About Us Advertise with us Be a Reporter E-Paper

ಅಂಕಣಗಳು

ಒಂದು ಆಯ್ಕೆ ನಮ್ಮ ಸಾವು-ಬದುಕನ್ನು ನಿರ್ಧರಿಸಬಲ್ಲದು..!

- ಗೌರ್ ಗೋಪಾಲ್

ಒಂದಾನೊಂದು ಕಾಲದಲ್ಲಿ ಒಬ್ಬ ಮನುಷ್ಯ ಮರುಭೂಮಿಗೆ ತೆರಳಿದ್ದ. ಅವನು ದಾರಿತಪ್ಪಿ ಎಲ್ಲೋ ಕಳೆದು ಹೋಗಿದ್ದ. ಜತೆಗೆ ಕೊಂಡೊಯ್ದಿದ್ದ ನೀರು ಕೂಡಾ ಕೆಲವೇ ದಿನಗಳಲ್ಲಿ ಖಾಲಿಯಾಗಿತ್ತು. ಈಗ ಅವನಲ್ಲಿ ಕುಡಿಯಲು ಒಂದೇ ಒಂದು ಹನಿ ನೀರಿರಲಿಲ್ಲ. ಹೀಗೆ ಇನ್ನೂ ಸ್ವಲ್ಪ ಹೊತ್ತು ನೀರಿಲ್ಲದೇ ಕಳೆದಲ್ಲಿ ಅವನು ಸಾಯಬೇಕಾಗುತ್ತದೆ ಎಂದು ಅವನಿಗೇ ತಿಳಿದಿತ್ತು. ಕಷ್ಟಕರ ಸಮಯದಲ್ಲೂ ಅವನು ಧೈರ್ಯ ಕಳೆದುಕೊಂಡಿಲ್ಲ. ನಡೆಯುತ್ತಾ ಹೋದ.

ಹೀಗೆ ನಡೆಯುತ್ತಾ ಹೋದಂತೆ, ಅವನಿಗೆ ಅಲ್ಲೊಂದು ಗುಡಿಸಲು ಕಾಣಿಸಿತು. ಇದು ಕೇವಲ ತನ್ನ ಭ್ರಮೇಯೋ ಅಥವಾ ಮರೀಚಿಕೆಯೋ ಎಂದು ಆತ ಯೋಚಿಸತೊಡಗಿದ. ಆದರೂ ಅವನಲ್ಲಿ ಬೇರೆ ದಾರಿ ಇರಲಿಲ್ಲ. ಅವನು ಬಹಳ ಕಷ್ಟಪಟ್ಟು ತನ್ನ ದಣಿದ ದೇಹದೊಂದಿಗೆ ಆ ಗುಡಿಸಲಿನ ಬಳಿಗೆ ಹೋದ. ಅಲ್ಲಿ ಏನಾದರೂ ನೀರು ಸಿಗಬಹುದೇನೋ ಎಂಬ ಆಸೆ ಅವನಲ್ಲಿತ್ತು. ಆದರೆ ಆ ಗುಡಿಸಲು ಸಂಪೂರ್ಣ ಅದನ್ನು ನೋಡಿದಾಗ ಯಾವುದೋ ಕಾರಣಕ್ಕೆ ಅದನ್ನು ತೊರೆದು ಹೋಗಲಾಗಿದೆ ಎಂದು ಅವನಿಗೆ ತಿಳಿಯಿತು. ಮುಂದೆ ಹೋಗಿ ನೋಡಿದಾದ ಅಲ್ಲಿರುವ ಒಂದು ವಸ್ತುವನ್ನು ಕಂಡು ಅವನ ಹೃದಯ ಸಂತಸದಿಂದ ತೇಲಾಡಿತು. ಅಲ್ಲಿದ್ದದ್ದು ಒಂದು ಹ್ಯಾಂಡ್ ಪಂಪು. ಕೂಡಲೇ ಅಲ್ಲಿಗೆ ಧಾವಿಸಿ ಅದನ್ನು ಚಲಾಯಿಸಿದ. ಆದರೆ ಅದರಿಂದ ಒಂದು ಹನಿ ನೀರು ಕೂಡಾ ಬಂದಿಲ್ಲ. ಇನ್ನಷ್ಟು, ಮತ್ತಷ್ಟು ಬಲ ಪ್ರಯೋಗಿಸಿದ. ಆದರೆ ಅದರಿಂದ ಏನೂ ಉಪಯೋಗವಾಗಲಿಲ್ಲ.

