About Us Advertise with us Be a Reporter E-Paper

Breaking Newsವಿದೇಶ

ಐಶಾರಾಮಿ ವಾಹನ ಹರಾಜಾಕಲು ಮುಂದಾದ ಇಮ್ರಾನ್ ಖಾನ್

ಇಸ್ಲಾಮಾಬಾದ್: ತಮ್ಮ ಕಚೇರಿಯಲ್ಲಿ ಹೆಚ್ಚುವರಿಯಾಗಿರುವ ಐಶಾರಾಮಿ ವಾಹನಗಳನ್ನು ಹರಾಜು ಮೂಲಕ ಮಾರಾಟ ಮಾಡಲು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮುಂದಾಗಿದ್ದಾರೆ.

ಪಾಕಿಸ್ತಾನ ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ಬೊಕ್ಕಸದ ಹೊರೆ ತಗ್ಗಿಸಲು ಈ ನಿರ್ಧಾರಕ್ಕೆ ಬಂದಿದ್ದಾರೆ. ಪ್ರಧಾನಿಯ ಭವ್ಯ ಬಂಗಲೆಯಲ್ಲಿ ವಾಸಿಸಲು ನಿರಾಕರಿಸಿ, ಐಶಾರಾಮಿ ಜೀವನಕ್ಕೆ ತೆರೆ ಎಳೆದಿದ್ದಾರೆ. ಪ್ರಧಾನಿ ಬಂಗಲೆಯಲ್ಲಿ 524 ನೌಕರರಿದ್ದು ಕೇವಲ ಇಬ್ಬರು ನೌಕರರನ್ನು ಮಾತ್ರ ಇಟ್ಟು ಕೊಂಡಿದ್ದು, 80 ವಾಹನಗಳ ಪೈಕಿ ಕೇವಲ 3-4 ವಾಹನಗಳನ್ನು ಮಾತ್ರ ಇಟ್ಟುಕೊಂಡು ಉಳಿದ ವಾಹನಗಳನ್ನು ಹರಾಜಿನ ಮೂಲಕ ಮಾರಾಟ ಮಾಡಲು ತೀರ್ಮಾನಿಸಿದ್ದಾರೆ.

ಪಾಕಿಸ್ತಾನ ಪ್ರಧಾನಿ ಬಳಿ ಎಂಟು ಬಿಎಂಡಬ್ಲ್ಯು, ಮರ್ಸೀಡಿಸ್ ಬೆಂಝ್, ಹದಿನಾರು ಟೊಯೋಟಾ ಸೇರಿದಂತೆ 20ಕ್ಕೂ ಹೆಚ್ಚು ವಾಹನಗಳು ಮತ್ತು ನಾಲ್ಕು ಬುಲೆಟ್ ಫ್ರೂಫ್ ಲ್ಯಾಂಡ್ ಕ್ರ್ಯೂಸರ್ ವಾಹನಗಳನ್ನು ಹರಾಜು ಹಾಕಲು ಪ್ರಧಾನಿ ಕಚೇರಿ ನಿರ್ಧರಿಸಿದೆ.

Tags

Related Articles

Leave a Reply

Your email address will not be published. Required fields are marked *

Language
Close