ಸಾಧನೆ. ಬ್ರೆಜಿಲ್, ಅರ್ಜಂಟೀನಾದಂಥ ದೇಶಗಳಿಗೆ ಸೆಡ್ಡು ಹೊಡೆದು ಪಾರಮ್ಯ ಮೆರೆದಿರುವುದು ಸಣ್ಣ ಸಂಗತಿಯಲ್ಲ.

ಇಂದು ಫುಟ್ಬಾಲ್‌ನ ಚಹರೆಯೇ ಬದಲಾಗಿದೆ. ಆರ್ಥಿಕವಾಗಿ ಸದೃಢ ದೇಶ ಹೊಂದಿದ್ದರೆ ಮಾತ್ರ ಸಾಲದು, ದೇಶಕ್ಕೊಂದು ಒಳ್ಳೆಯ ಫುಟ್ಬಾಲ್ ಸಹ ಇರಬೇಕು ಎಂಬ ಭಾವನೆ ಜಗತ್ತಿನಾದ್ಯಂತ ಬೇರೂರುತ್ತಿದೆ. ಉತ್ತಮ ಕಾರು, ಜಾತಿ ನಾಯಿ, ಭವ್ಯ ಬಂಗಲೆ ಹೇಗೆ ಸ್ಟೇಟಸ್ ಸಿಂಬಲ್ಆಗಿವೆಯೋ ಫುಟ್ಬಾಲ್ ಟೀಮ್ ಸಹ. ಅದಕ್ಕಾಗಿಯೇ ಮೊನ್ನೆ ವಿಶ್ವಕಪ್ ಗೆದ್ದುಕೊಂಡ ಫ್ರಾನ್‌ಸ್ ತಂಡದಲ್ಲಿ ಅರ್ಧಕ್ಕರ್ಧ ಆಟಗಾರರು ಮಾಲಿ, ಕಾಂಗೋ, ಕೆಮರೂನ್, ಅಲ್ಜೇರಿಯಾ, ಗಿನಿ, ಅಂಗೋಲಾ, ಮೊರೊಕ್ಕೋ, ನೈಜೀರಿಯಾ, ಸೆನೆಗಲ್, ಟೋಗೋ ಮೂಲದ(ಆಫ್ರಿಕನ್)ದವರಿದ್ದರು. ಇವರನ್ನು ವಿಶ್ವಕಪ್ ಫುಟ್ಬಾಲ್‌ಗಾಗಿಯೇ ವಿಶೇಷ ತರಬೇತಿ ನೀಡಿ ತಯಾರು ಮಾಡಲಾಗಿತ್ತು. ಬೆಲ್ಜಿಯಮ್‌ನ ಅರ್ಧಕ್ಕರ್ಧ ಆಟಗಾರರೂ ಮೂಲದವರೇ.

ಫುಟ್ಬಾಲ್ ಕೇವಲ ಕ್ರೀಡೆಯಾಗಿ ಉಳಿದಿಲ್ಲ. ಅದೊಂದು ಜಾಗತಿಕ ಶಕ್ತಿಯಾಗಿ, ಪ್ರಬಲ ಆರ್ಥಿಕ ಅಸ್ತ್ರವಾಗಿ, ಪ್ರತಿಷ್ಠೆಯ ಸಂಕೇತವಾಗಿ ಪರಿವರ್ತಿತವಾಗಿದೆ. ವಿಶ್ವಕಪ್ ಫುಟ್ಬಾಲ್‌ನಲ್ಲಿ ಆಡುವ ದೇಶಗಳು ಜಗತ್ತಿನ ಕಣ್ಣಿಗೆ ಶ್ರೇಷ್ಠತೆಯ ಸೊಬಗು ಪಡೆಯುತ್ತವೆ. ವಿಶ್ವಕಪ್ ವಿಜೇತ ದೇಶ ಜಗತ್ತಿನಾದ್ಯಂತ ಸಮಸ್ತರ ಪ್ರಶಂಸೆ, ಆದರಕ್ಕೆ ಪಾತ್ರವಾಗುತ್ತದೆ. ಸ್ವಾಭಾವಿಕವಾಗಿ ದೇಶದ ಇಮೇಜು ತನ್ನಿಂದತಾನೇ ಮೇಲಕ್ಕೆ ಹೋಗುತ್ತದೆ.

