About Us Advertise with us Be a Reporter E-Paper

Breaking Newsದೇಶಪಾಲಿಟಿಕ್ಸ್ಪ್ರಚಲಿತ
Trending

ಅಕ್ರಮ ವಲಸಿಗರ ಬಹಿರಂಗ ಬೆಂಬಲಕ್ಕೆ ನಿಂತ ವಿಪಕ್ಷಗಳು!

ದೆಹಲಿ: ಅಕ್ರಮ ಬಾಂಗ್ಲಾದೇಶೀ ವಲಸಿಗರನ್ನು ಮುಖ್ಯವಾಹಿನಿಯಿಂದ ಕಿತ್ತೊಗೆದು, ದೇಶದ ಸಂಪನ್ಮೂಲದ ಮೇಲಾಗುತ್ತಿರುವ ದೌರ್ಜನ್ಯ ಹಾಗು ವಿದ್ರೋಹೀ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಸ್ಸಾಂ ಸರಕಾರ ಘೋಷಣೆ ಮಾಡಿರುವ ರಾಷ್ಟ್ರೀಯ ಪೌರತ್ವ ರೆಜಿಸ್ಟ್ರಾರ್ ಕುರಿತಂತೆ ಸಂಸತ್ತಿನಲ್ಲಿ ವಿಪಕ್ಷಗಳು ಗದ್ದಲವೆಬ್ಬಿಸಿವೆ.

ಎನ್‌ಆರ್‌ಸಿ ವರದಿಯನ್ನು ರಾಜ್ಯಸಭೆಯಲ್ಲಿ ಮುಂದಿಡುತ್ತಲೇ, ನಿರೀಕ್ಷೆಯಂತೆ ಮೊದಲು ಕೆರಳಿದ ಮಮತಾ ಬ್ಯಾನರ್ಜಿರ ತೃಣಮೂಲ ಕಾಂಗ್ರೆಸ್‌(ಟಿಎಂಸಿ) ಸಂಸದರು, ಡೆರೆಕ್‌ ಒಬ್ರಿಯನ್ ಮುಂದಾಳತ್ವದಲ್ಲಿ ಕರಡಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಎಸ್‌ಪಿ ಹಾಗು ಕಾಂಗ್ರೆಸ್‌ ಸಂಸದರೂ ಟಿಎಂಸಿ ಬೆಂಬಲಕ್ಕೆ ನಿಂತು ಸಾಕಷ್ಟು ಗದ್ದಲ ಸೃಷ್ಟಿಸಿದ್ದಾರೆ.

ಈ ಕುರಿತು ಮಾತನಾಡಿದ ರಾಜ್ಯಸಭಾ ಚೇರ್ಮನ್‌ ವೆಂಕಯ್ಯ ನಾಯ್ಡು,”ಎನ್‌ಆರ್‌ಸಿ ಕುರಿತಂತೆ ನನಗೆ ಇನ್ನೂ ಯಾವ ನೊಟಿಸ್‌ ಬಂದಿಲ್ಲ. ಆದರೆ ಈ ವಿಷಯವನ್ನು ಪ್ರಸ್ತಾಪಿಸಲು ಕೆಲ ಸಂಸದರು ನನ್ನಲ್ಲಿ ತಿಳಿಸಿದ್ದಾರೆ. ಈ ಕುರಿತು ವರದಿ ಸಲ್ಲಿಸಲು ಗೃಹ ಸಚಿವರಿಗೆ ತಿಳಿಸಿದ್ದೇನೆ” ಎಂದು ಹೇಳಿದ್ದಾರೆ.

ಗೃಹ ಸಚಿವ ರಾಜನಾಥ್ ಸಿಂಗ್‌ ಹಾಜರಿದ್ದರು. ಚೇರ್ಮನ್‌ ಮಾತಿಗೆ ಬೆಲೆ ನೀಡದ ಸದಸ್ಯರು ತಮ್ಮ ಗದ್ದಲ ಮುಂದುವರೆಸಿದ್ದು, ಕಲಾಪವನ್ನು ಮುಂದೂಡುವಂತೆ ಮಾಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close