About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಮಾನ್ಸೂನ್‌ ಕಲಾಪ: ಮತ್ತದೇ ಚಾಳಿ ಮುಂದುವರೆಸಿದ ವಿಪಕ್ಷಗಳು

ದೆಹಲಿ: ಅದೇ ಕಥೆ ಅದೇ ವ್ಯಥೆ ಎಂಬಂತೆ ಸಂಸತ್ತಿನ ಮಾನ್ಸೂನ್‌ ಅಧಿವೇಶನವೂ ವಾಷೌಟ್‌ ಆಗುವ ಸಾಧ್ಯತೆಗಳು ಮೊದಲ ದಿನವೇ ನಿಚ್ಚಳವಾಗಿ ಗೋಚರಿಸಿವೆ.

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೋರರುವ ನೆವದಲ್ಲಿ ಟಿಡಿಪಿ ಸಂಸದರು ಸಂಸತ್‌ ಭವನದ ಗಾಂಧಿ ಪ್ರತಿಮೆ ಮುಂದೆ ಧರಣಿ ಕುಳಿತರೆ, ಸಿಪಿಐ ಸಂಸದ ಡಿ ರಾಜಾ, ಕಲ್ಲು ತೂರಾಟ ಹಿಂಸಾಚಾರದ ನೆಪ ಮುಂದಿಟ್ಟು ಕಲಾಪ ಮುಂದೂಡಲು ರಾಜ್ಯಸಭೆಯಲ್ಲಿ ನೋಟಿಸ್‌ ನೀಡಿದ್ದಾರೆ.

ಇದೇ ವೇಳೆ, ವಿಪಕ್ಷಗಳನ್ನು ಮನವಿ ಮಾಡಿಕೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, “ಎಲ್ಲ ಚರ್ಚೆಗಳಿಗೆ ಕೇಂದ್ರ ಸರಕಾರ ಸಿದ್ಧವಿದೆ, ಯಾವುದೇ ಪಕ್ಷಕ್ಕೂ ಯಾವುದೇ ಸವಾಲಿದ್ದರೂ ಅದನ್ನು ಕಲಾಪದಲ್ಲಿ ಕೇಳಬಹುದು, ಸರಕಾರ ಉತ್ತರಿಸಲಿದೆ. ಮಾನ್ಸೂನ್‌ ಅಧಿವೇಶವನ್ನು ವಿಪಕ್ಷಗಳು ಸಮರ್ಪಕವಾಗಿ ಬಳಸಿಕೊಳ್ಳಲಿವೆ ಎಂದು ನಂಬಿದ್ದೇನೆ” ಎಂದು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Language
Close