ಪಕ್ಷ ಒಡೆಯಲು ಬಿಡುವುದಿಲ್ಲ: ಮುಲಾಯಂ

Posted In : ದೇಶ

ಲಖನೌ: “ಬಹಳ ಪರಿಶ್ರಮ ಪಟ್ಟು ಪಕ್ಷವನ್ನು ಕಟ್ಟಿದ್ದೇವೆ . ನನ್ನ ಹಾಗೂ ಸಹೋದರ ಶಿವಪಾಲ್ ನಡುವೆ ಯಾವುದೇ ಭಿನ್ನಮತ ಇಲ್ಲ. ಪಕ್ಷ ಒಡೆಯಯುವುದನ್ನು ತಪ್ಪಿಸಲು ದಣಿವರಿಯದೇ ಯತ್ನಿಸುತಿದ್ದೇನೆ. ಬೇರೊಂದು ಪಕ್ಷವಾಗಲೀ ಅಥವಾ ಚಿನ್ಹೆಯಾಗಲೀ ಅಗತ್ಯವಿಲ್ಲ” ಎಂದು ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ.

ಉತ್ತರ ಪ್ರದೇಶದ ಆಡಳಿತಾರೂಢ ಪಕ್ಷವಾದ ಸಮಾಜವಾದಿ ಪಕ್ಷದಲ್ಲಿ ಆಂತರಿಕ ಭಿನ್ನಮತ ಕಂಡುಬಂದಿದ್ದು ಮುಲಾಯಂ ಸಿಂಗ್ ಹಾಗೂ ಶಿವ್‌ಪಾಲ್ ಸಿಂಗ್ ಒಂದು ಬಣವಾದರೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತೊಂದೆಡೆಯಾಗಿದ್ದಾರೆ. ಪಕ್ಷದಿಂದ ಹೊರಗುಳಿದಿದ್ದ ಅಮರ್ ಸಿಂಗ್ ಮರಳಿ ಪಕ್ಷಕ್ಕೆ ಬಂದ ವಿಚಾರವಾಗಿ ಇಬ್ಭಾಗವಾಗಿದ್ದ ಸಮಾಜವಾದಿ ಪಕ್ಷ ನಂತರದ ದಿನಗಳಲ್ಲಿ ವಿಧಾನ ಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸುವ ವೇಳೆ ಮುಲಾಯಂ ಹಾಗೂ ಅಖಿಲೇಶ್ ನಡುವೆ ಸಾಕಷ್ಟು ಭಿನ್ನಭಿಪ್ರಾಯ ಮೂಡಿ ಆಂತರಿಕ ಭಿನ್ನಮತ ಮತ್ತಷ್ಟು ಹೆಚ್ಚಿ ಎರಡು ಬಣಗಳು ಸೃಷ್ಟಿಯಾಗಿದ್ದವು.

ತಮ್ಮ ಪುತ್ರ ಅಖಿಲೇಶ್ ಕುರಿತು ಮಾತನಾಡಿದ ಮುಲಾಯಂ ”ನಮ್ಮ ವಿರೋಧ ಪಕ್ಷದ ಅಧ್ಯಕ್ಷರನ್ನು ಮೂರು ಬಾರಿ ಅಖಿಲೇಶ್ ಬಣ ಭೇಟಿಯಾಗಿದೆ. ಯಾವುದೇ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳದಿರಲು ಹೇಳಿದ್ದೇನೆ. ಯಾವುದೇ ಕಾರಣಕ್ಕೂ ಪಕ್ಷ ಒಡೆಯಲಿ ಬಿಡುವುದಿಲ್ಲ” ಎಂದು ಹೇಳಿದರು.

Leave a Reply

Your email address will not be published. Required fields are marked *

thirteen − three =

Tuesday, 25.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣಪಕ್ಷ, ತಿಥಿ:ಚತುದರ್ಶಿ ನಿತ್ಯನಕ್ಷತ್ರ: ರೇವತಿ ಯೋಗ: ವಿಷ್ಕಂಭ ಕರಣ:ಭದ್ರೆ

ರಾಹುಕಾಲಗುಳಿಕಕಾಲಯಮಗಂಡಕಾಲ
03.00-04.30 12.00-01.30 09.00-10.30

Read More

 

Tuesday, 25.04.2017

ಶ್ರೀ ಹೇಮಲಂಬಿ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣಪಕ್ಷ, ತಿಥಿ:ಚತುದರ್ಶಿ ನಿತ್ಯನಕ್ಷತ್ರ: ರೇವತಿ ಯೋಗ: ವಿಷ್ಕಂಭ ಕರಣ:ಭದ್ರೆ

ರಾಹುಕಾಲಗುಳಿಕಕಾಲಯಮಗಂಡಕಾಲ
03.00-04.30 12.00-01.30 09.00-10.30

Read More

Back To Top