ಸಂಗತಿಗಳು ಭಾರತಕ್ಕೆ ಅರಿವಾಗುವುದು ಯಾವಾಗ? ಮೊನ್ನೆಯ ವಿಶ್ವಕಪ್‌ಗೂ, ತನಗೂ ಏನೇನೂ ಸಂಬಂಧವೇ ಇಲ್ಲ ಭಾರತ ವರ್ತಿಸಿತು. ಆಡದಿದ್ದರೇನಂತೆ ಆಟದ ಇನ್ನಿತರ ಅವಕಾಶಗಳನ್ನೂ ಬಳಸಿಕೊಳ್ಳಲಿಲ್ಲ. ಒಟ್ಟಾರೆ ಭಾರತದ ಪಾತ್ರ ಹೇಗಿತ್ತೆಂದರೆ, ಬಯಲಾಟದಲ್ಲಿ ರಾತ್ರಿಯಿಡೀ ಮಲಗಿ ಬೆಳಗಾಗುತ್ತಲೇ ಚಾಪೆಯನ್ನು ಅಲ್ಲೇ ಬಿಟ್ಟು, ಕಣ್ಣೊರೆಸಿಕೊಂಡು ಹೋಗುವ ಪ್ರೇಕ್ಷಕನಂತಿತ್ತು!

very bad!

Tags

ವಿಶ್ವೇಶ್ವರ್ ಭಟ್

ಇವರ ಊರು ಉತ್ತರ ಕನ್ನಡದ ಕುಮಟಾದ ಮೂರೂರು. ಓದಿದ್ದು ಎಂ.ಎಸ್ಸಿ ಹಾಗೂ ಎಮ್.ಎ. ನಾಲ್ಕು ಚಿನ್ನದ ಪದಕ ವಿಜೇತ. ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ. ವೃತ್ತಿಯ ಆರಂಭದಲ್ಲಿ ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕ. ಆನಂತರ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್. ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿ. ಕನ್ನಡದ ಜನಪ್ರಿಯ ದೈನಿಕ ‘ವಿಜಯ ಕರ್ನಾಟಕ’ ದ ಮಾಜಿ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇಲ್ಲಿ ತನಕ ಬರೆದಿದ್ದು 65 ಪುಸ್ತಕಗಳು. ವಿಜಯ ಕರ್ನಾಟಕದಲ್ಲಿದ್ದಾಗ ಬರೆದಿದ್ದು ‘ನೂರೆಂಟು ಮಾತು, ಜನಗಳ ಮನ ಹಾಗೂ ಸುದ್ದಿಮನೆ ಕತೆ’ ಜನಪ್ರಿಯ ಅಂಕಣಗಳು. ಐವತ್ತಕ್ಕೂ ಹೆಚ್ಚು ದೇಶ ಸುತ್ತಿದ ಅನುಭವ. 2005 ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರ. ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಜತೆ ಹದಿನೈದು ದಿನ ನಾಲ್ಕು ದೇಶಗಳಲ್ಲಿ ಪಯಣ. ಪ್ರಸ್ತುತ ವಿಶ್ವವಾಣಿಯ ಪ್ರಧಾನ ಸಂಪಾದಕ. ಇವರ ಅಂಕಣಗಳು ‘ನೂರೆಂಟು ವಿಶ್ವ’ ಮತ್ತು ’ಇದೇ ಅಂತರಂಗ ಸುದ್ದಿ’ ಗುರುವಾರ ಮತ್ತು ಭಾನುವಾರ ಓದಬಹುದು.

Related Articles

Leave a Reply

Your email address will not be published. Required fields are marked *

Language
Close