ಇಷ್ಟೆಲ್ಲ ಶ್ರಮ ಪಟ್ಟಮೇಲೂ ನೀರು ನೊಡಿ, ಸೋಲೊಪ್ಪಿಕೊಂಡು ಅಲ್ಲೇ ಕುಳಿತ. ಬಹಳ ನೊಂದ ಮನಸ್ಸಿನಲ್ಲಿ ಒಂದೇ ಭಾವನೆಯಿತ್ತು, ‘ಬಹುಶಃ ಬಾಯಾರಿಕೆಯಿಂದಲೇ ನಾನಿವತ್ತು ಸಾಯುತ್ತೇನೆ’. ಆಗಲೇ ಅಲ್ಲಿ ಮರಳಿನಲ್ಲಿ ಹುದುಗಿಸಿಟ್ಟ ಬಾಟಲಿಯೊಂದು ಆತನ ಕಣ್ಣಿಗೆ ಬಿತ್ತು. ಅದರಲ್ಲಿ ನೀರಿತ್ತು. ಇದು ಅವನ ಎರಡನೇಯ ಆಶಾಕಿರಣವಾಗಿತ್ತು. ಅದನ್ನು ತೆಗೆದು ಇನ್ನೇನು ಕುಡಿಯಬೇಕೆನ್ನುವಷ್ಟರಲ್ಲಿ ಒಂದು ಕಾಗದ ಅದಕ್ಕೆ ಅಂಟಿಕೊಂಡಿದ್ದುದ್ದನ್ನು ನೋಡಿದ. ಅದರಲ್ಲಿ ಒಂದು ಕೈಬರಹವಿತ್ತು. ‘ಈ ನೀರನ್ನು ಪಂಪನ್ನು ಆರಂಭಿಸಲು ಉಪಯೋಗಿಸಿ. ನೀವು ನೀರು ಉಪಯೋಗಿಸಿದ ಮೇಲೆ ಮತ್ತೆ ತುಂಬುವುದನ್ನು ಮರೆಯಬೇಡಿ’ ಎಂದು ಬರೆದಿತ್ತು. ಇದನ್ನು ಓದಿದ ತಕ್ಷಣ ಆತ ಒಂದು ದ್ವಂದ್ವದಲ್ಲಿ ಸಿಕ್ಕಿ ಹಾಕಿಕೊಂಡ. ಇಲ್ಲಿ ಬರೆಯಲಾಗಿದ್ದನ್ನು ನಂಬಿ, ಅದನ್ನೇ ಪಾಲಿಸಿ, ಈ ನೀರನ್ನು ಪಂಪ್‌ಗೆ ಹಾಕಬೇಕೋ ಅಥವಾ ಇದನ್ನು ನಿರ್ಲಕ್ಷಿಸಿ ಕುಡಿಯಬೇಕೋ ಎಂದು ತಲೆ ಕೆಡಿಸಿಕೊಂಡ. ಏನಾದರೂ ಆ ನೀರನ್ನು ಪಂಪ್‌ಗೆ ಹಾಕಿದಾಗ ಅದು ಕೆಲಸ ಮಾಡದೇ ಇದ್ದರೆ ಏನು ಮಾಡುವುದು? ಅಥವಾ ಇಲ್ಲಿ ಬರೆಯಲಾಗಿರುವುದು ನಿಜವೋ ಏನೋ. ಏನಾದರೂ ಸುಳ್ಳಾಗಿದ್ದರೆ, ಅವನ ಕಣ್ಣಿಗೆ ಕಾಣುವ ನೀರನ್ನೂ ಅವನು ಚೆಲ್ಲಿದಂತಾಗುತ್ತದೆ. ಎಂಬ ಆಯೋಚನೆಗಳ ಸರಮಾಲೆಯೇ ಆತನ ತಲೆಯಲ್ಲಿ ಓಡತೊಡಗಿತ್ತು.

