About Us Advertise with us Be a Reporter E-Paper

Breaking Newsರಾಜ್ಯ

ರಾಜಕೀಯದ ಬಗ್ಗೆ ಆಸಕ್ತಿಯಿಲ್ಲ: ಮಹಾರಾಜ ಯದುವೀರ್

ಹಾಸನ: ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಊಹಾಪೋಹಗಳಿಗೆ ಸ್ವತಃ ಮಹಾರಾಜರು ಸ್ಪಷ್ಟನೆ ಕೊಟ್ಟಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ರಾಜಕೀಯದ ಬಗ್ಗೆ ಸದ್ಯಕ್ಕೆ ನನಗೆ ಆಸಕ್ತಿಯಿಲ್ಲ. ಹಿಂದಿನಿಂದಲೂ ಜನರೊಂದಿಗೆ ರಾಜಪರಂಪರೆಯ ನಂಟು ಇದೆ. ಆ ಸಂಬಂಧವನ್ನು ಮುಂದುವರಿಸಿಕೊಂಡು ಹೋಗೋದಷ್ಟೇ ನನ್ನ ಮುಂದಿರುವ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಮೈಸೂರಿನ ಪಾರಂಪರಾಗತ ಪರಂಪರೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ತಾನು ಸಮಾಜಸೇವೆಯಲ್ಲಿ ಅಥವಾ ಕೆಲವು ಕ್ಷೇತ್ರದಲ್ಲಿ ತೊಡಗಿಸಿಕೊಂಡು ಮುಂದುವರಿಸುವುದಾಗಿ ಹೇಳಿದರು.

ಇನ್ನು ಕೊಡಗಿನಲ್ಲಿ ನೆರೆಹಾನಿ ಕುರಿತು ಪ್ರತಿಕ್ರಿಯಿಸಿದ ಮಹಾರಾಜರು, ನಾನು ವಿದೇಶದಲ್ಲಿ ಇದ್ದುದರಿಂದ ನೆರೆ ಹಾವಳಿಯಿಂದ ತತ್ತರಿಸಿ ಹೋಗಿರುವ ಕೊಡಗಿಗೆ ಭೇಟಿ ಕೊಡಲು ಸಾಧ್ಯವಾಗಿಲ್ಲ. ಶೀಘ್ರದಲ್ಲೇ ಮಡಿಕೇರಿಗೆ ಭೇಟಿ ನೀಡುವುದಾಗಿ ತಿಳಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close