About Us Advertise with us Be a Reporter E-Paper

Breaking Newsಪಾಲಿಟಿಕ್ಸ್ಪ್ರಚಲಿತ
Trending

ನೋಟ್‌ಬಂಧಿ ದೇಶದ ಅತಿ ದೊಡ್ಡ ಹಗರಣ: ರಾಹುಲ್‌ ಗಾಂಧಿ

ಸಾಗರ್‌: ನೋಟು ಅಮಾನ್ಯೀಕರಣದ ದೇಶ ಕಂಡ ಅತಿ ದೊಡ್ಡ ಹಗರಣವಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ದೇಶದ ಅತಿ ದೊಡ್ಡ ಹಗರಣವಾಗಿ ನೋಟು ಅಮಾನ್ಯೀಕರಣಕ್ಕೆ ಮುಂದಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಡವರ ಶ್ರಮದ ಹಣವನ್ನು ಕಿತ್ತು ಕೆಲವೇ ಕೆಲವು ಸಿರಿವಂತರಿಗೆ ನೀಡಿದ್ದಾರೆ” ಎಂದು ರಾಹುಲ್‌ ಆಪಾದನೆ ಮಾಡಿದ್ದಾರೆ.

“ನೋಟ್‌ಬಂಧಿ ಮೂಲಕ ದೇಶದ ಶ್ರಮಿಕ ಜನ ಬ್ಯಾಂಕ್‌ ಎದುರು ಸಾಲುಗಳಲ್ಲಿ ಜಮಾಯಿಸಬೇಕಾಗಿ ಬಂತು. ನಿಮ್ಮನ್ನು ಮೋದಿ ಹೇಗೆ ಲೂಟಿ ಮಾಡಿ ಸಿರಿವಂತರಿಗೆ ಸಹಾಯ ಮಾಡಿದ್ದಾರೆ ಎಂದು ಕಾಲವೇ ತಿಳಿಸಲಿದೆ” ಎಂದು 48 ವರ್ಷದ ಯುವ ನಾಯಕ ತಿಳಿಸಿದ್ದಾರೆ.

“ತಾವೊಬ್ಬ ಚೌಕಿದಾರ ಎಂದು  ಮೋದಿ ಹೇಳುತ್ತಾರೆ. ಆದರೆ ಈ ಚೌಕಿದಾರ ಒಬ್ಬ ಕಳ್ಳ ಎಂದು ಜನರು ಪ್ರತಿಕ್ರಿಯಿಸಲಿದ್ದಾರೆ” ಎಂದು ಮಧ್ಯ ಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರ ರ‍್ಯಾಲಿ ಸಂದರ್ಭ ಹೇಳಿದ್ದಾರೆ.

ರಫೇಲ್‌ ವಿಮಾನ ಸಂಬಂಧ ತಮ್ಮ ಎಂದಿನ ವಾಗ್ದಾಳಿ ನಡೆಸಿದ ರಾಹುಲ್‌ ಗಾಂಧಿ, “ಈ ಡೀಲ್‌ ಮೂಲಕ ಅನಿಲ್‌ ಅಂಬಾನಿಗೆ ಮೋದಿ 30,000 ಕೋಟಿ ರುಗಳನ್ನು ನೀಡಿದ್ದಾರೆ. ರಿಲಯನ್ಸ್ ಸಂಸ್ಥೆಯನ್ನು ಆಫ್‌ಸೆಟ್‌ ಡೀಲ್‌ಗೆ ಪರಿಗಣಿಸಲು ಭಾರತ ಸರಕಾರ ತಮಗೆ ತಿಳಿಸಿದ್ದಾಗಿ ಫ್ರಾನ್ಸ್ ಮಾಜಿ ಪ್ರಧಾನಿ ಫ್ರಾಂಕೋ ಹೊಲಾಂಡೆ ತಿಳಿಸಿದ್ದಾರೆ” ಎಂದಿದ್ದಾರೆ.

 

Tags

Related Articles

Leave a Reply

Your email address will not be published. Required fields are marked *

Language
Close