ಬಯ್ಗುಳ, ಕಾಮ ಮತ್ತು ಕಲಾತ್ಮಕ ಸಿನಿಮಾ

Posted In : ಸಿನಿಮಾ ಸಮಾಚಾರ, ಸಿನಿಮಾಸ್

-ಶಶಿಕರ ಪಾತೂರು

ಆರ೦ಭ ಕಾಲದ ಕಲಾತ್ಮಕ ಅಥವಾ ಸೃಜನಶೀಲ ಚಿತ್ರಗಳಲ್ಲಿ ಕಾಣುವ೦ಥ ಕಾಮದ, ವಾ೦dæಯ ಸನ್ನಿವೇಶಗಳು ಅನಿವಾಯ೯ವಾಗಿತ್ತೇ? ಇ೦ದಿಗೂ ಆ ಕಾಲಘಟ್ಟದ ಕಾದ೦ಬರಿಗಳನ್ನು ಚಿತ್ರವಾಗಿಸುವಾಗ ಬಯ್ಗುಳದ ಸನ್ನಿವೇಶಗಳು ಅಗತ್ಯವೇ? ಅವುಗಳನ್ನು ಸೆ೦ಟ್ರಲ್ ಬೋಡ್‍೯ ಆಫ಼್ ಫಿಲ್ಮ್ ಸಟಿ೯ಫಿಕೇಶನ್ ತಡೆ ಹಿಡಿಯುವುದರಿ೦ದ ಚಿತ್ರಕ್ಕೆ, ನಿದೇ೯ಶಕರ ಸ್ವಾತ೦ತ್ರéಕ್ಕೆ ಎಷ್ಟರ ಮಟ್ಟಿಗೆ ಹಾನಿಯಾಗುತ್ತದೆ ಎ೦ಬ ಬಗ್ಗೆ ಕನ್ನಡದ ಖ್ಯಾತ ನಿದೇ೯ಶಕರು ತಮ್ಮ ಅಭೀಪ್ರಾಯಗಳನ್ನು ಇಲ್ಲಿ ಹೇಳಿದ್ದಾರೆ.

94018Mar16_PK_bg_Mv_1_R1_page1_image6

ಅದು ಕಾಮವಲ್ಲ, ವಾ೦ಛೆ. ಮನುಷ್ಯ ಭಾವನೆಗಳ ಮೂಲಕವೇ ಅಭೀಪ್ರಾಯ ಬಿಚ್ಚಿಡುವವನು. ನ್ಯೂಡಿಟಿ ಬೇರೆ; ಪ್ರೊವೋಕ್ ಮಾಡುವುದು ಬೇರೆ. ದೇವಸ್ಥಾನದ ಬೆತ್ತಲೆ ಶಿಲ್ಪಗಳು ಕಾಮೋದ್ದೀಪಿಸುವುದಿಲ್ಲ. ಯಾಕೆ೦ದರೆ ಅಲ್ಲಿ ಭಕ್ತರಿಗೆ ಅ೦ಥ ದೃಷ್ಟಿಯಿರುವುದಿಲ್ಲ. ಸಿನಿಮಾದಲ್ಲೂ ಅಷ್ಟೇ. ಬೆತ್ತಲೆ ದೇಹಕ್ಕಿ೦ತ ಬೆತ್ತಲೆಗೊಳ್ಳುವ ಸ೦ದಭ೯ಗಳು ಯಾವುದು ಎ೦ಬುದು ಮುಖ್ಯ. ಪ್ರೊವೋಕಿ೦ಗ್ ಎನ್ನುವುದು ಕಲಾತ್ಮಕಕ್ಕಿ೦ತ ಕಮಷಿ೯ಯಲ್ ಚಿತ್ರಗಳಲ್ಲೇ ಹೆಚ್ಚಾಗಿದೆ. ಬಟ್ಟೆಯಿದ್ದರೂ ಹಾಡಿನಲ್ಲಿ ಕುಣಿಸುವ ಸೊ೦ಟ, ನಿಲ್ಲುವ ಭ೦ಗಿಯ ಮೂಲಕವೇ ಪ್ರೊವೋಕ್ ಮಾಡಲಾಗುತ್ತದೆ. ಉದಾಹರಣೆಗೆ 'ಡೋಲಾರೆ.. ಡೋಲಾರೆ' ಹಾಡು. ಇನ್ನು ಭಾಷೆಗಳು ನಮ್ಮತನದ ಪ್ರತೀಕವಾಗಿರುತ್ತವೆ. ಅದನ್ನು ಹಾಗೆ ಬಳಸಿದಾಗಷ್ಟೇ ನಮ್ಮತನ ಕಾಣಿಸುತ್ತದೆ. ಭೈರಪ್ಪನವರ ಗೃಹಭ೦ಗ ಕಾದ೦ಬರಿಯಲ್ಲಿ ಹಲ್ಕ ಮು೦ಡೆ ಎ೦ದು ಬಯ್ಯುವ ಪಾತ್ರವಿದೆ. ಅದನ್ನು ಧಾರಾವಾಹಿಯಾಗಿಸಿದಾಗ ನಾನು ಅದೇ ಸ೦ಭಾಷಣೆಗಳನ್ನೇ ಹೇಳಿಸಿದ್ದೇನೆ.
 ಗಿರೀಶ್ ಕಾಸರವಳ್ಳಿ, ನಿದೇ೯ಶಕರು

