About Us Advertise with us Be a Reporter E-Paper

Breaking Newsದೇಶಪ್ರಚಲಿತ

ಪಚೌರಿ ವಿರುದ್ಧ ಕ್ರಮ ಕೈಗೊಳ್ಳಿ: ದೆಹಲಿ ಕೋರ್ಟ್

ದೆಹಲಿ: ಇಂಧನ ಸಂಶೋಧನಾ ಸಂಸ್ಥೆಯ (ಟೆರಿ) ಮಾಜಿ ಕಾರ್ಯನಿರ್ವಾಹಕ ಉಪಾಧ್ಯಕ್ಷ, ಪರಿಸರವಾದಿ ಆರ್‌.ಕೆ.ಪಚೌರಿ ವಿರುದ್ಧ ದೆಹಲಿಯ ಸಕೆಟ್‌ ಕೋರ್ಟ್ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.

ಸೆಕ್ಷನ್‌ 354 A, 354 ಲೈಂಗಿಕ ದೌರ್ಜನ್ಯ, 509 ಮಹಿಳೆಯ ಚಾರಿತ್ರ್ಯಕ್ಕೆ ಧಕ್ಕೆ ತರುವಂಥ ನಿಂದನೆ ಅಡಿಯಲ್ಲಿ ಆರ್‌.ಕೆ.ಪಚೌರಿ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಮುಂದಿನ ವಿಚಾರಣೆಯನ್ನು ಅಕ್ಟೋಬರ್‌ 20ಕ್ಕೆ ನಿಗಧಿಗೊಳಿಸಿತು.

ದೆಹಲಿ ಪೊಲೀಸರು ಪಚೌರಿ ವಿರುದ್ಧ ಮಹಿಳೆಯನ್ನು ಅಕ್ರಮವಾಗಿ ಹಿಂಬಾಲಿಸಿದ, ಚಾರಿತ್ರ್ಯಕ್ಕೆ ಧಕ್ಕೆ ತರುವಂಥ ಬೆದರಿಕೆ ಹಾಕುವ ವರ್ತನೆ ತೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ 1400 ಪುಟಗಳ ಆರೋಪಪಟ್ಟಿ ದಾಖಲಿಸಿದ್ದರು.

ಪಚೌರಿ 2002 ರಿಂದ 2015 ಫೆಬ್ರವರಿವರೆಗೆ ಹವಾಮಾನ ಬದಲಾವಣೆಯ ಅಂತರ ಸರಕಾರಗಳ ಸಮಿತಿಯ ಮುಖ್ಯಸ್ಥರಾಗಿದ್ದರು. ಸಹೋದ್ಯೋಗಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

Tags

Related Articles

Leave a Reply

Your email address will not be published. Required fields are marked *

Language
Close