About Us Advertise with us Be a Reporter E-Paper

ಗುರು

ಒಂದು ಪ್ರಶ್ನೆ, ಹಲವು ಉತ್ತರ ‘ಸತ್ಯ ಎಲ್ಲಿದೆ’?

- ಸಿದ್ಧಾರ್ಥ ವಾಡೆನ್ನವರ

ಒತ್ತಡಕ್ಕೆ, ಪ್ರಭಾವಕ್ಕೆ, ಆಘಾತಕ್ಕೆ, ನೋವಿಗೆ, ಸೋಲಿಗೆ ಸಿಲುಕಿಕೊಂಡಿದ್ದೇವೆಂದರೆ, ನಮ್ಮ ಮನಸ್ಸು ವಿಷಕಾರಿ ವಿಷಯಗಳಿಂದ ತುಂಬಿಕೊಂಡಿದೆ ಎಂದರ್ಥ. ಈ ಒತ್ತಡ, ಪ್ರಭಾವ, ಅಘಾತ, ಸೋಲು ನೋವುಗಳನ್ನು ಸಾಮಾನ್ಯ ಔಷಧಿಗಳಿಂದ ಗುಣಪಡಿಸಲು ಸಾಧ್ಯವಿಲ್ಲ. ಇದಕ್ಕೆ ಪರಿಹಾರವೊಂದೇ ಅದೇ ಧ್ಯಾನ ಮತ್ತು ಆಧ್ಯಾತ್ಮ.

ನಾವು ನಿಸರ್ಗದಿಂದ ಪ್ರತ್ಯೇಕವಾಗಿರದೇ ಅದರ ಒಂದು ಭಾಗವಾಗಿದ್ದೇವೆ. ‘ಫಿಟ್ಟೇಸ್‌ಟ್ ವಿಲ್ ಸರ್‌ವೈವ್’ ಇದು ಜಗದ ನಿಯಮ. ಅದ್ಭುತವಾದ ಸಂಪಾದನೆಯಿಂದ ಈ ಮನುಷ್ಯ ಧರ್ಮಗಳನ್ನು, ಜಾತಿಗಳನ್ನು, ದೇಶವನ್ನು, ಸಂಪತ್ತನ್ನು ಸೃಷ್ಟಿಸಿಕೊಂಡಿದ್ದಾನೆ. ತನ್ನ ಅದ್ಭುತ ‘ಕಲ್ಪನಾ’ ಶಕ್ತಿಯಿಂದ ಅಗತ್ಯ ಅನ್ವೇಷಣೆಗಳನ್ನು ಮಾಡುತ್ತಾ ಈ ಭೂಮಿಯನ್ನು ಆಳುತ್ತಿದ್ದಾನೆ. ತನ್ನ ಸರ್ವನಾಶಕ್ಕೆ ಬೇಕಾದ ಶತ್ರುಗಳನ್ನು, ಗಡಿರೇಖೆಗಳನ್ನು, ವೈರತ್ವವನ್ನು, ದ್ವೇಷವನ್ನು ಸ್ಥಾಪಿಸಿಕೊಂಡು ಬದುಕುತ್ತಿದ್ದಾನೆ. ಎಲ್ಲವೂ ನನ್ನ ಕೈಯಲ್ಲಿಯೇ ಇದೆ ಎಂಬ ನಂಬಿಕೆಗಳೇ ಅವನ ಅವನತಿಗೆ ದಾರಿ ಮಾಡಿಕೊಡುತ್ತಿವೆ. ವಾಸ್ತವವಲ್ಲದ ನಂಬಿಕೆಗಳಿಂದ ದೂರ ಉಳಿಯಲು ಇರುವುದು ಒಂದೇ ಮಾರ್ಗ ಅದುವೇ ‘ಧ್ಯಾನ ಮತ್ತು ಆಧ್ಯಾತ್ಮ’. ಈ ಮತ್ತು ಆಧ್ಯಾತ್ಮ ಜೀವನದಲ್ಲಿ ಅಳವಡಿಸಿಕೊಂಡಾಗಲೇ ‘ನಾನು ಯಾರು ಮತ್ತು ನನ್ನ ಅಸ್ತಿತ್ವ ಏನು?’ ಎಂಬುದರ ಅರಿವಾಗುವುದು.