26418Mar16_PK_bg_Mv_1_R1_page1_image9

ಈ ಬಗ್ಗೆ ನನಗೇನೂ ಹೇಳುವ೦ಥದ್ದಿಲ್ಲ.. ಥ್ಯಾ೦ಕ್ಯೂ
 ಗಿರೀಶ್‍ಕಾನಾ೯ಡ್, ನಿದೇ೯ಶಕರು

 

 

 

 

 

4018Mar16_PK_bg_Mv_1_R1_page1_image7

ನಾಗಮ೦ಡಲದಲ್ಲಿ ಸಾ೦ದಭೀ೯ಕ ಕಾಮದ ಆಯಾಮ ತೋರಿಸಿದ್ದು ಬಿಟ್ಟರೆ ನನ್ನ ಯಾವ ಚಿತ್ರಗಳಲ್ಲೂ ಅ೦ಥ ದೃಶ್ಯಗಳಿಲ್ಲ. ಕಾದ೦ಬರಿಗಳಲ್ಲೂ ಅಷ್ಟೆ; ಕುವೆ೦ಪು,ಕಾರ೦ತರ೦ಥ ನವೋದಯ ಬರಹಗಾರರು ಕಾಮ, ಅಥವಾ ಬಯ್ಗುಳದ ಭಾಷೆ ಬಳಸಿಲ್ಲ. ನವ್ಯದವರು ಅದನ್ನು ಬಳಸಿದರು. ಆದರೆ ಅದು ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿದ್ದರೆ ಚೆನ್ನ. ಸಹಜ ಬರವಣಿಗೆಯ ಹೆಸರಲ್ಲಿ ಅವರು ಕಕ್ಕಸು ಮಾಡುತ್ತಾ ಮಾತನಾಡುವ ಬಗ್ಗೆ ಬರೆದಿದ್ದಾರೆ೦ದು ಅದನ್ನೇ ದೃಶ್ಯವಾಗಿಸಲು ಸಾಧ್ಯವೇ? ಕಾದ೦ಬರಿಯನ್ನೇ ಯಥಾವತ್ತು ಚಿತ್ರೀಕರಿಸುವುದು ನಿದೇ೯ಶಕನ ಕ್ರಿಯಾಶೀಲತೆಗೆ ಹೇಳಿದ್ದಲ್ಲ. ಇನ್ನು ಸೆನ್ಸಾರ್ ಬಗ್ಗೆ ಹೇಳುವುದಾದರೆ ನಿದೇ೯ಶಕರಿಗೆ ಭಾರತದಲ್ಲಿರುಷ್ಟು ಸ್ವಾತ೦ತ್ರ್ಯ ಬೇರೆಲ್ಲೂ ಇಲ್ಲ ಎ೦ದೇ ಹೇಳಬಹುದು.
 ನಾಗಾಭರಣ, ನಿದೇ೯ಶಕರು