ಬಹಳ ಯೋಚಿಸಿದ ನಂತರ ಅಲ್ಲಿ ಬರೆಯಲಾಗಿದ್ದುದನ್ನೇ ಆಯ್ದುಕೊಂಡ. ಅವನು ಬಾಟಲಿಯಲ್ಲಿದ್ದ ನೀರನ್ನು ಆ ಹ್ಯಾಂಡ್‌ಪಂಪ್‌ಗೆ ಸುರಿದ. ಕೈಮುಗಿದು ಪ್ರಾರ್ಥಿಸಿದ ಮೇಲೆ, ಅದನ್ನು ಚಲಾಯಿಸಿದ. ಒಂದು ದೊಡ್ಡ ಶಬ್ದದೋದಿಗೆ ನೀರು ಹೊರಬಂತು. ಅವನು ಉಪಯೋಗಿಸುವುದಕ್ಕಿಂತಲೂ ಹೆಚ್ಚಿನ ನೀರೇ ಸುರಿಯಿತು. ಅವನು ತನಗೆ ಸಮಾಧಾನವಾಗುವಷ್ಟು ನೀರು ಕುಡಿದ. ನಂತರ ನೆಮ್ಮದಿಯ ನಿಟ್ಟುಸಿರು ಬಿಟ್ಟ. ತಾನು ಬದುಕುತ್ತೇನೆಂಬ ಸಂತಸದಲ್ಲಿ ಕುಣಿದಾಡಿದ. ಸಮಾಧಾನದಲ್ಲಿ ಗುಡಿಸಲು ನೋಡಿದಾಗ, ಒಂದು ಪೆನ್ಸಿಲ್ ಹಾಗೂ ಆ ಜಾಗದ ನಕ್ಷೆ ಸಿಕ್ಕಿತು. ಅವನು ಜನವಸತಿಯಿಂದ ಬಹಳ ದೂರ ಬಂದಿರುವುದು ತಿಳಿಯಿತು. ಆದರೂ ಅವನಿಗೀಗ ತಾನೆಲ್ಲಿದ್ದೇನೆಂದೂ, ಇನ್ನು ಯಾವ ದಿಕ್ಕಿಗೆ ಚಲಿಸಬೇಕೆಂದೂ ತಿಳಿಯಿತು. ತನ್ನ ಮುಂದಿನ ದಾರಿಗೆ ಸಾಕಾಗುವಷ್ಟು ನೀರನ್ನು ಬಾಟಲಿಗಳಿಗೆಲ್ಲಾ ತುಂಬಿಸಿಕೊಂಡ ಮತ್ತು ಆ ಬಾಟಲಿಯ ಮೇಲೆ ಬರೆದಿಟ್ಟ ಸೂಚನೆಯನ್ನೂ ಪಾಲಿಸುತ್ತಾ, ಅದರ ತುಂಬಾ ನೀರು ತುಂಬಿಸಿ, ಆ ಚೀಟಿಯ ಕೆಳಗೆ ಇನ್ನೊಂದು ಸಾಲನ್ನು ಸೇರಿಸಿದ, ‘ನನ್ನನ್ನು ಇದು ಕೆಲಸ ಮಾಡುತ್ತದೆ’. ನಂತರ ತನ್ನ ಪ್ರವಾಸ ಮುಂದುವರೆಸಿದ.

ನಾವು ಕೂಡಾ ನಮ್ಮ ಜೀವನದಲ್ಲಿ ಇಂಥದ್ದೇ ದ್ವಂದ್ವಗಳಿಗೆ ಸಿಲುಕಿರುತ್ತೇವೆ. ನಮ್ಮ ಮುಂದೆ ಎರಡು ಆಯ್ಕೆಗಳಿರುತ್ತದೆ. ಅದರಲ್ಲಿ ಯಾವುದು ಸರಿಯಾದ ಆಯ್ಕೆ ಎನ್ನುವ ಕುರಿತು ಸಂದೇಹವಿರುತ್ತದೆ. ಆ ತರಹದ ಸಂದರ್ಭಗಳಲ್ಲಿ ನಾವು ಯಾವುದಾದರೊಂದು ಆಯ್ಕೆಯನ್ನು ಆಯ್ದುಕೊಳ್ಳಬೇಕಾಗುತ್ತದೆ. ನಿಮ್ಮ ಆಯ್ಕೆ ಯಾವುದೇ ಇರಲಿ, ಅದರಿಂದಾಗುವ ಪರಿಣಾಮವನ್ನು ಎದುರಿಸಲು ಸಿದ್ಧರಿರಬೇಕಾಗುತ್ತದೆ. ಹೆಚ್ಚಿನ ಜನರು ಪರಿಣಾಮಗಳಿಗೆ ಹೆದರಿ ಯಾವುದನ್ನೂ ಆಯ್ದುಕೊಳ್ಳುವುದಿಲ್ಲ. ಜೀವನ ಪರ್ಯಂತ ಗೊಂದಲದಲ್ಲೇ ಬಹುಶಃ ನಾವು ಆಯ್ದುಕೊಳ್ಳುವ ಆ ಒಂದು ದಾರಿ ನಮ್ಮ ಸಾವು, ಬದುಕನ್ನು ಕೂಡಾ ನಿರ್ಧರಿಸಬಲ್ಲದು. ಆದರೂ ನಮ್ಮ ಜೀವನದಲ್ಲಿ ನಮ್ಮದೇ ಆದ ಒಂದು ಪ್ರವಾಸವಿದೆ, ನಾವೇ ತೆಗೆದುಕೊಳ್ಳಬೇಕಾದ ನಿರ್ಧಾರಗಳಿವೆ. ನಾವು ತೆಗೆದುಕೊಲ್ಳುವ ನಿರ್ಧಾರ ಸರಿಯಾಗಿದ್ದರೆ, ಬಹಳ ಉತ್ತಮ. ನಾವು, ನಮ್ಮ ಕಥೆಯನ್ನು ಹೇಳಿ, ಜನರನ್ನು ಹುರಿದುಂಬಿಸಬಹುದು. ಒಂದು ವೇಳೆ ನಮ್ಮ ನಿರ್ಧಾರ ತಪ್ಪಾಗಿದ್ದರೆ, ಜನರಲ್ಲಿ ನಾವು ಮಾಡಿರುವ ತಪ್ಪುಗಳ ಬಗ್ಗೆಯೂ, ನಮ್ಮ ಅನುಭವಗಳ ಬಗ್ಗೆಯೂ, ಅದರಿಂದ ನಾವು ಕಲಿತ ಬಗ್ಗೆಯೂ ತಿಳಿಸಿ, ಅವರ ಜೀವನದ ಸರಿಯಾದ ಆಯ್ಕೆಗೆ ಸಹಾಯ ಮಾಡಬಹುದು.

