About Us Advertise with us Be a Reporter E-Paper

Breaking Newsದೇಶಪ್ರಚಲಿತ

ಭೀಕರ ಪ್ರವಾಹಕ್ಕೆ ಸಂತ್ರಸ್ತರಾದವರು 3.5 ಲಕ್ಷಕ್ಕೂ ಅಧಿಕ ಮಂದಿ!

ಕೊಚ್ಚಿ: ಶತಮಾನದ  ಭೀಕರ ಮಳೆಗೆ ತುತ್ತಾಗಿರುವ ದೇವರನಾಡು ಕೇರಳದಲ್ಲಿ ಈ ವರೆಗೆ ಬರೋಬ್ಬರಿ 3.5 ಲಕ್ಷಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ ಎಂದು ಕೇರಳ ಸರಕಾರ ಹೇಳಿದೆ. ಈಗಾಗಲೇ 14  ಜಿಲ್ಲೆಗಳ ಪೈಕಿ 11  ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌  ಘೋಷಿಸಲಾಗಿದೆ.ಅಲ್ಲದೇ ಉಳಿದ ತಿರುವನಂತಪುರಂ, ಕೊಲ್ಲಂ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ಮುಂದಿನ ಇಪ್ಪತ್ನಾಲ್ಕು ಗಂಟೆಯಲ್ಲಿ ಬಂಗಾಳ ಕೊಲ್ಲಿ ಹಾಗೂ ರಾಜ್ಯದ ಈಶಾನ್ಯ ಭಾಗಗಳಲ್ಲಿ ಗಾಳಿಯ ಒತ್ತಡದಿಂದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ  ರಾಜ್ಯದ 80  ಜಲಾಶಯಗಳಲ್ಲಿ ನೀರು ಹೊರಬಿಡಲಾಗಿದ್ದು, ಎಲ್ಲಾ ನದಿಗಳು ತುಂಬಿ ಹರಿಯುತ್ತಿದೆ. ಆಗಸ್ಟ್‌ 8  ರಿಂದ ಒಟ್ಟು 194 ಮಂದಿ ಮೃತಪಟ್ಟಿದ್ದು, 36 ಮಂದಿ ಕಾಣೆಯಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣ ದಳ ಮಾಹಿತಿ ನೀಡಿದೆ. ಮೇ 29ರ ಬಳಿಕ ಒಟ್ಟು 357 ಮಂದಿ ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ. 3.53ಕ್ಕೂ ಹೆಚ್ಚಿನ ಮಂದಿ ಸಂತ್ರಸ್ತರು 2,000 ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ಆಲುವಾ, ಚಲಕುಡಿ, ಆಳಪ್ಪುಝ ಹಾಗೂ ಪಟ್ಟನಂತಿಟ್ಟ ಅತೀ ಹೆಚ್ಚು ಹಾನಿಗೀಡಾಗಿದ್ದು, ರಕ್ಷಣಾ ಕಾರ್ಯಗಳು ಮುಂದುವರಿಯುತ್ತಿದೆ.

Tags

Related Articles

Leave a Reply

Your email address will not be published. Required fields are marked *

Language
Close