About Us Advertise with us Be a Reporter E-Paper

Breaking Newsದೇಶಪಾಲಿಟಿಕ್ಸ್ಪ್ರಚಲಿತ
Trending

2019ರ ಚುನಾವಣಾ ಪ್ರಚಾರದ ಸಾರಥ್ಯ ರಾಹುಲ್‌ಗೆ ನೀಡಬೇಕು: ಒಮರ್‌ ಅಬ್ದುಲ್ಲಾ

ದೆಹಲಿ: 2019ರ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಬೇಕಾದಲ್ಲಿ, ಒಗ್ಗಟ್ಟಾಗಿರುವ ವಿಪಕ್ಷಗಳಿಗೆ ಕಾಂಗ್ರೆಸ್‌ ಬೆನ್ನೆಲುಬಾಗಬೇಕಿದ್ದು, ರಾಹುಲ್‌ ಗಾಂಧಿ ಮುಂಚೂಣಿಯಲ್ಲಿ ನಿಂತು ಸಾರಥ್ಯ ವಹಿಸಬೇಕು ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಒಮರ್‌ ಅಬ್ದುಲ್ಲಾ ಹೇಳಿದ್ದಾರೆ.

“ವಿಪಕ್ಷಗಳ ಪೈಕಿ ಸಿಂಹಪಾಲಿನ ಸೀಟುಗಳು ಕಾಂಗ್ರೆಸ್‌ ಬಳಿ ಇರಲಿದ್ದು, ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರಾನೇರಾ ಡಸಮರ ನಡೆಯಲಿರುವ ಕಾರಣ ಈ ಸಮರದಲ್ಲಿ ಕಾಂಗ್ರೆಸ್‌ ಬೆನ್ನೆಲುಬಾಗಿ ನಿಲ್ಲಬೇಕು. ಸರಕಾರ ರಚನೆ ಮಾಡಬೇಕಿದ್ದಲ್ಲಿ 272 ಸ್ಥಾನಗಳನ್ನು ಜಯಿಸಬೇಕು. ಇಷ್ಟು ಸೀಟುಗಳನ್ನು ಪ್ರಾದೇಶಿಕ ಪಕ್ಷಗಳು ಜಯಿಸಲಾರವು. ಬಿಜೆಪಿಯೇತರ ಸರಕಾರ ರಚನೆ ಮಾಡಬೇಕಿದ್ದಲ್ಲಿ ಕಾಂಗ್ರೆಸ್‌ ಕನಿಷ್ಠ 100 ಕ್ಷೇತ್ರಗಳಲ್ಲಾದರೂ ಜಯಿಸಬೇಕು” ಎಂದು ಅಬ್ದುಲ್ಲಾ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆ ಚರ್ಚೆ ಮಾಡಲು ಅಬ್ದುಲ್ಲಾ ಕೋಲ್ಕತ್ತಾಗೆ ಆಗಮಿಸಿದ್ದಾರೆ.

2019ರ ಚುನಾವಣಾ ಪ್ರಚಾರದಲ್ಲಿ ರಾಹುಲ್ ಸಾರಥ್ಯದ ಕುರಿತು ಮಾತನಾಡಿದ ಅಬ್ದುಲ್ಲಾ, “ಖಂಡಿತವಾಗಿಯೂ, 2019ರ ಚುನವಣಾ ಪ್ರಚಾರದಲ್ಲಿ ರಾಹುಲ್‌ ಮುಂಚೂಣಿ ಪ್ರಚಾರಕರಾಗಲಿದ್ದಾರೆ. ಇದೇ ವೇಳೆ ಯುಪಿಎ ನಾಯಕಿಯಾದ ಸೋನಿಯಾ ಗಾಂಧಿ ಕೂಡಾ ಅಭಿಯಾನದ ಭಾಗವಾಗಲಿದ್ದಾರೆ” ಎಂದು ತಿಳಿಸಿದ್ದಾರೆ.

ರಾಹುಲ್‌ ಗಾಂಧಿ ಈಗ ಸಾಕಷ್ಟು ಮಾಗಿದ್ದು, ಇತ್ತೀಚಿನ ಕರ್ನಾಟಕ ಚುನಾವಣೆಯಲ್ಲಿ ಸರಕಾರ  ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇದಕ್ಕೆ ಸಾಕ್ಷಿಯಾಗಿದೆ ಎಂದು ಅಬ್ದುಲ್ಲಾ, “ದೇಶಾದ್ಯಂತ ತನ್ನ ಛಾಪು ಹೊಂದಿರುವ ಕಾಂಗ್ರೆಸ್‌ಗೆ ಈ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿ ಇರಲಿದೆ. ಇದರರ್ಥ ಪ್ರದೇಶಿಕ ಪಕ್ಷಗಳಿಗೆ ಪಾತ್ರವಿಲ್ಲ ಎಂದಲ್ಲ. ಅವುಗಳೂ ಸಹ ಮುಖ್ಯವಾಗಿವೆ” ಎಂದು ಹೇಳಿದ್ದಾರೆ.

 

Tags

Related Articles

Leave a Reply

Your email address will not be published. Required fields are marked *

Language
Close