About Us Advertise with us Be a Reporter E-Paper

Breaking Newsಪ್ರಚಲಿತವಿದೇಶ
Trending

ಸಿರಿಯಾಗಿಂತ ಮೂರು ಪಟ್ಟು ಹೆಚ್ಚು ಅಪಾಯಕಾರಿ ಪಾಕ್: ವರದಿ

ಜಾಗತಿಕ ಶಾಂತಿಗೆ ಭಂಗ ತರುತ್ತಿರುವ ಶಕ್ತಿಗಳಲ್ಲಿ ಸಿರಿಯಾಗಿಂತ ಪಾಕಿಸ್ತಾನ ಹೆಚ್ಚು ಅಪಾಯಕಾರಿ ಎಂದು ಆಕ್ಸ್ ಫರ್ಡ್ ವಿವಿಯ ಅಧ್ಯಯನವೊಂದು ತಿಳಿಸಿದೆ.

ವಿಶ್ವವಿಖ್ಯಾತ ವಿವಿಯ ಸ್ಟ್ರಾಟಜಿಕ್ ಫೋರ್ ಸೈಟ್ ಗ್ರೂಪ್(SFG) ಪ್ರಸ್ತುತಪಡಿಸಿದ ವರದಿಯಲ್ಲಿ, ಗಲಭೆಪೀಡಿತ ಸಿರಿಯಾದ ಮೂರುಪಟ್ಟು ಅಪಾಯಕಾರಿಯಾಗಿ ಪಾಕಿಸ್ತಾನ ಮನುಕುಲವನ್ನು ಪೀಡಿಸುತ್ತಿದೆ ಎಂದು ತಿಳಿಸಿದೆ.

‘Humanity at Risk-Global Terror Indicant’ ಎಂಬ ಹೆಸರಿನ ಈ ವರದಿಯಲ್ಲಿ, “ಯಾವುದೇ ದೇಶಕ್ಕಿಂತಲೂ ಹೆಚ್ಚು ಭಯೋತ್ಪಾದಕ ಅಡಗುದಾಣಗಳು ಪಾಕಿಸ್ತಾನದಲ್ಲಿವೆ. ಲಷ್ಕರೆ ತೊಯ್ಬಾದಂಥ ಜಗತ್ತಿನ ಅತ್ಯಂತ ಕ್ರೂರ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದಲ್ಲಿ ಸಕ್ರಿಯವಾಗಿವೆ. ನೆರೆಯ ಅಫ್ಘಾನಿಸ್ತಾನದಲ್ಲಿ ಗಲಭೆ ಸೃಷ್ಟಿಸಿರುವ ಅಫ್ಘನ್ ತಾಲಿಬಾನ್ ರೀತಿಯ ಪಾತಕ ಶಕ್ತಿಗಳಿಗೆ ಪಾಕ್ ನೆಲೆಯಾಗಿದೆ” ಎಂದು ಸವಿವರವಾಗಿ ಉಲ್ಲೇಖಿಸಲಾಗಿದೆ.

“ಗಲಭೆಪೀಡಿತ ಪ್ರದೇಶಗಳು ಭಯೋತ್ಪಾದಕರ ಸ್ವರ್ಗವಾಗಿದ್ದು, ಸಮೂಹನಾಶಕ ಶಸ್ತ್ರಗಳು ಹಾಗೂ ಆರ್ಥಿಕ ಸಮರಗಳು ಮಾನವನ ಅಭಿವೃದ್ಧಿಗೆ ತೊಡಕಾಗಲಿದ್ದು, 2030ರ ವೇಳೆಗೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಇವೆಲ್ಲದರೊಂದಿಗೆ ಭಯೋತ್ಪಾದಕ ಚಟುವಟಿಕೆಗಳು ತಳುಕು ಹಾಕಿಕೊಂಡಿವೆ” ಎಂದಿರುವ ವರದಿಯಲ್ಲಿ, ಪಾಕಿಸ್ತಾನದ ಪ್ರಸಕ್ತ ಆರ್ಥಿಕ ಸ್ಥಿತಿಗತಿ ಇದಕ್ಕೆ ಅತ್ಯುತ್ತಮ ನಿದರ್ಶನವಾಗಿದೆ ಎಂದು ತಿಳಿಸಿದೆ.

ಜಾಗತಿಗತಿಕ ಸಮುದಾಯ ಅದೆಷ್ಟೇ ಎಚ್ಚರಿಕೆ ನೀಡಿದರೂ, ಭಯೋತ್ಪಾದನೆ ದಮನದ ವಿಚಾರದಲ್ಲಿ ಇಸ್ಲಾಮಾಬಾದ್ ನಾಟಕವಾಡುತ್ತಲೇ ಬಂದಿದೆ.

Tags

Related Articles

Leave a Reply

Your email address will not be published. Required fields are marked *

Language
Close