 

42918Mar16_PK_bg_Mv_1_R1_page1_image8ಇತ್ತೀಚೆಗೆ ಖಜುರಾಹೋಗೆ ಹೋಗಿದ್ದೆ. ಅಲ್ಲಿನ ಅಥವಾ ಬೇಲೂರಿನ ಶಿಲ್ಪಗಳಲ್ಲಿ ಪ್ರಾಚೀನ ಕಾಲದಲ್ಲೇ ಕ೦ಡಿರುವ ಸ್ವಾತ೦ತ್ರ್ಯವನ್ನು ಸಿನಿಮಾ ವಿಚಾರಕ್ಕೆ ಬ೦ದಾಗ ಮಾತ್ರ ತಡೆ ಹಿಡಿಯಲಾಗುತ್ತದೆ. ಇ೦ದು ಸಿನಿಮಾಗಿ೦ತ ಹೆಚ್ಚು ಪ್ರಭಾವ ಬೀರುವ ಮಾಧ್ಯಮವಾಗಿ ಕಿರುತೆರೆ, ಯೂಟ್ಯೂಬ್‍ಗಳಿವೆ. ನನ್ನ ಡಿಸೆ೦ಬರ್ 1 ಚಿತ್ರದಲ್ಲಿ ಉತ್ತರ ಕನ್ನಡದ ಭಾಷೆಗೆ ಪೂರಕವಾಗಿ ಅವನವ್ವನ್ ಪದವನ್ನು ಬಳಸಬೇಕಾಗಿತ್ತು. ಅದಕ್ಕೆ ಬದಲಾಗಿ ಅಪ್ಪನ್ ಎ೦ಬ ಪದ ಬಳಸಿದ್ದೆ. ಹೀಗೆ ಆಯಾ ಪ್ರದೇಶದ ವೈಶಿಷ್ಟéದಲ್ಲಿ ಬಯ್ಗಳೂ ಸೇರುತ್ತವೆ. ಅದೆಲ್ಲವೂ ಬದಲಾಗಬೇಕು ಎ೦ದರೆ ಮಾತುಗಳಲ್ಲಿರಬೇಕಾದ ಸ್ವಾರಸ್ಯ ಇಲ್ಲವಾಗುತ್ತದೆ. ಉದಾಹರಣೆಗೆ ಬೆ೦ಗಳೂರಲ್ಲಿ ಎಲ್ಲರನ್ನೂ ಸಾರ್ ಅ೦ತಾರೆ. ಚಿಕ್ಕವರು ದೊಡ್ಡವರು ಎ೦ಬ ಬೇಧವಿಲ್ಲದೆ ಎಲ್ಲರನ್ನು ಸಾರ್ ಎನ್ನುವುದರಿ೦ದಾಗಿ ಸಾರ್ ಎ೦ಬ ಪದಕ್ಕೆ ಇರುವ ಅಥ೯ ಕಳೆದು ಹೋಗುವ ಜೊತೆಗೆ ಅದಕ್ಕೆ ಪಯಾ೯ಯವಾದ ಕನ್ನಡದ ಪದಗಳೂ ಕೂಡ ಬಳಕೆಯಲ್ಲಿರದ೦ತಾಗಿದೆ. ಇ೦ಥ ಸ೦ದಭ೯ಗಳನ್ನು ಸೆ೦ಟ್ರಲ್ ಬೋಡ್‍೯ ಆಫ಼್ ಫಿಲ್ಮ್ ಸಟಿ೯ಫಿಕೇಶನ್ ನವರು ಅಥ೯ ಮಾಡಿಕೊ೦ಡು ಸಹಕರಿಸಬೇಕು. ಸದ್ಯಕ್ಕೆ ಶ್ಯಾಮ್ ಬೆನಗಲ್‍ನ೦ಥವರು ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿರುವುರಿ೦ದ ಮು೦ದೆ ನಿದೇ೯ಶಕರ ಅಭೀವ್ಯಕ್ತಿ ಸ್ವಾತ೦ತ್ರ್ಯಕ್ಕೆ ಹೆಚ್ಚು ಅವಕಾಶ ದೊರೆಯಬಹುದೆ೦ದು ನಿರೀಕ್ಷಿಸುತ್ತೇನೆ.
ಪಿ ಶೇಷಾದ್ರಿ, ನಿದೇ೯ಶಕರು

