About Us Advertise with us Be a Reporter E-Paper

ವಿರಾಮ

ನಮ್ಮ ಮೆಟ್ರೊ: ಒಂದು ತಣ್ಣನೆಯ ಜಗತ್ತು

ಸದಾಶಿವ್ ಸೊರಟೂರು

ಮಾತುಗಳು ಮೌನದ ಮೊರೆಹೋಗುತ್ತವೆ. ಅಪ್ಪತಪ್ಪಿ ಉದುರಿದರೂ ಕೇಳಬೇಕಾದವರ ಕಿವಿಯ ಅರ್ಧ ತುಂಬುವಷ್ಟಷ್ಟೇ. ಅದಿರಲಿ, ಬಸ್ಸಿನ ಹಿಂದೆಯೆ ಬೆನ್ನಟ್ಟಿ ಬರುವ ಧೂಳು, ಅದು ಗಂಟಲಿಗೆ ಅಡರಿಕೊಂಡಿದ್ದೆ ತಡ ಕ್ಯಾಕರಿಸಿ ಉಗುಳುವ ಕೈಂಕಂರ‌್ಯ, ಬಿಸಿಲ ಬಿಸಿಯ ಸೋರಿದ ಬೆವರ ವಾಸನೆ, ಖಾಲಿತನ ತುಂಬಿಸಲು ಕರ್ಕಶವಾಗಿ ಅರಚುವ ಮಾತುಗಳು, ನಿಮಿಷಕ್ಕೆ ಒಂದು ಮೀಟರ್ ಚಲಿಸಿ ಅರ್ಧ ಗಂಟೆ ನಿಂತು ಚಲಿಸಿ ಮತ್ತೊಂದ ಮೀಟರ್ ಚಲಿಸುವ, ತಾಳ್ಮೆಗೆ ನೂಕಿ ನೂಕಿ ಆಟ ನೋಡುವ ಬೆಂಗಳೂರಿನ ಈ ರಸ್ತೆ ಸಾರಿಗೆಯ ಈ ಕಪ್ಪು ಅನುಭವಕ್ಕೆ ಸಿಲ್ವರ್‌ಲೈನಿಂಗ್‌ನಂತಹ ಒಂದು ಬೆಳ್ಳನೆಯ, ತಣ್ಣನೆಯ ಅನುಭವವಿದೆ ನಮ್ಮ ಮೆಟ್ರೊದಲ್ಲಿ!

ಹೌದು, ಅದು ಬೆಂಗಳೂರಿನೊಳಗೆ ಸಾಗುವವರ ಪಾಲಿನ ಒಂದು ಹೊಸ ಜಗತ್ತು. ಹೊಸದೆಲ್ಲಾ ಚಂದವೆನಲ್ಲ. ಆದರೆ ಹೊಸದು ಚಂದವೆ! ಇದು ಮೊನ್ನೆ ಮೊನ್ನೆಯದ್ದಲ್ಲದಿದ್ದರೂ ಬೆಂಗಳೂರಿಗೆ ಕಾಲಿಡುವವರಿಗೆ ನಿನ್ನೆಯಷ್ಟೇ ಹೊಸದು. ಹೊರದೇಶಗಳನ್ನು ಸುತ್ತಿ ಬಂದವರಿಗೆ ಇದೇನು ಅಲ್ಲದಿರಬಹುದು. ಬಗೆಬಗೆಯಾಗಿ ನರ್ತಿಸುತ್ತಾ ಸಾಗುವ ಊರಿನ ಲಟಕಾಸಿ ಬಸ್ಸಿನಲ್ಲೇ ಅರ್ಧ ಬದುಕು ಮುಗಿಸಿದವನಿಗೆ ಇದೊಂದು ಅಚ್ಚರಿ ಮತ್ತು ತಣ್ಣನೆಯ ಜಗತ್ತು.

ಆ ಒಂದು ತಂಪು ಅಲ್ಲಿ ಕೂರಿಸಿರುವ ಹವಾ

ನಿಯಂತ್ರಣಕ್ಕೆ ಸಂಬಂಧಿಸಿ ಮಾತು ಎಂದುಕೊಂಡರೆ ಅದು ನಿಮ್ಮ ತಪ್ಪು. ಅಲ್ಲಿಯ ಒಟ್ಟಾರೆ ಜಗತ್ತು ಎಸಿಗಿಂತಲೂ ತಂಪು. ಅನಾವಶ್ಯಕವಾಗಿ ಹೊಗಳುವ ಕಾರ‌್ಯ ಆ ಪಾಟಿ ಅನೇಕ ನಗರಗಳ ಬಗೆಬಗೆ ರಸ್ತೆಗಳಲ್ಲಿ ಅಲೆದವನಿಗೆ ಅಳೆಯಲು ಇಷ್ಟು ಅನುಭವ ಸಾಲದೇನು?