ಶತ ಶತಮಾನಗಳಿಂದ ಭೂಮಿಯ ಮೇಲೆ ಹೆಚ್ಚಾಗಿ ಅದ್ಭುತಗಳು ಮತ್ತು ಅನ್ವೇಷಣೆಗಳು ಸೃಷ್ಟಿಯಾಗುತ್ತಿರುವುದು ಮನುಷ್ಯನ ದೈಹಿಕ ಪ್ರಯತ್ನಗಳಿಂದ ಅಲ್ಲ, ಅದು ಮನಸ್ಸು ಮತ್ತು ಜ್ಞಾನದ ಪ್ರತಿಫಲ. ನಾವೆಲ್ಲರೂ ದೈಹಿಕ ಅವಸರಕ್ಕಿಂತ ಜ್ಞಾನದ ಅವಸರಕ್ಕೆ ಮಹತ್ವ ನೀಡಬೇಕು. ದೈಹಿಕ ಅವಸರ ಅವಘಡಕ್ಕೆ ದಾರಿ ಮಾಡಿಕೊಟ್ಟರೆ, ಜ್ಞಾನದ ಅವಸರ ಅನ್ವೇಷಣೆಗೆ ದಾರಿ ಮಾಡಿಕೊಡುತ್ತದೆ. ದೇಹದ ಬೆಳವಣಿಗೆಗಿಂತ ಬೆಳವಣಿಗೆ ಆಗಬೇಕು. ನಮ್ಮಿಂದ ಮುಂದಿನ ಜನಾಂಗಕ್ಕೆ ಜ್ಞಾನದ ಕೊಡುಗೆ ಸಿಗಬೇಕು ಸಂಪತ್ತಿನ ಕೊಡುಗೆ ಅಲ್ಲ.

