ಧಾರವಾಡ ಜಿಲ್ಲೆಯ ನುಗ್ಗಿಕೆರೆ ಗ್ರಾಮದಲ್ಲಿರುವ ಆಂಜನೇಯ ಎಂದರೆ ಭಕ್ತಿಯ ಸಂಕೇತ. ಧೈರ್ಯ, ಸಾಹಸ, ಶೌರ್ಯದ ಪ್ರತಿಬಿಂಬ. ಆಂಜನೇಯನನ್ನು ನೆನೆದರೆ ಮನಸ್ಸಿನ ಭಯಗಳು ದೂರವಾಗುತ್ತವೆ. ಜ್ಞಾನ ವೃದ್ಧಿಯಾಗುತ್ತದೆ. ಈ ಆಂಜನೇಯನ ಕಣ್ಣುಗಳಲ್ಲಿ ಸಾಲಿಗ್ರಾಮ ಇದೆ. ಈ ಸಾಲಿಗ್ರಾಮ ಶಕ್ತಿಯಿಂದಾಗಿ ನುಗ್ಗಿಕೆರೆ ಆಂಜನೇಯನ ಬಳಿ ಏನು ಬೇಡಿದರೂ ಈಡೆರುತ್ತೆ ಎಂಬ ಪ್ರತೀತಿ. ಒಂದು ಕಣ್ಣು ಬಲಕ್ಕೆ ವೀಕ್ಷಿಸುತ್ತಿದ್ದರೆ ಇನ್ನೊಂದು ಕಣ್ಣು ಎಡಕ್ಕೆ ವೀಕ್ಷಿಸುತ್ತಿದೆ.
ಪ್ರತಿಷ್ಠಾಪಿತವಾದ ಆಂಜನೇಯನ ಮಹಿಮೆಯ ಬಗ್ಗೆ ಮತ್ತು ಅವನ ಶಕ್ತಿಯ ಬಗ್ಗೆ ಸುಂದರವಾದ ಕೆತ್ತನೆಗಳಿರುವ ಬೆಳ್ಳಿಯ ಬಾಗಿಲು ಚೌಕಟ್ಟು ಇದರೊಳಗೆ ಕೇಸರಿ ಬಣ್ಣದ ಛಾಯೆ ಅದರೊಳಗೆ ಮೂಡಿ ಬಂದಂತಿರುವ ಆಂಜನೇಯ.
ಪಂಚಲೋಹದ ಮೂರ್ತಿ
ಕೆಂಪು ಮುಖ, ತಲೆಗೆ ಬೆಳ್ಳಿಯ ಕಿರೀಟ,ಹರಸುತ್ತಿರುವ ಕೈ, ವಿವಿಧ ಬಣ್ಣದ ಕಾಗದ, ಹರಳುಗಳಿಂದ ಅಲಂಕೃತವಾದ ಶರೀರ, ಕುತ್ತಿಗೆಯಲ್ಲಿ ಜಪಮಾಲೆ ಹಾಗೂ ಮೈ ತುಂಬ ಹಾರೆಗಳು ಇದು ಈ ಹನಮಪ್ಪನ ಸುಂದರ ಶರೀರದ ಸ್ವರೂಪ. ಈ ವಿಗ್ರಹದ ವೀರಾಂಜನೇಯ ಗದೆ ಹೊತ್ತು ಇನ್ನೊಂದು ಕೈಯಲ್ಲಿ ಸಂಜೀವಿನಿ ಪರ್ವತ ಹೊತ್ತಿದಾನೆ. ಇದು ಪಂಚಲೋಹದ ಮುದ್ದಾದ ಮೂರ್ತಿ. ಕೋರಳಲ್ಲಿ ನಂಜಬಟ್ಟಲಿನ ಹೂ ಹಾರವನ್ನು ಧರಿಸಿ ನಿಂತ ಆಂಜನೇಯ ತನ್ನ ಭಾವ ಭಂಗಿಯಿಂದಲೇ ಮನ ಸೆಳೆಯುತ್ತಾನೆ.