**********************************

ನಾವು ಜೀವನ ಪರ್ಯಂತ ಖುಷಿಗಾಗಿ ಹುಡುಕಾಟ ನಡೆಸುತ್ತಿರುತ್ತೇವೆ. ಧಾರ್ಮಿಕತೆ, ಆಧ್ಯಾತ್ಮ, ಅಲೌಕಿಕತೆಯತ್ತ ವಾಲುತ್ತೇವೆ. ಕೆಲವರಂತೂ ವರ್ಷಾನುಗಟ್ಟಲೆ ತಪಸ್ಸು ಮಾಡುತ್ತಾರೆ. ಎಲ್ಲೆಲ್ಲೋ ಅಲೆಯುತ್ತಾರೆ. ಕೊನೆಗೂ ಉತ್ತರ ಸಿಗದೇ ನಿರಾಶರಾಗುತ್ತಾರೆ. ಆದರೆ, ನಿಜವಾದ ಖುಷಿ ನಮ್ಮ ಆಸುಪಾಸಲ್ಲೇ, ಸಣ್ಣ-ಸಣ್ಣ ವಿಚಾರಗಳಲ್ಲಿರುತ್ತದೆ. ಅದರಿಂದ ಬರುವ ಭಾವನೆ ಯಾವುದೇ ದೊಡ್ಡ ವಿಚಾರಗಳಲ್ಲಿ ಸಿಗುವುದಿಲ್ಲ. ಅದಕ್ಕೆ ಉದಾಹರಣೆಯಾಗಿ ಈ ಕಥೆ ಓದಿ.

ದೆಹಲಿಯ ಪುಟ್ಟ ಊರಿನಲ್ಲಿ ಒಂದು ಹುಡುಗಿ ಕಾರಿನಲ್ಲಿ ತಿರುಗಾಡುತ್ತಿರುತ್ತಾಳೆ. ಆ ರಸ್ತೆಯಲ್ಲಿ ಪುಟ್ಟ ಹುಡುಗನೊಬ್ಬ ಕಾರು ಒರೆಸಿ ಹಣ ಸಂಪಾದಿಸುತ್ತಿದ್ದ. ಅವನನ್ನು ನೋಡಿ ಆಕೆಗೆ ಕನಿಕರ ಮೂಡಿ, ತನ್ನ ಕಾರನ್ನೂ ಒರೆಸಿದವನಿಗೆ ಹಣ ನೀಡಲು ಹೊರಡುತ್ತಾಳೆ. ಆದರೆ ಕೊಡಲು ಚಿಲ್ಲರೆ ಇರುವುದಿಲ್ಲ. ಆಗ ಚಿಲ್ಲರೆ ತೆಗೆದುಕೊಂಡು ಬರಲು ಹೋಗಿ, ವಾಪಾಸು ಬಂದಾಗ ಆ ಹುಡುಗ ಅಲ್ಲಿ ಇರುವುದಿಲ್ಲ. ಎಲ್ಲಿದ್ದಾನೆಂದು ಹುಡುಕಿದಾಗ ಅವನು ಅವಳ ಕಾರಿನ ಬಳಿಯೇ ನಿಂತು ಚಿಲ್ಲರೆ ಲೆಕ್ಕ ಅವಳು ಕರೆದಾಗ, ಏನಕ್ಕಾ, ನಿನ್ನಿಂದಾಗಿ ಲೆಕ್ಕ ತಪ್ಪಿತು ಎಂದು ದೂರುತ್ತಾನೆ. ಅವಳು ಹಣ ಕೊಟ್ಟಾಗ ಅವು ಚಿಲ್ಲರೆ ಹಿಂತಿರುಗಿಸಿ ಓಡುತ್ತಾನೆ. ಅವಳು ಹೆಸರೇನೆಂದು ಕೇಳಿದರೂ ಉತ್ತರಿಸಲಿಲ್ಲ.

