About Us Advertise with us Be a Reporter E-Paper

ಅಂಕಣಗಳು

ಮಳೆ ನಿಂತುಹೋದ ಮೇಲೆ; ಕೊಡಗಿನ ಮರುವಸತಿ ಹೇಗೆ?

ಪ್ರಚಲಿತ ನಯನ ನಟರಾಜನ್

ದುರಂತ ನಿರ್ವಹಣೆ ಎಂಬ ಹೊಣೆಗಾರಿಕೆ ಸರಕಾರದ್ದು, ಸ್ಥಳೀಯರದ್ದು, ಇತರ ಪ್ರದೇಶಗಳಲ್ಲಿರುವವರದ್ದು ಒಟ್ಟಾರೆ ಎಲ್ಲ ದೇಶವಾಸಿಗಳದು. ಕೊಡಗಿನ ಪ್ರವಾಹ ಪರಿಸ್ಥಿತಿ ಮಾನವತೆಗೆ ಮುಂದೊಡ್ಡಿದ್ದ ಬೃಹತ್ ಸವಾಲನ್ನು ಹಲವಾರು ಸ್ವಯಂಸೇವಕರು ಭಾರತದ ಮೂಲೆ ಮೂಲೆಗಳಿಂದ ಹೊತ್ತಿರುವುದನ್ನು ಗಮನಿಸುವುದು ಒಂದು ಹೃದ್ಯವಾದ ಸಂಗತಿ. ಮಳೆಯ ಆರ್ಭಟಕ್ಕೆ ತುತ್ತಾದ ಅಲ್ಲಿನ ಮನೆಗಳು, ಮೂಲ ಸಂಪತ್ತು, ರಸ್ತೆ, ತೋಟ ಇವೆಲ್ಲಗಳಿಂದ ರಾಜ್ಯಕ್ಕೆ, ದೇಶಕ್ಕೆ ತುಂಬಲಾರದಂತಹ ನಷ್ಟ ಮೂಡಿರುವ ಸನ್ನಿವೇಶದಲ್ಲಿಯೇ ಮರುವಸತಿ ಕಾರ್ಯವೂ ವೇಗ ಪಡೆದುಕೊಳ್ಳುತ್ತಿದೆ.

ವರ್ಷಾ ಎಂಬ ಯುವತಿ ಕೊಡಗಿನ ದುರಂತ ನಿರ್ವಹಣೆಯ ಸ್ವಯಂಸೇವಕರಲ್ಲಿ ಒಬ್ಬರು. ಆಕೆಯ ಪ್ರಕಾರ ಅಲ್ಲಿನ ಜನರಿಗೆ ಸಾಕಷ್ಟು ಸಾಮಾನು ಸರಬರಾಜಾಗಿದೆಯಾದರೂ ಅದನ್ನು ನಿಜವಾಗಲೂ ಅಗತ್ಯವಿರುವವರಿಗೆ ಸರಿಯಾದ ಸಮಯಕ್ಕೆ ತಲುಪಿಸಲು ಸಾಧ್ಯವಾಗದಂತಾಗಿದೆ. ಹೆಂಗಸರನೇಕರು ಸೀರೆಗಳನ್ನು ದಾನವಾಗಿ ಕಳುಹಿಸಿzರೆ. ಆದರೆ ಅದನ್ನು ಧರಿಸಲು ತಕ್ಕ ಒಳ ಉಡುಪನ್ನು ಕಳುಹಿಸಲು ಮರೆತಿzರೆ. ಬಿಸ್ಕತ್ತು, ಅಕ್ಕಿ, ಬೇಳೆಗಳನ್ನು ಮೂಟೆ ಮೂಟೆಗಳಲ್ಲಿ ಕಳುಹಿಸಿzರೆ. ಆದರೆ ಖಾರದ ಪುಡಿ ಅಷ್ಟೇ ಮುಖ್ಯವಲ್ಲವೇ? ವಿಶಾಲಹೃದಯಿಗಳಿಗೆ ತಮ್ಮ ಕಡೆಯಿಂದ ಸಾಧ್ಯವಾಗುವಷ್ಟು ಸಹಾಯ ಮಾಡಲು ಕಾತರವೇನೋ ಇದೆ.  ಆದರೆ ಸುವ್ಯವಸ್ಥಿತವಾಗಿ ಮಾಡಲು ಸಮಯ ಇಲ್ಲ ಅಥವಾ ಹೊಳೆಯುವುದಿಲ್ಲ.