 

95018Mar16_PK_bg_Mv_1_R1_page1_image10ಹಿ೦ದಿನ ಕನ್ನಡದ ಕಲಾತ್ಮಕ ಚಿತ್ರಗಳನ್ನು ಗಮನಿಸಿದರೆ ಕಮಷಿ೯ಯಲ್ ಚಿತ್ರಗಳನ್ನು ಮೀರಿದ, ಸ೦ಭೋಗವನ್ನು ಸ೦ಭೋಗದ೦ತೆ ತೋರಿಸುವ ಚಿತ್ರಗಳನ್ನು ಕಾಣುತ್ತೇವೆ. ಕಾರಣ ಆ ನಿದೇ೯ಶಕರ ಮೇಲೆ ಆ೦ಗ್ಲ ಚಿತ್ರಗಳು ದಟ್ಟ ಪ್ರಭಾವ ಬೀರಿರುತ್ತವೆ. ಆದರೆ ಭಾರತೀಯ ಚಿತ್ರಗಳಲ್ಲಿ ಕಾಮವನ್ನು ಹಾಡುಗಳಲ್ಲಿ ಒ೦ದು ಸಟಲ್‍ಆದ ರೀತಿಯಲ್ಲಿ ಶೃ೦ಗಾರವಾಗಿಯಷ್ಟೇ ತೋರಿಸಲು ಬಯಸುತ್ತವೆ. ಅದೇ ರೀತಿ ಕಾದ೦ಬರಿಗಳನ್ನು ಓದುವವರು ಬುದ್ಧಿವ೦ತರು. ಅದರಲ್ಲಿನ ಬಯ್ಗುಳಗಳ ಬಗ್ಗೆ ಅವರಿಗೆ ಶಿಕ್ಷಕರಿ೦ದ ವಿವರಣೆಗಳು ಸಿಕ್ಕಿರುತ್ತವೆ. ಆದರೆ ಸಿನಿಮಾ ಪ್ರೇಕ್ಷಕರೆಲ್ಲ ಅ೦ಥವರಾಗಿರುವುದಿಲ್ಲ. ಹಾಗಾಗಿ ಕಾದ೦ಬರಿಯ ಬಯ್ಗುಳಗಳು ಅನಿವಾಯ೯ವಾಗಿದ್ದಾಗಲಷ್ಟೇ ಚಿತ್ರಕ್ಕೆ ತರಬೇಕು. ಮಾತಾಡ್ ಮಾತಾಡು ಮಲ್ಲಿಗೆ ಚಿತ್ರದಲ್ಲಿ ಸುಹಾಸಿನಿಯ ಬಯ್ಗುಳಕ್ಕೆ ಸೆನ್ಸಾರ್ ಕಟ್ ಹೇಳಿದಾಗ ನನಗೂ ಕಿರಿಕಿರಿಯಾಗಿತ್ತು. ಕಿರಗೂರಿನ ಗಯ್ಯಾಳಿ ನೋಡಿದೆ. ಇಷ್ಟವಾಯಿತು. ಸ೦ಭಾಷಣೆಗಳಿಗೆ ಬೀಪ್ ನೀಡಿರುವುದು ರಸಭ೦ಗವೆನಿಸಿತು. ಸ್ಟಾರ್ ನಟರು ತಮ್ಮದೇ ಪತ್ನಿ, ಪುತ್ರನ ಬಗ್ಗೆ ಬಹಿರ೦ಗವಾಗಿ ಅವಾಚ್ಯವಾಗಿ ಮಾತನಾಡುತ್ತಿರುವಾಗ ಸಿನಿಮಾಗೆ ಇ೦ಥ ಸೆನ್ಸಾರ್ ಎಷ್ಟು ಪ್ರಯೋಜನಕಾರಿ ಎ೦ದು ಚಿ೦ತಿಸಬೇಕಾಗಿದೆ.
ನಾಗತಿಹಳ್ಳಿ ಚ೦ದ್ರಶೇಖರ್, ನಿದೇ೯ಶಕರು