ಮಾತುಗಳು ಮೌನದ ಮೊರೆ ಹೋಗುತ್ತವೆ ಎಂದು ಮೊದಲ ಸಾಲಿನಲ್ಲಿ ಹೇಳಿದ್ದೆ. ಅಲ್ಲಿಯ ಅಂಗಳ ತುಳಿಯುವ ಹೊತ್ತಿಗೆ ಅದೇನು ಆಗುತ್ತೊ ಗೊತ್ತಿಲ್ಲ. ಎಂತವನು ಕೂಡ ಸಭ್ಯನಾಗಲು ಪ್ರಯತ್ನಿಸುತ್ತಾನೆ. ಬಸ್ಸಿನ ಕಿಟಕಿಯ ಪಕ್ಕ ಕೂತು ಪಿಚಕ್ ಪಿಚಕ್ ಅಂದವನು ಉಗುಳು ನುಂಗಿಕೊಳ್ಳುತ್ತಾನೆ. ಧೂಳು ಪಕ್ಕಾ ಬ್ಯಾನ್ ಆದಂತಹ ಜಾಗ ಅದು. ಗಾಳಿಯು, ನೀರಿನ ಸಖ್ಯ ಬೆಳೆಸಿದಿಯೇನೊ ತಣ್ಣಗೆ. ಮಟಮಟ ಮಧ್ಯಾಹ್ನ ಸೂರ‌್ಯ ಉರಿಯುತ್ತಿದ್ದರೂ ಇಲ್ಲಿ ಮಬ್ಬು ಮಬ್ಬು. ಅದಕ್ಕಾಗಿಯೇ ಲೈಟುಗಳು ಉರಿಯುತ್ತವೆ. ದಿನವಿಡಿ ಉರಿಯುತ್ತಲೇ ಇರುತ್ತವೆ. ಹೊನಲು ಬೆಳಕಿನಲ್ಲಿ ಬಚ್ಚಿಟ್ಟುಕೊಂಡಂತಹ ಜಾಗ.

ಮೆಟ್ರೊ ನಡೆಯುವ ಹಾದಿಗೆ ಎರಡೇ ಬಣ್ಣ. ಒಂದು ಪರ್ಪಲ್, ಇನ್ನೊಂದು ಹಸುರು. ಎರಡೂ ಹಂಚಿಕೊಂಡು ಹರಡಿಕೊಂಡಿವೆ. ಮೆಟ್ರೊ ಮೇಲಿನ ಬದುಕಿದೆಯಲ್ಲ ಅದು ಒಂದು ತಣ್ಣನೆಯ ಜಗತ್ತು. ಎಷ್ಟೋ ಬಾರಿ ನನ್ನ ಆಫೀಸ್ ಕೂಡ ಇಷ್ಟೊಂದು ಶಾಂತವಾಗಿ ಇಲ್ವಲ್ಲ ಅನಿಸುತ್ತದೆ. ಮೆಟ್ರೊ ತನ್ನೆಡೆಗೆ ಎಳೆದುಕೊಂಡ

ನುಂಗಿಕೊಂಡವರನ್ನು ಅದೆಂತಹ ಬದಲಾವಣೆಗೆ ಒಡ್ಡುತ್ತದೆ ಗೊತ್ತೆ?

ಅಲ್ಲಿ ಗಡಿಬಿಡಿ ರಜೆ ತಗೆದುಕೊಳ್ಳುತ್ತದೆ. ಸಮಯ ಪಕ್ಕಾಗುತ್ತದೆ. ರಸ್ತೆಯ ಮೇಲೆ ನಿಮಿಷಗಳು ಸೋರಿ ಸೋರಿ ಹೋಗುತ್ತಿದ್ದರೆ ಇಲ್ಲಿ ಪ್ರತಿ ನಿಮಿಷಗಳೂ ಲೆಕ್ಕಕ್ಕೆ ಸಿಗುತ್ತವೆ. ಗಳಗಳ ಅಂತ ನೀರು ಕುಡಿದು ಬಾಟಲಿ ಎಸೆಯುವುದು, ಲೇಸ್ ತಿಂದು ಕವರ್ ಎಸೆಯುವುದು ಅಲ್ಲಿ ಇಲ್ಲವೇ ಇಲ್ಲ. ಅಷ್ಟರ ಮಟ್ಟಿಗೆ ಅದು ಗಲೀಜಿನಿಂದ ಸೇಫು! ಆ ಚಂದದ ಜಾಗ ನೋಡಿದ ಮೇಲೆ ಯಾರಿಗಾದರೂ ಇಲ್ಲದ ಸಭ್ಯತೆಯೂ ಹುಟ್ಟುತ್ತದೆ.