‘-ಂಡ್ಸ್ ಆ- ಲೇಕ್ಸ್’ನ ಸ್ಥಾಪಕ ಹಾಗು ಸಂಯೋಜಕರಾದ ವಿ. ರಾಮ್ ಪ್ರಸಾದರು ಹೇಳುವಂತೆ, ‘ದುರಂತ ನಿರ್ವಹಣೆ ಮಾಡಲು ನಮಗೆ ಈಗ ಭಾವುಕ ಜನರಷ್ಟೇ ಅಲ್ಲ, ವಿದ್ಯಾವಂತ ಹಾಗು ಬುದ್ಧಿಕೌಶಲಗಳನ್ನುಳ್ಳ ಪ್ರತಿಭಾವಂತ ಶಕ್ತಿಗಳು ಸಹ ಅತಿ ಶೀಘ್ರದಲ್ಲಿ ಬೇಕಾಗಿದೆ. ಪಶ್ಚಿಮ ಘಟ್ಟಗಳನ್ನು ಕಾಪಾಡಲು ಅಲ್ಲಿರುವ ಜನರ ಜೊತೆ, ಸರಕಾರಿ ಅಽಕಾರಿಗಳು ಮತ್ತು ಸಮಾಜಸೇವೆಯಲ್ಲಿ ನುರಿತವಾಗಿರುವಂತಹ ವ್ಯಕ್ತಿಗಳು ಸೇರಿ ಜೀವವೈವಿಧ್ಯ ಸಂಪತ್ತನ್ನು ಕಾಪಾಡುವಂತಹ ಒಂದು ಸಾಮೂಹಿಕ ಪ್ರಯತ್ನದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ’.

ಪಾರು ಮಾಡುವ ಚಟುವಟಿಕೆಗಳ ಜತೆ ಪರಿಹಾರ, ನೈರ್ಮಲ್ಯೀಕರಣ, ಪುನರ್ವಸತಿ ಮಳೆ ಚಚ್ಚಿ ನಿಂತಿರುವ ಈ ವೇಳೆ ಆಗಬೇಕಾಗಿದೆ.  ಮೊದಲ ವಾರ ಜನರೆ ಮುನ್ನುಗ್ಗಿ ಸಹಾಯ ಮಾಡಿದ್ದಂತೂ ನಿಜ. ಆದರೆ ಮುಂದಿನ ದಿನಗಳು ಹೇಗೆ? ಇದರ ಬಗ್ಗೆ ಎಲ್ಲರೂ ಯೋಚಿಸಬೇಕು. ಎಲ್ಲರ ಪ್ರಯತ್ನವಿಲ್ಲದೆ ಒಂದು ಊರು ಸುಧಾರಿಸಲು ಸಾಧ್ಯವಿಲ್ಲ. ಬರಿ ಸಹಾಯ ಮಾಡಿದರಷ್ಟೇ ಸಾಲದು. ಜನರಿಗೆ, ಆ ಜಾಗಕ್ಕೆ ಸೂಕ್ತವಾಗಿರುವಂತೆ ನೆರವು ಒದಗಿಸಬೇಕು. ಏಕರೀತಿಯ ಬೆಳೆ ಬೆಳೆಯುವದಷ್ಟೇ ಸಾಲದು. ಮಿಶ್ರ ಬೆಳೆಯನ್ನೂ ಬೆಳೆಯಲು ಪ್ರಯತ್ನಿಸಬೇಕು.