ಮರುದಿನ ಅದೇ ದಾರಿಯಲ್ಲಿ ಹೋಗುವಾಗ ವಾಚ್‌ಮ್ಯಾನ್ ಓರ್ವ ಅದೇ ಹುಡುಗನಿಗೆ ಹೊಡೆಯುತ್ತಿರುತ್ತಾನೆ. ಅದನ್ನು ಕಂಡ ಅವಳಿಗೆ ಎಲ್ಲಿಲ್ಲದ ಕೋಪ. ಕೂಡಲೇ ಅಲ್ಲಿಗೆ ಹೋದವಳೇ, ಅವನಿಗೆ ಹೊಡೆಯುವ ಅಧಿಕಾರ ಯಾರು ಕೊಟ್ಟರು? ಎಂದು ಕೇಳಿದಾಗ, ಇವನು ದಿನಾ ಬಂದು ಕಾರುಗಳಿಗೆ ಅಡ್ಡಕಟ್ಟಿ ಅವುಗಳನ್ನು ಹೀಗಾಗಿ ಅವನಿಗೆ ಇಲ್ಲಿ ಬರಲು ಅನುಮತಿ ಇಲ್ಲ ಎನ್ನುತ್ತಾನೆ. ಅದಕ್ಕೆ ಆ ವಾಚ್‌ಮ್ಯಾನಿಗೆ ಚೆನ್ನಾಗಿ ಬೈದು ಅವನನ್ನು ಕರೆದುಕೊಂಡು ಹೋಗುತ್ತಾಳೆ.

ಅಂಗಡಿಯೊಂದರಲ್ಲಿ ಚಹಾ ಕುಡಿಸಿ, ಪಾರ್ಕ್‌ನಲ್ಲಿ ಕುಳಿತು, ಆತ ನಿನಗೆ ಜೋರಾಗಿ ಹೊಡೆದನಾ? ನಿನಗೆ ನೋವಾಯಿತಾ? ಎಂದು ಕೇಳುತ್ತಾಳೆ. ಅದಕ್ಕೆ ಆ ಹುಡುಗ, ಪರವಾಗಿಲ್ಲ ಅಕ್ಕಾ, ಇದೆಲ್ಲಾ ನನಗೆ ಅಭ್ಯಾಸವಾಗಿದೆ ಎನ್ನುತ್ತಾನೆ. ಹೀಗೆ ಮಾತನಾಡುತ್ತಾ, ನೀನು ಜೀವನದಲ್ಲಿ ಏನು ಬಯಸುತ್ತೀಯಾ ಎಂದು ಕೇಳಿದಾಗ ಏನೂ ಇಲ್ಲ ಎನ್ನುತ್ತಾನೆ. ಆಗ ಆಶ್ಚರ್ಯದಿಂದ ನಿನಗೆ ಕನಸುಗಳೇ ಇಲ್ಲವಾ ಎಂದು ಕೇಳುತ್ತಾಳೆ. ಅದಕ್ಕವನು, ಇದೆ ಅಕ್ಕಾ. ನನಗೊಂದು ದೊಡ್ಡ ಕನಸಿತ್ತು. ಒಂದೇ ಒಂದು ದಿನದ ಮಟ್ಟಿಗಾದರೂ 100 ರುಪಾಯಿಗಳನ್ನು ಸಂಪಾದಿಸಬೇಕು ಅಂತ. ಎನ್ನುತ್ತಾನೆ. ಕುತೂಹಲದಿಂದ, ಅದು ಪೂರ್ತಿ ಆಯಿತಾ? ಎಂದು ಕೇಳಿದಾಗ, ಹೌದು ನಿಮ್ಮಿಂದಾಗಿಯೇ ಪೂರ್ಣವಾಗಿದೆ. ನಿನ್ನೆ ಸಂಜೆಯಷ್ಟರಲ್ಲಿ 95 ರುಪಾಯಿಗಳನ್ನು ಸಂಪಾದಿಸಿದ್ದೆ. ನೀವು ಕೊಟ್ಟ ಹಣದಿಂದಲೇ, ಅದು ನೂರಾಯಿತು. ಎಂದು ಹೆಮ್ಮೆಯಿಂದ ಹೇಳುತ್ತಾನೆ. ಅಷ್ಟು ಹೇಳಿ ಹೊರಡಲು ಮುಂದಾದಾಗ ಅವಳು ಅವನಿಗೆ ರುಪಾಯಿ ನೀಡುತ್ತಾಳೆ. ಅದಕ್ಕವನು ಇಂದು ನಾನು ನಿಮ್ಮ ಕಾರನ್ನು ಸ್ವಚ್ಛಗೊಳಿಸಲೇ ಇಲ್ಲ. ಇದು ನನಗೆ ಬೇಡ ಎನ್ನುತ್ತಾನೆ. ಆಗ ಅವಳು, ನಾಳೆಗೆ ಆಯಿತು ಎನ್ನುತಾಳೆ. ನಾಳೆಯ ಕೆಲಸಕ್ಕೆ ನಾಳೆಯೇ ಹಣ. ಅಂತ ಉತ್ತರಿಸಿ ಅಲ್ಲಿಂದ ಹೊರಟು ಹೋಗುತ್ತಾನೆ.