ದೇಹ ಜಗದೊಡೆಯನ ಕೊಡುಗೆಯೇ?
ಈ ದೇಹದ ಬೆಳವಣಿಗೆ ಹೇಗಾಯಿತು? ಇದನ್ನು ವಿವಿಧ ವರ್ಗದ ಜನರನ್ನು ಕೇಳಿದಾಗ ವಿಭಿನ್ನ ಉತ್ತರ ಸಿಗುತ್ತದೆ. ದೇವ ಭಕ್ತರನ್ನು ಕೇಳಿದಾಗ ‘ನೋಡಿ ಸ್ವಾಮಿ, ಈ ದೇಹ ಜಗದೊಡೆಯನ ಕೊಡುಗೆ. ನಾವು ಅವನ ಅನತಿಯಂತೆ ನಡೆಯುತ್ತಿದ್ದೇವೆ. ನಮ್ಮ ದೇಹದ ತೂಕ ಅವನಿಚ್ಛೆಯಂತೆ ಬೆಳೆದಿದೆ. ಇದರಲ್ಲಿ ನಮ್ಮ ಪಾತ್ರ ಏನೂ ಇಲ್ಲಾ’ ಸಿಂಪಲ್ ಉತ್ತರ ನೀಡುತ್ತಾರೆ. ಇದೇ ಪ್ರಶ್ನೆಯನ್ನು ವಿಜ್ಞಾನಿಗಳಿಗೆ ಕೇಳಿದಾಗ ‘ನಿನ್ನ ದೇಹದ ಬೆಳವಣಿಗೆ ನೈಸರ್ಗಿಕವಾದದ್ದು, ನೀನು ಸೇವಿಸುವ ಆಹಾರ ಮತ್ತು ಅದರ ಪ್ರಮಾಣ ನಿನ್ನ ತೂಕವನ್ನು ನಿರ್ಧರಿಸುತ್ತದೆ. ನಿನ್ನ ತಂದೆ ತಾಯಿಯ ಶಾರೀರಿಕ ಗುಣಗಳು ನಿನ್ನ ದೇಹದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಒಟ್ಟಿನಲ್ಲಿ ನೀನು ಸೇವಿಸುವ ಆಹಾರದಿಂದಲೇ ನಿನಗೆ ಇಷ್ಟೊಂದು ತೂಕ ಬಂದಿದೆ.’ ಎಂದು ಉತ್ತರಿಸುತ್ತಾರೆ. ಇದೇ ಪ್ರಶ್ನೆಯನ್ನು ಧರ್ಮದ ಗುರುಗಳ ಹತ್ತಿರ ಕೇಳಿದರೆ ‘ಮನುಷ್ಯನ ಸೃಷ್ಟಿ ಹೇಗಾಯಿತು ನಮ್ಮ ಧರ್ಮ ಗ್ರಂಥದಲ್ಲಿ ಬರೆದಿಡಲಾಗಿದೆ. ಇದು ದೇವರ ಸೃಷ್ಟಿ. ನಾವೆಲ್ಲರೂ ದೇವರ ಅಣತಿಯಂತೆ ನಡೆಯಬೇಕು. ಧರ್ಮದ ನಿಯಮಾನುಸಾರ ನಡೆದರೆ ನಮಗೆ ಶಾಶ್ವತವಾದ ಸ್ವರ್ಗದ ಸ್ಥಾನ ಸಿಗುತ್ತದೆ. ನಾವು ಮಾಡುವ ಕೃತಿಗಳ ಮೇಲೆ ನಮ್ಮ ಅಸ್ತಿತ್ವ ಅಡಗಿದೆ. ನಾವು ಪಡೆದ ಈ ದೇಹ ಜಗದೊಡೆಯನ ಕೊಡುಗೆ’ ಎಂದು ಹೇಳುತ್ತಾರೆ. ಇದೇ ಪ್ರಶ್ನೆಯನ್ನು ಅಧ್ಯಾತ್ಮಿಕ ಗುರುಗಳ ಹತ್ತಿರ ಕೇಳಿದಾಗ ‘ಈ ದೇಹ ಪಂಚ ಭೂತಗಳ ಮಿಶ್ರಣ. ಭೂಮಿ, ಜಲ, ಅಗ್ನಿ, ವಾಯು, ಇವುಗಳ ಮಿಶ್ರಣದಿಂದಲೇ ನಾವು ಈ ಭೂಮಿಗೆ ಅವತರಿಸಿ ಬಂದಿದ್ದೇವೆ. ಇಂದು 50 ರಿಂದ 70 ಕೆಜಿ ಆಗಿದ್ದು ಅದೇ ಪಂಚ ಭೂತಗಳ ಮಿಶ್ರಣದಿಂದ. ನೀನು ಈ ಭೂಮಿಯಿಂದ ಇದನ್ನೆಲ್ಲವನ್ನು ಸಾಲವಾಗಿ ಪಡೆದಿದ್ದೀಯಾ. ಕೆಲವು ದಿನಗಳಾದ ತರುವಾಯ ಇದನ್ನೆಲ್ಲವನ್ನು ನಾವು ಮರಳಿ ಪಾವತಿಸಬೇಕಾಗುತ್ತದೆ. ನಮ್ಮದೇ ಆದ ಅಸ್ತಿತ್ವ ಇಲ್ಲಿ ಇರುವುದಿಲ್ಲ. ನಾನು ಈ ನಿಸರ್ಗದ ಭಾಗವೇ ಹೊರತು ಬೇರೆನೂ ಅಲ್ಲಾ. ನಮ್ಮಲ್ಲಿ ಜೀವ ಇರುವವರೆಗೆ ಈ ನಿಸರ್ಗವನ್ನು ಅತ್ಯಾನಂದದಿಂದ ಅನುಭವಿಸಿ. ದೇಹ ತ್ಯಾಗ ಮಾಡಬೇಕು. ದುಃಖ ನಿರಾಸೆ ಪಡುವುದು ಏತಕ್ಕಾಗಿ, ಈ ದೇಹ ನೀನೂ ಅಲ್ಲ ಮತ್ತು ನಿನ್ನದೂ ಅಲ್ಲಾ. ನಿನ್ನ ಆಯುಷ್ಯ ಕ್ಷಣಿಕ ಇದು ಮಣ್ಣಿನ ಮಡಿಕೆ’ ಎಂದು ಅರ್ಥಗರ್ಭಿತವಾಗಿ ಹೇಳುತ್ತಾರೆ.