ಪ್ರಕೃತಿ ವಿಕೋಪಕ್ಕೆ ತಿರುಗಿದರೆ, ಪರಿಸರದಲ್ಲಿ ಸಾಕಷ್ಟು ಹಾನಿಯುಂಟಾಗುತ್ತದೆ. ಮನುಷ್ಯರು ಒಂದು ದುರಂತದ ನಿರ್ವಹಣೆ ಮಾಡುವಷ್ಟರಲ್ಲಿ ಸಾಕಷ್ಟು ವಿಷಯಗಳು ಕೈ ಮೀರಿ ಹೋಗಿಬಿಟ್ಟಿರುತ್ತವೆ. ನಿರ್ವಹಣೆಗೆ ಮೊದಲು ತಡೆಗಟ್ಟುವಿಕೆ ಮಾಡುವಂತಹ ವಿಧಾನಗಳ ಬಗ್ಗೆ ನಾವು ತಿಳಿಯಬೇಕು. ಇದು ಕೇವಲ ಸರಕಾರದ ಕೆಲಸ ಆಗಿರುವುದಿಲ್ಲ. ಪ್ರತಿಯೊಬ್ಬ ಮನುಷ್ಯ ತಾನು ನೆಲೆಸಿರುವ ತಾಣದ ಬಗ್ಗೆ, ಅದರ ಪರಿಸರದ ಬಗ್ಗೆ ಸಾಕಷ್ಟು ಕಾಳಜಿ ವಹಿಸಬೇಕು. ನಮ್ಮ ಜೊತೆ ಬಾಳುವ ಪ್ರಾಣಿಪಕ್ಷಿಗಳ, ಗಿಡಮರಗಳ ಬಗ್ಗೆ ಸೂಕ್ಷ್ಮತೆ ಬೆಳೆಸಿ ಕೊಳ್ಳಬೇಕು. ಕೇವಲ ಕುತೂಹಲ ಹಾಗು ಆಸಕ್ತಿ ದೃಷ್ಟಿಯಿಂದಷ್ಟೇ ಈ ಪ್ರಯತ್ನದಲ್ಲಿ ತೊಡಗಿದರೆ ಸಾಲದು. ಮೂಲಭೂತವಾಗಿ ನಾವು ನೆಲೆಸಿರುವ ಜಾಗ ಅಲ್ಲಿನ ಪರಿಸರ ಸಂಪತ್ತಿನ ಮೇಲೆ ಅವಲಂಬಿತವಾಗಿರುತ್ತದೆ ಎಂಬುದರ ಮಹತ್ವ ಮನಗಾಣಬೇಕು. ಮೂಲಭೂತ ನಿಯಮದಂತೆ, ಪ್ರತಿಯೊಂದು ಜೀವರಾಶಿಯೂ ಅದರದೇ ಆದ ಒಂದೊಂದು ಕಾರ್ಯವನ್ನು ನಿರ್ವಹಿಸಿ ಪ್ರಕೃತಿಯನ್ನು ಸಮತೋಲನದಲ್ಲಿಟ್ಟಿರುತ್ತದೆ. ಇದನ್ನು ಮಾನವ ತನ್ನ ಸ್ವಂತಕ್ಕಾಗಿ ಮಾಡುವ ಕೆಲಸಗಳಿಂದ ಏರುಪೇರು ಮಾಡುತ್ತಾನೆ.

ಮಳೆಯ ಆವೇಶದಿಂದಾದ ಕೊಡಗಿನ ಹಾನಿಗಳ ಬಗ್ಗೆ ಕಳೆದ ಏಳೆಂಟು ದಿನಗಳಿಂದ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಆದರೆ ಅದರ ವಿಶ್ಲೇಷಣೆಯನ್ನು ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದೇವೆಯೇ? ಸುಮಾರು ಏಳು ವರ್ಷಗಳ ಹಿಂದೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆ- ಸೈನ್ಸ್‌ನ ಪರಿಸರಶಾಸ ವಿಭಾಗದ ಮುಖ್ಯಸ್ಥರಾಗಿದ್ದ  ಮಾಧವ ಗಾಡ್ಗೀಳ್ ಪಶ್ಚಿಮ ಘಟ್ಟಗಳಲ್ಲಿ ನಡೆಯುವ ಅಭಿವೃದ್ಧಿ ಕೆಲಸಗಳನ್ನು ನಿಯಂತ್ರಿಸುವ ಬಗ್ಗೆ ಒಂದು ಅಧ್ಯಯನ ನಡೆಸಿ ಸುದೀರ್ಘ ವರದಿಯನ್ನು ಹೊರ ತಂದಿದ್ದರು.

