ವೇಗ ಪಡೆದ ‘ಆಪರೇಷನ್ ಕಮಲ’ ಕಾರ್ಯಾಚರಣೆ

Posted In : ಬೆಂಗಳೂರು, ರಾಜ್ಯ

ಬೆಂಗಳೂರು: ಸುಪ್ರೀಂ ಆದೇಶದಂತೆ, ನಾಳೆ ವಿಶ್ವಾಸಮತ ಸಾಬೀತುಪಡಿಸುವ ಅನಿ ವಾರ್ಯತೆ ಉಂಟಾಗಿದ್ದು, ಬಿಜೆಪಿ ಪಾಳೆಯ ದಿಂದ ಆಪರೇಷನ್ ಕಮಲ ಕಾರ್ಯಾ ಚರಣೆ ವೇಗ ಪಡೆದುಕೊಂಡಿದೆ.

ಈವರೆಗೂ ಆಪರೇಷನ್ ನ ಹೊಣೆ ವಹಿಸಿಕೊಂಡಿದ್ದ ಗಾಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲುಗೆ ಇತರ ನಾಯಕರು ಮಾತ್ರವಲ್ಲದೇ, ರಾಜ್ಯದ ಕೆಲವು ಮಠಾಧೀಶರುಗಳು ಹಾಗೂ ಶಾಸಕರ ಕುಟುಂಬಸ್ಥರಿಂದಲೇ ಒತ್ತಡ ಬಂದಿದೆ. ಯಡಿಯೂರಪ್ಪ ಸರಕಾರಕ್ಕೆ ಬೆಂಬಲ ನೀಡುವಂತೆ ಕಾಂಗ್ರೆಸ್, ಜೆಡಿಎಸ್ ಕೆಲವು ಶಾಸಕರಿಗೆ ಲಿಂಗಾಯತ ಸಮು ದಾಯದ ಮಠಾಧೀಶರುಗಳೇ ಸೂಚನೆ ನೀಡಿದ್ದು, ಶಾಸಕರ ನಡೆ ಕುತೂಹಲ ಕೆರಳಿಸಿದೆ.

ಹುಮ್ನಾಬಾದ್, ಜಮಖಂಡಿ ಶಾಸಕರಿಗೆ ಸ್ಥಳೀಯ ಮಠಾಧೀಶರ ಒತ್ತಡ ಬಂದಿದೆ. ಶಾಮನೂರು ಶಿವಶಂಕರಪ್ಪನವರಿಗೆ ವೀರಶೈವ ಮಠಾಧೀಶರ ಮೂಲಕ ಒತ್ತಡ ಹೇರುವ ತಂತ್ರ ಹೆಣೆಯಲಾಗುತ್ತಿದೆ. ಹಿರೇಕೆರೂರ್ ನ ಬಿ.ಸಿ.ಪಾಟೀಲ್ ಗೆ ಬಿಜೆಪಿಯ ಸಿ.ಎಂ. ಉದಾಸಿಯಿಂದ ಸಚಿವ ಪಟ್ಟ ಆಮಿಷ ಬಂದಿದ್ದರೆ, ಭದ್ರಾವರಿ ಶಾಸಕ ಸಂಗಮೇಶ್ ಗೆ ಬಿ.ವೈ.ರಾಘವೇಂದ್ರ ಕರೆ ಮಾಡಿ, ಬೆಂಬಲ ಯಾಚಿಸಿದ್ದಾರೆ. ನಾವು ಒಗ್ಗಟ್ಟಾಗಬೇಕೆಂದು, ಮತ್ತೆ ರಾಜ್ಯಕ್ಕೆ ಲಿಂಗಾಯತ ನಾಯಕರೊಬ್ಬರು ಸಿಎಂ ಆಗುವ ಯೋಗ ಬಂದಿದೆ ಎಂದು ಭಾವನಾತ್ಮಕವಾಗಿ ಶಾಸಕರ ಮನವೊಲಿಕೆಗೆ ಯತ್ನಿಸಲಾಗುತ್ತಿದೆ.  

ಇತ್ತ ಸಿಎಂ ಯಡಿಯೂರಪ್ಪನವರ ಕುಟುಂಬ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ದೇವರ ಮೊರೆ ಹೋಗಿದ್ದು, ನಾಳೆ ಇಡೀ ದಿನ ಸಿದ್ದಲಿಂಗೇಶ್ವರ ದೇವರಿಗೆ ಪೂಜೆ ನಡೆಯಲಿದೆ.

Leave a Reply

Your email address will not be published. Required fields are marked *

5 + 19 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top