ಕೂತು ಆಡಿದಂತೆ ಒಂದು ಹುಡುಗ ಹುಡುಗಿಯ ಪಿಸುದನಿ ಆಪ್ತವಾಗಿ ಕೇಳುತ್ತವೆ. ಪ್ರತಿಬಾರಿ ಒಂದು ಎಚ್ಚರಿಕೆ. ನೀವು ಇರುವುದೆಲ್ಲಿ? ಮುಂದೆ ಬರಲಿರುವ ಜಾಗ ಯಾವುದು? ಯಾವ ಕಡೆ ಇಳಿಯಬೇಕು? ಒಂದಿಷ್ಟೂ ಗೊಂದಲವಿಲ್ಲದ ಸಲಹೆಗಳು. ಮಧ್ಯೆದಲ್ಲಿ ಉಳಿಯುವ ಒಂದೆರಡು ನಿಮಿಷದಲ್ಲಿ ನಿಮಗೆ ನಾಡುನುಡಿಯ ಮಾತುಗಳು ಕೇಳಿ ಬರುತ್ತವೆ. ಸ್ವಚ್ಚತೆಯ ಮಹತ್ವ ಹೇಳಲಾಗುತ್ತದೆ. ನಿಮ್ಮ ಮನೆಯ ಹಾಲ್‌ನಲ್ಲಿ ಸುಮ್ಮನೆ ಕೂತು ವಿಶ್ರಾಂತಿ ತೆಗೆದುಕೊಂಡಿರೇನೊ ಅಂದು ಕೊಳ್ಳುವುದರಲ್ಲೇ ಇಳಿದು ಹೋಗುವ ಾಗ ಬಂದಿರುತ್ತೆ.

ಒಂದು ಗ್ರಿಪ್ ಇಟ್ಟುಕೊಂಡೆ ಗಾಳಿಯಲ್ಲಿ ನುಗ್ಗಿದಂತಹ ಅನುಭವ. ರಸ್ತೆಯ ಮೇಲಿನ ಗಂಟೆಗಳು ಇಲ್ಲಿ ಬರೀ ನಿಮಿಷಗಳಾಗುತ್ತವೆ. ಅದರ ನಡುವೆ ಒಂದು ರೋಮಾಂಚನ. ಮನೆಗಳ ಮೇಲೆ ಹಾರುತ್ತದೆ. ನೆಲದೊಲಗೆ ನುಗ್ಗುತ್ತದೆ. ಸುಮ್ಮನೆ ನೆಲದ ರಸ್ತೆ ಸವೆಸುತ್ತದೆ. ವಿರಳ ವಿರಳ ಜನರನ್ನಿಟ್ಟುಕೊಂಡೇ ಹೊರಟರೂ ಹೋಗುತ್ತಾ ಹೋಗುತ್ತಾ ತುಂಬುತ್ತದೆ. ಖಾಲಿಗೂ ಭರ್ತಿಗೂ ವ್ಯತ್ಯಾಸವೇ ತಿಳಿಯುವುದಿಲ್ಲ. ಅದೇ ಮೌನ, ಅದೇ ಸಭ್ಯತೆ ಮತ್ತು ಎಲ್ಲರ ಮಧ್ಯೆ ಒಂದು ಏಕಾಂತ. ಅವರು, ಅವರ ಮೊಬೈಲ್, ಅವರು ಹಾಡು, ಅವರದೇ ಲಹರಿ ಇವಿಷ್ಟನ್ನೇ ತಬ್ಬಿಕೊಂಡು ಸಾಗುತ್ತಾರೆ. .ಸಿ. ಕಂಡು ಬೆವರು ಆಚೆ ಬರಲು ಹೆದರುತ್ತದೆ. ಹಚ್ಚಿದ ಪೌಡರ್ ಒಂಚೂರೂ ಅಂದಗೆಡುವುದಿಲ್ಲ. ಕುಡಿದ ನೀರೂ ಅಲುಗುವುದಿಲ್ಲ.

ಕಣ್ಣು ಕಲೆತರೂ ಮಾತಿಗೆ ಸಮಯ ಸಾಲುವುದಿಲ್ಲ. ಬೆರಳು ತಾಕಿದರೂ ಸಂಬಂಧ ಚಿಗುರಲು ಕಾಲ ಕರೆ ಕೊಡು ವುದಿಲ್ಲ. ಮೂರು ಮತ್ತೊಂದು ನಿಮಿಷ ತಣ್ಣಗೆ ಪ್ರಿಡ್‌ಜ್ನ ಲ್ಲಿದ್ದು ಆಚೆ ಬೀಳಬೇಕು. ಹೊರಗಿನ ಧೂಳು, ಬೆವರು, ಕೇಕೆ, ಟ್ರಾಫಿಕ್‌ನಲ್ಲಿ ವ್ಯರ್ಥವಾಗುವ ಅಗಾಧ ಸಮಯ, ಪಣಕಿಡುವ ಬದುಕಿಗೆ ಸೇರಿಕೊಳ್ಳಬೇಕು. ಇಳಿದು ಬಂದ ಮೇಲೂ ಬಹುಹೊತ್ತು ಕಾಡುತ್ತದೆ ನಮ್ಮ ಮೆಟ್ರೊ. ಸಾರ್ವಜನಿಕ ಜರ್ನಿಯ ಜಾಗವೊಂದು ಮನೆಯ ಹಾಲ್‌ನಂತೆ ಕಂಫರ್ಟ್ ಕೊಡುವಾಗ, ಅಚ್ಚರಿಯ ಅನುಭವದಂತೆ ಕಾಡದೇ ಇರುತ್ತದೆಯೇ?

Tags

Related Articles

Leave a Reply

Your email address will not be published. Required fields are marked *

Language
Close