ಬಹಳ ಕ್ರಮಬದ್ಧವಾಗಿ ವಿಶ್ಲೇಷಿಸಿ ತಯಾರಿಸಿದ ಆ ವರದಿಯಲ್ಲಿ, ಬೆಳವಣಿಗೆ ಹೆಸರಲ್ಲಿ ನಡೆಯುವ ಉದ್ಯಮಗಳ ಕುರಿತು ಅಧ್ಯಯನ ಮಾಡಿ ಅದರಿಂದಾಗುವ ಜೀವವೈವಿಧ್ಯದ ಮೇಲೆ ಹಾನಿಕರ ಪ್ರಭಾವವುಂಟು ಮಾಡುವ ಶಕ್ತಿಗಳನ್ನು ಗುರುತಿಸುತ್ತ ಅವುಗಳನ್ನು ತಡೆಗಟ್ಟುವ ಅನೇಕ ಸಲಹೆಗಳನ್ನು ಅವರು ಕೊಟ್ಟಿzರೆ. ೫೨೨ ಪುಟಗಳ ಆ ವರದಿಯನ್ನು ಯಾರು ಬೇಕಾದರೂ ಅಂತರ್ಜಾಲದಲ್ಲಿ ಹುಡುಕಿ ಡೌನ್‌ಲೋಡ್ ಮಾಡಬಹುದು. ಅದನ್ನು ಓದಿದ ಮೇಲೆ ಕೊಡಗು ಮತ್ತು ಕೇರಳದಲ್ಲಿ ಆಗಿರುವ ಹಾನಿಗಳ ಬಗ್ಗೆ ಹೆಚ್ಚು ತಿಳಿವಳಿಕೆ ಮೂಡುವುದಂತೂ ಸತ್ಯ.

ಸರಕಾರ ಗಾಡ್ಗಿಳ್ ವರದಿಯನ್ನು ಹಲವಾರು ಕಾರಣಗಳಿಂದ ಪೂರ್ತಿಯಾಗಿ ಒಪ್ಪಲಿಲ್ಲ. ಇದಕ್ಕೆ ಕಾರಣ ಅದು ಜನಸಾಮಾನ್ಯರ ಆರ್ಥಿಕ ಪ್ರಗತಿಗೆ ಅಡ್ಡವಾಗುತ್ತದೆ ಎಂದು. ಹೀಗಾಗಿ, ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮುಖ್ಯಸ್ಥರಾಗಿದ್ದ ವಿeನಿ, ಕಸ್ತೂರಿರಂಗನ್ ಅವರನ್ನು, ಗಾಡ್ಗೀಳ್ ವರದಿಯನ್ನು ಮತ್ತಷ್ಟು ವಿಶ್ಲೇಷಿಸಿ, ಇನ್ನೊಂದು ಪರಿಷ್ಕೃತ ವರದಿ ತಯಾರಿಸಲು ನೇಮಿಸಲಾಯಿತು.  ಗಾಡ್ಗೀಳ್ ವರದಿಯಲ್ಲಿ ಶೇಕಡಾ ೯೫ರಷ್ಟು ಜಾಗವನ್ನು ಸೂಕ್ಷ್ಮಘಟ್ಟಗಳೆಂದು ನಿರ್ಧರಿಸಿ ಅಲ್ಲಿ ಯಾವುದೇ ಗಣಿಕೆಲಸಗಳನ್ನು ಅಥವ ಜಲ, ವಿದ್ಯುಚ್ಛಕ್ತಿ ಬಳಕೆ ಮಾಡಬಾರದು ಎಂಬುದಾಗಿ ಸೂಚಿಸಿದ್ದರೆ,  ಕಸ್ತೂರಿ ರಂಗನ್, ಕೇವಲ ಗಣಿಕಾರ್ಯಗಳಿಗೆ ಅವಕಾಶ ಕೊಡಬಾರದೆಂದು ಒಪ್ಪಿದರು. ಆದರೆ ಮಿಕ್ಕ ಕೆಲವು ಸಲಹೆಗಳನ್ನು ಬದಲಾಯಿಸಿದರು.

