ವಿಶ್ವವಾಣಿ

ಒಪ್ಪೋ ದಿಂದ ಹೊಸ ಫೋನ್: ಏನೆಲ್ಲಾ ಫಿಚರ್ಸ್ ಇಲ್ಲಿದೆ ಡೀಟೆಲ್ಸ್

oppo A3s

ಚೈನಾ ಮೂಲದ ಸ್ಮಾರ್ಟ್ ಫೋನ್ ತಯಾರಿಕ ಕಂಪನಿ ಓಪ್ಪೋ ತನ್ನ ಹೊಸ ಮಾದರಿಯ OPPO A3s ಮೊಬೈಲನ್ನು ಸದ್ಯದಲ್ಲೇ ಮಾರುಕಟ್ಟೆಗೆ ಬಿಡುಗಡೆಗೊಳಿಸುವುದಾಗಿ ಹೇಳಿದೆ.

ಜುಲೈ 15ರಿಂದ ಭಾರತದಲ್ಲಿ ಈ ಮೊಬೈಲ್ ಲಭ್ಯವಾಗಲಿದ್ದು, ಮೊದಲಿಗೆ ಆನ್‍‍ಲೈನ್‍‍ನಲ್ಲಿ ಮಾತ್ರ ಸಿಗಲಿದೆ. ಆರಂಭಿಕ ದರ 10,990 ರು. ನಿಗದಿ ಪಡಿಸಲಾಗಿದೆ. ಹಿಂಬದು 13 ಹಾಗೂ 2 ಎಂಪಿಯ ಎರಡು ಕ್ಯಾಮೆರಾಗಳಿದ್ದು, ಉತ್ರಮ ಗುಣಮಟ್ಟದ ಫೋಟೋ ತೆಗೆಯಬಹುದಾಗಿದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಉಪಯೋಗಿಸಿರುವ 8 ಎಂಪಿ ಸೆಲ್ಫಿ ಕ್ಯಾಮೆರಾ ಇದರ ವಿಶೇಷ.

ಓಪ್ಪೋ ಬ್ಯೂಟಿ ತಂತ್ರಜ್ಞಾನ ಉಪಯೋಗಿಸಿಕೊಂಡು 6.2 ಇಂಚಿನ ಸ್ಕ್ರೀನ್ ಹೊಂದಿದ್ದು, 2 ಜಿಬಿ ರ್ಯಾಮ್ ಹಾಗೂ 16 ಜಿಬಿ ಆಂತರಿಕ ಸಂಗ್ರಹಣ ಸಾಮರ್ಥ್ಯ ಹೊಂದಿದೆ. ಉತ್ತಮ ಬಾಳಿಕೆ ಬರುವ 4230mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಕ್ವಾಲ್ಕಮ್ ಸ್ನಾಪ್ ಡ್ರಾಗನ್ 450 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ.

ಮೊಬೈಲ್ ಮ್ಯೀಸಿಕ್ ಪಾರ್ಟಿ ಸಪೊರ್ಟ್ ಆಗಲಿದ್ದು, ಇದರಿಂದ ಹಲವು ಮೊಬೈಲ್‍‍ಗಳನ್ನು ಒಟ್ಟಿಗೆ ಕನೆಕ್ಟ್ ಮಾಡಿ ಮ್ಯೂಸಿಕ್‍ ಆನಂದಿಸಬಹುದು.