ಮರುದಿನ ಅದೇ ಜಾಗದಲ್ಲಿ ಮತ್ತೆ ಅವನನ್ನು ಭೇಟಿಯಾಗುತ್ತಾಳೆ. ಅವಳು ಬರುತ್ತಿರುವಾಗ ಯಾರಿಗೋ, ನಿಮ್ಮ ಟಯರ್ ಹಳೆಯದಾಗಿದೆ. ಆದಷ್ಟು ಬೇಗ ಬದಲಿಸಿಕೊಳ್ಳಿ ಇಲ್ಲವಾದಲ್ಲಿ ಅದು ಗುಂಡಿಗೆ ಬೀಳುತ್ತದೆ ಎನ್ನುತ್ತಾನೆ. ಅದನ್ನು ಕೇಳಿದವಳಿಗೆ ಆಶ್ಚರ್ಯವಾಗುತ್ತದೆ. ಕಾರಿನ ಬಗ್ಗೆ ಎಷ್ಟು ತಿಳಿದುಕೊಂಡಿದ್ದೀಯಾ? ಎಂದು ಕೇಳಿದಾಗ, ಎಲ್ಲಾ ಗೊತ್ತು ಎನ್ನುತ್ತಾನೆ. ದಿನಕಳೆದಂತೆ ಇವರಿಬ್ಬರೂ ತುಂಬಾ ಸನಿಹವಾಗುತ್ತಾರೆ. ಹಳೆಯ ಸಂಬಂಧವೇನೋ ಎನ್ನುವಷ್ಟರ ಮಟ್ಟಿಗೆ ಹತ್ತಿರವಾಗುತ್ತಾರೆ.

ಮತ್ತೆ ಕೆಲವು ದಿನಗಳ ನಂತರದ ಭೇಟಿಯಲ್ಲಿ ಆ ಹುಡುಗ ತುಂಬಾ ಸಂತಸದಿಂದ ಏನನ್ನೋ ಹಿಡಿದು ನಿಂತಿರುತ್ತಾನೆ. ಏನು ತೋರಿಸು ಎಂದರೂ ಆತ ತೋರಿಸುವುದಿಲ್ಲ. ನಂತರ ಹೆಮ್ಮೆಯಿಂದ ಆ ಕವರ್ ತೆಗೆದು ಆಕೆಯ ಕೈಯಲ್ಲಿಡುತ್ತಾನೆ. ಅದರಲ್ಲಿ ಒಂದು ಪೆನ್ನು, ಮತ್ತೊಂದು ಪುಸ್ತಕವಿರುತ್ತದೆ. ಇದು ತೆಗೆದುಕೊಂಡೆ? ಎಂದು ಬಹಳ ಉತ್ಸಾಹದಿಂದ ಕೇಳುತ್ತಾಳೆ. ಅದಕ್ಕವನು ಇವತ್ತಷ್ಟೇ ತೆಗೆದುಕೊಂಡೆ ಎನ್ನುತ್ತಾನೆ. ಇದರಲ್ಲಿ ನಿನ್ನ ಹೆಸರು ಬರಿಲಾ? ಎಂದು ಕೇಳುತ್ತಾಳೆ. ಹು ಬರೆಯಿರಿ ಎಂದು ಖುಷಿಯಿಂದ ಹೇಳುತ್ತಾನೆ. ಬರೆಯಲೆಂದು ಮೊದಲ ಪುಟ ತೆರೆದಾಗ ಅದರಲ್ಲಿ ಪ್ರಭಾದೇವಿ ಎಂದು ಬರೆದಿರುತ್ತದೆ. ಯಾರಿದು? ಎಂದು ಕೇಳುವ ಮುಂಚೆಯೇ, ಪ್ರಭಾದೇವಿ ನನ್ನಮ್ಮ. ಇಂಗ್ಲೀಷ್‌ನಲ್ಲಿ ಹೆಸರು ಬರೆದದ್ದು ಅವಳೇ. ಅದನ್ನು ಕಲಿಸಿದ್ದು ನಾನೇ ಗೊತ್ತಾ? ನನಗೆ ಇಂಗ್ಲಿಷ್ ಚೆನ್ನಾಗೇ ಬರುತ್ತದೆ ಎಂದು ಸಂತಸದಿಂದ ಹೇಳುತ್ತಾನೆ.