ಈ ಸಂದರ್ಭದಲ್ಲಿ ಕೊಡಗಿನ ಜನಕ್ಕೆ ಹೆಚ್ಚು ಸಾಂತ್ವನ ಕೊಡುವ ಸಂಗತಿಯೆಂದರೆ,  ಅವರ ಜೀವನ ಮೊದಲಿನಂತಾಗುವುದು. ಈಗ ಇರುವ ಗೊಂದಲಗಳಲ್ಲಿ ಈ ವರದಿಗಳು ಮತ್ತೆ ಹೊರಹೊಮ್ಮಿ ಜನರ ಭಾವನೆಗಳನ್ನು ಮಿಡುಕಾಡಿಸಿವೆ. ಅರಣ್ಯ ಸಂಪತ್ತುಗಳನ್ನು ಲೂಟಿ ಮಾಡುವುದರಿಂದ ತಾತ್ಕಾಲಿಕ ಲಾಭಗಳನ್ನು ಪಡೆಯಬಹುದು ಆದರೆ ಪ್ರಕೃತಿಮಾತೆಗೆ ಹೆಚ್ಚು ಕಷ್ಟಕೊಟ್ಟರೆ ಅವಳ ಕೋಪ ತಡೆಯುವ ಶಕ್ತಿ – ಆರ್ಥಿಕವಾಗಾಗಲಿ, ಮಾನಸಿಕವಾಗಾಗಲಿ ಸಾಮಾನ್ಯ ಮನುಷ್ಯರಿಗಿರುವುದಿಲ್ಲ. ಇಂದಿನ ಕೋಟಿಗಟ್ಟಲೆಯ ಆರ್ಥಿಕ ನಷ್ಟವನ್ನು ನಾವೆಲ್ಲರೂ ಅದೆಷ್ಟೇ ಹೆಚ್ಚು ಪಟ್ಟು ಕೆಲಸ ಮಾಡಿದರೂ ತುಂಬಲು ಸಾಧ್ಯವಿಲ್ಲ. ಒಮ್ಮೆ ಕಳೆದುಕೊಂಡ ನೈಸರ್ಗಿಕ ಸಂಪತ್ತು, ಜೀವವೈವಿಧ್ಯ ಮತ್ತೆ ಹುಟ್ಟಬರಲು ಸಾವಿರಾರು ವರ್ಷಗಳು ಬೇಕು ಎಂಬ ಪ್ರಜ್ಞೆಯನ್ನು ಜನತೆ ಕಾಯ್ದುಕೊಳ್ಳಬೇಕು.

ಅಲ್ಲಿಗೆ ವಿಹಾರಯಾತ್ರೆಗೆ ಹೋಗಿಬಂದಿರುವ ಜನರೆಲ್ಲರೂ ಅಲ್ಲಿನ ಸೊಬಗನ್ನು ಸವಿದ ಹಾಗೆ, ಮತ್ತೆ ಅಲ್ಲಿನ ಅಮೂಲ್ಯವಾದ ಮಣ್ಣು, ಗಿಡರಾಶಿ, ಪ್ರಾಣಿಪಕ್ಷಿಗಳ ಜೀವರಾಶಿ ಇವೆಲ್ಲವನ್ನೂ ಪುನಃಸ್ಥಾಪಿಸಿ ಕೊಡಬೇಕಿದೆ.

ಕೇಂದ್ರದ ತಪ್ಪು ಲೆಕ್ಕಾಚಾರಗಳು

ಕೇರಳ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಶತಮಾನದಲ್ಲಿಯೇ ಅತ್ಯಂತ ಹಾನಿಕಾರಕ ಜಲಪ್ರಳಯ ಸಂಭವಿಸಿ ನೂರಾರು ಜನರ ಸಾವಿಗೆ ಕಾರಣವಾಗಿದೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಸಾಂಕ್ರಾಮಿಕ ಬೇನೆಗಳು, ಇನ್ನಿತರ ಜಾಡ್ಯಗಳು ಕಾಲಿಡುವ ಅಪಾಯ ಎದುರಾಗಿದೆ.  ಶತಕೋಟಿ ಡಾಲರ್ ಮೌಲ್ಯದ ಆಸ್ತಿಪಾಸ್ತಿ ಕಣ್ಣೆದುರಿಗೇ ನಾಶವಾಗಿದೆ. ಇದೆಲ್ಲಕ್ಕೂ  ಕೇವಲ ಮುಂಗಾರು ಮಳೆ ಕಾರಣವೇ ಅಥವಾ ನಮ್ಮ ದಷ್ಟಪುಷ್ಟವಾಗಿ ಅಭಿವೃದ್ಧಿಗೊಳ್ಳದಿರುವ ಮೂಲಸೌಕರ್ಯಗಳೇ?