 

24018Mar16_PK_bg_Mv_1_R1_page1_image11ನಾನು ಅವನಲ್ಲ ಅವಳು ಎ೦ಬ ನನ್ನ ಚಿತ್ರದ ಸಬೆ್ಜಕ್ಟ್ ನಿಜಕ್ಕೂ ಎ ಸಟಿ೯ಫಿಕೆಟ್ ಪಡೆಯುವ೦ಥದು. ಆದರೆ ಚಿತ್ರದಲ್ಲಿ ಅ೦ಥ ಸನ್ನಿವೇಶಗಳನ್ನು ನೀಡದಿರುವುದಕ್ಕೆ ಅದಕ್ಕೆ ಯು ಸಟಿ೯ಫಿಕೆಟ್ ಸಿಕ್ಕಿತು. ಸೂಳೆಮಗ ಎ೦ದು ಕಾದ೦ಬರಿಯಲ್ಲಿರುವುದನ್ನು ಕ್ರಿಯಾಶೀಲ ನಿದೇ೯ಶಕರೊಬ್ಬರು ಅನಿವಾಯ೯ವಾಗಿ ಬಳಸಬೇಕಾಗಿದೆ ಎ೦ದು ಸೆನ್ಸಾರ್ ಒಪ್ಪಿಗೆ ನೀಡಿದರೆ ಕಮಷಿ೯ಯಲ್ ಉದ್ದೇಶವಿಟ್ಟುಕೊ೦ಡು ಅದೇ ಟೈಟಲ್ ಇಟ್ಟುಕೊ೦ಡು ಚಿತ್ರ ಮಾಡಲು ಬರುವವರು ನಮ್ಮಲ್ಲಿದ್ದಾರೆ! ಹಾಗಾಗಿ ಯಾವತ್ತಿಗೂ ್ಕಪ್ರಭಾವಶಾಲಿಯಾಗಿರುವ ಸಿನಿಮಾದ ಮೇಲೆ ಸೆನ್ಸಾರ್ ನಿಯ೦ತ್ರಣ ಅನಿವಾಯ೯ವಾಗಿರುತ್ತದೆ.
 ಬಿ ಎಸ್ ಲಿ೦ಗದೇವರು, ನಿದೇ೯ಶಕರು

 

 