ನೀನು ನಿನ್ನಮ್ಮನನ್ನು ತುಂಬಾ ಪ್ರೀತಿಸುತ್ತೀಯಾ? ಎಂದು ಕೇಳಿದ್ದಕ್ಕೆ, ಹೌದು. ನನ್ನಮ್ಮನಿಗೆ ನಾನು ಮಾತ್ರ ಇರುವುದು. ಅವಳಿಗೆ ಲೋಕದ ಎಲ್ಲಾ ಖುಷಿ ನೀಡಬೇಕು. ಅದೇ ನನ್ನ ಕರ್ತವ್ಯ. ನಾನು ಓದಿದ್ದು ನಾಲ್ಕನೇ ತರಗತಿಯವರೆಗೆ ಮಾತ್ರ. ಆಮೇಲೆ ದುಡಿಯುತ್ತಿದ್ದೇನೆ. ಕೇವಲ ಅವಳಿಗಾಗಿ. ಎನ್ನುತ್ತಾನೆ. ಸ್ವಲ್ಪ ಹೊತ್ತು ಯೋಚಿಸಿದ ಮೇಲೆ ಆಕೆ ಕೇಳುತ್ತಾಳೆ, ದಿನವಿಡೀ ದುಡಿದು, ಇಷ್ಟೆಲ್ಲಾ ಕಷ್ಟಪಟ್ಟು ಸುಸ್ತಾಗುವುದಿಲ್ಲವಾ? ಅಂತ. ಅದಕ್ಕವನು ಕೈಯಲ್ಲಿರುವ ಚಿಲ್ಲರೆಯನ್ನು ಅವಳ ಕಿವಿಯ ಹತ್ತಿರ ತೆಗೆದುಕೊಂಡು ಹೋಗಿ ಮಾಡುತ್ತಾನೆ. ಆಮೇಲೆ, ಸುಸ್ತಿನ ಬಗ್ಗೆಯಂತೂ ಗೊತ್ತಿಲ್ಲ. ಆದರೆ, ದಿನವಿಡೀ ದುಡಿದ ಮೇಲೆ ಈ ಚಿಲ್ಲರೆಯ ಶಬ್ದ ಕೇಳಿದಾಗ ಏನೋ ಒಂಥರಾ ನೆಮ್ಮದಿ. ನಿದ್ದೆ ಚೆನ್ನಾಗಿ ಬರುತ್ತದೆ. ಆಗ ಸುಸ್ತೆಲ್ಲಾ ಹಾರಿ ಹೋಗುತ್ತೆ. ಎನ್ನುತ್ತಾನೆ. ಇದನ್ನೆಲ್ಲಾ ಕೇಳಿದ ಮೇಲೆ ಇನ್ನಷ್ಟು ತಿಳಿಯುವ ತವಕ ಹೆಚ್ಚಿ, ಆಕೆ, ಶಾಲೆಗೆ ಹೋಗುವುದು ಯಾಕೆ ನಿಲ್ಲಿಸಿದೆ? ಎಂದು ಕೇಳುತ್ತಾಳೆ. ಆಗ ಅವನು, ನಾನು ನಾಲ್ಕನೇ ತರಗತಿಯಲ್ಲಿರುವಾಗ ನನ್ನಪ್ಪ ತೀರಿಕೊಂಡರು. ಹೇಗಾದರೂ ಹೊಟ್ಟೆ ತುಂಬಲೇ ಬೇಕಲ್ಲ? ನನ್ನಪ್ಪನ ಕೆಲಸ ನಾನು ಮಾಡಲು ಆರಂಭಿಸಿದೆ. ಕಾರುಗಳನ್ನು ಸ್ವಚ್ಛ ಮಾಡುವುದು, ಸಾಮಾನುಗಳನ್ನು ತಲುಪಿಸುವುದು, ಹೀಗೆ ಕೆಲಸ ಮಾಡಿ ಊಟಕ್ಕೆ ವ್ಯವಸ್ಥೆ ಮಾಡುತ್ತೇನೆ. ಊಟ ಸಿಕ್ಕಿಲ್ಲವೆಂದರೆ, ಚಹಾ ಕುಡಿದೇ ಖುಷಿಯಿಂದ ಬದುಕುತ್ತೇನೆ. ಎನ್ನುತ್ತಾನೆ. ನೀನು ದೊಡ್ಡವನಾದ ಮೇಲೆ ಏನಾಗುತ್ತೀಯಾ? ಎಂದವಳು ಕೇಳಿದ್ದಕ್ಕೆ. ಒಂದು ಸುಂದರವಾದ, ಅತೀ ವೇಗವಾಗಿ ಚಲಿಸುವ ಕಾರನ್ನು ತಯಾರಿಸುತ್ತೇನೆ. ಎನ್ನುತ್ತಾನೆ.