ಪ್ರವಾಹ ಪರಿಹಾರಕಾರ್ಯಗಳಿಗಾಗಿ ದೊಡ್ಡ ಮೊತ್ತವನ್ನು ಮೋದಿ ಸರಕಾರ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ವಿಕೋಪಕ್ಕೆ ನಿಖರವಾದ ಕಾರಣವೇನು ಎಂದು ತಿಳಿಯುವುದು ಬಹು ಮುಖ್ಯ. ಇದು ಆಗದೇ ಹೋದರೆ ಸರಕಾರದ ಆದ್ಯತೆಗಳ ಹಿಂದೆ  ೨೦೧೯ರ ಲೋಕಸಭೆ ಚುನಾವಣೆ ಇದೆಯೇ ಎಂಬ ಅನುಮಾನ ಮೂಡುವುದು ಸಹಜ. ಹಾಗೆ ಭಾರತದ ಬಜೆಟ್‌ನ್ನು ಆಮೂಲಾಗ್ರವಾಗಿ ಬದಲಾಯಿಸಬೇಕಾದ ಅಗತ್ಯವನ್ನೂ ಮೇಲಿನ ದುರಂತಗಳು ಉಂಟುಮಾಡಿವೆ.

ಕೇರಳದಲ್ಲಿ ಸುರಿದ ಕುಂಭದ್ರೋಣ ಮಳೆಗಿಂತ ಹೆಚ್ಚಾಗಿ ತುಂಬಿ ಹರಿಯುತ್ತಿರುವ ಅಣೆಕಟ್ಟುಗಳಿಂದ ನೀರನ್ನು ಹೊರಬಿಟ್ಟಿದ್ದು   ವಿನಾಶಕಾರಿಯಾಯಿತು. ಅದಾಗಲೇ ನೈರುತ್ಯಕರಾವಳಿ ಭರಪೂರ ತುಂಬಿದ್ದು ಪ್ರವಾಹಕ್ಕೆ ಅಣಿಯಾಗಿತ್ತು.

ಭಾರತದ ಶೇ.೧೫ ಭೂ ಭಾಗಗಳು ಪ್ರತಿ ವರ್ಷ ಪ್ರವಾಹಕ್ಕೆ ಪಕ್ಕಾಗುವುದು, ಅದರಿಂದಾಗಿ ಸರಾಸರಿ ೨೦೦೦ ಜೀವಹಾನಿಯಾ ಗುವುದು, ೮ ದಶಲಕ್ಷ ಹೆಕ್ಟೇರ್ ಭೂಮಿ ನಾಶವಾಗುವುದು ಹಾಗೂ ೧೮ ಶತಕೋಟಿ ರು. ನಷ್ಟ ಸಂಭವಿಸುವುದು ನಡೆಯುತ್ತಲೇ ಇರುವುದರಿಂದ ಪ್ರವಾಹ ಅನಿರೀಕ್ಷಿತವಾಗಿ ಉಂಟಾಯಿತು ಎಂದೇನೂ ಅಲ್ಲ.  ಅದೊಂದು ನಿರೀಕ್ಷಿಸಬಹುದಾದ ವಿದ್ಯಮಾನ ವಾಗಿತ್ತು.

ಭಾರತ ಸರಕಾರದ ಸಂಸ್ಥೆಗಳು ಪ್ರವಾಹ ನಿಯಂತ್ರಣ ಮತ್ತಿತರ ಸಮಸ್ಯೆಗಳ ಕುರಿತಾಗಿ ಸಂಶೋಧನೆ ನಡೆಸಿ ವರದಿಗಳನ್ನು ಅವಶ್ಯವಾಗಿ ತಯಾರು ಮಾಡುವುದೇನೋ ಹೌದು, ಆದರೆ ಅವು ನೀಡುವ ಪರಿಹಾರ ಕ್ರಮಗಳು ಬರೀ ಧೂಳು ತಿನ್ನುತ್ತವೆ.

ಕಳೆದ ವರ್ಷ ಸಂಸತ್ತಿಗಾಗಿ ಸಿಎಜಿ (ಕಂಟ್ರೋಲರ್ ಆಂಡ್ ಆಡಿಟರ್ ಜನರಲ್) ತಯಾರಿಸಿ ಪ್ರಕಟಿಸಿದ ವರದಿ ಹೇಳುವಂತೆ ಎಷ್ಟೋ ನಿಯಂತ್ರಣ ಯೋಜನೆಗಳು ಸಮರ್ಪಕವಾಗಿ ತಯಾರಾಗಿರುವುದಿಲ್ಲ. ಅಷ್ಟೇ ಅಲ್ಲ, ಅವುಗಳಿಗೆ ಹಣ ಬಿಡುಗಡೆಯಾಗುವ ಹೊತ್ತಿಗೆ ಪ್ರಸಕ್ತ ಸನ್ನಿವೇಶವನ್ನು ನಿಭಾಯಿಸಲಾರದಷ್ಟು ಹಳತೂ ಆಗಿರುತ್ತವೆ.

