ಲಂಕಾ ವಿರುದ್ದ ಏಕದಿನ ಸರಣಿ: ತಂಡ ಇಂದು ಪ್ರಕಟ

Posted In : ಕ್ರೀಡೆ

ದೆಹಲಿ: ಶ್ರೀಲಂಕಾ ವಿರುದ್ಧ ನಡೆಯಲಿರುವ ಐದು ಏಕದಿನ ಪಂದ್ಯಕ್ಕೆ ಭಾನುವಾರ ಇಂಡಿಯಾ ಟೀಂ ಆಯ್ಕೆ ನಡೆಯಲಿದೆ. ಬಿಸಿಸಿಐ ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸಲಿದೆ. ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ಸದ್ಯ ಶ್ರೀಲಂಕಾ ಪ್ರವಾಸ ದಲ್ಲಿ ದ್ದಾರೆ.

ಸಂದೀಪ್ ಸಿಂಗ್ ಹಾಗೂ ಗಾಂಧಿ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಸ್ಕೈಪ್ ಮೂಲಕ ಸಭೆ ನಡೆಸಿ ಆಯ್ಕೆ ಸಮಿತಿ ತಂಡ ವನ್ನು ಪ್ರಕಟಿಸಲಿದೆ. ಇದೇ 20ರಂದು ಮೊದಲ ಏಕದಿನ ಪಂದ್ಯ ನಡೆಯಲಿದ್ದು, ಸೆ.3ರಂದು ಕೊನೆಗಳ್ಳಲಿದೆ. ಮನೀಷ್ ಪಾಂಡೆ ಏಕದಿನ ಪಂದ್ಯದಲ್ಲಿ ಮೈದಾನಕ್ಕಿಳಿಯುವ ಸಾಧ್ಯತೆಯಿದೆ. ಯುವರಾಜ್ ಸಿಂಗ್ ಹಾಗೂ ಎಂ.ಎಸ್.ಧೋನಿ ಫಿಟ್ನೆಸ್ ಟೆಸ್ಟ್ ನೀಡಿದ್ದಾರೆ. ಯುವರಾಜ್ ಸ್ಥಾನ ಪಡೆದರೆ, ಅಜಿಂಕ್ಯ ರಹಾನೆ ಹಾಗೂ ದಿನೇಶ್ ಕಾರ್ತಿಕ್ ಹೊರಗುಳಿಯ ಬೇಕಾಗ ಬಹುದು.

ಯುವರಾಜ್ ಕಳೆದ ಏಳು ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿಲ್ಲ. 162 ರನ್ ಗಳಿಸಿರುವ ಯುವಿ ಒಮ್ಮೆ ಬೌಲಿಂಗ್ ಮಾಡಿದ್ದರು.

Leave a Reply

Your email address will not be published. Required fields are marked *

two × two =

 
Back To Top