About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಓಣಂ ಶುಭಾಶಯ ಕೋರಿದ ಪ್ರಧಾನಿ, ರಾಷ್ಟ್ರಪತಿ

ದೆಹಲಿ: ಶತಮಾನದ ಅತ್ಯಂತ ಘೋರ ಪ್ರವಾಹದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಕೇರಳದಲ್ಲಿ ಈ ಬಾರಿಯ ಓಣಂ ಹಬ್ಬ ಕಳೆಗುಂದಿದೆ.

ಪ್ರವಾಹ ಪೀಡಿತರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿರುವ ವಿವಿಧ ನಾಯಕರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರಿದ್ದಾರೆ.

ಕೇರಳ ರಾಜ್ಯ ಹೊಸ ಮನ್ವಂತರ ಕಾಣಲಿ ಎಂದು ಹಾರೈಸಿರುವ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌,”ಸಹ ಪ್ರಜೆಗಳಿಗೆ ಶುಭಕಾಮನೆಗಳು. ಅದರಲ್ಲೂ ಕೇರಳದಲ್ಲಿರುವ ನಮ್ಮ ಸಹೋದರ ಹಾಗು ಸಹೋದರಿಯರಿಗೆ. ಪ್ರವಾಹದಿಂದ ಚೇತರಿಸಿಕೊಳ್ಳುತ್ತಿರುವ ಕೇರಳದ ಮಂದಿಗೆ ಈ ಹಬ್ಬ ಹೊಸ ಆರಂಭ ನೀಡಲಿ” ಎಂದು ಟ್ವೀಟ್‌ ಮಾಡಿದ್ದಾರೆ.

“ಕಳೆದ ಕೆಲ ದಿನಗಳಿಂದ ಎದುರಿಸಿದ ವಿಕೋಪದ ಪರಿಣಾಮಗಳನ್ನು ಮೆಟ್ಟಿ ನಿಲ್ಲಲು ಈ ಓಣಂ ಹೊಸ ಅವಕಾಶ ನೀಡಲಿ. ಕೇರಳದೊಂದಿಗೆ ಇಡೀ ದೇಶವೇ ನಿಲ್ಲಲಿದೆ. ಕೇರಳದೊಂದಿಗೆ ಇಡೀ ದೇಶವೇ ಭುಜಕ್ಕೆ ಭುಜ ನೀಡಿ ನಿಲ್ಲಲಿದ್ದು, ಇಲ್ಲಿನ ಜನತೆಯ ಸಂತಸ ಹಾಗು ಸಮೃದ್ಧಿಗೆ ಪ್ರಾರ್ಥಿಸಲಿದ್ದಾರೆ” ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೋರಿದ್ದಾರೆ.

 

Tags

Related Articles

Leave a Reply

Your email address will not be published. Required fields are marked *

Language
Close