About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ
Trending

ಸದನದಲ್ಲಿ ಆಪರೇಷನ್ ಆಡಿಯೊ ಪ್ರಸ್ತಾಪ: ಎಸ್‍ಐಟಿ ತನಿಖೆಗೆ ಬಿಜೆಪಿ ಆಕ್ಷೇಪ

ಬೆಂಗಳೂರು: ಐದನೇ ದಿನದ ವಿಧಾನಸಭಾ ಕಲಾಪ ಆರಂಭವಾಗಿದ್ದು, ಆಪರೇಷನ್ ಆಡಿಯೊ ಪ್ರಕರಣ ಸಂಬಂಧ ಎಸ್‍ಐಟಿ ತನಿಖೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಕಲಾಪದ ಆರಂಭದಲ್ಲೇ ಮಾತನಾಡಿದ ಬಿಜೆಪಿ ಶಾಸಕ ಮಾಧುಸ್ವಾಮಿ, ”ಪ್ರಕರಣವನ್ನು ಎಸ್ಐಟಿ ಬದಲು ನ್ಯಾಯಾಂಗ ತನಿಖೆ ಮಾಡಲಿ ಅಥವಾ ಸದನಸಮಿತಿ ತನಿಖೆ ನಡೆಸುವಂತೆ ವಿನಂತಿಸಿದರು. ಪ್ರಕರಣದ SIT ತನಿಖೆ ಕಾನೂನುಬದ್ಧವಲ್ಲ. ಎಸ್ಐಟಿಯಿಂದ 15 ದಿನದಲ್ಲಿ ಏನು ಮಾಡಲು ಆಗುತ್ತೆ? ನಿಮ್ಮ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಿ. SITಬದಲು ನ್ಯಾಯಾಂಗ ತನಿಖೆ ಮಾಡಲಿ. SIT ಬಗ್ಗೆ ಹಿಂದೆ ಇಲ್ಲದ ನಂಬಿಕೆ ಈಗ ಹೇಗೆ ಬಂತು ಎಂದು ಪ್ರಶ್ನಿಸಿದರು. ಮರುಪರಿಶೀಲನೆ ಮಾಡಿ ಸದನದ ವ್ಯವಹಾರ ಸದನದಲ್ಲೇ ಉಳಿಸಿ. ಸದನದ ವ್ಯವಹಾರ ಕೋರ್ಟ್ ನಲ್ಲಿ ಪ್ರಶ್ನಿಸುವಂತೆ ಆಗುವುದು ಬೇಡ. ಈ ವಿಚಾರವನ್ನು ಇಲ್ಲಿಯೇ ಅಂತ್ಯಗೊಳಿಸಬೇಕು. ಇಲ್ಲದಿದ್ದರೆ ಸದನ ಸಮಿತಿ ತನಿಖೆ ಮಾಡಲಿ” ಎಂದು ಶಾಸಕ ಮಾಧುಸ್ವಾಮಿ ಒತ್ತಾಯಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close