ಪ್ರವಾಹ ಮುನ್ಸೂಚನೆ ತಿಳಿಯಲು ಸ್ಥಾಪಿಸಬೇಕೆಂದು ಯೋಜಿಸಲಾದ ೨೧೯ ‘ಟೆಲಿಮೆಟ್ರಿ ಸ್ಟೇಶನ್’ಗಳಲ್ಲಿ  ಕೇವಲ ನಾಲ್ಕನೇ ಒಂದು ಭಾಗ ಸ್ಥಾಪನೆಯಾಗಿವೆ. ಈಗಾಗಲೇ ಇರುವ ೩೭೫ ಅಂತಹ ತಾಣಗಳಲ್ಲಿ ಶೇ.೬೦ ಸ್ಥಾಪನೆ ನತರ ಕಾರ್ಯನಿರ್ವಹಿಸದೇ ನಿರುಪಯೋಗಿಯಾಗಿವೆ ಎಂದು ವರದಿ ತಿಳಿಸಿತ್ತು.

ಪ್ರಕೃತಿ ತಡೆ ಹಾಗೂ ನಿಯಂತ್ರಣ ವ್ಯವಸ್ಥೆಯೂ ದಶಕಗಳಷ್ಟು ಪುರಾತನವಾಗಿದ್ದು -ಲಕಾರಿಯಾಗಿಲ್ಲ ಎನ್ನಲಾಗಿದೆ. ಉದಾಹರಣೆಗೆ ದೇಶದ ಪ್ರತಿ ರಾಜ್ಯವೂ ತನ್ನಲ್ಲಿರುವ ಬೃಹತ್ ಅಣೆಕಟ್ಟುಗಳಲ್ಲಿ ತುರ್ತು ಪ್ರವಾಹ ಉಂಟಾದರೆ ಹೇಗೆ ನಿಭಾಯಿಸತಕ್ಕದ್ದು ಎಂದು ಕೇಂದ್ರಕ್ಕೆ ಪ್ರತಿ ವರ್ಷ ಒಂದು ವರದಿ ಸಲ್ಲಿಸಬೇಕು. ಇದರಿಂದ, ಪ್ರವಾಹ ಉಂಟಾದಾಗ ಯಾವ ಪ್ರದೇಶಗಳ ಮೇಲೆ ಅಽಕ ಪರಿಣಾಮ ಉಂಟಾಗುತ್ತದೆ, ಅಲ್ಲಿನ ಜನರನ್ನು ಮುಂಚಿತವಾಗಿ ಸ್ಥಳಾಂತರಿಸಬಹುದೇ ಮುಂತಾದ ಅಂದಾಜು ಮಾಡಬಹುದು. ಭಾರತದಲ್ಲಿರುವ ಸುಮಾರು ೫೦೦೦ ಅಣೆಕಟ್ಟುಗಳ ಪೈಕಿ ಇಂತಹ ಕ್ರಿಯಾ ಯೋಜನೆ ಹೊಂದಿರುವವು ಶೇ. ೭ ಮಾತ್ರ. ಕೇರಳದಲ್ಲಿದ್ದ ೬೧ ಅಣೆಕಟ್ಟುಗಳಂತೂ ಯಾವ ಕ್ರಿಯಾಯೋಜನೆಯನ್ನೂ ಹೊಂದಿರಲಿಲ್ಲ.

ಮುಂಗಾರು ಮಳೆ ವರ್ಷೇವರ್ಷ ಜರುಗುವ ಘಟನೆಯಾಗಿರುವುದರಿಂದ ಹಾಗೂ ರೈತರು, ಸಾಮಾನ್ಯರು, ಅಽಕಾರಿಗಳು-ಎಲ್ಲರ ಮೇಲೆ ಪರಿಣಾಮ ಬೀರುವ ಸಂಗತಿಯಾದ್ದರಿಂದ ಮಳೆಬೀಳುವ ಮೊದಲು ಹಾಗೂ ಅನಂತರ, ಕಡ್ಡಾಯವಾಗಿ ಅಣೆಕಟ್ಟುಗಳ ಸಮೀಕ್ಷೆ ನಡೆಸಬೇಕೆಂದು ‘ರಾಷ್ಟ್ರೀಯ ಜಲ ನೀತಿ’ ಹೇಳುತ್ತದೆ. ಆದರೆ ಇಂತಹ ಪರಿಶೀಲನೆಯಿಂದ ಇತ್ತೀಚೆಗೆ ಕೇವಲ ಎರಡು ರಾಜ್ಯಗಳಲ್ಲಿ ಮಾತ್ರ ನಡೆದಿದೆ.