ಅಧ್ಯಾತ್ಮದ ಗುರು
ಜನರನ್ನು ಸರಿ ದಾರಿಯಲ್ಲಿ ಸಾಗುವಂತೆ ಮಾಡುವವನು ಅಧ್ಯಾತ್ಮದ ಗುರು. ಧರ್ಮದ ಗುರುಗಳಿಂದ ಇದು ಸಾಧ್ಯವಿಲ್ಲ. ನಾವು ನಾವಾಗದೇ ನಾವು ನಿಸರ್ಗದ ಭಾಗವಾಗಬೇಕೆಂದು ಮನವರಿಕೆ ಮಾಡುವವನು, ನಮ್ಮನ್ನು ದು:ಖದಿಂದ, ಕ್ರೋಧದಿಂದ ಹೊರತರುವವನು, ದುರಾಶೆಗಳು ನಮ್ಮ ಉದ್ಭವವಾಗದಂತೆ ಮಾಡುವವನು, ಅವನೇ ಆಧ್ಯಾತ್ಮದ ಗುರು. ಧರ್ಮದಲ್ಲಿರುವ ಮಾನವೀಯತೆಯ ಸ್ಮತಿಗಳನ್ನು ಜನರ ಮನಸ್ಸಿನ ಅರಿವಿಗೆ ಬರುವಂತೆ ಮಾಡುವವನಿಗೆ ನಾವು ನಮನಗಳನ್ನು ಸಲ್ಲಿಸಲೇಬೇಕು. ಅಧ್ಯಾತ್ಮಿಕ ವಿಷಯಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದಾಗ ನಮಗೆ ಸಿಗುವ ಉತ್ತರ ವಾಸ್ತವವಾದಿತ್ವ. ಮಾನವೀಯತೆ ನಮ್ಮನ್ನು ಆವರಿಸಿಕೊಂಡರೆ ದ್ವೇಷದ ಭಾವನೆ, ವೈರತ್ವದ ಗುಣಗಳು ನಮ್ಮಲ್ಲಿ ಬರುವುದಿಲ್ಲ. ನಮ್ಮ ಅಸ್ತಿತ್ವವನ್ನು ನಾನು ಅರಿಯಲು ಅತೀ ವೇಗದಲ್ಲಿ ಸಾಗಬೇಕಾಗಿಲ್ಲ. ದೇಹ ಮತ್ತು ಮಾಂಸಖಂಡಗಳ ಬೆಳವಣಿಗೆಯ ಮೂಲಗಳನ್ನು ಅರಿತುಕೊಂಡರೆ ಸಾಕು ನಮಗೆ ಜ್ಞಾನ ಬರಲು ಪ್ರಾರಂಭವಾಗುತ್ತದೆ. ಊಟ ಮತ್ತು ನಿದ್ರೆ ಇವು ಮನುಷ್ಯನ ಮೂಲ ಅಗತ್ಯಗಳು. ಇವುಗಳಿಗೆ ಮಹತ್ವ ಕೊಡುವ ಹಾಗೆ ಮಾಡುವವನೇ ‘ಅಧ್ಯಾತ್ಮ ಗುರು.’