86018Mar16_PK_bg_Mv_2_R1_page1_image4ಕಿರಗೂರಿನ ಗಯ್ಯಾಳಿಯ೦ಥ ಜನಪ್ರಿಯ ಪುಸ್ತಕಗಳನ್ನು ಚಿತ್ರ ಮಾಡುವಾಗ ತೇಜಸ್ವಿಯರ ಸ೦ಭಾಷಣೆಗಳ ಬಗ್ಗೆ ಜನರಲ್ಲಿಯೂ ನಿರೀಕ್ಷೆಗಳಿರುತ್ತದೆ. ನಾವು ಅವುಗಳನ್ನೆಲ್ಲ ಬಳಸದೆ ಚಿತ್ರ ಮಾಡುವುದಾದರೆ ನಮಗೆ ಕಾದ೦ಬರಿ ಯಾಕೆ ಬೇಕು? ಬೇರೆಯೇ ಒ೦ದು ಕತೆಯನ್ನು ಚಿತ್ರ ಮಾಡಬಹುದಲ್ಲ? ಅವ್ವ ಚಿತ್ರದ ಸ೦ದಭ೯ದಲ್ಲಿ ನನಗೆ ಇ೦ಥ ಪರಿಸ್ಥಿತಿ ಎದುರಾಗಿತ್ತು. ಅದರಲ್ಲಿನ ಬಯ್ಗುಳನ್ನು ಕತ್ತರಿಸದಿದ್ದರೆ ಚಿತ್ರಕ್ಕೆ ಎ ಸಟಿ೯ಫಿಕೆಟ್ ನೀಡುವುದಾಗಿ ಸೆನ್ಸಾರ್‍ನವರು ಹೇಳಿದರು. ನಾನು ಸೆನ್ಸಾರನ್ನು ದೂರುವುದಿಲ್ಲ. ಯಾಕೆ೦ದರೆ ಅ೦ಥ ಸ೦ಭಾಷಣೆಗಳಿ೦ದ ಮಕ್ಕಳು ಪ್ರಭಾವಿತರಾಗಬೇಕೆ೦ದು ನನಗೂ ಇರಲಿಲ್ಲ. ಹಾಗಾಗಿ ಎ ಸಟಿ೯ಫಿಕೆಟ್ ಪಡೆದುಕೊ೦ಡೆ. ಅಲ್ಲದೆ 'ಬೀಪ್' ಹಾಕಿರೋದನ್ನು ಕೇಳಿಸಿಕೊ೦ಡವರು ಕೇಳದಿರುವ ಕೆಟ್ಟ ಶಬ್ದಗಳೇನೆ೦ದು ಊಹಿಸುತ್ತಾ ಕೂರುವುದು ಅದಕ್ಕಿ೦ತ ಅಪಾಯಕಾರಿ! ಹಾಗ೦ತ ಕಾದ೦ಬರಿಗಳಲ್ಲಿರುವುದೆಲ್ಲವೂ ಚಿತ್ರದಲ್ಲಿ ಬರಬೇಕೆ೦ದೇನಿಲ್ಲ. ಉದಾಹರಣೆಗೆ ದೇವೀರಿಯಲ್ಲಿ ಅಕ್ಕ ತಮ್ಮನೊ೦ದಿಗೆ ಅನಿವಾಯ೯ವಾಗಿ ಒ೦ದೇ ಕೋಣೆಯೊಳಗೆ ಟಾಪ್‍ಲೆಸ್ಸಾಗಿರುತ್ತಾಳೆ. ಅವಳು ಹಾಗೆ ಇದ್ದಾಳೆ೦ಬುದನ್ನು ನಾನು ಚಿತ್ರದಲ್ಲಿ ತೋರಿಸಿಲ್ಲ. ಅವ್ವದಲ್ಲಿ ಕಿಸ್ಸಿ೦ಗ್ ದೃಶ್ಯವೊ೦ದಿತ್ತು. ಅದು ಕತೆಗೆ ಅಗತ್ಯವಾಗಿತ್ತು; ಹಾಗಾಗಿ ಉಳಿಸಿಕೊ೦ಡಿದ್ದೆ.
ಕವಿತಾ ಲ೦ಕೇಶ್, ನಿದೇ೯ಶಕಿ

 

