About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ
Trending

ಆಪರೇಷನ್ ಕಮಲ ನಡೆಯುತ್ತಿದೆ, ಸರಕಾರ ಸುಭದ್ರ: ಕುಮಾರಸ್ವಾಮಿ

ಬೆಂಗಳೂರು: ಬಿಜೆಪಿಯವರು ‘ಆಪರೇಷನ್ ಕಮಲ’ ಮಾಡುತ್ತಿದ್ದಾರೆ. ಇದು ನನ್ನ ಗಮನಕ್ಕೂ ಬಂದಿದೆ. ಆದರೆ ನನ್ನ ಸರ್ಕಾರ ಸುಭದ್ರವಾಗಿದೆ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

“ಬಿಜೆಪಿಯವರು ಯಾರನ್ನು ಸಂಪರ್ಕ ಮಾಡಿದ್ದಾರೆ. ಯಾವೆಲ್ಲಾ ಆಮಿಷಗಳನ್ನು ನೀಡಿದ್ದಾರೆ ಎಂಬ ಎಲ್ಲ ಮಾಹಿತಿಗಳು ನನ್ನ ಬಳಿ ಇವೆ. ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಬಿಜೆಪಿಯವರ ಯಾವ ಪ್ರಯತ್ನವೂ ಸಫಲವಾಗುವುದಿಲ್ಲ” ಎಂದರು.

”ಮುಂಬೈನಲ್ಲಿರುವ ಮೂವರು ಶಾಸಕರು ನನ್ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಹೋದವರೆಲ್ಲ ನನ್ನ ಮಿತ್ರರು ಎಂದ ಹೇಳಿ ಶಾಸಕರ ಹೆಸರನ್ನು ಬಹಿರಂಗಪಡಿಸಲಿಲ್ಲ. ಮುಂಬೈಗೆ ತೆರಳುವ ಮುನ್ನವೇ ನನ್ನ ಜೊತೆ ಚರ್ಚಿಸಿ ವೈಯಕ್ತಿಕ ಕೆಲಸಕ್ಕಾಗಿ ತೆರಳಿದ್ದಾರೆ. ದೆಹಲಿಯಲ್ಲಿರುವ ಶಾಸಕರು ನನ್ನ ಸ್ನೇಹಿತರು, ಎಲ್ಲರು ನನ್ನವರು. ಸರ್ಕಾರಕ್ಕೆ ಯಾವುದೇ ಧಕ್ಕೆಯಿಲ್ಲದ್ದರಿಂದ ನಾನು ಆರಾಮಾಗಿಯೇ ಇದ್ದೇನೆ” ಎಂದು ತಿಳಿಸಿದರು.

ಬಿಜೆಪಿಯ ಆಮಿಷಗಳನ್ನು ನಂಬಿ ಕಾಂಗ್ರೆಸ್ ಅಥವಾ ಜೆಡಿಎಸ್ ಯಾವ ಶಾಸಕರು ಕಮಲ ಹಿಡಿಯಲು ಮುಂದಾಗಲ್ಲ. ಬಿಜೆಪಿಯನ್ನು ನಂಬಿ ಪಕ್ಷ ಬಿಡುವ ಸನ್ನಿವೇಶ ರಾಜ್ಯದಲ್ಲಿ ಇಲ್ಲ ಅಂತಾ ತಿಳಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close