ಧ್ಯಾನ ಮತ್ತು ಅಧ್ಯಾತ್ಮ ಬ್ರಹ್ಮಾಂಡ ಇದ್ದ ಹಾಗೆ, ಅದರ ರುಚಿಯನ್ನು ಒಂದು ಭಾರಿ ಸವಿಯಬೇಕು. ಹಾಗಾಗಿದ್ದೇ ಆದರೆ ದಿನದ 24 ಘಂಟೆಗಳ ನಮ್ಮ ಜೀವನ ಆನಂದದ ಜೀವನ. ನಿಸರ್ಗ ನಿರ್ಮಿತ ಈ ಭೂಮಿ, ಆಕಾಶ, ನೀರು, ಬೆಳಕು, ನಕ್ಷತ್ರ, ಗಾಳಿ, ಗಿಡಮರಗಳನ್ನು ಪ್ರೀತಿಯಿಂದ ಅಪ್ಪಿಕೊಳ್ಳಬೇಕು. ಸಂಬಂಧಗಳ ಬಗ್ಗೆ ಚಿಂತನೆ ಮಾಡಿದಾಗ ನಮಗೆ ಅರಿವಾಗುತ್ತದೆ. ‘ಈ ದೇಹ ನಾನೂ ಅಲ್ಲ ಮತ್ತು ನನ್ನದೂ ಅಲ್ಲ,’ ಪ್ರತಿಯೊಬ್ಬರು ಅವರವರ ಪಾತ್ರ ನಿರ್ವಹಿಸುತ್ತಿದ್ದಾರೆ. ನಮ್ಮ ಪಾತ್ರ ನಾವು ನಿರ್ವಹಿಸಬೇಕಾಗಿದೆ. ಭೂಮಿಯ ಮೇಲೆ ವಾಸಿಸುವ ಪ್ರತಿ ಜೀವರಾಶಿ ತನ್ನ ಕೆಲಸವನ್ನು ಮಾಡುತ್ತಿದೆ. ಹೇಗೆ ಬೆಳೆಯಬೇಕೆನ್ನುವುದನ್ನು ಮತ್ತು ಹೇಗೆ ಬದುಕಬೇಕೆಂಬುದನ್ನು ತಮ್ಮ ಪೂರ್ವಜರಿಂದ ಕಲಿತು ತಮ್ಮ ವಾರಸುದಾರನಿಗೆ ಕಲಿಸುತ್ತಿದ್ದಾರೆ. ಸ್ಪರ್ಧಾತ್ಮಕ ಜೀವನ ಇಲ್ಲಿ ಇಲ್ಲಾ. ದುಃಖದ ಬದುಕು ಇಲ್ಲಿ ಇಲ್ಲಾ. ಸಕಲ ಹಾಗೆ ನಾವೂ ಜೀವಿಸಬೇಕು. ಆನಂದ ನಮ್ಮನ್ನರಿಸಿ ಬರಬೇಕು ನಾವು ಆನಂದವನ್ನು ಅರಸಿ ಹೋಗಬಾರದು. ಹೋಲಿಕೆ ಮಾಡಿ ನೋಡಿಕೊಳ್ಳುವ’ ಒಂದೇ ಒಂದು ದುಷ್ಟ ಮತ್ತು ಅಮಾನವೀಯ ಪದ ನಮ್ಮಿಂದ ದೂರ ಹೋದರೆ ಸಾಕು ಅದುವೇ ಸ್ವರ್ಗ, ಅದುವೇ ಜೀವನದ ಬೆಳಕು.

