About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಸಾವಯವ ಕೃಷಿಕ, ಮಾರ್ಗದರ್ಶಕ, ನಾಡೋಜ ನಾರಾಯಣರೆಡ್ಡಿ ನಿಧನ

ಬೆಂಗಳೂರು: ಸಾವಯವ ಕೃಷಿಕ ಮತ್ತು ಸಾವಯವ ಕೃಷಿ ಮಾರ್ಗದರ್ಶಕ ನಾಡೋಜ ಎಲ್​.ನಾರಾಯಣರೆಡ್ಡಿ (80) ಅವರು ನಿಧನರಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮರಳೇನಹಳ್ಳೀಯಲ್ಲಿ ಭಾನುವಾರ ರಾತ್ರಿ 10 ಗಂಟೆಗೆ ನಿಧನರಾಗಿದ್ದಾರೆ. ಇಂದು ಮಧ್ಯಾಹ್ನ ಬೆಂಗಳೂರಿನ ವರ್ತೂರು ಬಳಿಯ ತರಹುಳಿಸೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.

ನಾರಾಯಣರೆಡ್ಡಿ ಅವರ ನಿಧನಕ್ಕೆ ಕೃಷಿ ವಿಜ್ಞಾನಿಗಳು, ರೈತ ಮುಖಂಡರು, ರೈತರು ಹಾಗೂ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

ನಾಲ್ಕು ದಶಕಗಳಿಂದ ಸಾವಯವ ಕೃಷಿ ಮಾಡುತ್ತಾ, ಸಾವಯವ ಕೃಷಿ ಪದ್ಧತಿ ಕುರಿತು ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದ ನಾರಾಯಣರೆಡ್ಡಿ ಅವರಿಗೆ ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಹಾಲೆಂಡ್, ಜಪಾನ್, ಜರ್ಮನಿ ಸೇರಿದಂತೆ ಹದಿನೈದು ದೇಶಗಳ ಕೃಷಿ ವಿಶ್ವ ವಿದ್ಯಾನಿಲಯಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಉಪನ್ಯಾಸ ನೀಡಿದ್ದಾರೆ. ಕೃಷಿ ಕ್ಷೇತ್ರದ ಸಾಧನೆಗಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯ ನಾರಾಯಣರೆಡ್ಡಿ ಅವರಿಗೆ ನಾಡೋಜ ಪ್ರಶಸ್ತಿ ನೀಡಿ ಗೌರವಿಸಿತ್ತು.

ನಾರಾಯಣ ರೆಡ್ಡಿ ಅವರು 1972 ರಲ್ಲಿ ಜಮೀನು ಖರೀದಿಸಿ ಕೃಷಿಗೆ ಮುಂದಾಗಿದ್ದರು. ಇದಕ್ಕೂ ಮೊದಲು ಹೋಟೆಲ್​ನಲ್ಲಿ ಕ್ಲೀನರ್​ ಆಗಿ ಕೆಲಸ ಮಾಡುತ್ತಿದ್ದರು. ಆ ನಂತರ ಲಾರಿ ಆಫೀಸಿನಲ್ಲಿ ಪ್ಯೂನ್ ಕೆಲಸಕ್ಕೆ ಸೇರಿಕೊಂಡು, ಅಲ್ಲಿ ಗುಮಾಸ್ತನಾಗಿ, ಮ್ಯಾನೇಜರ್ ಆಗಿ ಕೆಲಸ ಮಾಡಿದರು. ಸಂಬಳದಲ್ಲಿ 45 ಸಾವಿರ ರೂಪಾಯಿ ಉಳಿಸಿ ಮರಳೇನಹಳ್ಳಿ ಬಳಿ ಜಮೀನು ಖರೀದಿಸಿ ಅಲ್ಲಿ ಸಾವಯವ ಕೃಷಿ ಮಾಡಿದರು.

ಜಪಾನ್​ನ ವಿಶ್ವವಿಖ್ಯಾತ ರೈತ ಫುಕುವೋಕಾ ಅವರ ವಿಚಾರಗಳಿಂದ ಪ್ರೇರಿತರಾಗಿದ್ದ ನಾರಾಯಣರೆಡ್ಡಿ ಅವರು ರಾಸಾಯನಿಕ ರಹಿತವಾಗಿ ಸಂಪೂರ್ಣವಾಗಿ ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡು ಅದರಲ್ಲಿ ಯಶಸ್ಸು ಕಂಡರು. ತಾವು ತಿಳಿದುಕೊಂಡಿದ್ದನ್ನು ಅವರು ಇತರೆ ರೈತರಿಗೂ ತಿಳಿಸಿ ಮಾರ್ಗದರ್ಶನ ನೀಡುವ ಮೂಲಕ ರಾಜ್ಯ ಮತ್ತು ದೇಶದಲ್ಲಿ ಸಾವಯವ ಕೃಷಿ ಪಸರಿಸಲು ಮುಖ್ಯಪಾತ್ರ ವಹಿಸಿದರು.

Tags

Related Articles

Leave a Reply

Your email address will not be published. Required fields are marked *

Language
Close