ಸುಂದರವಾದ ಹಚ್ಚ ಹಸಿರಿನಿಂದ ಉಕ್ಕುತ್ತಿರುವ ಪರಿಸರ. ವಿಶಾಲವಾದ ಕೆರೆ. ಕೆರೆ ದಂಡೆ ಮೇಲೆ ರಸ್ತೆ. ಅಚ್ಚುಕಟ್ಟಾದ ದಂಡೆಯ ಮೇಲೆ ಭಕ್ತ ಸಾಗರ. ಈ ಆಂಜನೇಯ ದೇವಸ್ಥಾನದ ಬೀದಿಯಲ್ಲಿ ಪೂಜೆಗೆ ಬೇಕಾದ ಹಣ್ಣು-ಕಾಯಿ, ಹೂ-ಹಾರಗಳು ಸಿಗುತ್ತವೆ. ಜೋಡಿಸಿಟ್ಟ ತೆಂಗಿನ ಕಾಯಿಗಳು, ಬಾಳೆಹಣ್ಣು, ಎಕ್ಕದ ಹೂವಿನ ಮಾಲೆ, ಚೆಂಡು ಹೂವಿನ ಮಾಲೆ – ಇವುಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.
ಸುಮಾರು 700 ವರ್ಷಗಳ ಹಿಂದೆ ಪ್ರತಿಷ್ಠಾಪನೆಯಾದ ಈ ದೇವಸ್ಥಾನವು ಭಕ್ತರ ಪಾಲಿನ ನಂಬಿಕೆಯ ತಾಣವಾಗಿದೆ. ನಿತ್ಯ ಇಲ್ಲಿಗೆ ಬರುವ ಸಾವಿರಾರು ಭಕ್ತರು ಕೇವಲ ದರ್ಶನದಿಂದ ತಮ್ಮ ಕಷ್ಟಗಳಿಂದ ಪಾರಾಗುತ್ತಿದ್ದಾರೆ. ಇದು ಸುಂದರವಾದ ಪರಿಸರದಲ್ಲಿದೆ.
ಭಕ್ತರ ಪಾಲಿನ ಕಾಮಧೇನು
ಭಲ ಬೀಮ ಪ್ರಸನ್ನ, ಹನಮಪ್ಪ ಎಂದೆಲ್ಲ ಕರಿಸಿಕೊಳ್ಳುವ ಈ ಖ್ಯಾತಿ ದಿನೇ ದಿನೇ ಬೆಳೆಯುತ್ತಿದೆ. ಅದಕ್ಕೆ ಕಾರಣ ಇಲ್ಲಿ ಬೇಡಿ ಬಂದ ಭಕ್ತರ ಇಷ್ಟಾರ್ಥಗಳು ಈಡೇರುವುದು.ಈ ದೇವಾಲಯದಲ್ಲಿ ಬೇಡಿಕೆ ಇಡುತ್ತಿದ್ದಂತೆಯೇ ಕೆಲಸ ತಕ್ಷಣ ನೆರವೇರಿಬಿಡುತ್ತದೆ ಎನ್ನುವುದು ಭಕ್ತರ ಅನುಭವ.
ಈ ದೇವಾಲಯಕ್ಕೆ ಎಲ್ಲ ಮತ ಪಂಥಗಳ ಜನರು ಬಂದು, ಹನುಮಂತನ ದರ್ಶನ ಮಾಡಿದ್ದಾರೆ. ಈ ದೇಸಾಯಿ ಮನೆತನದ ಮೂರು ಕುಟುಂಬಗಳು ಪ್ರತಿ ವರ್ಷ ಪಾಳಿಯ ಪ್ರಕಾರ ದೇವಾಲಯದ ಕೈಂಕರ್ಯ ನಡೆಸುತ್ತಿದ್ದಾತರೆ. ದೇವಾಲಯದ ಪೂಜೆ, ಅಭಿವೃದ್ಧಿ ವ್ಯವಸ್ಥೆ ಇವೆಲ್ಲಾ ಇವರ