ಯಾರು ಹಿತವರು ನಿನಗೆ..
ಪ್ರಶ್ನೆಗಳಿಗೆ ಉತ್ತರ ಯಾರಲ್ಲಿ ಹುಡುಕುತ್ತೇವೆ ಎನ್ನುವುದರ ಮೇಲೆ ನಮ್ಮ ಭವಿಷ್ಯ ಅವಲಂಬಿಸಿರುತ್ತದೆ. ದೇವರ ವಾಣಿ ಹೇಳುವವರು, ದೆವ್ವ ಬಿಡಿಸುವವರು, ಧರ್ಮದ ಗುರುಗಳು, ವಿಜ್ಞಾನಿಗಳು ಮತ್ತು ಗುರುಗಳು ಇವರುಗಳಲ್ಲಿ ಯಾರು ಹಿತವರು ಎಂದು ನೀವು ಪ್ರಶ್ನೆ ಕೇಳಲು ಬಯಸಿದರೆ ಅದಕ್ಕೆ ಉತ್ತರ ‘ಅಧ್ಯಾತ್ಮ ಗುರು’. ಅಧ್ಯಾತ್ಮ ಪ್ರೇರಿತ ಯಾವುದೇ ಉಪದೇಶಗಳು ಉತ್ತಮವಾಗಿರುತ್ತವೆ. ಅವುಗಳನ್ನು ಅನುಸರಿಸಿದಾಗ ಎಲ್ಲಾ ನಿಗೂಢ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗುತ್ತದೆ. ಮುಂದೆ ನೀವೂ ಕೂಡಾ ಎಲ್ಲರ ಉಲ್ಲಾಸದ ಜೀವನಕ್ಕೆ ಮುನ್ನುಡಿ ಬರೆಯುತ್ತೀರಿ. ಅಧ್ಯಾತ್ಮವನ್ನು ಜೀವನದಲ್ಲಿ ಅಳವಡಿಸಿಕೊಂಡಾಗಲೇ ನಾವು ಬಯಸಿದ ಪರಮಶಾಂತಿ ನಮಗೆ ಸಿಗಲು ಸಾಧ್ಯ, ಅದುವೇ ‘ಸ್ವರ್ಗ’ ಮತ್ತು ‘ಸತ್ಯ’
‘ಅಧ್ಯಾತ್ಮ’ ಮತ್ತು ಇವೆರಡೂ ಒಂದೇ ಅಲ್ಲ.

ಎಲ್ಲವೂ ನನಗೆ ಗೊತ್ತಿದೆ ಎನ್ನುವುದು ನಂಬಿಕೆ. ಎಲ್ಲವೂ ನನಗೆ ಗೊತ್ತಿಲ್ಲ ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ ಎನ್ನುವುದು, ದೇವರು ಖಂಡಿತವಾಗಿಯೂ ಇದ್ದಾನೆ ಎನ್ನುವುದೂ ‘ನಂಬಿಕೆ’. ದೇವರು ಖಂಡಿತವಾಗಿಯೂ ಇಲ್ಲಾ ಎನ್ನುವುದು ‘ನಂಬಿಕೆ.’ ದೇವರು ಇರುವಿಕೆಯ ಬಗ್ಗೆ ಖಂಡಿತವಾಗಿಯೂ ನನಗೆ ಗೊತ್ತಿಲ್ಲ ಜಗದೊಡೆಯನ ದರ್ಶನಕ್ಕಾಗಿ ನಾನು ಧ್ಯಾನ ಮತ್ತು ಯೋಗ ಮಾಡುತ್ತೇನೆ. ಅವನು ಇರುವಡೆಗೆ ಸಾಗುತ್ತೇನೆ ಎನ್ನುವುದು ಆಧ್ಯಾತ್ಮ. ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ ಮತ್ತು ಕ್ರಿಯಾಯೋಗ ಇವು ಜಗದೊಡೆಯನ ಹೋಗಲು ಇರುವ ಮಾರ್ಗಗಳು. ಇವುಗಳ ಬಗ್ಗೆ ಅಧ್ಯಯನ ಮಾಡಿ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಿದರೆ ಯಾರ ಉಪದೇಶ ನಮಗೆ ಬೇಕಾಗಿಲ್ಲ. ಯಾವ ಯೋಗದಲ್ಲಿ ಯಾವ ಸಂದೇಶವಿದೆ. ಎನ್ನುವುದನ್ನು ತಿಳಿದುಕೊಂಡು ಸೂಕ್ತ ದಾರಿಯಲ್ಲಿ ಸಾಗಿದರೆ ನಮಗೆ ಸತ್ಯದ ದರ್ಶನವಾಗುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close