ವರದಿ ಇಷ್ಟೆಲ್ಲಾ ನ್ಯೂನತೆಗಳನ್ನು ಎತ್ತಿ ತೋರಿಸಿದ ಮೇಲೂ ಅವನ್ನು ಸರಿಪಡಿಸಲು ಸರಕಾರ ಪ್ರಯತ್ನಿಸಿಲ್ಲ. ಬದಲಾಗಿ ಅಣೆಕಟ್ಟು ನಿರ್ವಹಣೆಗೆ ತೆಗೆದಿಡಲಾದ ಕನಿಷ್ಠ ಮೊತ್ತವನ್ನು ಒಂದೋ ಬಳಸಿಯೇ ಇಲ್ಲ ಅಥವಾ ಇತರ ಶಿ-ರಸು ಹೊಂದಿರದ ಯೋಜನೆಗಳಿಗೆ ಅವನ್ನು ತಿರುಗಿಸಿಕೊಳ್ಳಲಾಗಿದೆ.

ಕೇರಳದ ಮಹಾಮಳೆಗೆ ಪ್ರಧಾನಿ ಮೋದಿ ಘೋಷಿಸಿದ ಬೃಹತ್ ಪರಿಹಾರ ಮೊತ್ತ ಅಗತ್ಯವಿತ್ತೇನೋ ನಿಜ ಆದರೆ ಇಂತಹ ಕಡೆ ಈ ಮೊದಲೇ ವಿನಿಯೋಗಿಸಬೇಕಾಗಿದ್ದ  ಹಣವನ್ನು ಜನಪ್ರಿಯ ಯೋಜನೆಗಳಿಗೆ ಹರಿಸಿದ್ದು ಸರಿಯಾದ ನಡೆಯಲ್ಲ ಎಂಬುದನ್ನು ಅದು ಎತ್ತಿ ತೋರಿಸಿದೆ. ಉದಾಹರಣೆಗೆ, ೨೦೧೮-೧೯ನೇ ವಿತ್ತೀಯ ಕೊರತೆಯಲ್ಲಿ ಕೃಷಿ ಉತ್ಪನ್ನಗಳಿಗೆ ಅವುಗಳ ಉತ್ಪಾದನಾ ವೆಚ್ಚಕ್ಕಿಂತ ಶೇ.೫೦ ಅಽಕವಾಗಿರುವ ಕನಿಷ್ಠ ಬೆಂಬಲ ಬೆಲೆ ತೆಗೆದಿರಿಸಿದೆ. ಹಾಗೆಯೇ ಹಲವು ರಾಜ್ಯಗಳಲ್ಲಿ ಶತಕೋಟಿಗಟ್ಟಲೆ ಹಣವನ್ನು ರೈತರ ಸಾಲಮನ್ನಾಗಾಗಿ ವಿನಿಯೋಗಿಸಿದೆ.

ಕೃಷಿಕರಿಗೆ ಸಹಾಯಧನ ನೀಡುವಲ್ಲಿ ಮತ್ತು ಬೆಳೆ ವಿಮೆಗಾಗಿ ಕೇಂದ್ರ ಜಲ ಸಂಪನ್ಮೂಲಗಳಿಗೆ ಬಳಸಬೇಕಾದ್ದಕ್ಕಿಂತ ಐದು ಪಟ್ಟು ಹೆಚ್ಚು ಖರ್ಚು ಮಾಡುತ್ತಿದೆ. ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಯಂತೂ ಯಾವುದೋ ಮೊತ್ತವನ್ನು ಪ್ರವಾಹ ಮುನ್ಸೂಚನೆ ಹಾಗೂ ನಿರ್ವಹಣೆಗೆ ತೆಗೆದಿರಿಸಿರಲಿಲ್ಲ.

Tags

Related Articles

Leave a Reply

Your email address will not be published. Required fields are marked *

Language
Close