ಅವನು ತನ್ನ ಪುಟ್ಟ ಪುಟ್ಟ ಕನಸುಗಳ ಕುರಿತು ಹೇಳುತ್ತಾ ಹೋಗುತ್ತಾನೆ. ಅದನ್ನು ಕೇಳಿಸಿಕೊಳ್ಳುತ್ತಾ, ಅವಳು ಮಾತನಾಡದೇ ಓಡಿಸುತ್ತಾಳೆ. ಒಂದು ಶಾಲೆಯ ಹತ್ತಿರ ನಿಲ್ಲಿಸಿ, ನೋಡು, ಇದೇ ನನ್ನ ಶಾಲೆ. ಒಂದನೇ ತರಗತಿಯಿಂದ ಪಿಯೂಸಿಯ ವರೆಗೂ ಇಲ್ಲಿಯೇ ಕಲಿತದ್ದು. ನೀನು ಎ ಬಿ ಸಿ ಡಿ ಕ್ಕಿಂತಲೂ ಮುಂದೆ ಕಲಿಯಬೇಕು. ಎಂದವಳು ಅವನನ್ನು ಅದೇ ಶಾಲೆಗೆ ಸೇರಿಸುತ್ತಾಳೆ. ಅವನೂ ಅವಳನ್ನು ನಿರಾಸೆಗೊಳಿಸದೆ ಮನಸ್ಸಿಟ್ಟು ಕಲಿಯುತ್ತಾನೆ. ತನ್ನ ಕನಸನ್ನು ನನಸಾಗಿಸಿಕೊಳ್ಳುವತ್ತ ದಾಪು ಕಾಲಿಡುತ್ತಾನೆ. ಅವನ ಮುಖದಲ್ಲಿನ ಆ ನಗುವಿನಿಂದ ಆಕೆ ಖುಷಿ ಪಡುತ್ತಾಳೆ.

ಈ ಕಥೆಯಲ್ಲಿ ನಮಗೆ ಅರ್ಥವಾಗಬೇಕಾಗಿರುವ ಖುಷಿಯ ವಾಸ್ತವತೆ. ನಿಜವಾದ ಖುಷಿ ಎಂದರೆ, ನಾವು ಜೀವನವನ್ನು ನೋಡುವ ದೃಷ್ಟಿಕೋನವಷ್ಟೇ. ಕೆಲವರು ಲಕ್ಷ, ಕೋಟಿಗಟ್ಟಲೆ ದುಡಿದು ಕೂಡಾ ದುಃಖದಲ್ಲಿರುತ್ತಾರೆ, ಕೋಪಿಸಿಕೊಂಡಿರುತ್ತಾರೆ. ಮತ್ತೂ ಕೆಲವರು ನೂರರ ನೋಟಲ್ಲೇ ಖುಷಿಯಾಗಿರುತ್ತಾರೆ. ಕೆಲವರು ಆಗಿ ಹೋದ ವಿಚಾರದ ಬಗ್ಗೆ, ಇನ್ನೂ ಕೆಲವರು ಭವಿಷ್ಯದ ಕುರಿತು ಯೋಚಿಸಿಯೇ ಚಿಂತಿತರಾಗಿದ್ದರೆ, ಇನ್ನೂ ಕೆಲವರು ಪ್ರತಿಕ್ಷಣವನ್ನು ಮನಸಾರೆ ಬದುಕುತ್ತಿರುತ್ತಾರೆ. ಹೀಗೆ ನಮ್ಮ ಜೀವನದಲ್ಲಿ, ನಿನ್ನೆಯ, ನಾಳೆಯ ಚಿಂತೆ ಬಿಟ್ಟು, ಚಿಕ್ಕ ಪುಟ್ಟ ವಿಷಯದಲ್ಲೂ ಸಂತಸ ಹುಡುಕಬೇಕು. ಮಾತ್ರ ನೆಮ್ಮದಿಯ ಜೀವನ ಬದುಕಬಹುದು.

Tags

Related Articles

Leave a Reply

Your email address will not be published. Required fields are marked *

Language
Close