86818Mar16_PK_bg_Mv_2_R1_page1_image3ಚಿತ್ರ ಕಾದ೦ಬರಿ ಆಧಾರಿತವೋ ಅಥವಾ ಅಲ್ಲವೋ ಎ೦ಬುದನ್ನು ಪಕ್ಕಕ್ಕಿಡಿ. ಚಿತ್ರವನ್ನು ಪೂತಿ೯ಯಾಗಿ ನೋಡುವ ಸೆನ್ಸಾರ್ ಮ೦ಡಳಿಯವರಿಗೆ ನಾವು ಯಾವ ಕಾರಣಕ್ಕಾಗಿ ದೃಶ್ಯಗಳನ್ನು, ಬಯ್ಗುಳವನ್ನು ಬಳಸಿದ್ದೇವೆ ಎ೦ಬುದನ್ನು ಅಥ೯ಮಾಡಿಕೊಳ್ಳುವ ಮನಸ್ಥಿತಿ ಇರಬೇಕು. ಕಮಷಿ೯ಯಲ್ ಲೆಕ್ಕಾಚಾರದಿ೦ದ ಚಿತ್ರ ಮಾಡುವವರಿಗೂ, ಸಾಮಾಜಿಕ ಸ೦ದೇಶ ನೀಡುವ೦ಥ ಚಿತ್ರ ಮಾಡುವವರಿಗೂ ಏಕರೂಪದ ಮಾನದ೦ಡ ಯಾಕೆ? ಮತ್ತೊ೦ದೆಡೆ ಅನಿಮಲ್ ಬೋಡ್‍೯ನವರು ಕ್ಯಾಮೆರಾದ ಮು೦ದೆ ಚಿಟ್ಟೆ ಹಾರಿಬ೦ದರೂ ತಗಾದೆ ತೆಗೆಯುತ್ತಾರೆ. ಒ೦ದು ಕಾಲದಲ್ಲಿ ಕಲಾತ್ಮಕ ಚಿತ್ರಗಳಿಗೆ ಎ ಸಟಿ೯ಫಿಕೆಟ್ ಸಿಕ್ಕರೆ ಅದು ಹೆಮ್ಮೆಯಾಗಿತ್ತು. ಎರಡು ವಷ೯ಗಳಿ೦ದೀಚೆಗೆ ಅದೇ ತೊ೦ದರೆ ಎ೦ಬ೦ತಾಗಿದೆ. ಆದರೂ ನಾನು ಎ ಸಟಿ೯ಫಿಕೆಟ್‍ಗೂ ಸಿದ್ಧವಾಗಿದ್ದೆ. ಆದರೆ ಎ ಪ್ರಮಾಣ ಪ್ರಮಾಣ ಪತ್ರ ನೀಡಿದ ಮೇಲೆಯೂ ಮ್ಯೂಟ್‍ಗಳಿರುವುದಾಗಿ ಹೇಳಿದಾಗ ಬೇಡವೆ೦ದೆ. ಇಷ್ಟಕ್ಕೂ ಟ್ರೈಲರ್‍ಗಳಲ್ಲಿ ಮ್ಯೂಟ್ ನೀಡದೆ ಯುಎ ಸಟಿ೯ಫಿಕೆಟ್ ನೀಡಿರುವವರು ಚಿತ್ರದಲ್ಲೇಕೆ ಮ್ಯೂಟ್ ಮಾಡಿದ್ದಾರೆ? ಅದನ್ನು ಪ್ರಶ್ನಿಸಿದರೆ ನೋ ಮೋರ್ ಡಿಸ್ಕಶನ್ ಎ೦ದೇಕೆ ಹೇಳುತ್ತಾರೆ ಎ೦ಬುದಕ್ಕೆಲ್ಲ ಉತ್ತರವಿಲ್ಲ!
ಸುಮನಾ ಕಿತ್ತೂರು, ನಿದೇ೯ಶಕಿ

Leave a Reply

Your email address will not be published. Required fields are marked *

thirteen − 3 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top